For Quick Alerts
ALLOW NOTIFICATIONS  
For Daily Alerts

ಮೂತ್ರ ಸೋಂಕಿಗೆ ಪ್ರಸಿದ್ಧ ನ್ಯೂಟ್ರಿಷಿಯನಿಸ್ಟ್ ರುಜುತಾ ದ್ವಿವೇಕರ್‌ ತಿಳಿಸಿದ ಮನೆಮದ್ದು

|

ಮೂತ್ರ ವಿಸರ್ಜನೆ ಮಾಡುವಾಗ ಉರಿ ಅನುಭವ ಉಂಟಾಗುತ್ತಿದೆಯೇ? ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು, ಹೋದರೆ ಮೂತ್ರ ಇಲ್ಲದಿರುವುದು, ಬ್ಲೇಡರ್‌ನಲ್ಲಿ ನೋವು ಈ ರೀತಿಯ ಲಕ್ಷಣಗಳು ಕಂಡು ಬರುತ್ತಿದೆಯೇ? ಹಾಗಾದರೆ ಅದು ಮೂತ್ರ ಸೋಂಕು ಆಗಿರಬಹುದು.

home remedies for UTI

ಮಹಿಳೆಯರಿಗೆ ಈ ರೀತಿಯ ಸಮಸ್ಯೆ ಜೀವನದಲ್ಲಿ ಒಮ್ಮೆಯಾದರೂ ಬಂದೇ ಬರುವುದು. ಮೂತ್ರ ಸೋಂಕು ಉಂಟಾದರೆ ಕಿಡ್ನಿ, ಮೂತ್ರ ನಾಳ, ಬ್ಲೇಡರ್ ಇವುಗಳಿಗೆ ಹಾನಿಯುಂಟಾಗಬಹುದು. ಹೊಟ್ಟೆಯಲ್ಲಿನ ಬ್ಯಾಕ್ಟಿರಿಯಾದಿಂದಾಗಿ ಈ ರೀತಿ ಉಂಟಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಕೆಲವೊಮ್ಮೆ ಫಂಗಿ ವೈರಸ್‌ ಕಾರಣದಿಂದ ಕೂಡ ಸೋಂಕು ಉಂಟಾಗುವುದು.

ಮೂತ್ರ ಸೋಂಕಿಗೆ ಮನೆಮದ್ದೇನು, ತಡೆಗಟ್ಟುವುದು ಹೇಗೆ ಎಂಬುವುದರ ಬಗ್ಗೆ ಭಾರತದ ಪ್ರಸಿದ್ಧ ಸೆಲೆಬ್ರಿಟಿ ಡಯಟಿಷಿಯನ್ ಸಲಹೆ ನೀಡಿದ್ದಾರೆ ನೋಡಿ:

ಸಾಕಷ್ಟು ನೀರು ಕುಡಿಯಬೇಕು

ಸಾಕಷ್ಟು ನೀರು ಕುಡಿಯಬೇಕು

ಪ್ರತಿದಿನ ಸಾಕಷ್ಟು ನೀರು ಕುಡಿಯಬೇಕು. Infectious Diseases Society of America ಎಂಬ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಸಾಕಷ್ಟು ನೀರು ಕುಡಿಯುವುದರಿಂದ ಈ ರೀತಿಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಹೇಳಿದೆ. ಪ್ರತಿದಿನ 7-8 ಲೋಟ ನೀರು ಕುಡಿಯಬೇಕು.

ನೀರಾ ಕುಡಿಯುವುದರಿಂದ ತಡೆಗಟ್ಟಬಹುದು

ನೀರಾ ಕುಡಿಯುವುದರಿಂದ ತಡೆಗಟ್ಟಬಹುದು

ಈಚಲು ಮರದ ಸೇಂದಿ ಕುಡಿಯುವುದರಿಂದ ಮೂತ್ರ ಸೋಂಕು ತಡೆಗಟ್ಟಬಹುದು ಎಂದು ನ್ಯೂಟ್ರಿಷಿಯನಿಸ್ಟ್‌ ಹೇಳಿದ್ದಾರೆ. ಸೇಂದಿಯಲ್ಲಿ ಏನೂ ಮಿಶ್ರ ಮಾಡಿರಬಹುದು. ಆಗಷ್ಟೇ ಮರದಿಂದ ಇಳಿಸಿದ ಸೇಂದಿಯಾದರೆ ಒಳ್ಳೆಯದು.

 ಈ ಪಾನೀಯಗಳನ್ನು ಟ್ರೈ ಮಾಡಿ

ಈ ಪಾನೀಯಗಳನ್ನು ಟ್ರೈ ಮಾಡಿ

ಕಾಲಕ್ಕೆ ಅನುಗುಣವಾಗಿ ಆಗಾಗ ಎಳನೀರು, ನಿಂಬು ಪಾನೀಯ ಕುಡಿಯುವುದು, ಕಬ್ಬಿನ ಜ್ಯೂಸ್‌ ಕುಡಿಯುವುದು, ಕೋಕಂ,ಪುನರ್ಪುಳಿ ಮುಂತಾದ ಜ್ಯೂಸ್‌ ಕುಡಿಯುವುದರಿಂದ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಲು ಸಹಕರಿಸುತ್ತದೆ. ಈ ಜ್ಯೂಸ್‌ಗಳಲ್ಲು ವಿಟಮಿನ್ಸ್, ಖನಿಜಾಂಶಗಳು, ಎಲೆಕ್ಟ್ರೋಲೈಟ್ಸ್ ಇವೆಲ್ಲಾ ಅಧಿಕ ಇರುವುದರಿಂದ ಈ ರೀತಿಯ ಜ್ಯೂಸ್‌ ಆಗಾಗ ಕುಡಿಯುವುದು ಒಳ್ಳೆಯದು.

ಗಂಜಿ ಕುಡಿಯಿರಿ

ಗಂಜಿ ಕುಡಿಯಿರಿ

ಗಂಜಿಯಲ್ಲಿ ಪ್ರಿಬಯೋಟಿಕ್‌ ಇರುವುದರಿಂದ ದೇಹಕ್ಕೆ ತುಂಬಾನೇ ಒಳ್ಳೆಯದು. ಗಂಜಿ ಮೂತ್ರ ಸೋಂಕು ಕಡಿಮೆ ಮಾಡಲು ಸಹಕಾರಿಯಾಗಿದೆ. ರಾತ್ರಿ ಅನ್ನವನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿಟ್ಟು ಬೆಳಗ್ಗೆ ಸ್ವಲ್ಪ ಬಿಸಿ ಮಾಡಿ ಮೊಸರು ಜೊತೆ ತಿಂದರೆ ಇಂಥ ಸಮಸ್ಯೆ ತಡೆಗಟ್ಟಬಹುದು.

ಹುರುಳಿಕಾಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ

ಹುರುಳಿಕಾಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ

ಮಹಿಳೆಯರು ತಮ್ಮ ಆಹಾರಕ್ರಮದಲ್ಲಿ ಹುರುಳಿಕಾಳನ್ನು ಸೇರಿಸುವುದು ತುಂಬಾ ಒಳ್ಳೆಯದು. ಇದು ದೇಹದಲ್ಲಿರುವ ಕಶ್ಮಲ ಹೊರ ಹಾಕುತ್ತೆ. ಇದರಿಂದ ಮೂತ್ರ ಸೋಂಕು ತಡೆಗಟ್ಟಲು ಸಹಕಾರಿಯಾಗಿದೆ.

 ಪಾದಗಳಿಗೆ ತುಪ್ಪ ಹಚ್ಚಿ

ಪಾದಗಳಿಗೆ ತುಪ್ಪ ಹಚ್ಚಿ

ರಾತ್ರಿ ಮಲಗುವ ಮುನ್ನ ಪಾದಗಳಿಗೆ ಸ್ವಲ್ಪ ತುಪ್ಪ ತೆಗೆದು ಹಚ್ಚಿ. ಈ ರೀತಿ ಮಾಡುವುದರಿಂದ ಮೂತ್ರ ಸೋಂಕು ತಡೆಗಟ್ಟಬಹುದು.

 ಈ ಅಭ್ಯಾಸಗಳು ಮೂತ್ರ ಸೋಂಕು ತಡೆಗಟ್ಟುವುದು

ಈ ಅಭ್ಯಾಸಗಳು ಮೂತ್ರ ಸೋಂಕು ತಡೆಗಟ್ಟುವುದು

* ಮೂತ್ರ ಮಾಡಿದ ಬಳಿ ಖಾಸಗಿ ಭಾಗವನ್ನು ತೊಳೆದು ಸ್ವಚ್ಛವಾಗಿಡಿ.

* ಸ್ವಚ್ಛವಾದ ಒಳ ಉಡುಪು ಧರಿಸಿ. ತುಂಬಾ ಬಿಗಿಯಾದ ಉಡುಪು ಧರಿಸಬೇಡಿ.

* ಮೂತ್ರ ಬಂದಾಗ ತಡೆ ಹಿಡಿಯಬೇಡಿ.

* ಮೂತ್ರ ಬಂದಾಗ ಹೋಗಿ ಅಲ್ಲದೆ ಒತ್ತಾಯವಾಗಿ ಮೂತ್ರ ವಿಸರ್ಜನೆಗೆ ಪ್ರಯತ್ನಿಸಬೇಡಿ.

* ಇನ್ನು ವ್ಯಾಯಾಮ ಮಾಡುವಾಗ ತುಂಬಾ ಬಿಗಿಯಾದ ಉಡುಪು ಧರಿಸಬೇಡಿ.

* ವ್ಯಾಯಾಮ ಮಾಡಿದ ಬಳಿಕ ಸ್ನಾನ ಮಾಡಿ.

* ಒಳ್ಳೆಯ ನಿದ್ದೆ ಅವಶ್ಯಕ.

ಸಲಹೆ: ಮೂತ್ರ ಸೋಂಕು ಬಂದಾಗ ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.

English summary

Home Remedies For UTI By Rujuta Diwekar

Here is home remedies for UTI Rujuta Diwekar, read on....
X
Desktop Bottom Promotion