For Quick Alerts
ALLOW NOTIFICATIONS  
For Daily Alerts

ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ

|

ಬಿಪಿ ಸಮಸ್ಯೆ ಇದೆಯೇ? ಹಾಗಾದರೆ ನೀವು ಆಹಾರಕ್ರಮದ ಕಡೆ ತುಂಬಾನೇ ಗಮನಹರಿಸಬೇಕು. ಅದರಲ್ಲೂ ಅಧಿಕ ಸೋಡಿಯಂ ಇರುವ ಆಹಾರ ಸೇವಿಸಬಾರದು, ಅಧಿಕ ಸೋಡಿಯಂ ಇರುವ ಆಹಾರಗಳು ಬಿಪಿ ಮತ್ತಷ್ಟು ಹೆಚ್ಚು ಮಾಡುವುದು.

Hypertension

ಬಿಪಿ ಸಮಸ್ಯೆ ಇರುವವರು ಪಿಜ್ಜಾ, ಸ್ಯಾಂಡ್‌ವಿಚ್‌, ಡ್ರೆಸ್ಸಿಂಗ್‌ ಮಾಡಿದ ಸಲಾಡ್, ಮಜ್ಜಿಗೆ ಬಗೆಯ ಆಹಾರಗಳನ್ನು ದೂರವಿಡುವುದು ಒಳ್ಳೆಯದು:

ಟೇಬಲ್‌ ಸಾಲ್ಟ್

ಟೇಬಲ್‌ ಸಾಲ್ಟ್

ಉಪ್ಪಿನಂಶ ಅಧಿಕ ತೆಗೆದುಕೊಂಡರೆ ದೇಹದಲ್ಲಿರುವ ನೀರಿನಂಶ ಕಡಿಮೆಯಾಗುವುದು, ಅಲ್ಲದೆ ರಕ್ತದಲ್ಲಿರುವ ನೀರಿನಂಶದ ಮೇಲೆ ಅಧಿಕ ಒತ್ತಡ ಬೀಳುವುದು ಇದರಿಂದ ರಕ್ತದೊತ್ತಡ ಅಧಿಕವಾಗುವುದು. ಆದ್ದರಿಂದ ಬಿಪಿ ಸಮಸ್ಯೆ ಇದ್ದರೆ ಉಪ್ಪಿನಂಶದ ಆಹಾರ ಕಡಿಮೆ ತೆಗೆದುಕೊಳ್ಳುವುದು ಒಳ್ಳೆಯದು. ಬಿಪಿ ಸಮಸ್ಯೆ ಇರುವವರು ಟೇಬಲ್ ಸಾಲ್ಟ್ ಬಳಸದಿರುವುದು ಒಳ್ಳೆಯದು. ಅದರ ಜೊತೆಗೆ ಈ ಬಗೆಯ ಆಹಾರಗಳನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು.

 ಹಾಲಿನ ಉತ್ಪನ್ನಗಳು:

ಹಾಲಿನ ಉತ್ಪನ್ನಗಳು:

ಬಿಪಿ ಸಮಸ್ಯೆ ಇರುವವರಿಗೆ ಹಾಲಿನ ಉತ್ಪನ್ನಗಳು ಒಳ್ಳೆಯದಲ್ಲ. ಕಾಟೆಜ್ ಚೀಸ್, ಮಜ್ಜಿಗೆ, ಸಂಸ್ಕರಿಸಿದ ಚೀಸ್ ಇವುಗಳಲ್ಲಿ ಸೋಡಿಯಂ ಅಧಿಕವಿರುತ್ತದೆ. ಇವುಗಳನ್ನು ಅಪರೂಪಕ್ಕೆ ತಿನ್ನಬಹುದು, ಆದರೆ ಪ್ರತಿದಿನ ಬಳಸಬೇಡಿ. ಯಾರಿಗೆ ಹೈಪರ್‌ ಟೆನ್ಷನ್ ಇದೆಯೋ ಅವರು ಬಳಸದಿದ್ದರೆ ಒಳ್ಳೆಯದು.

ಸ್ಯಾಂಡ್‌ವಿಚ್‌

ಸ್ಯಾಂಡ್‌ವಿಚ್‌

ತುಂಬಾ ಹಸಿವು ಉಂಟಾಗುತ್ತಿದೆ ಎಂದಾಗ ಬೇಗನೆ ಮಾಡಿ ಸವಿಉವ ಆಹಾರಗಳಲ್ಲೊಂದು ಸ್ಯಾಂಡ್‌ವಿಚ್‌. ಸ್ಯಾಂಡ್‌ವಿಚ್‌ ಆರೋಗ್ಯಕ್ಕೂ ಒಳ್ಳೆಯದು, ಆದರೆ ನಿಮಗೆ ಬಿಪಿ ಸಮಸ್ಯೆಯಿದ್ದರೆ ಸ್ಯಾಂಡ್‌ವಿಚ್‌ ಅತ್ಯುತ್ತಮವಾದ ಆಹಾರವಲ್ಲ. ಸ್ಯಾಂಡ್‌ವಿಚ್‌ಗೆ ಬಳಸುವ ಚೀಸ್‌, ಮಾಂಸ, ಬ್ರೆಡ್‌ ಇವುಗಳಲ್ಲಿ ಅತ್ಯಧಿಕ ಸೋಡಿಯಂ ಇರುತ್ತದೆ.

 ಪಿಜ್ಜಾ

ಪಿಜ್ಜಾ

ಪಿಜ್ಜಾ ಸವಿಯಲು ತುಂಬಾನೇ ಖುಚಿಯಾಗುವುದು ಅಲ್ವಾ? ಆದರೆ ಬಿಪಿ ಸಮಸ್ಯೆ ಇದ್ದರೆ ಪಿಜ್ಜಾ ತಿನ್ನುವುದರಿಂದ ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಇದನ್ನು ತಯಾರಿಸಲು ಬಳಸುವ ಚೀಸ್, ಮಾಂಸ ಮತ್ತಿತರ ಸಾಮಗ್ರಿಗಳಲ್ಲಿ ಸೋಡಿಯಂ ಅಧಿಕವಿರುತ್ತದೆ, ಆದರೆ ಹೈಪರ್‌ಟೆನ್ಷನ್ ಇದ್ದರೆ ಪಿಜ್ಜಾ ಅತ್ಯುತ್ತಮವಾದ ಆಯ್ಕೆಯಲ್ಲ.

 ಮೆಕೊರೊನಿ ಅಂಡ್ ಚೀಸ್:

ಮೆಕೊರೊನಿ ಅಂಡ್ ಚೀಸ್:

ಮೆಕೊರೋನಿ ಅಂಡ್‌ ಚೀಸ್‌ ಅತ್ಯಧಿಕ ರಕ್ತದೊತ್ತಡ ಸಮಸ್ಯೆಯಿದ್ದರೆ ಸವಿಯಬೇಡಿ. ಮೆಕೊರೋನಿ ಹಾಗೂ ಚೀಸ್‌ ಸೇರಿದಾಗ ಇದರಲ್ಲಿ ಸೋಡಿಯಂ ಅಧಿಕವಿರುತ್ತದೆ, ಅಪರೂಪಕ್ಕೊಮ್ಮೆ ತಿನ್ನಿ.

 ಸಲಾಡ್‌ ಡ್ರೆಸ್ಸಿಂಗ್:

ಸಲಾಡ್‌ ಡ್ರೆಸ್ಸಿಂಗ್:

ಸಲಾಡ್‌ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇನ್ನು ಆರೋಗ್ಯಕರವಾಗಿ ಮೈ ತೂಕ ಕಡಿಮೆ ಮಾಡಬೇಕೆಂದು ಬಯಸುವವರು ಸಲಾಡ್‌ ಹೆಚ್ಚಾಗಿ ಬಳಸುತ್ತಾರೆ. ಆದರೆ ಸಲಾಡ್‌ಗೆ ಡ್ರೆಸ್ಸಿಂಗ್‌ ಮಾಡದಿದ್ದರೆ ಒಳ್ಳೆಯದು. ಏಕೆಂದರೆ ಇವುಗಳಲ್ಲಿಯೂ ಸೊಡಿಯಂ ಅಧಿಕವಿರುತ್ತದೆ.

ಸೋಡಿಯಂ ಪ್ರಮಾಣ ಕಡಿಮೆ ಮಾಡಲು ಈ ಆಹಾರ ಸೇವಿಸಿ

ಸೋಡಿಯಂ ಪ್ರಮಾಣ ಕಡಿಮೆ ಮಾಡಲು ಈ ಆಹಾರ ಸೇವಿಸಿ

ನೀವು ಒಂದು ವೇಳೆ ಸೋಡಿಯಂ ಇರುವ ಆಹಾರ ತಿಂದಾಗ ಈ ಆಹಾರಗಳನ್ನು ತಿನ್ನುವ ಮೂಲಕ ಬ್ಯಾಲೆನ್ಸ್ ಮಾಡಿ

1. ಬಾಳೆಹಣ್ಣು

ಪೊಟಾಷ್ಯಿಯಂ ಇರುವ ಬಾಳೆಹಣ್ಣು ತಿನ್ನುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಇದನ್ನು ತಿನ್ನುವುದರಿಂದ ಹೃದಯಾಘಾತದ ಅಪಾಯ ಕಡಿಮೆ ಮಾಡಬಹುದು.

2. ಬೆಣ್ಣೆಹಣ್ಣು

ಸೋಡಿಯಂ ಅಧಿಕ ಇರುವ ಆಹಾರ ತಿಂದರೆ ಬೆಣ್ಣೆಹಣ್ಣು ಸೇವಿಸಿ.

3. ಕಿವಿಹಣ್ಣು

ಕಿವಿ ಹಣ್ಣು ತಿನ್ನುವುದರಿಂದ ಹೊಟ್ಟೆ ಉಬ್ಬುವುದು ತಡೆಗಟ್ಟಬಹುದು.

4. ಸೊಪ್ಪು

ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಇದನ್ನು ತಿನ್ನುವುದು ಒಳ್ಳೆಯದು

5. ಯೋಗರ್ಟ್

ನೀವು ಅಧಿಕ ಸೋಡಿಯಂ ಇರುವ ಆಹಾರ ಸೇವಿಸಿದರೆ ನೀವು ಯೋಗರ್ಟ್ ತಿನ್ನಿ.

6. ಎಳನೀರು

ಇದರಲ್ಲಿ ಎಲೆಕ್ಟ್ರೋಲೈಟ್ ಇದ್ದು ನಿಮ್ಮ ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ.

7. ಹರ್ಬಲ್‌ ಟೀ ಕುಡಿಯಿರಿ

ಶುಂಠಿ ಟಿ ಅಥವಾ ಪುದೀನಾ ಟೀ ಹೊಟ್ಟೆ ಆರೋಗ್ಯ ಕಾಪಾಡಲು ಸಹಕಾರಿ.

ಬಿಪಿ ನಿಯಂತ್ರಣದಲ್ಲಿಡಲು ಟಿಪ್ಸ್

* ಮೈ ತೂಕವನ್ನು ನಿಯಂತ್ರಣದಲ್ಲಿಡಿ

* ಪ್ರತಿದಿನ ವ್ಯಾಯಾಮ ಮಾಡಿ

* ಆರೋಗ್ಯಕರ ಆಹಾರ ಸೇವಿಸಿ

* ಉಪ್ಪಿನಂಶದ ಆಹಾರ ಕಡಿಮೆ ಮಾಡಿ

* ಧೂಮಪಾನ ಮಾಡಬೇಡಿ

* ರಾತ್ರಿ ಸರಿಯಾಗಿ ನಿದ್ದೆ ಮಾಡಿ

* ಮಾನಸಿಕ ಒತ್ತಡ ಕಡಿಮೆ ಮಾಡಿ

* ನಿಮ್ಮ ರಕ್ತದೊತ್ತಡವನ್ನು ಚೆಕಪ್ ಮಾಡಿಸಿ

English summary

High sodium foods not good for high blood pressure patients in kannada

Hypertension: why high sodium food not good for bp , read on....
X
Desktop Bottom Promotion