For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಅಣಬೆ ತಿನ್ನಬಾರದೇ? ಏಕೆ?

|

ಮಳೆಗಾಲದಲ್ಲಿ ತೋಟದಲ್ಲಿ ಅಣಬೆಗಳು ಏಳುವುದು ಅಧಿಕ. ಏಕೆಂದರೆ ಮಣ್ಣು ಮಳೆಬಿದ್ದು ಮೆತ್ತಗಾಗಿರುತ್ತೆ, ಆಗ ಅಣಬೆಗಳು ಏಳಲಾರಂಭಿಸುತ್ತದೆ. ಬಗೆ-ಬಗೆಯ ಅಣಬೆಗಳು ಈ ಸಮಯದಲ್ಲಿ ಸಿಗುತ್ತವೆ, ಆದರೆ ಕೆಲವೊಂದು ಅಣಬೆಗಳು ತುಂಬಾ ವಿಷಕಾರಿಯೂ ಆಗಿರುವುದರಿಂದ ಮಳೆಗಾಲದಲ್ಲಿ ಅಣಬೆ ತಂದು ಸಾರು ಮಾಡುವಾಗ ತುಂಬಾನೇ ಹುಷಾರಾಗಿರಬೇಕು.

ಕೆಲ ಅಣಬೆಗಳನ್ನು ತಿಂದರೆ ಪ್ರಾಣಕ್ಕೆ ಕೂಡ ಅಪಾಯ ಉಂಟಾಗಬಹುದು, ಇನ್ನು ಬೆಳೆಸುವ ಅಣಬೆ ಯಾರೂ ಈ ಸಮಯದಲ್ಲಿ ಬ್ಯಾಕ್ಟಿರಿಯಾಗಳು , ವೈರಸ್‌ಗಳು ತಗುಲುವ ಸಾಧ್ಯತೆ ಇರುವುದರಿಂದ ಮಳೆಗಾಲದಲ್ಲಿ ಅಣಬೆಯನ್ನು ಬಳಸುವುದಾದರೆ ಎಚ್ಚರವಹಿಸಿ.

ಮಳೆಗಾಲದಲ್ಲಿ ಅಣಬೆಯನ್ನು ತಿನ್ನದಿದ್ದರೆ ಒಳ್ಳೆಯದು, ಏಕೆ?

ಮಳೆಗಾಲದಲ್ಲಿ ಅಣಬೆಯನ್ನು ತಿನ್ನದಿದ್ದರೆ ಒಳ್ಳೆಯದು, ಏಕೆ?

ಮಳೆಗಾಲದಲ್ಲಿ ಅಣಬೆಗಳು ಹೆಚ್ಚಾಗಿ ಸಿಗುವುದಾದರೂ ಎಲ್ಲಾ ಬಗೆಯ ಅಣಬೆಗಳನ್ನು ತಿನ್ನಬೇಡಿ. ತಿನ್ನಲು ಸುರಕ್ಷಿತವಾಗಿದೆ ಎಂದಾಗಿದ್ದರೆ ಮಾತ್ರ ಅಡುಗೆ ಮಾಡಿ.

ಇಲ್ಲದಿದ್ದರೆ ಅಣಬೆಯನ್ನು ತಿಂದರೆ ವಾಂತಿ, ಬೇಧಿ ಈ ರೀತಿಯ ಸಮಸ್ಯೆ ಅಥವಾ ತ್ವಚೆ ಅಲರ್ಜಿ ಮುಂತಾದ ತೊಂದರೆಗಳು ಉಂಟಾಗಬಹುದು.

ಮಳೆಗಾಲದಲ್ಲೂ ಅಣಬೆ ಸೂಪರ್‌ ಫುಡ್‌ ಹೌದು

ಮಳೆಗಾಲದಲ್ಲೂ ಅಣಬೆ ಸೂಪರ್‌ ಫುಡ್‌ ಹೌದು

ಅಣಬೆ ಸೂಪರ್‌ ಫುಡ್‌ ಎನ್ನುವುದರಲ್ಲಿ ನೋ ಡೌಟ್‌. ಇದರಲ್ಲಿ ಪ್ರೊಟೀನ್‌, ವಿಟಮಿನ್‌ ಬಿ, ಕಾರ್ಬ್ಸ್‌, ಕ್ಯಾಲ್ಸಿಯಂ, ಕಬ್ಬಿಣದಂಶ, ಮೆಗ್ನಿಷ್ಯಿಯಂ,ಪೊಟಾಷ್ಯಿಯಂ, ಸೋಡಿಯಂ, ಸತು, ವಿಟಮಿನ್‌ ಸಿ, ವಿಟಮಿನ್‌, ಫೋಲೆಟ್, ಚೋಲೈನ್‌, ನಿಯಾಸಿನ್‌ ಹೀಗೆ ಅನೇಕ ವಿಟಮಿನ್ಸ್‌ ಇವೆ. ಇನ್ನು ಮಳೆಗಾಲದಲ್ಲಿ ಸೂರ್ಯನ ಬೆಳಕು ಮೈ ಮೇಲೆ ಬೀಳುವುದು ಕಡಿಮೆ, ಆಗ ವಿಟಮಿನ್‌ ಡಿ ಇರುವ ಆಹಾರ ಸೇವಿಸಬೇಕು, ಅಣಬೆಯಲ್ಲಿ ವಿಟಮಿನ್‌ ಡಿ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

* ಅಣಬೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ತುಂಬಾ ಒಳ್ಳೆಯದು. ಇದನ್ನು ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಮಧುಮೇಹಿಗಳಿಗೆ ಸೂಪರ್‌ ಆಹಾರವಾಗಿದೆ.

* ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಣಬೆ ಸೂಪ್‌ ಮಾಡಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಮಳೆಗಾಲದಲ್ಲಿ ಈ ಆಹಾರಗಳನ್ನು ಸೇವಿಸುವಾಗ ಜಾಗ್ರತೆ

ಮಳೆಗಾಲದಲ್ಲಿ ಈ ಆಹಾರಗಳನ್ನು ಸೇವಿಸುವಾಗ ಜಾಗ್ರತೆ

* ರಸ್ತೆ ಬದಿಯ ಆಹಾರಗಳು, ಜ್ಯೂಸ್‌ಗಳು

ಏಕೆಂದರೆ ಕಲುಷಿತ ನೀರು ಮಿಶ್ರವಾಗುವ ಸಾಧ್ಯತೆ ಇದೆ. ಇದರಿಂದ ಆರೋಗ್ಯ ಸಂಬಂಧಿತ ಸಮಸ್ಯೆ ಉಂಟಾಗುವುದು.

* ಎಣ್ಣೆಯಲ್ಲಿ ಕರಿದ ಪದಾರ್ಥಗಳು

ಮಳೆಗಾಲದಲ್ಲಿ ಪಕೋಡ, ಬಜ್ಜಿ ಇವೆಲ್ಲಾ ಬಿಸಿಬಿಸಿ ಟೀ ಜೊತೆ ತಿನ್ನಲು ತುಂಬಾನೇ ಖುಷಿಯಾಗುವುದು, ಆದರೆ ಹೊರಗಡೆ ತಿಂದ್ರೆ ಅವರು ಬಳಸಿದ ಎಣ್ಣೆಯನ್ನೇ ಮತ್ತೆ ಬಳಸುವ ಸಾಧ್ಯತೆ ಇರುವುದರಿಂದ ಹೊಟ್ಟೆ ಸಮಸ್ಯೆ ಉಂಟಾಗುವುದು.

* ಹಸಿ ತರಕಾರಿ-ಹಣ್ಣುಗಳನ್ನು ಬಳಸಬೇಡಿ.

* ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ.

* ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನಿ.

English summary

Here Is Why Mushrooms Should Be Avoided in Monsoon in Kannada

During monsoon season why mushrooms should be avoided, read on...
Story first published: Monday, July 4, 2022, 17:30 [IST]
X
Desktop Bottom Promotion