For Quick Alerts
ALLOW NOTIFICATIONS  
For Daily Alerts

ಪಿಸಿಓಎಸ್/ಪಿಸಿಓಡಿ ಸಮಸ್ಯೆ ನಿವಾರಣೆಗೆ ಈ ಗಿಡಮೂಲಿಕೆಗಳ ಟೀ ಬಹಳ ಪ್ರಯೋಜನಕಾರಿ

|

ಪಿಸಿಓಎಸ್ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯವಾಗುತ್ತಿದ್ದು, ಇದರೊಂದಿಗೆ ಸಾಮಾನ್ಯ ಜೀವನ ನಡೆಸುವುದು ಸುಲಭವಲ್ಲ. ಆರೋಗ್ಯಕರ ಜೀವನಶೈಲಿ ಮತ್ತು ಆಹಾರದ ಮೂಲಕ ಮಾತ್ರ ಅದರಿಂದ ಸ್ವಲ್ಪ ಪರಿಹಾರವನ್ನು ಪಡೆಯಲು ಸಾಧ್ಯ. ಇದರೊಂದಿಗೆ, ಕೆಲವು ಗಿಡಮೂಲಿಕೆ ಚಹಾಗಳು ಸಹ ಈ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಟೀಗಳ ಬಗ್ಗೆ ನಾವಿಂದು ಚರ್ಚಿಸಲಿದ್ದೇವೆ.

ಪಿಸಿಒಎಸ್ ಸಮಸ್ಯೆಯಿಂದ ಪರಿಹಾರ ನೀಡುವ ಗಿಡಮೂಲಿಕೆಗಳ ಚಹಾಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1. ದಂಡೇಲಿಯನ್ ರೂಟ್ ಟೀ:

1. ದಂಡೇಲಿಯನ್ ರೂಟ್ ಟೀ:

ಈ ಒಂದು ಮೂಲಿಕೆ ಪಿಸಿಓಎಸ್ ರೋಗಲಕ್ಷಣಗಳನ್ನು ನಿಭಾಯಿಸುವಲ್ಲಿ ಪರಿಣಾಮಕಾರಿಯಾಗಿದೆ. ದಂಡೇಲಿಯನ್ ರೂಟ್ ಟೀ ಕುಡಿಯುವುದರಿಂದ ಉರಿಯೂತ, ಅಧಿಕ ಮಧುಮೇಹ ಮತ್ತು ಮೂತ್ರದ ಸೋಂಕನ್ನು ಸಹ ಕಡಿಮೆಮಾಡಬಹುದು. ಆದರೆ ಇದನ್ನು ಮಲಗುವ ಮುನ್ನ ಕುಡಿಯಬೇಡಿ.

2. ಕ್ಯಾಮೊಮೈಲ್ ಟೀ:

2. ಕ್ಯಾಮೊಮೈಲ್ ಟೀ:

ಕ್ಯಾಮೊಮೈಲ್ ನಿಮ್ಮ ದೇಹವನ್ನು ಶಾಂತಗೊಳಿಸುವ ಮತ್ತು ವಿಶ್ರಾಂತಿ ಪರಿಣಾಮವನ್ನು ಬೀರುತ್ತದೆ. PCOS ನಿಂದ ಬಳಲುತ್ತಿರುವ ಮಹಿಳೆಯರು ಹೊಟ್ಟೆ ನೋವು, ಸೆಳೆತ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಈ ಚಹಾವನ್ನು ಕುಡಿಯುತ್ತಾರೆ. ಆದರೆ ಈ ಗಿಡಮೂಲಿಕೆ ಚಹಾವು ಇತರ ಹಲವು ಗಂಭೀರ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅಂಡಾಶಯದ ಚೀಲಗಳು, ಸಾಮಾನ್ಯ ಶೀತಗಳ ಚಿಕಿತ್ಸೆಯಲ್ಲಿಯೂ ಇದು ಪ್ರಯೋಜನಕಾರಿಯಾಗಿದೆ.

3. ಸ್ಪಿಯರ್ಮಿಂಟ್ ಟೀ:

3. ಸ್ಪಿಯರ್ಮಿಂಟ್ ಟೀ:

ಸ್ಪಿಯರ್ಮಿಂಟ್ ಪುದೀನಾವನ್ನು ಹೋಲುತ್ತದೆ. ಈ ಪುದೀನಾ ಚಹಾವು ದೊಡ್ಡ ಪ್ರಮಾಣದ ಉತ್ಕರ್ಷಣ ನಿರೋಧಕ ಸಂಯುಕ್ತಗಳನ್ನು ಹೊಂದಿದ್ದು ಅದು ಜೀರ್ಣಕಾರಿ ಸಮಸ್ಯೆಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ದೇಹದ ಮೇಲೆ ಆಂಡ್ರೊಜೆನಿಕ್ ಪರಿಣಾಮವನ್ನು ಬೀರುತ್ತದೆ ಮತ್ತು ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4. ದಾಲ್ಚಿನ್ನಿ ಟೀ:

4. ದಾಲ್ಚಿನ್ನಿ ಟೀ:

ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಾಲ್ಚಿನ್ನಿ ನೀರನ್ನು ಕುಡಿದರೆ, ಅದು ಹೇಗೆ ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ಕೇಳಿದ್ದೇವೆ. ಆದರೆ ಪಿಸಿಓಎಸ್‌ಗೆ ಬಂದಾಗ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ದಾಲ್ಚಿನ್ನಿ ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ, ಗರ್ಭಾಶಯದ ಫೈಬ್ರಾಯ್ಡ್‌ಗಳನ್ನು ನಿಭಾಯಿಸುತ್ತದೆ ಮತ್ತು ಸಾಮಾನ್ಯ ಮುಟ್ಟಿನ ಹರಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

5. ಶುಂಠಿ ಚಹಾ:

5. ಶುಂಠಿ ಚಹಾ:

ಶುಂಠಿಯು ತನ್ನದೇ ಆದ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಶುಂಠಿಯು ಸ್ತ್ರೀ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಶುಂಠಿ ಚಹಾ ಹೆಚ್ಚಾಗಿ ಸೆಳೆತವನ್ನು ನಿವಾರಿಸಲು, ಮನಸ್ಥಿತಿಯನ್ನು ಸುಧಾರಿಸಲು ಮತ್ತು ತಲೆನೋವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.

English summary

Herbal Teas to Help Cure PCOS And PCOD Problems in Kannada

Here we talking about Herbal Teas to Help Cure PCOS And PCOD Problems in Kannada, read on
Story first published: Friday, October 22, 2021, 15:23 [IST]
X
Desktop Bottom Promotion