For Quick Alerts
ALLOW NOTIFICATIONS  
For Daily Alerts

ನಿದ್ದೆ ಕಡಿಮೆಯಾದರೆ ಸೆಕ್ಸ್‌ಲೈಫ್‌ಗೆ ಅಪಾಯ

|

ಬದಲಾಗುತ್ತಿರುವ ನಮ್ಮ ಜೀವನಶೈಲಿ ನಮ್ಮ ಆರೋಗ್ಯ, ಲೈಂಗಿಕ ಜೀವನ, ಮಾನಸಿಕ ನೆಮ್ಮದಿ ಮೇಲೆ ತುಂಬಾ ಪ್ರಭಾವ ಬೀರುತ್ತಿರುವುದು ಪ್ರತಿಯೊಬ್ಬರ ಅರಿವಿಗೆ ಬಂದಿರುತ್ತದೆ. ಹೌದು ನೈಟ್‌ ಶಿಫ್ಟ್ , ಮೊಬೈಲ್ ಬಂದ ಮೇಲಂತೂ ನಿದ್ದೆ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ನೈಟ್‌ ಶಿಫ್ಟ್ ಇದ್ದವರಿಗೆ ಹಗಲು ಹೊತ್ತಿನಲ್ಲಿ ನಿದ್ದೆ ಮಾಡಿದರೂ ರಾತ್ರಿ ನಿದ್ದೆಗೆ ಸಮವಾಗುವುದಿಲ್ಲ. ಇನ್ನು ಕೆಲವರಿಗೆ ರಾತ್ರಿ ತುಂಬಾ ಹೊತ್ತು ಮೊಬೈಲ್‌ ನೋಡುವ ಅಭ್ಯಾಸ ಇರುತ್ತದೆ, ಇದರಿಂದ ನಿದ್ದೆ ಕಡಿಮೆಯಾಗುವುದು ಅಲ್ಲದೆ ಮೊಬೈಲ್‌ ಹೆಚ್ಚು ನೋಡುವುದರಿಂದ ನಿದ್ರಾಹೀನತೆ ಸಮಸ್ಯೆ ಉಂಟಾಗುವುದು.

Sex and Sleep

ನಿದ್ದೆ ಕಡಿಮೆಯಾದರೆ ಅದು ಸೆಕ್ಸ್ ಆಸಕ್ತಿಯನ್ನು ಕುಗ್ಗಿಸುವುದು, ಇದರಿಂದಾಗಿ ದಂಪತಿ ನಡುವೆ ಲೈಂಗಿಕ ತೃಪ್ತಿ ಕಡಿಮೆಯಾಗುವುದು. ನಿದ್ದೆಗೂ ಹಾಗೂ ಆರೋಗ್ಯಕರ ಸೆಕ್ಸ್‌ ಲೈಫ್‌ಗೂ ಸಂಬಂಧವಿದೆಯೆಂದು ಅಮೆರಿಕನ್ ಅಕಾಡೆಮಿ ಆಫ್‌ ಸ್ಲೀಪ್ ಮೆಡಿಸಿನ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ನಿದ್ದೆ ಕಡಿಮೆಯಾದ ವ್ಯಕ್ತಿಯಲ್ಲಿ ಸೆಕ್ಸ್ ಬಗ್ಗೆ ವಿಚಿತ್ರ ವರ್ತನೆ ಕಂಡು ಬರುವುದು, ಈ ಪರಿಸ್ಥಿತಿಯನ್ನು ಸ್ಲೀಪ್‌ಸೆಕ್ಸ್ ಅಥವಾ ಸೆಕ್ಸ್ಸೋಮಿಯಾ ಎಂದು ಕರೆಯಲಾಗುವುದು. ನಿದ್ದೆಯಲ್ಲಿ ನಡೆಯುವ ಅಭ್ಯಾಸದಂತೆ, ಸೆಕ್ಸ್ಸೋಮಿಯಾ ಇರುವ ವ್ಯಕ್ತಿ ನಿದ್ದೆಯಲ್ಲಿ ಲೈಂಗಿಕಕ್ರಿಯೆ ಬಯಸುವುದು, ನಿದ್ದೆ ಮಾಡಿದಾಗ ವಿಚಿತ್ರವಾಗಿ ನರಳಾಡುವುದು, ಶಬ್ದ ಮಾಡುವುದು, ಜೋರಾಗಿ ಉಸಿರಾಡುವುದು ಹೀಗೆ ಸೆಕ್ಸ್ ಮಾಡುತ್ತಿರುವವರಂತೆ ವರ್ತಿಸುತ್ತಾರೆ.

ಸೆಕ್ಸ್ ಲೈಫ್‌ ಮೇಲೆ ನಿದ್ದೆ ಪ್ರಭಾವ

ಸೆಕ್ಸ್ ಲೈಫ್‌ ಮೇಲೆ ನಿದ್ದೆ ಪ್ರಭಾವ

ನಿದ್ದೆಗೂ ಹಾಗೂ ಸೆಕ್ಸ್ ಜೀವನಕ್ಕೂ ಒಂದಕ್ಕೊಂದು ಸಂಬಂಧವಿರುತ್ತದೆ. ನಿದ್ದೆ ಚೆನ್ನಾಗಿ ಮಾಡಿದರೆ ಮಾರನೆಯ ದಿನ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಆಸಕ್ತಿ ತೋರಿಸುತ್ತಾರೆ, ನಿದ್ದೆ ಕಡಿಮೆಯಾದಂತೆ ಲೈಂಗಿಕ ತೃಪ್ತಿ ಕಡಿಮೆಯಾಗುವುದು ಎಂದು ಅಧ್ಯಯನ ಹೇಳಿದೆ.

ಮತ್ತೊಂದು ಅಧ್ಯಯನ 'ಮೆನೋಪಾಸ್‌ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಅನೇಕ ಬದಲಾವಣೆಗಳು ಕಂಡು ಬರುತ್ತದೆ. ಅವರು ಈ ಸಮಯದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ, ಇದರಿಂದಾಗಿ ನಿದ್ದೆ ಸರಿಯಾಗಿ ಬರುವುದಿಲ್ಲ, ಇದರಿಂದಾಗಿ ಲೈಂಗಿಕ ಸಮಸ್ಯೆ ಉಂಟಾಗುವುದು' ಎಂದು ಹೇಳಿದೆ.

ನಿದ್ದೆ ಲೈಂಗಿಕ ಜೀವನದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಅಧ್ಯಯನವೊಂದನ್ನು ನಡೆಸಿ ಆ ವರದಿಯನ್ನು ಸೆಕ್ಸ್ಯೂಯಲ್‌ ಮೆಡಿಸಿನ್‌ ಎಂಬ ಜರ್ನಲ್‌ನಲ್ಲಿ ಪ್ರಕಟ ಮಾಡಲಾಯಿತು. ಈ ಅಧ್ಯಯನದಲ್ಲಿ ಯೌವನ ಪ್ರಾಯದವರಿಂದ ಹಿಡಿದು 60 ವಯಸ್ಸಿನ 4000 ಪುರುಷ ಹಾಗೂ ಮಹಿಳೆಯರು ಭಾಗವಹಿಸಿದ್ದರು. ಯಾರು ನಿದ್ದೆ ಕಡಿಮೆ ಮಾಡುತ್ತಾರೋ ಅವರಲ್ಲಿ ಲೈಂಗಿಕ ಸಮಸ್ಯೆಗಳರುವುದು ಈ ಅಧ್ಯಯನದಿಂದ ತಿಳಿದು ಬಂತು. ನಿದ್ದೆ ಕಡಿಮೆಯಾದರೆ ಪುರುಷರಲ್ಲಿ ಶಿಶ್ನ ನಿಮಿರುವಿಕೆಗೆ ತೊಂದರೆ ಉಂಟಾದರೆ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದು.

ಉತ್ತಮ ಸೆಕ್ಸ್ ಲೈಫ್‌ ನಿದ್ದೆ ಏಕೆ ಅವಶ್ಯಕ?

ಉತ್ತಮ ಸೆಕ್ಸ್ ಲೈಫ್‌ ನಿದ್ದೆ ಏಕೆ ಅವಶ್ಯಕ?

ಒಬ್ಬ ಮನುಷ್ಯನ ಆರೋಗ್ಯಕ್ಕೆ ದಿನದಲ್ಲಿ 6-8 ಗಂಟೆ ನಿದ್ದೆ ಅವಶ್ಯಕ. ನಿದ್ದೆ ಮಾಡಿದಾಗ ದೇಹದಲ್ಲಿ ಟೆಸ್ಟೋಸ್ಟಿರೋನೆ, ಆಸ್ಟ್ರೋಜಿನ್ ಹಾಗೂ ಪ್ರೊಗೆಸ್ಟ್ರಿರೋನೆ ಹೆಚ್ಚಾಗಿ ಬಿಡುಗಡೆಯಾಗುತ್ತದೆ. ನಿದ್ದೆ ಕಡಿಮೆಯಾದಾಗ ಈ ಇವುಗಳ ಸಮತೋಲನ ತಪ್ಪುತ್ತದೆ, ಇದರಿಂದ ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರುವುದು.

ನಿದ್ದೆಯಲ್ಲಿ ಗೊರಕೆ ಹೊಡೆಯುವುದು, ಉಸಿರಾಟದ ತೊಂದರೆ ಇರುವ ಪುರುಷರಲ್ಲಿ ಟೆಸ್ಟೋಸ್ಟಿರೋನೆ ಅಂಶ ಕಡಿಮೆಯಾಗಿ ಲೈಂಗಿಕಾಸಕ್ತಿ ಕಡಿಮೆಯಾಗುವುದು ಎಂದು ಮೇಲಿನ ಅಧ್ಯಯನ ಹೇಳಿದೆ.

ಸೆಕ್ಸ್ ಹಾಗೂ ನಿದ್ದೆ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ

ಸೆಕ್ಸ್ ಹಾಗೂ ನಿದ್ದೆ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ

ನಿದ್ದೆ ಕಡಿಮೆಯಾದರೆ ಲೈಂಗಿಕಾಸಕ್ತಿ ಕಡಿಮೆಯಾದರೆ, ಲೈಂಗಿಕ ತೃಪ್ತಿ ಇಲ್ಲದಿದ್ದರೆ ನಿದ್ದೆ ಕೂಡ ಕಡಿಮೆಯಾಗುವುದು. ಆದ್ದರಿಂದ ಆರೋಗ್ಯಕರ ಲೈಂಗಿಕ ಜೀವನ ಹಾಗೂ ನಿದ್ದೆಗೆ ಒಂದಕ್ಕೊಂದು ಸಂಬಂಧವಿದೆ ಎಂದು ಅಧ್ಯಯನ ಹೇಳಿದೆ. ಲೈಂಗಿಕಕ್ರಿಯೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು, ಮನಸ್ಸಿಗೆ ಖುಷಿ ಸಿಗುವುದು, ಹಾಗೂ ದೇಹದಲ್ಲಿ ಆಕ್ಸಿಟೋಸಿನ್ ಅಥವಾ ಕಡಲ್‌ಹಾರ್ಮೋನ್‌ ಬಿಡುಗಡೆಯಾಗುವುದು ಇದರಿಂದ ಸವಿನಿದ್ದೆ ಬರುತ್ತದೆ.

ಆರೋಗ್ಯಕರ ಸೆಕ್ಸ್‌ಲೈಫ್‌ಗೆ ಏನು ಮಾಡಬೇಕು?

ಆರೋಗ್ಯಕರ ಸೆಕ್ಸ್‌ಲೈಫ್‌ಗೆ ಏನು ಮಾಡಬೇಕು?

ನಿದ್ದೆ ಚೆನ್ನಾಗಿ ಮಾಡಿ, ಸೆಕ್ಸ್‌ ಆಸಕ್ತಿ ಹೆಚ್ಚಿಸಿಕೊಳ್ಳಲು ನಿಮ್ಮ ಜೀವನಶೈಲಿಯಲ್ಲಿ ಮಾಡಬೇಕಾಗಿರುವ ಬದಲಾವಣೆಗಳಿವು:

*ನಿದ್ದೆ ಮಾಡುವುದರಲ್ಲಿ ಶಿಸ್ತು ಪಾಲಿಸಿ. ಏನಿದು ನಿದ್ದೆಗೆ ಶಿಸ್ತು ಅಂತನಾ? ರಾತ್ರಿ ಪ್ರತಿದಿನ ಒಂದೇ ಸಮಯದಲ್ಲಿ ಮಲಗಲು ಪ್ರಯತ್ನಿಸಿ, ಬೆಳಗ್ಗೆ ಕೂಡ ಏಳುವ ಸಮಯ ಕೂಡ ಒಂದೇ ರೀತಿ ಇರಲಿ. ತುಂಬಾ ತಡವಾಗಿ ಮಲಗಿ, ತಡವಾಗಿ ಏಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

* ಮದ್ಯಪಾನ ಕಡಿಮೆ ಮಾಡಿ

* ಮಲಗುವಮೊದಲು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು, ಧ್ಯಾನ, ಒಳ್ಳೆಯ ಪುಸ್ತುಕ ಓದುವುದು ಮಾಡಿ.

* ಲೈಂಗಿಕ ಆಸಕ್ತಿ ಹೆಚ್ಚಲು ನಿಮ್ಮ ಲೈಂಗಿಕ ಅಲೋಚನೆಗಳನ್ನು ಉತ್ತೇಜಿಸಿ, ಕಾಮಸೂತ್ರ ಒದಿ.

ದಾಂಪತ್ಯದಲ್ಲಿ ಲೈಂಗಿಕ ತೃಪ್ತಿ ಬಹುಮುಖ್ಯವಾಗಿರುತ್ತದೆ. ಜೀವನಶೈಲಿಯಿಂದ ನಿದ್ದೆ ಕಡಿಮೆಯಾದರೆ ಇದರಿಂದ ಲೈಂಗಿಕಾಸಕ್ತಿ ಕಡಿಮೆಯಾಗುವುದು. ಲೈಂಗಿಕಾಸಕ್ತಿ ಕಡಿಮೆಯಾದರೆ ದಮಪತಿ ನಡುವೆ ಲೈಂಗಿಕ ಅತೃಪ್ತಿ ಉಂಟಾಗಿ ಇದರಿಂದ ಬೇಸರ, ಖಿನ್ನತೆ, ಅನೈತಿಕ ಸಂಬಂಧ ಮುಂತಾದ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಬರೀ ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಮಾತ್ರವಲ್ಲ ನಿಮ್ಮ ಒಟ್ಟು ಮೊತ್ತ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ದಿನದಲ್ಲಿ 6-8 ಗಂಟೆ ನಿದ್ದೆ ಮಾಡಿ.

English summary

Healthy Sleeping Habits Can Improve Your Sex Life

Sleep And Sex Are Interconnected Yes, they are. Lack of proper sleep can decrease your sexual desire. In the same line, weak sex life can lead to sleeplessness as well, studies claim
X
Desktop Bottom Promotion