For Quick Alerts
ALLOW NOTIFICATIONS  
For Daily Alerts

ಮೊಟ್ಟೆಯನ್ನು ಹೀಗೆ ತಿಂದರೆ ಹೆಚ್ಚು ಆರೋಗ್ಯಕರ

|

ದಿನಕ್ಕೊಂದು ಕೋಳಿ ಮೊಟ್ಟೆ ತಿಂದರೆ ಪೌಷ್ಟಿಕಾಂಶಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಹೇಳುತ್ತಾರೆ. ಏಕೆಂದರೆ ಕೋಳಿ ಮೊಟ್ಟೆಯಲ್ಲಿ ಸಿಗುವಷ್ಟು ಪೌಷ್ಟಿಕ ಸತ್ವಗಳು ಹಲವಾರು ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿದರೂ ಸಿಗುವುದಿಲ್ಲ.

ಬಹಳಷ್ಟು ಜನರಿಗೆ ಇಂದಿಗೂ ಸಹ ಬೆಳಗಿನ ಉಪಹಾರದ ಸಮಯದಲ್ಲಿ ಕೋಳಿ ಮೊಟ್ಟೆಗಳು ಎಂದರೆ ಅಚ್ಚುಮೆಚ್ಚು. ಇನ್ನು ಇದರಿಂದ ತಯಾರು ಮಾಡಿದ ಆಮ್ಲೆಟ್ ನಿಜಕ್ಕೂ ಬಾಯಿಯಲ್ಲಿ ನೀರೂರಿಸುತ್ತದೆ.

healthiest way to eat eggs

ಆದರೆ ಹಲವರಿಗೆ ಇಂದಿಗೂ ಸಹ ಕೋಳಿ ಮೊಟ್ಟೆಯನ್ನು ಬೇಯಿಸಿ ತಿನ್ನಬೇಕೋ ಅಥವಾ ಹಸಿಯಾಗಿ ಹಾಗೆ ತಿನ್ನಬೇಕೋ ಎನ್ನುವ ಬಗ್ಗೆ ಮನಸ್ಸಿನಲ್ಲಿ ಸಾಕಷ್ಟು ಗೊಂದಲಗಳು ಇವೆ. ಆದರೆ ಆರೋಗ್ಯ ತಜ್ಞರನ್ನು ಕೇಳುವುದಾದರೆ ಕೋಳಿ ಮೊಟ್ಟೆಗಳನ್ನು ಹಸಿಯಾಗಿ ತಿನ್ನುವುದಕ್ಕಿಂತ ಬೇಯಿಸಿ ತಿನ್ನುವುದು ವಾಸಿ. ಇದು ಸುರಕ್ಷಿತ ಮತ್ತು ಆರೋಗ್ಯಕರ ಕೂಡ.

ಕೋಳಿ ಮೊಟ್ಟೆಯನ್ನು ಹಲವಾರು ವಿಧಾನಗಳಲ್ಲಿ ಬೇಯಿಸಿ ತಿನ್ನಬಹುದು. ಒಂದೊಂದು ವಿಧಾನದಲ್ಲೂ ಕೂಡ ಮೊಟ್ಟೆಯ ರುಚಿಗೆ ಸಾಟಿ ಇರುವುದಿಲ್ಲ. ತರಕಾರಿಗಳ ಜೊತೆಗೂ ಸಹ ಮೊಟ್ಟೆಯನ್ನು ಸವಿಯಬಹುದು ಅಲ್ಲವೇ?

ಮೊಟ್ಟೆಯನ್ನು ಆರೋಗ್ಯಕರವಾಗಿ ತಿನ್ನುವ ಬಗೆ

ಮೊಟ್ಟೆಯನ್ನು ಆರೋಗ್ಯಕರವಾಗಿ ತಿನ್ನುವ ಬಗೆ

ಕೇವಲ ಕೋಳಿ ಮೊಟ್ಟೆ ಮಾತ್ರವಲ್ಲದೆ ಯಾವುದೇ ಆಹಾರ ಪದಾರ್ಥಗಳನ್ನು ಹದವಾಗಿ ಬೇಯಿಸಿ ತಿನ್ನುವುದು ಆರೋಗ್ಯಕರ ಎಂದು ಹೇಳುತ್ತಾರೆ. ಏಕೆಂದರೆ ಇವುಗಳಲ್ಲಿ ಕಂಡು ಬರುವ ನಮ್ಮ ದೇಹಕ್ಕೆ ಹಾನಿಕಾರಕ ಎನಿಸುವ ಬ್ಯಾಕ್ಟೀರಿಯಗಳು ನಾಶವಾಗುತ್ತವೆ. ಕೋಳಿ ಮೊಟ್ಟೆಗಳನ್ನು ಬೇಯಿಸಿ ತಿನ್ನುವ ಕೆಲವು ವಿಧಾನಗಳನ್ನು ನೋಡುವುದಾದರೆ,

ಮೊಟ್ಟೆಯನ್ನು ಬೇಯಿಸಿ ತಿನ್ನುವುದು

ಆಮ್ಲೆಟ್ ಮಾಡಿ ತಿನ್ನಬಹುದು

ಎಗ್‌ ಪೋಚ್‌ ಮಾಡಿ ತಿನ್ನಬಹುದು

ಮೈಕ್ರೋವೇವ್ ಓವನ್ ನಲ್ಲಿ ಬೇಯಿಸಬಹುದು

ಮೈಕ್ರೋವೇವ್ ಓವನ್ ನಲ್ಲಿ ಮೊಟ್ಟೆ ಬೇಯಿಸದಿರುವುದು ಒಳ್ಳೆಯದು, ಏಕೆಂದರೆ ಇದರಿಂದ ಮೊಟ್ಟೆ ಒಡೆದು ಹೋಗುವ ಸಾಧ್ಯತೆ ಹೆಚ್ಚು.

ಅತಿಯಾಗಿ ಬೇಯಿಸಿದರೆ ಪೌಷ್ಠಿಕಾಂಶದ ನಾಶ

ಅತಿಯಾಗಿ ಬೇಯಿಸಿದರೆ ಪೌಷ್ಠಿಕಾಂಶದ ನಾಶ

ಅತಿಯಾದ ಬಿಸಿ ಮತ್ತು ತಾಪಮಾನ ಕೋಳಿ ಮೊಟ್ಟೆಯಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳನ್ನು ಸಹ ಹಾನಿ ಮಾಡುತ್ತದೆ.

ಆದರೆ ಇದು ಕೇವಲ ಮೊಟ್ಟೆಗಳ ವಿಚಾರದಲ್ಲಿ ಮಾತ್ರ ಹೀಗಾಗುತ್ತದೆ ಎಂದುಕೊಳ್ಳುವುದು ತಪ್ಪು. ಸಾಕಷ್ಟು ಆಹಾರ ಪದಾರ್ಥಗಳನ್ನು ನಿರಂತರವಾಗಿ ಅತಿ ಹೆಚ್ಚಿನ ತಾಪಮಾನದಲ್ಲಿ ಜಾಸ್ತಿ ಹೊತ್ತು ಬೇಯಿಸಲು ಮುಂದಾದರೆ ಅದರಲ್ಲಿರುವ ಪೌಷ್ಟಿಕ ಸತ್ವಗಳು ನಿಧಾನವಾಗಿ ಕಡಿಮೆಯಾಗುತ್ತ ಬರುತ್ತವೆ.

ಸಂಶೋಧನೆಗಳು ಹೇಳುವಂತೆ ಕೋಳಿ ಮೊಟ್ಟೆಗಳನ್ನು ಸುಮಾರು 40 ನಿಮಿಷಗಳ ಕಾಲ ಬೇಕ್ ಮಾಡಿದರೆ ಅದರಲ್ಲಿರುವ ವಿಟಮಿನ್ ಡಿ ಅಂಶ ಶೇಕಡ 60% ಕಡಿಮೆಯಾಗುತ್ತದೆ. ಕಡಿಮೆ ಸಮಯ ನೀರಿನಲ್ಲಿ ಕುದಿಸಿದರೆ ಅಥವಾ ಎಣ್ಣೆಯಲ್ಲಿ ಫ್ರೈ ಮಾಡಿದರೆ ಶೇಕಡ 18% ಪೌಷ್ಟಿಕಾಂಶಗಳ ಹಾನಿ ಉಂಟಾಗುತ್ತದೆ.

ಆದರೆ ಬೇಯಿಸಿದ ಕೋಳಿ ಮೊಟ್ಟೆಗಳಲ್ಲಿ ಪೌಷ್ಟಿಕಾಂಶಗಳ ಹಾನಿ ಉಂಟಾದರೂ ಸಹ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಸಿಗುತ್ತವೆ. ಜೊತೆಗೆ ಆಂಟಿಆಕ್ಸಿಡೆಂಟ್ ಅಂಶಗಳ ಮಹಾಪೂರವೇ ಕೋಳಿ ಮೊಟ್ಟೆಗಳಲ್ಲಿ ಕಂಡುಬರುತ್ತದೆ.

 ಆರೋಗ್ಯಕರವಾಗಿ ಕೋಳಿ ಮೊಟ್ಟೆಗಳನ್ನು ಬೇಯಿಸಿ ತಿನ್ನುವ ವಿಧಾನ : -

ಆರೋಗ್ಯಕರವಾಗಿ ಕೋಳಿ ಮೊಟ್ಟೆಗಳನ್ನು ಬೇಯಿಸಿ ತಿನ್ನುವ ವಿಧಾನ : -

ಕೋಳಿ ಮೊಟ್ಟೆಗಳನ್ನು ಯಾವ ರೀತಿ ಬೇಯಿಸಿ ತಿನ್ನಬೇಕು ಎಂಬುದನ್ನು ನೀವು ಕಲಿತುಕೊಂಡರೆ ನಿಮ್ಮ ದೇಹಕ್ಕೆ ಸಿಗುವ ಪೌಷ್ಟಿಕಾಂಶಗಳ ಮಟ್ಟವನ್ನು ಹೆಚ್ಚು ಮಾಡಿಕೊಳ್ಳಬಹುದು. ಅದಕ್ಕಾಗಿ ಈ ಕೆಳಗಿನ ವಿಧಾನಗಳನ್ನು ಒಮ್ಮೆ ಟ್ರೈ ಮಾಡಿ

1 ಕಡಿಮೆ ಕ್ಯಾಲೋರಿ ಒದಗಿಸುವ ಕೋಳಿ ಮೊಟ್ಟೆ ಬೇಯಿಸುವ ವಿಧಾನ : -

ಒಂದು ವೇಳೆ ನೀವು ಈಗಾಗಲೇ ಅತಿಯಾದ ದೇಹದ ತೂಕವನ್ನು ಹೊಂದಿ, ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದರೆ, ನೀವು ಮೊಟ್ಟೆಗಳನ್ನು ಪೋಚ್ ಮಾಡಬಹುದು ಅಥವಾ ನೀರಿನಲ್ಲಿ ಕುದಿಸಿ ತಿನ್ನಬಹುದು.

ಏಕೆಂದರೆ ಈ ವಿಧಾನದಲ್ಲಿ ಬೇಯುವ ಮೊಟ್ಟೆಗಳು ಯಾವುದೇ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳನ್ನು ಒಳಗೊಂಡಿರುವುದಿಲ್ಲ. ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಎಣ್ಣೆಯಲ್ಲಿ ಕರಿದ ಅಥವಾ ಸ್ಕ್ರಂಬಲ್ ಮಾಡಿದ ಮೊಟ್ಟೆಗಳಿಗೆ ಹೋಲಿಸಿದರೆ ನಿಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡುವ ಮಟ್ಟಿಗೆ ಅನುಕೂಲವಾಗುವಷ್ಟು ಕ್ಯಾಲೋರಿಗಳು ಮಾತ್ರ ಸಿಗುತ್ತವೆ.

2 ತರಕಾರಿಗಳ ಜೊತೆ ಸವಿಯಿರಿ : -

2 ತರಕಾರಿಗಳ ಜೊತೆ ಸವಿಯಿರಿ : -

ಕೋಳಿ ಮೊಟ್ಟೆಗಳಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಸಿಗುತ್ತದೆ ಎಂಬುದು ನಿಮಗೆ ಗೊತ್ತು. ಬಗೆಬಗೆಯ ತರಕಾರಿಗಳು ಸಹ ಇದಕ್ಕಿಂತ ಕಡಿಮೆ ಏನಿಲ್ಲ. ಹಾಗಾಗಿ ಕೋಳಿ ಮೊಟ್ಟೆಗಳನ್ನು ಬೇಯಿಸಿ ತಿನ್ನುವ ವಿಧಾನದಲ್ಲಿ ತರಕಾರಿಗಳನ್ನು ಸಹ ಜೊತೆ ಸೇರಿಸಿಕೊಳ್ಳಿ. ಇದರಿಂದ ಅತ್ಯಧಿಕ ನಾರಿನ ಅಂಶ ಮತ್ತು ವಿಟಮಿನ್ ಅಂಶ ನಿಮಗೆ ಸಿಗಲಿದೆ.

3 ಎಣ್ಣೆಯಲ್ಲಿ ಕರಿದು ಸಹ ಸೇವನೆ ಮಾಡಬಹುದು : -

3 ಎಣ್ಣೆಯಲ್ಲಿ ಕರಿದು ಸಹ ಸೇವನೆ ಮಾಡಬಹುದು : -

ಕೋಳಿ ಮೊಟ್ಟೆಯನ್ನು ಅಂದರೆ ಅದರ ಒಳಗಿರುವ ಭಾಗವನ್ನು ಎಣ್ಣೆಯಲ್ಲಿ ಬಾಡಿಸಿ ತಿನ್ನಬಹುದು. ಉದಾಹರಣೆಗೆ ಆಮ್ಲೆಟ್. ಆದರೆ ಈ ಪ್ರಕ್ರಿಯೆಯಲ್ಲಿ ಕೇವಲ ಆರೋಗ್ಯಕ್ಕೆ ಸೂಕ್ತವಾದ ಎಣ್ಣೆಯನ್ನು ಮಾತ್ರ ತೆಗೆದುಕೊಳ್ಳಬೇಕು. ಉದಾಹರಣೆಗೆ ಸೂರ್ಯಕಾಂತಿ ಎಣ್ಣೆ ಅಥವಾ ಅವಕ್ಯಾಡೊ ಆಯಿಲ್. ಒಂದು ವೇಳೆ ಎಕ್ಸ್ಟ್ರಾ ವಿರ್ಜನ್ ಆಲಿವ್ ಆಯಿಲ್ ಅಥವಾ ತೆಂಗಿನ ಎಣ್ಣೆ ಬಳಸುತ್ತಿದ್ದರೆ ಕಡಿಮೆ ತಾಪಮಾನದಲ್ಲಿ ಮೊಟ್ಟೆಯನ್ನು ಬಾಡಿಸುವುದು ಒಳ್ಳೆಯದು. ಏಕೆಂದರೆ ವಿಪರೀತ ಹೆಚ್ಚಿನ ತಾಪಮಾನ ಆಕ್ಸಿಡೇಶನ್ ಪ್ರಕ್ರಿಯೆಗೆ ದಾರಿ ಮಾಡಿಕೊಟ್ಟು ಫ್ರೀ ರಾಡಿಕಲ್ ಗಳ ಉತ್ಪತ್ತಿಗೆ ಕಾರಣವಾಗುತ್ತದೆ.

4 ಪೌಷ್ಟಿಕಾಂಶಭರಿತ ಕೋಳಿ ಮೊಟ್ಟೆಗಳನ್ನು ಆಯ್ಕೆ ಮಾಡಿ : -

4 ಪೌಷ್ಟಿಕಾಂಶಭರಿತ ಕೋಳಿ ಮೊಟ್ಟೆಗಳನ್ನು ಆಯ್ಕೆ ಮಾಡಿ : -

ಒಂದು ಕೋಳಿ ಮೊಟ್ಟೆಯಲ್ಲಿ ಕಂಡುಬರುವ ಪೌಷ್ಟಿಕಾಂಶ ಸಂಪೂರ್ಣವಾಗಿ ಕೋಳಿಗೆ ನೀಡಲಾಗುತ್ತಿದ್ದ ಆಹಾರ ಪದ್ಧತಿಯ ಮೇಲೆ ಅವಲಂಬಿತವಾಗಿರುತ್ತದೆ. ಯಾವ ಕೋಳಿಗಳಿಗೆ ಒಳ್ಳೆಯ ಪೌಷ್ಟಿಕ ಆಹಾರಗಳನ್ನು ನೀಡಲಾಗುತ್ತದೆ ಅಂತಹ ಕೋಳಿಗಳಿಂದ ಹೆಚ್ಚು ಪೌಷ್ಟಿಕ ಅಂಶಗಳನ್ನು ಒಳಗೊಂಡ ಮೊಟ್ಟೆಗಳನ್ನು ನಿರೀಕ್ಷೆ ಮಾಡಬಹುದು.

ಕೋಳಿಗಳನ್ನು ಒಂದು ಕಡೆ ಕೂಡಿ ಹಾಕಿ ಅವುಗಳ ಆಹಾರ ಪದ್ಧತಿಯನ್ನು ನೋಡಿಕೊಂಡು ಅಲ್ಲಿ ಉತ್ಪತ್ತಿಯಾಗುವ ಮೊಟ್ಟೆಗಳು ಸಾವಯುವ ಆಹಾರ ಪದ್ಧತಿ ಮತ್ತು ಹೊರಗಡೆ ಬಯಲಿನಲ್ಲಿ ಸುತ್ತಾಡಿಕೊಂಡು ಆಹಾರ ಸೇವನೆ ಮಾಡುವ ಕೋಳಿಗಳ ಮೊಟ್ಟೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುತ್ತವೆ.

ಹಾಗಾಗಿ ಸಾಧ್ಯವಾದಷ್ಟು ಈ ರೀತಿಯ ನಾಟಿ ಕೋಳಿ ಮೊಟ್ಟೆಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಲು ಪ್ರಯತ್ನಿಸಿ.

5 ಅತಿಯಾಗಿ ಬೇಯಿಸುವ ಪ್ರಕ್ರಿಯೆ ಬೇಡ : -

5 ಅತಿಯಾಗಿ ಬೇಯಿಸುವ ಪ್ರಕ್ರಿಯೆ ಬೇಡ : -

ಕೋಳಿ ಮೊಟ್ಟೆಗಳನ್ನು ಮೊದಲೇ ಹೇಳಿದಂತೆ ಜಾಸ್ತಿ ಹೊತ್ತು ನಿರಂತರವಾಗಿ ಅತಿ ಹೆಚ್ಚಿನ ತಾಪಮಾನದಲ್ಲಿ ಬೇಯಿಸಲು ಮುಂದಾದರೆ ಅವುಗಳಲ್ಲಿರುವ ಪೌಷ್ಟಿಕಾಂಶಗಳು ಹಾಳಾಗುತ್ತವೆ. ಇದರ ಜೊತೆಗೆ ಎಣ್ಣೆಯಲ್ಲಿ ಕರಿಯುವ ವೇಳೆ ಮೇಲೆ ಹೇಳಿದಂತೆ ಆಕ್ಸಿಡೇಶನ್ ಪ್ರಕ್ರಿಯೆ ಕೂಡ ಕಂಡು ಬಂದು ನಮ್ಮ ಆರೋಗ್ಯ ಹಾಳಾಗುವ ಸಾಧ್ಯತೆ ಜಾಸ್ತಿ ಇರುತ್ತದೆ.

English summary

Healthiest Way to Cook and Eat Eggs in Kannada

Here is healthiest way to cook and eat eggs, read on,
Story first published: Thursday, March 25, 2021, 9:46 [IST]
X
Desktop Bottom Promotion