For Quick Alerts
ALLOW NOTIFICATIONS  
For Daily Alerts

ಪ್ರೀತಿಯ ಅಮ್ಮಂದಿರೇ ನಿಮ್ಮ ಆರೋಗ್ಯದ ಬಗ್ಗೆಯೂ ಕೊಂಚ ಕಾಳಜಿ ವಹಿಸಿ

|

ಪ್ರೀತಿಯ ಅಮ್ಮಂದಿರೇ ನೀವು ಇಡೀ ಕುಟುಂಬವನ್ನು ಯಾವುದೇ ಕೊರತೆ ಆಗದಂತೆ, ಎಲ್ಲ ವಿಷಯಗಳ ಮೇಲೂ ಗಮನಹರಿಸಿ ನಿಭಾಯಿಸಿಕೊಂಡು ಹೋಗುವವರು. ಇಡೀ ಮನೆಯ ಆರೋಗ್ಯದ ಗಣಿ. ಪ್ರತಿಯೊಬ್ಬರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಪೌಷ್ಟಿಕಾಂಶಯುಕ್ತ ಆಹಾರಗಳನ್ನು ನೀಡಿ ಎಲ್ಲರನ್ನು ಸಂತೃಪ್ತಿಗೊಳಿತ್ತೀರಿ.

ಇಷ್ಟಕ್ಕೆ ಸೀಮಿತವಲ್ಲ ನಿಮ್ಮ ಜವಾಬ್ದಾರಿ, ಪದಗಳಲ್ಲಿ ಹೇಳಲು ಸಾಧ್ಯವಾಗದಂಥ ಹತ್ತಾರು ಕೆಲಸಗಳನ್ನು ನಿತ್ಯ ಮಾಡುತ್ತೀರಿ, ಈ ನಿಮ್ಮ ಅನಿರಂತರ, ಅಸೀಮಿತ ಪ್ರೀತಿಯ ಸೇವೆಗೆ ಪ್ರತಿಯಾಗಿ ಏನು ಬಯಸದೆ, ಕುಟುಂಬಸ್ಥರ ಆರೋಗ್ಯವೇ ನಿಮ್ಮ ಆಶಯವಾಗಿರುತ್ತದೆ.

ಇಷ್ಟೆಲ್ಲಾ ಮಾಡುವ ನೀವು ನಿಮ್ಮ ಬಗ್ಗೆ ಎಷ್ಟು ಕಾಳಜಿ ಮಾಡುತ್ತೀರಿ?. ನೀವು ನಿತ್ಯ ನಿಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಸೇವಿಸುತ್ತಿದ್ದೀರಾ?, ವಿಶ್ರಾಂತಿ ಪಡೆಯುತ್ತಿದ್ದೀರಾ?, ನಿಮಗಾಗಿ ಕೊಂಚ ಸಮಯವನ್ನು ಮೀಸಲಿಡುತ್ತಿದ್ದೀರಾ?, ದೈಹಿಕ ಸ್ವಾಸ್ಥ್ಯದ ಬಗ್ಗೆ ಆಗಾಗ್ಗ ಪರೀಕ್ಷೆ ಮಾಡಿಸುವುದು ಅಥವಾ ವೈದ್ಯರನ್ನು ಭೇಟಿ ಮಾಡುತ್ತಿದ್ದೀರಾ?, ಅದರಲ್ಲೂ ನೀವು 40ವರ್ಷದ ಅಥವಾ ಆಸುಪಾಸಿನ ಮಹಿಳೆಯಾಗಿದ್ದರೆ ನಿಮ್ಮ ದೇಹದಲ್ಲಿ ಆಗು ಹಾರ್ಮೋನು ಬದಲಾವಣೆಗಳ ಗೊತ್ತಿದೆಯೇ?

ಮಹಿಳೆಯರು ನಿಮ್ಮ ಬಗ್ಗೆ ನಿತ್ಯ ಹೇಗೆ ಕಾಳಜಿ ಮಾಡಬೇಕು ಇಲ್ಲಿದೆ ತಜ್ಞವೈದ್ಯರ ಸಲಹೆ:

1. ಸಮತೋಲಿತ ಆಹಾರವನ್ನು ಅನುಸರಿಸಿ

1. ಸಮತೋಲಿತ ಆಹಾರವನ್ನು ಅನುಸರಿಸಿ

ನಿತ್ಯ ತಾಜಾ ಹಣ್ಣುಗಳು, ತರಕಾರಿಗಳು, ಮೊಳಕೆ ಕಾಳುಗಳು ಮತ್ತು ಧಾನ್ಯಗಳನ್ನು ಸೇವಿಸಿ. ಮಸಾಲೆಯುಕ್ತ, ಎಣ್ಣೆಯುಕ್ತ, ಜಂಕ್ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡಿ. ಆದಷ್ಟು ಆಹಾರಗಳನ್ನು ಬಿಸಿ ಇರುವಾಗಲೇ ಸೇವಿಸಿ, ಹಣ್ಣುಗಳನ್ನು ಸಹ ಕಟ್‌ ಮಾಡಿ ತುಂಬಾ ಸಮಯದ ನಂತರ ಸೇವಿಸಬೇಡಿ. ಯಾವುದೇ ಆಗಿರಲಿ ತಾಜಾ ಇದ್ದರೆ ಹೆಚ್ಚು ಆರೋಗ್ಯಕರ.

2. ಪ್ರತಿದಿನ ವ್ಯಾಯಾಮ ಮಾಡಿ

2. ಪ್ರತಿದಿನ ವ್ಯಾಯಾಮ ಮಾಡಿ

ನಿಮ್ಮದೇ ಆಯ್ಕೆಯಂತೆ ನಿಯಮಿತ ಸಮಯದಲ್ಲಿ ವ್ಯಾಯಾಮದ ಮೂಲಕ ದೈಹಿಕವಾಗಿ ಸಕ್ರಿಯರಾಗಿರಿ. ಜುಂಬಾ, ವಾಕಿಂಗ್, ಏರೋಬಿಕ್ಸ್, ಈಜು, ಜಾಗಿಂಗ್ ಉತ್ತಮ ಆಯ್ಕೆಗಳು. ಇದು ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ರೋಗ ಮುಕ್ತವಾಗಿರಲು ಸಹಾಯ ಮಾಡುತ್ತದೆ. ಆದರೆ ಮನೆಯ ಕೆಲಸದಿಂದಲೇ ನನಗೆ ಅಗತ್ಯವಾಗುತ್ತದೆ ಎಂದು ಹೇಳುವ ಕೆಲವು ಮಹಿಳೆಯರುಂಟು, ವ್ಯಾಯಾಮಕ್ಕಾಗಿ ಸ್ವಲ್ಪ ಸಮಯ ಇಡುವುದರಿಂದ ನೀವು ಮಾನಸಿಕವಾಗಿ ಸಹ ಸ್ವಲ್ಪ ವಿಶ್ರಾಂತಿ ಪಡೆಯಬಹುದು ಜತೆಗೆ, ದೈಹಿಕ ವ್ಯಾಯಾಮದಿಂದ ದೇಹದ ಎಲ್ಲಾ ಭಾಗಗಳಿಗೂ ಅಗತ್ಯ ಕಸರತ್ತು ಆಗುತ್ತದೆ.

3. ಆಗಾಗ್ಗೆ ವೈದ್ಯರನ್ನು ಭೇಟಿ ಮಾಡಿ

3. ಆಗಾಗ್ಗೆ ವೈದ್ಯರನ್ನು ಭೇಟಿ ಮಾಡಿ

ನೀವು ವ್ಯಾಯಾಮ ಮಾಡುತ್ತಿದ್ದೀರಿ ಮತ್ತು ನಿಮ್ಮ ಆಹಾರ ಕ್ರಮ ಉತ್ತಮವಾಗಿದೆ ಎಂದಾಕ್ಷಣ ನೀವು ದೈಹಿಕವಾಗಿ ಫಿಟ್‌ ಇದ್ದೀರಿ ಎಂದು ನಿರ್ಲಕ್ಷ್ಯ ಬೇಡ. ನೀವು ಎಷ್ಟೇ ಸಬಲರಾಗಿದ್ದರೂ ನಿಮ್ಮ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು ಆಗಾಗ್ಗೆ ಆರೋಗ್ಯ ತಪಾಸಣೆಗೆ ಹೋಗುವುದು ಮುಖ್ಯವಾಗಿದೆ. ರಕ್ತದೊತ್ತಡ, ಥೈರಾಯ್ಡ್, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮಟ್ಟದಂಥ ಕೆಲವು ಸಾಮಾನ್ಯ ಪರೀಕ್ಷೆಗಳು ಅತ್ಯಗತ್ಯ. ನೀವು ನಿಯಮಿತವಾಗಿ ಕಣ್ಣಿನ ಪರೀಕ್ಷೆ, ಚರ್ಮದ ತಪಾಸಣೆ, ದಂತ ತಪಾಸಣೆ, ಮ್ಯಾಮೊಗ್ರಾಮ್ ಮತ್ತು ಪೆಲ್ವಿಕ್‌ ಪರೀಕ್ಷೆಗೆ ಸಹ ಹೋಗಬೇಕು.

4. ಮೂಳೆಗಳು ಮತ್ತು ಸ್ನಾಯುಗಳನ್ನು ಬಲವಾಗಿರಿಸಿಕೊಳ್ಳಿ

4. ಮೂಳೆಗಳು ಮತ್ತು ಸ್ನಾಯುಗಳನ್ನು ಬಲವಾಗಿರಿಸಿಕೊಳ್ಳಿ

ಬಹುತೇಕ ಮಹಿಳೆಯರು ತಮ್ಮ 45ವರ್ಷಗಳ ನಂತರ ಮೂಳೆ ನೋವಿನ ಸಮ್ಯೆಯನ್ನು ಎದುರಿಸುತ್ತಾರೆ, ನಿರ್ಲಕ್ಷ್ಯ ಮುಂದುವರೆದರೆ ತಮ್ಮ 60ರ ನಂತರ ಇದು ಅತಿಯಾಗಿ ಕಾಡುತ್ತದೆ, ತಪ್ಪಿದರೆ ಮುರಿತಗಳಿಗೆ ಸಹ ಕಾರಣವಾಗಬಹುದು. ಇಂತಹ ಯಾವುದೇ ತೊಂದರೆಗಳನ್ನು ತಪ್ಪಿಸಲು, ಆಹಾರದಲ್ಲಿ ಅಗತ್ಯ ಕ್ಯಾಲ್ಸಿಯಂ ಅನ್ನು ನಿಯಮಿತವಾಗಿ ಸೇವಿಸುವುದು ಬಹಳ ಮುಖ್ಯ. ಮಹಿಳೆಯರು ರಜೋನಿವೃತ್ತಿಯ (ಮುಟ್ಟು ನಿಲ್ಲುವುದು) ನಂತರ ಮಹಿಳೆಯರು ಆಸ್ಟೋಫೆನಿಯಾದಂಥ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಆದ್ದರಿಂದ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಧಿಕವಾಗಿರುವ ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸಿ.

5. ಒತ್ತಡಕ್ಕೆ ಸಿಲುಕಬೇಡಿ

5. ಒತ್ತಡಕ್ಕೆ ಸಿಲುಕಬೇಡಿ

ಕೆಲಸ, ಕುಟುಂಬ ಮತ್ತು ಇತರ ಹತ್ತಾರು ಜವಾಬ್ದಾರಿಗಳನ್ನು ನಿರ್ವಹಿಸುವುದರಿಂದ ನೀವು ಒತ್ತಡಕ್ಕೊಳಗಾಗಬಹುದು. ಎಲ್ಲವನ್ನೂ ಒಂದೇ ಸಮಯದಲ್ಲಿ ನಿರ್ವಹಿಸುವುದರಿಂದ ಸಹ ನಿಮಗೆ ಒತ್ತಡ ಹೆಚ್ಚಬಹುದು. ಆದರೆ ನೆನಪಿಡಿ, ಒತ್ತಡವು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಹದಾರಿಯಾಗಿದೆ. ಇಂಥಾ ಯಾವುದೇ ಅನಾರೋಗ್ಯದಿಂದ ದೂರವಿರಲು ನಿತತ್ಯ ಯೋಗ ಮತ್ತು ಧ್ಯಾನದಂತಹ ವಿಶ್ರಾಂತಿ ತಂತ್ರಗಳನ್ನು ನೀವು ಪ್ರಯತ್ನಿಸಬಹುದು ಅದು ನಿಮ್ಮನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮ ಒತ್ತಡ ನಿವಾರಣೆಗೆ ಅಥವಾ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

6. ನಿಮ್ಮ ಕುಟುಂಬದ ಆರೋಗ್ಯ ಇತಿಹಾಸದ ಬಗ್ಗೆ ಎಚ್ಚರವಿರಲಿ

6. ನಿಮ್ಮ ಕುಟುಂಬದ ಆರೋಗ್ಯ ಇತಿಹಾಸದ ಬಗ್ಗೆ ಎಚ್ಚರವಿರಲಿ

ನಿಮ್ಮ ಕುಟುಂಬದಲ ಹಿರಿಯರಲ್ಲಿ ಅಥವಾ ಮನೆಯ ಸದಸ್ಯರಲ್ಲಿನ ಆರೋಗ್ಯ ಸಮಸ್ಯೆಗಳ ಮತ್ತು ಅವರ ಪರಿಸ್ಥಿತಿಯ ಬಗ್ಗೆ ನೀವು ತಿಳಿದುಕೊಳ್ಳಬೇಕು. ಇದು ನಿಮಗೂ ಮುನ್ನೆಚ್ಚರಿಕೆಯ ಕ್ರಮವಾಗಿರಬಹುದು, ಇದು ಅನೇಕ ಮಾರಕ ರೋಗಗಳನ್ನು ಬರದಂತೆ ನಿಭಾಯಿಸಲು ಇದು ಸಹಾಯ ಮಾಡುತ್ತದೆ. ಮಧುಮೇಹ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳು ನಮ್ಮ ಹಿರಿಯರಿಂದ ಸಹ ಬರುವ ಸಾಧ್ಯತೆ ಇರುತ್ತದೆ. ಆದರೆ ಇದನ್ನು ತಡೆಯಲು ಅಗತ್ಯ ಆಹಾರ ಕ್ರಮ ಅನುಸರಿಬೇಕಷ್ಟೇ.

7. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ

7. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ

ಬಹುತೇಕ ಅಮ್ಮಂದಿರ ಬಹುದೊಡ್ಡ ಸಮಸ್ಯೆ ಎಂದರೆ ಅಡುಗೆ ಮಾಡಿ ಎಲ್ಲರದ್ದೂ ಆದ ನಂತರ ಅಳಿದುಳಿದ ಆಹಾರವನ್ನು ಸೇವಿಸುವುದು. ಕಡಿಮೆ ಇದ್ದರೆ ಅದಕ್ಕೆ ಹೊಂದಿಕೊಳ್ಳುವುದು, ಜಾಸ್ತಿ ಇದ್ದರೆ ಮಿಗುತ್ತದೆಯಲ್ಲೆಂದು ಪೂರ್ಣ ಸೇವಿಸುವುದು. ಇದು ಆರೋಗ್ಯಕರ ಅಲ್ಲವೇ ಅಲ್ಲ. ಎಲ್ಲರ ಊಟದ ನಂತರ ಆಹಾರ ತಣ್ಣಗಾಗಿರುತ್ತದೆ ಜತೆಗೆ ಕಡಿಮೆ ಅಥವಾ ಅತಿಯಾದ ಆಹಾರ ಸೇವನೆ ಆರೋಗ್ಯಕರವಲ್ಲ. ಎಲ್ಲರೊಂದಿಗೆ ಕುಳಿತು ನೀವು ಊಟ ಮಾಡುವ ಕ್ರಮ ಮನಸ್ಸಿಗೂ ಹಾಗೂ ಆರೋಗ್ಯಕ್ಕೂ ಉತ್ತಮ.

English summary

Health Tips For Women In Their 40's in Kannada

Forties can bring a huge changes in women in 40s. The hormones go a little haywire and result in weird effects on mood as well as overall health. Taking care of your health should be of utmost importance. So, following are the tips for all the ladies to stay in top shape and lead a healthy life.
Story first published: Thursday, June 10, 2021, 19:30 [IST]
X