For Quick Alerts
ALLOW NOTIFICATIONS  
For Daily Alerts

ಈ ಕಾಯಿಲೆಯಿಂದ ಪುರುಷರಿಗಿಂತ ಮಹಿಳೆಯರಿಗೆ ಅಪಾಯ ಹೆಚ್ಚು

|

ಕೆಲವೊಂದು ಆರೋಗ್ಯ ಸಮಸ್ಯೆಗಳು ಪುರುಷರಲ್ಲೂ ಕಂಡು ಬರುತ್ತದೆ, ಮಹಿಳೆಯರಲ್ಲೂ ಕಂಡು ಬರುತ್ತದೆ, ಆದರೆ ಆ ಕಾಯಿಲೆ ಪುರುಷ ಹಾಗೂ ಮಹಿಳೆಯರ ಮೇಲೆ ಪರಿಣಾಮ ಭಿನ್ನವಾಗಿರುತ್ತದೆ. ಅದರಲ್ಲೂ ಕೆಲ ಕಾಯಿಲೆಗಳು ಮಹಿಳೆಯರ ಮೇಲೆ ಪುರುಷರಿಗಿಂತ ಮಹಿಳೆಯರ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು.

1. ಹೃದಯಾಘಾತ

1. ಹೃದಯಾಘಾತ

ಹೃದಯಾಘಾತದಿಂದ ಸಾವನ್ನಪ್ಪುವವರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚು ಎಂದು ಯುನೈಟೆಡ್ ಸ್ಟೇಟ್‌ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಮಹಿಳೆಯರು ತಮ್ಮಆರೋಗ್ಯದ ಕಡೆ ಗಮನ ನೀಡುವುದು ಕಡಿಮೆ, ಹೆಚ್ಚುತ್ತಿರುವ ಕೊಲೆಸ್ಟ್ರಾಲ್‌ ಕಡೆ ಗಮನ ನೀಡದೆ ಹೃದಯಾಘಾತದ ಸಮಸ್ಯೆ ಹೆಚ್ಚುವುದು.

2. ಮದ್ಯಪಾನ

2. ಮದ್ಯಪಾನ

ಮದ್ಯಪಾನ ಪುರುಷರಿಗಿಂತ ಹೆಚ್ಚು ಮಹಿಳೆಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಮದ್ಯಪಾನ ಸೇವನೆಯಿಂದ ಅವರ ಆರೋಗ್ಯ ಬೇಗ ಹಾಳಾಗುವುದು ಅಲ್ಲದೆ ಬಂಜೆತನ ಸಮಸ್ಯೆ ಅಥವಾ ಮಕ್ಕಳಾದರೆ ಆ ಮಕ್ಕಳಲ್ಲಿ ನ್ಯೂನ್ಯತೆ ಕಂಡು ಬರುವುದು.

3. ಖಿನ್ನತೆ

3. ಖಿನ್ನತೆ

ಖಿನ್ನತೆ ಎಂಬುವುದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹೆರಿಗೆ ಬಳಿಕ ಹೆಚ್ಚಿನವರಲ್ಲಿ ಖಿನ್ನತೆ ಉಂಟಾಗುವುದು. ಹೆಚ್ಚಿನ ಮಹಿಳೆಯರು ತಮ್ಮ ಭಾವನೆಗಳನ್ನು ಹೇಳಿಕೊಳ್ಳುವುದಿಲ್ಲ. ಮನಸ್ಸಿನಲ್ಲಿಯೇ ನೋವನ್ನು ಅನುಭವಿಸುತ್ತಾ ಖಿನ್ನತೆಗೆ ಜಾರುತ್ತಾರೆ.

4. ಸಂಧಿವಾತ

4. ಸಂಧಿವಾತ

ಸಂಧಿವಾತ ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದಾಗಿ ಮಂಡಿನೋವು, ಸ್ನಾಯುಗಳಲ್ಲಿ ಸೆಳೆತ, ಊತ ಈ ಸಮಸ್ಯೆಗಳೆಲ್ಲಾ ಕಂಡು ಬರುವುದು. ಹೆಚ್ಚಾಗುವ ಮೈ ತೂಕ, ಹೆರಿಗೆಯಲ್ಲಿ ಕಡಿಮೆಯಾಗುವ ಕ್ಯಾಲ್ಸಿಯಂ ಇವೆಲ್ಲಾ ಮಂಡಿನೋವಿಗೆ ಪ್ರಮುಖ ಕಾರಣವಾಗಿದೆ.

5. ಲೈಂಗಿಕ ಸೋಂಕು

5. ಲೈಂಗಿಕ ಸೋಂಕು

ಮಹಿಳೆಯರಲ್ಲಿ ಪುರುಷರಿಗಿಂತ ಬೇಗ ಲೈಂಗಿಕ ಸೋಂಕು ಹರಡುವುದು. ಮಹಿಳೆಯರಲ್ಲಿ ಲೈಂಗಿಕ ಸೋಂಕಿನಿಂದಾಗಿ ಬಂಜೆತನ ಕೂಡ ಉಂಟಾಗುವುದು. STDs/STIs ಈ ಸಮಸ್ಯೆ ಉಂಟಾದರೆ ಗುಣಪಡಿಸಲು ಕಷ್ಟ.

6. ಮಾನಸಿಕ ಒತ್ತಡ

6. ಮಾನಸಿಕ ಒತ್ತಡ

ಒಂದು ಸರ್ವೇ ಪ್ರಕಾರ ಪುರುಷರಿಗಿಂತ ಮಹಿಳೆಯರು ಹೆಚ್ಚು ಮಾನಸಿಕ ಒತ್ತಡ ಅನುಭವಿಸುತ್ತಾರಂತೆ. ಪುರುಷರಿಗಿಂತ ಶೇ. 39ರಷ್ಟು ಅಧಿಕ ಮನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಗರ್ಭಾವಸ್ಥೆ, ಮಗುವಿನ ಆರೈಕೆ, ಕುಟುಂಬದ ಜವಾಬ್ದಾರಿ ಇವೆಲ್ಲಾಅವಳ ಮಾನಸಿಕ ಒತ್ತಡ ಹೆಚ್ಚಾಗಲು ಕಾರಣ. ಮನೆಯಲ್ಲಿ ಆರ್ಥಿಕ ಜವಾಬ್ದಾರಿ ಪುರುಷ ತೆಗದುಕೊಂಡರೆ ಉಳಿದೆಲ್ಲಾ ಜವಾಬ್ದಾರಿ ಅವಳ ಹೆಗಲ ಮೇಲಿರುತ್ತದೆ. ಇನ್ನು ಕೆಲ ಕುಟುಂಬದಲ್ಲಿ ಆರ್ಥಿಕ ಜವಾಬ್ದಾರಿಯೂ ಅವಳ ಮೇಲಿರುತ್ತದೆ. ಹೀಗಾಗಿ ಆಕೆಯ ಮೇಲೆ ಅಧಿಕ ಮಾನಸಿಕ ಒತ್ತಡವಿರುತ್ತದೆ.

7. ಪಾರ್ಶ್ವವಾಯು

7. ಪಾರ್ಶ್ವವಾಯು

ಪುರುಷ ಹಾಗೂ ಮಹಿಳೆ ಇಬ್ಬರಿಗೂ ಪಾರ್ಶ್ವವಾಯು ಬರುತ್ತದೆ. ಪಾರ್ಶ್ವವಾಯು ಕಾರಣ ಪುರುಷ ಹಾಗೂ ಮಹಿಳೆಯರಲ್ಲಿ ಬಹುತೇಕ ಒಂದೇ ರೀತಿ ಇದೆ. ಅನುವಂಶೀಯಕತೆ, ಅತ್ಯಧಿಕ ಮಾನಸಿಕ ಒತ್ತಡ, ಅತ್ಯಧಿಕ ರ್ಕತದೊತ್ತಡ, ಅತ್ಯಧಿಕ ಕೊಲೆಸ್ಟ್ರಾಲ್‌ ಇವೆಲ್ಲಾ ಪಾರ್ಶ್ವವಾಯುವಿಗೆ ಸಾಮಾನ್ಯ ಕಾರಣವಾಗಿದೆ. ಆದರೆ ಮಹಿಳೆಯರಿಗೆ ಇವುಗಳ ಜೊತೆಗೆ ಈ ಕಾರಣಗಳಿಂದ ಪಾರ್ಶ್ವವಾಯು ಬರುವ ಸಾಧ್ಯತೆ ಇದೆ:

* ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದು

* ಗರ್ಭಿಣಿಯಾದಾಗ

* ಹಾರ್ಮೋನ್‌ ರೀಪ್ಲೇಸ್ಮೆಂಟ್‌ ತೆರಪಿ

* ಆಗಾಗ ಕಾಡುವ ಮೈಗ್ರೇನ್ ಸಮಸ್ಯೆ

* ಅತ್ಯದಿಕ ಬೊಜ್ಜು

8. ಮೂತ್ರ ಸೋಂಕು

8. ಮೂತ್ರ ಸೋಂಕು

ಇದು ಪ್ರತಿಯೊಬ್ಬ ಮಹಿಳೆಯರನ್ನು ಕಾಡುವ ಸಮಸ್ಯೆಯಾಗಿದೆ. ಲೈಂಗಿಕ ಸೋಂಕು, ಕಡಿಮೆ ನೀರು ಕುಡಿಯುವುದು, ವೆಜೈನಾ ಡ್ರೈಯಾಗುವುದು, ಲೈಂಗಿಕ ಸೋಂಕು ಇವೆಲ್ಲಾ ಮೂತ್ರ ಸೋಂಕಿಗೆ ಕಾರಣವಾಗಿದೆ. ಪುರುಷರಲ್ಲೂ ಮೂತ್ರ ಸೋಂಕು ಉಂಟಾಗುವುದು, ಆದರೆ ಮಹಿಳೆಯರಲ್ಲಿ ಈ ಸಮಸ್ಯೆ ಪುರುಷರಿಗಿಂತ ಎರಡಯ ಒಟ್ಟು ಹೆಚ್ಚಿದೆ.

English summary

Health Issues or Conditions That Affect Men and Women Differently in Kannada

Health Issues or Conditions That Affect Men and Women Differently in Kannada, read on...
X
Desktop Bottom Promotion