For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಸಿಗುವ ಈ ಹಣ್ಣನ್ನು ಸೇವಿಸಿದರೆ ಆರೋಗ್ಯಕ್ಕೆ ಈ 8 ಲಾಭಗಳುಂಟು!

|

ನಮ್ಮ ಆರೋಗ್ಯ ಸದಾ ಕಾಲ ಚೆನ್ನಾಗಿರಬೇಕಾದರೆ, ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮದ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಮುಖ್ಯ. ಆರೋಗ್ಯಕರ ಆಹಾರ ಎಂದಾಕ್ಷಣ ಕೇವಲ ಹಸಿರು ಸೊಪ್ಪು, ತರಕಾರಿಯಷ್ಟೇ ಅಲ್ಲ, ಕಾಲಕಾಲಕ್ಕೆ ಸಿಗುವ ಹಣ್ಣು-ತರಕಾರಿಗಳು ಪ್ರಮುಖವಾಗಿದೆ. ಹೀಗೆ ಬೇಸಿಗೆಯಲ್ಲಿ ಸಿಗುವ ಹಣ್ಣುಗಳಲ್ಲಿ ಖರ್ಬೂಜ ಅಥವಾ ಸನ್ ಮೆಲನ್ ಕೂಡ ಒಂದು.

 Sun Melons

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಸನ್ ಮೆಲನ್ ಅತ್ಯಂತ ಶಕ್ತಿಯುತವಾದ ರೋಗನಿರೋಧಕ ಬೂಸ್ಟರ್ ಆಗಿದೆ. ಇದಲ್ಲದೇ ಹಲವಾರು ರೀತಿಯ ಪೋಷಕಾಂಶಗಳು ಇದರಲ್ಲಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾದ್ರೆ ಈ ಖರ್ಬೂಜ ಸೇವನೆಯ ಆರೋಗ್ಯ ಪ್ರಯೋಜನಗಳೇನು ನೋಡೋಣ.
ಖರ್ಬೂಜ (ಸನ್ ಮೆಲನ್) ಸೇವನೆಯ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಸನ್‌ಮೆಲನ್‌ ಪೋಷಕಾಂಶಗಳು

ಸನ್‌ಮೆಲನ್‌ ಪೋಷಕಾಂಶಗಳು

ಸನ್‌ಮೆಲನ್‌ ವಿಟಮಿನ್ ಎ ಮತ್ತು ಸಿ ಯಲ್ಲಿ ಸಮೃದ್ಧವಾಗಿದ್ದು, ತೂಕ ನಷ್ಟಕ್ಕೆ ಉತ್ತಮವಾಗಿವೆ ಏಕೆಂದರೆ ಅವುಗಳು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುತ್ತವೆ. ಅಷ್ಟೇ ಅಲ್ಲ, ಪೋಷಕಾಂಶಗಳ ಅತ್ಯುತ್ತಮ ಹೀರಿಕೊಳ್ಳುವಿಕೆಯನ್ನು ಖಾತ್ರಿಪಡಿಸುವ ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ಈ ಖರ್ಜೂರ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿದ್ದು, ರೋಗನಿರೋಧಕ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತವೆ.

ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿ

ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿ

ಗರ್ಭಿಣಿಯರಲ್ಲಿ ಫೋಲಿಕ್ ಆಮ್ಲದ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಖರ್ಬೂಜ ಎಲೆಗಳ ಆಮ್ಲವು ಅವರ ದೇಹದಲ್ಲಿನ ಈ ಕೊರತೆಯನ್ನು ತ್ವರಿತವಾಗಿ ನಿವಾರಿಸುತ್ತದೆ. ಹಾಗಾಗಿ ಗರ್ಭಿಣಿಯರು ಇದನ್ನು ಸೇವಿಸುವುದು ಬಹಳ ಮುಖ್ಯ.

ಹೃದಯವನ್ನು ಆರೋಗ್ಯವಾಗಿಡುವುದು

ಹೃದಯವನ್ನು ಆರೋಗ್ಯವಾಗಿಡುವುದು

ಖರ್ಬೂಜ (ಸನ್ ಮೆಲನ್) ಅಡೆನೊಸಿನ್ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಈ ಪೊಟ್ಯಾಸಿಯಮ್ ಸೋಡಿಯಂನಿಂದ ಉಂಟಾಗುವ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದಲ್ಲದೆ, ಅಡೆನೊಸಿನ್ ಹೃದಯರಕ್ತನಾಳದ ವ್ಯವಸ್ಥೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆದು, ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿರಿಸುತ್ತದೆ.

ತೂಕ ನಷ್ಟಕ್ಕೆ ಸಹಕಾರಿ

ತೂಕ ನಷ್ಟಕ್ಕೆ ಸಹಕಾರಿ

ಈ ಹಣ್ಣಿನಲ್ಲಿ ಕ್ಯಾಲೋರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ, ಆದರೆ ಫೈಬರ್ ಉತ್ತಮ ಪ್ರಮಾಣದಲ್ಲಿರುತ್ತದೆ, ಇದು ತೂಕವನ್ನು ಕಳೆದುಕೊಳ್ಳುವ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಖರ್ಬೂಜ ತಿನ್ನುವುದರಿಂದ, ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ, ಇದರಿಂದಾಗಿ ಹಸಿವು ಇರುವುದಿಲ್ಲ. ಆದ್ದರಿಂದ ನೀವು ಅನಗತ್ಯವಾಗಿ ತಿನ್ನಲು ಹೋಗುವುದಿಲ್ಲ. ಈ ಮೂಲಕ ತೂಕ ನಿಯಂತ್ರಣದಲ್ಲಿರುತ್ತದೆ.

ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು

ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು

ಖರ್ಬೂಜ ಸೇವನೆಯು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅದರ ಸೇವನೆಯಿಂದಾಗಿ, ಕರುಳಿನ ಕಾರ್ಯವು ಪರಿಪೂರ್ಣವಾಗಿ ನಡೆಯುತ್ತದೆ. ಈ ಮೂಲಕ ಮಲಬದ್ಧತೆ, ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳು ದೂರ ಉಳಿಯುತ್ತವೆ. ಆದ್ದರಿಂದ ಮಲಬದ್ಧತೆಯ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಖರ್ಬೂಜವನ್ನು ಸೇರಿಸಿಕೊಳ್ಳಿ.

ಮುಟ್ಟಿನ ಸೆಳೆತದಿಂದ ಮುಕ್ತಿ ನೀಡುವುದು

ಮುಟ್ಟಿನ ಸೆಳೆತದಿಂದ ಮುಕ್ತಿ ನೀಡುವುದು

ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವು ಮತ್ತು ಸೆಳೆತ ಹೆಚ್ಚಾಗಿ ಮಹಿಳೆಯರನ್ನು ಕಾಡುವುದು. ಅನಾರೋಗ್ಯಕರ ಆಹಾರ ಹಾಗೂ ಹಾರ್ಮೋನ್ ಅಮಸತೋಲನದಿಂದ ಇಂತಹ ಲಕ್ಷಣಗಳನ್ನು ಎದುರಿಸಬೇಕಾಗುತ್ತದೆ. ಈ ಮುಟ್ಟಿನ ಸಮಯದ ಹೊಟ್ಟೆನೋವು ಮತ್ತು ಸೆಳೆತಕ್ಕೆ ಖರ್ಬೂಜ (ಸನ್ ಮೆಲನ್) ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ.

ಕಣ್ಣುಗಳಿಗೆ ಪ್ರಯೋಜನಕಾರಿ

ಕಣ್ಣುಗಳಿಗೆ ಪ್ರಯೋಜನಕಾರಿ

ಖರ್ಬೂಜ (ಸನ್ ಮೆಲನ್)ನಲ್ಲಿರುವ ಬೀಟಾ ಕ್ಯಾರೋಟಿನ್ ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ. ಈ ಹಣ್ಣಿನಲ್ಲಿರುವ ಬೀಟಾ-ಕ್ಯಾರೋಟಿನ್ ವಿಟಮಿನ್ ಎ ಆಗಿ ಪರಿವರ್ತನೆಯಾಗುತ್ತದೆ, ಇದು ಕಣ್ಣುಗಳಿಗೆ ಸಂಬಂಧಿಸಿದ ಹಲವು ರೀತಿಯ ಸಮಸ್ಯೆಗಳನ್ನು ದೂರವಿಡುತ್ತದೆ.

ಒತ್ತಡಕ್ಕೆ ಪರಿಹಾರ

ಒತ್ತಡಕ್ಕೆ ಪರಿಹಾರ

ಖರ್ಬೂಜದಲ್ಲಿರುವ ಪೊಟ್ಯಾಸಿಯಮ್ ಮೆದುಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ಇದು ಮೆದುಳಿನ ಕಾರ್ಯವನ್ನು ಸುಧಾರಿಸುವುದರ ಜೊತೆಗೆ ಒತ್ತಡ ಮತ್ತು ಖಿನ್ನತೆಯನ್ನು ದೂರವಿಡುತ್ತದೆ. ಆದ್ದರಿಂದ ಒತ್ತಡದಿಂದ ಬಳಲುತ್ತಿರುವವರು ಈ ಖರ್ಬೂಜ (ಸನ್ ಮೆಲನ್) ತಪ್ಪದೇ ಸೇವಿಸಿ.

ಕೂದಲು ಉದುರುವಿಕೆ ಕಡಿಮೆ ಮಾಡುವುದು

ಕೂದಲು ಉದುರುವಿಕೆ ಕಡಿಮೆ ಮಾಡುವುದು

ಹೆಣ್ಣಾಗಿರಲಿ, ಗಂಡಾಗಿರಲಿ, ಕೂದಲು ಉದುರುವುದು ಎಲ್ಲರಿಗೂ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಆದ್ದರಿಂದ ಇದನ್ನು ನಿಯಂತ್ರಿಸಲು ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಖರ್ಬೂಜದಲ್ಲಿರುವ ವಿಟಮಿನ್ ಬಿ ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೇ ಅವುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದಲ್ಲದೇ, ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿಕೊಳ್ಳಬಹುದು. ಇದು ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ.

English summary

Health Benefits of Sun Melons in Kannada

Here we talking about Health Benefits of Sun Melons in kannada, read on
Story first published: Thursday, May 12, 2022, 10:41 [IST]
X
Desktop Bottom Promotion