For Quick Alerts
ALLOW NOTIFICATIONS  
For Daily Alerts

ನೆಲದ ಮೇಲೆ ಮಲಗಿದರೆ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ, ನೋಡಿ...

|

ಆಧುನಿಕ ಸಮಾಜದ ನಾವೆಲ್ಲಾ ಸೌಕರ್ಯಗಳಿಗೆ ಒಗ್ಗಿಹೋಗಿದ್ದೇವೆ, ಹಾಸಿಗೆ ಇಲ್ಲದೆ ಮಲಗುವುದೇ, ಹಾಸಿಗೆ ಇಲ್ಲದೆ ಮಲಗಲು ಸಾಧ್ಯವೇ ಎನ್ನುವಷ್ಟರ ಮಟ್ಟಿಗೆ ಮೆತ್ತನೆಯ ಹಾಸಿಗೆ ಇತ್ತೀಚೆಗೆ ಹೇರಳವಾಗಿ ಬಳಕೆಯಲ್ಲಿದೆ. ನಮ್ಮ ಪೂರ್ವಜರು ಯಾವಾಗಲೂ ಮರಗಳ ಮೇಲೆ ಅಥವಾ ನೆಲದ ಮೇಲೆ ಮಲಗುತ್ತಿದ್ದರು, ಇವರ ದೀರ್ಘಾಯುಷ್ಯ, ದೇಹದ ಮೂಳೆಗಳು ಸಾಮರ್ಥ್ಯ ಸಬಲವಾಗಿರಲು ಇದು ಸಹ ಒಂದು ಮುಖ್ಯ ಕಾರಣ ಎನ್ನಬಹುದು.

ಕಾಡುಗಳಲ್ಲಿ ಅಥವಾ ಪ್ರಾಚೀನ ಸಂಸ್ಕೃತಿಗಳನ್ನು ಪಾಲಿಸುತ್ತಾ ವಾಸಿಸುವ ಜನರು ಆಧುನಿಕ ಸಮಾಜದವರಿಗಿಂತ ಕಡಿಮೆ ಮಸ್ಕ್ಯುಲೋಸ್ಕೆಲಿಟಲ್ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಸೂಚಿಸುವ ಪುರಾವೆಗಳಿವೆ. ಹಲವರಿಗೆ ನೆಲದ ಮೇಲೆ ಮಲಗಲು ಇಷ್ಟವಿದ್ದರೂ ಅವರ ದೇಹ ಅದಕ್ಕೆ ಸಹಕರಿಸದ ಕಾರಣ ನೆಲದ ಮೇಲೆ ಮಲಗುವುದೇ ಇಲ್ಲ.

ಆದರೆ ಹಾಸಿಗೆಗಿಂತ ನೆಲದ ಮೇಲೆ ಮಲಗುವುದು ಬಹಳ ಪ್ರಯೋಜನಕಾರಿಯಾಗಿದೆ, ಇದು ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ನೆಲದ ಮೇಲೆ ಮಲಗುವುದರಿಂದ ಆಗುವ ಪ್ರಯೋಜನಗಳೇನು, ಇದನ್ನು ಆಭ್ಯಾಸ ಮಾಡಿಕೊಳ್ಳುವುದು ಹೇಗೆ ಮುಂದೆ ನೋಡೋಣ:

ನೆಲದ ಮೇಲೆ ಮಲಗುವುದರಿಂದ ಆಗುವ ಪ್ರಯೋಜನಗಳೇನು?

1. ಬೆನ್ನು ನೋವನ್ನು ಕಡಿಮೆ ಮಾಡುತ್ತದೆ

1. ಬೆನ್ನು ನೋವನ್ನು ಕಡಿಮೆ ಮಾಡುತ್ತದೆ

ನೆಲದ ಮೇಲೆ ಮಲಗುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ, ನೆಲದ ಮೇಲೆ ಮಲಗುವುದು ನಿಮ್ಮ ಬೆನ್ನುಮೂಳೆಗೆ ಒಳ್ಳೆಯದು. ಮೃದುವಾದ ಹಾಸಿಗೆ ಇಲ್ಲದ ಕಾರಣ ನಿಮ್ಮ ಬೆನ್ನುಮೂಳೆಯು ಅದರ ನೈಸರ್ಗಿಕ ಭಂಗಿಗೆ ಮರುಹೊಂದಿಸಲು ಅವಕಾಶವನ್ನು ಪಡೆಯುತ್ತದೆ. ನೆಲದ ಮೇಲೆ ಇರುವಾಗ ನೀವು ಹೆಚ್ಚಿನ ಮಟ್ಟದ ದೇಹದ ಅರಿವನ್ನು ಸಹ ಅನುಭವಿಸುತ್ತೀರಿ.

ಆದರೆ ನೆಲದ ಮೇಲೆ ನಿಮ್ಮ ಮಲಗುವ ಸ್ಥಾನದ ಬಗ್ಗೆ ಜಾಗರೂಕರಾಗಿರಿ - ಬೆನ್ನಿನ ಮೇಲೆ ಮಲಗುವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಬದಿಯಲ್ಲಿ ಮಲಗುವುದರಿಂದ ನಿಮ್ಮ ಹಿಪ್ ಫ್ಲೆಕ್ಟರ್‌ಗಳು ಮತ್ತು ಮಂಡಿರಜ್ಜುಗಳು ಕಾಲಾನಂತರದಲ್ಲಿ ಬಿಗಿಯಾಗುವಂತೆ ಒತ್ತಾಯಿಸುತ್ತದೆ ಮತ್ತು ಇದು ಹೆಚ್ಚುವರಿ ನೋವಿಗೆ ಕಾರಣವಾಗುತ್ತದೆ.

ಅಲ್ಲದೆ, ನಿಮ್ಮ ಮೊಣಕಾಲುಗಳು ಅಥವಾ ಕರುಗಳ ಕೆಳಗೆ ಒಂದು ದಿಂಬನ್ನು ಇರಿಸಲು ಖಚಿತಪಡಿಸಿಕೊಳ್ಳಿ - ಇದು ನಿಮ್ಮ ಬೆನ್ನಿನ ಮೇಲೆ ಹೆಚ್ಚು ನೈಸರ್ಗಿಕ ಕರ್ವ್ ಅನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ.

2. ಭಂಗಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ

2. ಭಂಗಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ

ನೆಲದ ಮೇಲೆ ಮಲಗುವುದರಿಂದ ಭಂಗಿಯನ್ನು ಸುಧಾರಿಸಬಹುದು. ಇದು ನಿಮ್ಮ ಬೆನ್ನು, ಕುತ್ತಿಗೆ ಮತ್ತು ತಲೆಯನ್ನು ಸರಿಯಾದ ಜೋಡಣೆಗೆ ಒತ್ತಾಯಿಸುತ್ತದೆ - ಮತ್ತು ನಿಮ್ಮ ಭಂಗಿಯನ್ನು ಸರಿಪಡಿಸುತ್ತದೆ. ಇದು ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಉತ್ತಮ ಭಂಗಿಗೆ ಕೊಡುಗೆ ನೀಡುತ್ತದೆ. ಏಕೆಂದರೆ ಜನರು ಸರಿಯಾದ ಭಂಗಿಯಲ್ಲಿ ಮಲಗದ ಕಾರಣ ಬೆನ್ನು ನೋವನ್ನು ಹೊಂದಲು ಒಂದು ಕಾರಣವಾಗಿದೆ.

 3. ನಿದ್ರಾಹೀನತೆಗೆ ಚಿಕಿತ್ಸೆ ನೀಡಬಹುದು

3. ನಿದ್ರಾಹೀನತೆಗೆ ಚಿಕಿತ್ಸೆ ನೀಡಬಹುದು

ನಿದ್ರಾಹೀನತೆಗೆ ಮುಖ್ಯ ಕಾರಣಗಳಲ್ಲಿ ನಾವು ಮಲಗುವ ಮೇಲ್ಮೈ ಸಹ ಒಂದು ಕಾರಣ. ನಿಮ್ಮ ಹಾಸಿಗೆಯು ನಿಮಗೆ ನಿದ್ರೆಯ ತೊಂದರೆಯನ್ನು ನೀಡುತ್ತಿದ್ದರೆ, ನೆಲದ ಮೇಲೆ ಮಲಗುವುದು ಒಂದು ಉತ್ತಮ ಮಾರ್ಗವಾಗಿದೆ. ನೀವು ಆರಂಭದಲ್ಲಿ ಸ್ವಲ್ಪ ಅಸ್ವಸ್ಥತೆಯನ್ನು ಹೊಂದಿರಬಹುದು, ಆದರೆ ಕೆಲವು ದಿನಗಳ ಅಭ್ಯಾಸಗಳ ನಂತರ ನಿಮಗೆ ಇದೇ ಹೆಚ್ಚು ಅನುಕೂಲ ಅನಿಸದೇ ಇರದು.

4. ಅಧಿಕ ಬಿಸಿಯಾಗುವುದನ್ನು ತಡೆಯುತ್ತದೆ

4. ಅಧಿಕ ಬಿಸಿಯಾಗುವುದನ್ನು ತಡೆಯುತ್ತದೆ

ಇದು ಸಾಮಾನ್ಯ ಸಮಸ್ಯೆಯಾಗಿದೆ, ಹೆಚ್ಚು ನೀವು ಕೆಟ್ಟ ಹಾಸಿಗೆಯ ಮೇಲೆ ಮಲಗಿರುವಾಗ ನಿದ್ರೆಯ ಸಮಯದಲ್ಲಿ ದೇಹದಿಂದ ಹೊರಹಾಕಲ್ಪಟ್ಟ ಶಾಖವು ಹಾಸಿಗೆಯ ವಸ್ತುವಿನಲ್ಲಿ ಸಿಕ್ಕಿಹಾಕಿಕೊಳ್ಳಬಹುದು - ಇದು ಹಾಸಿಗೆಯ ಮೇಲ್ಮೈಯನ್ನು ಬಿಸಿ ಮಾಡುತ್ತದೆ, ಆ ಬಿಸಿ ಮತ್ತೆ ನಿಮಗೆ ತಾಗುತ್ತದೆ. ಇದು ನಿದ್ರಾ ಭಂಗಕ್ಕೂ ಕಾರಣವಾಗಬಹುದು.

ಆದರೆ ನೀವು ನೆಲದ ಮೇಲೆ ಮಲಗಿದಾಗ, ನಿಮ್ಮ ದೇಹದಿಂದ ಹೊರಹಾಕಲ್ಪಟ್ಟ ಶಾಖವು ಯಾವುದೇ ವಸ್ತುವಿನೊಳಗೆ ಸಿಲುಕಿಕೊಳ್ಳುವುದಿಲ್ಲ. ಇದು ಅಧಿಕ ಬಿಸಿಯಾಗುವುದನ್ನು ತಡೆಯುತ್ತದೆ.

ಇವು ಖಂಡಿತವಾಗಿಯೂ ನೀವು ನಿರ್ಲಕ್ಷಿಸಲಾಗದ ಪ್ರಯೋಜನಗಳಾಗಿವೆ. ಆದರೆ ಎಲ್ಲರೂ ನೆಲದ ಮೇಲೆ ಮಲಗಲು ಆರಾಮದಾಯಕವಾಗುತ್ತಾರೆಯೇ? ಅದನ್ನು ನಿಮಗೆ ಹೆಚ್ಚು ಆರಾಮದಾಯಕವಾಗಿಸುವುದು ಹೇಗೆ ಮುಂದೆ ನೋಡಿ?

5. ಹೆಚ್ಚು ಆರಾಮದಾಯಕವಾಗಿ ಮಲಗುವುದು ಹೇಗೆ?

5. ಹೆಚ್ಚು ಆರಾಮದಾಯಕವಾಗಿ ಮಲಗುವುದು ಹೇಗೆ?

ನೀವು ಹಿಂದೆಂದೂ ನೆಲದ ಮೇಲೆ ಮಲಗದಿದ್ದರೆ, ಹೊಸದಾಗಿ ನೆಲದ ಮೇಲೆ ಮಲಗುವ ಅಭ್ಯಾಸ ಮಾಡಿಕೊಳ್ಳುವುದು ಕಷ್ಟವೇ, ಸ್ವಲ್ಪ ಅಹಿತಕರವಾಗಿರುತ್ತದೆ. ಆದರೆ ಇದು ಆರೋಗ್ಯಕ್ಕಾಗಿ ಅತ್ಯುತ್ತಮ ಅಭ್ಯಾಸವಾಗಿದೆ. ನಿಮ್ಮ ಈ ಪರಿವರ್ತನೆಯನ್ನು ಹೆಚ್ಚು ಸುಗಮವಾಗಿಸಲು ನೀವು ಏನು ಮಾಡಬಹುದು ಎಂಬುದು ಇಲ್ಲಿದೆ.

ನೆಲದ ಮೇಲೆ ಮಲಗಲು ಆರಂಭಿಸಿದ ಮೊದಲ ಕೆಲವು ರಾತ್ರಿಗಳು ಅಹಿತಕರವಾಗಿರುತ್ತವೆ ಎಂಬ ಅಂಶವನ್ನು ಮೊದಲೇ ನಿರೀಕ್ಷಿಸಿ. ಹೊಸ ಮೇಲ್ಮೈಗೆ ಹೊಂದಿಕೊಳ್ಳುವುದರಿಂದ ನಿಮ್ಮ ದೇಹವು ಸ್ವಲ್ಪ ನೋಯಿಸಬಹುದು.

6. ಸರಿಯಾದ ಮೇಲ್ಮೈಯನ್ನು ಆರಿಸಿ

6. ಸರಿಯಾದ ಮೇಲ್ಮೈಯನ್ನು ಆರಿಸಿ

ನೆಲದ ಮೇಲೆ ಮಲಗುವುದು ಎಂದರೆ ನೇರವಾಗಿ ನೆಲದ ಮೇಲೆ ಮಲಗುವುದು ಎಂದರ್ಥವಲ್ಲ. ಮೇಲ್ಮೈಯನ್ನು ಸ್ವಲ್ಪ ಮೃದುಗೊಳಿಸಲು ನೀವು ಹಲವು ಬೆಡ್‌ಶೀಟ್‌, ಅಥವಾ ತೆಳ್ಳನೆಯ ಹಾಸಿಗೆಗನ್ನು ಸಹ ಬಳಸಬಹುದು. ಜಪಾನಿಯರು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಬಳಸುತ್ತಿರುವ ಟಾಟಾಮಿ, ಚಾಪೆಯನ್ನು ನೀವು ಬಳಸಬಹುದು. ಅಥವಾ ನೀವು ಸರಳವಾದ ಯೋಗ ಚಾಪೆಯನ್ನು ಬಳಸಬಹುದು.

7. ದಿಂಬನ್ನು ಮರುಪರಿಶೀಲಿಸಿ

7. ದಿಂಬನ್ನು ಮರುಪರಿಶೀಲಿಸಿ

ಹಲವು ದಿಂಬುಗಳ ಸಂಪೂರ್ಣ ಗುಂಪಿನೊಂದಿಗೆ ನೆಲದ ಮೇಲೆ ಮಲಗಬೇಡಿ. ನಿಮ್ಮ ತಲೆಯನ್ನು ಸ್ವಲ್ಪ ಎತ್ತರಿಸುವ ತೆಳುವಾದ ಒಂದನ್ನು ನೀವು ಬಳಸಬಹುದು. ಅಥವಾ ನಿಮ್ಮ ತಲೆಯನ್ನು ಮೇಲಕ್ಕೆತ್ತಲು ನಿಮ್ಮ ತೋಳನ್ನು ಸಹ ನೀವು ಬಳಸಬಹುದು. ಆರಾಮಕ್ಕಾಗಿ ನಿಮ್ಮ ತಲೆಯನ್ನು ಆಸರೆಗೊಳಿಸಲು ಹಲವಾರು ದಿಂಬುಗಳನ್ನು ಬಳಸುವುದು ಉತ್ತಮ ಮಾರ್ಗವಲ್ಲ, ಇದರಿಂದ ಪ್ರಯೋಜನ ಸಹ ಇಲ್ಲ, ಬದಲಿಗೆ ಕುತ್ತಿಗೆ ನೋವಿನೊಂದಿಗೆ ಬೆಳಿಗ್ಗೆ ಏಳಬಹುದು.

8. ಅಗತ್ಯವಿದ್ದರೆ ನಿಮ್ಮ ಮೊಣಕಾಲುಗಳ ಕೆಳಗೆ ದಿಂಬನ್ನು ಇರಿಸಬಹುದು

8. ಅಗತ್ಯವಿದ್ದರೆ ನಿಮ್ಮ ಮೊಣಕಾಲುಗಳ ಕೆಳಗೆ ದಿಂಬನ್ನು ಇರಿಸಬಹುದು

ಸರಿಯಾದ ಮಲಗುವ ಸ್ಥಾನವನ್ನು ಆರಿಸಿ. ನಿಮ್ಮ ಬದಿಯಲ್ಲಿ, ನಿಮ್ಮ ಹೊಟ್ಟೆಯಲ್ಲಿ ಅಥವಾ ನಿಮ್ಮ ಬೆನ್ನಿನ ಮೇಲೆ ಮಲಗುವುದು - ಎಲ್ಲವೂ ಒಳ್ಳೆಯದೇ. ನೀವು ನೆಲದ ಮೇಲೆ ಮಲಗಿರುವಾಗ ಹೆಚ್ಚು ನೋವಿನಿಂದ ನಿದ್ರಿಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಬೆನ್ನುಮೂಳೆಗೆ ಅತಿಯಾದ ನೋವು, ಹಾನಿಯಾಗುತ್ತಿಲ್ಲ ಎಂಬುದು ನೆನಪಿರಲಿ.

English summary

Health Benefits Of Sleeping On The Floor in Kannada

Here we are discussing about Health Benefits Of Sleeping On The Floor in Kannada. Read more.
X
Desktop Bottom Promotion