For Quick Alerts
ALLOW NOTIFICATIONS  
For Daily Alerts

ಸಂಕ್ರಾಂತಿಯಂದು ಸವಿಯುವ ಆಹಾರಗಳಲ್ಲಿ ಅಡಗಿದೆ ಆರೋಗ್ಯ ರಹಸ್ಯ

|

ವರ್ಷದ ಮೊದಲ ಹಬ್ಬ, ರೈತರ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿ ಆಚರಣೆಯನ್ನು ಜನವರಿ 14ರಂದು ಆಚರಿಸಲಾಗುವುದು. ಮಕರ ಸಂಕ್ರಾಂತಿಯನ್ನು ಭಾರತದಲ್ಲಿ ಸಡಗರ-ಸಂಭ್ರಮದಿಂದ ಬೇರೆ-ಬೇರೆ ಹೆಸರಿನಲ್ಲಿ ಆಚರಿಸಲಾಗುವುದು.

ಪಂಜಾಬ್‌ನಲ್ಲಿ ಈ ಹಬ್ಬವನ್ನು ಲೋಹರಿ ಎಂದು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬೋಗಲಿ ಬಿಹು, ಗುಜರಾತ್ ಮತ್ತು ರಾಜಸ್ತಾನದಲ್ಲಿ ಉತ್ತರಾಯಣ್ (ಗಾಳಿಪಟ ಹಾರಿಸುವ ಹಬ್ಬ), ಕರ್ನಾಟಕ, ಬಿಹಾರ, ಆಂಧ್ರ ಪ್ರದೇಶ ಮೊದಲಾದೆಡೆ ಮಕರ ಸಂಕ್ರಾಂತಿ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಗರವಳಕ್ ಎಂದು ಆಚರಿಸಲಾಗುವುದು.

Makar Sankranti

ನಮ್ಮ ಕರ್ನಾಟಕದಲ್ಲಿ ಸಂಕ್ರಾಂತಿ ಎಂದರೆ ಎಳ್ಳು ಬೆಲ್ಲ ಸವಿಯುವುದು, ಅದೇ ತಮಿಳುನಾಡಿನಲ್ಲಿ ಪೊಂಗಲ್ ಮಾಡಲಾಗುವುದು.ಮಕರ ಸಂಕ್ರಾಂತಿ ಹಬ್ಬದಲ್ಲಿ ಪೊಂಗಲ್, ಎಳ್ಳು ಬೆಲ್ಲ, ಕಬ್ಬು, ಕೊಬ್ಬರಿ, ಬಾರೆ ಹಣ್ಣು ಸವಿಯುವ ಸಂಪ್ರದಾಯವಿದೆ.

ಸಂಕ್ರಾಂತಿ ಹಬ್ಬವನ್ನು ಚಳಿಗಾಲದ ಮಧ್ಯದಲ್ಲಿ ಆಚರಿಸಲಾಗುವುದು, ಈ ಸಮಯದಲ್ಲಿ ವೈರಲ್ ಹಾಗೂ ಬ್ಯಾಕ್ಟಿರಿಯಾ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಈ ಸಮಯಕ್ಕೆ ನಮ್ಮ ಆರೋಗ್ಯಕ್ಕೆ ಏನು ಬೇಕು ಎಂಬುವುದು ನಮ್ಮ ಪೂರ್ವಜರಿಗೆ ತಿಳಿದಿರಬೇಕು, ಹಾಗಾಗಿಯೇ ದೇಹವನ್ನು ಬೆಚ್ಚಗಿಡುವ ಆಹಾರವನ್ನು ಸಂಕ್ರಾಂತಿ ಹಬ್ಬದ ಸಮಯದಲ್ಲಿ ಸವಿಯಲಾಗುವುದು.

ಸಂಕ್ರಾಂತಿ ಹಬ್ಬದಲ್ಲಿ ನಾವು ಸವಿಯುವ ಆಹಾರಗಳಲ್ಲಿರುವ ಆರೋಗ್ಯ ರಹಸ್ಯ ಬಗ್ಗೆ ಇಲ್ಲಿ ಹೇಳಿದ್ದೇವೆ ನೋಡಿ:

ಪೊಂಗಲ್:

ಪೊಂಗಲ್:

ಪೊಂಗಲ್‌ ಅನ್ನು ಸಂಕ್ರಾಂತಿ ಹಬ್ಬದಂದು ಹೊರಗಡೆ ಒಲೆ ಹಚ್ಚಿ ಮಣ್ಣಿನ ಮಡಿಕೆಯಲ್ಲಿ ಮಾಡಲಾಗುವುದು. ಇದರಿಂದ ದೇಹಕ್ಕೆ ವಿಟಮಿನ್ ಡಿ ದೊರೆಯುವುದು, ಅಲ್ಲದೆ ಇದರಲ್ಲಿ ಅರಿಶಿಣ ಹಾಕುವುದರಿಂದ ವೈರಾಣುಗಳ ವಿರುದ್ಧ ಹೋರಾಡುವ ಸಾಮಾರ್ಥ್ಯ ದೇಹಕ್ಕೆ ನೋಈಡುತ್ತದೆ. ಇದರಲ್ಲಿ ರುಚಿಗಾಗಿ ಬಳಸುವ ಶುದ್ಧವಾದ ತುಪ್ಪದಲ್ಲಿ ಅನೇಕ ಪೋಷಕಾಂಶಗಳಿವೆ. ಇದು ತ್ವಚೆಯ ಮಾಯಿಶ್ಚರೈಸರ್ ಕಾಪಾಡಿ ತ್ವಚೆ ಹಾಗೂ ಕೂದಲನ್ನು ರಕ್ಷಣೆ ಮಾಡುತ್ತದೆ.

ಪೊಂಗಲ್‌ನಲ್ಲಿ ಬಳಸುವ ಅಕ್ಕಿ ಮತ್ತು ಹೆಸರು ಬೇಳೆ ದೇಹದಲ್ಲಿ ಕಾರ್ಬೋಹೈಡ್ರೇಟ್ಸ್ ಹಾಗೂ ಪ್ರೊಟಿನ್ ಸಮತೋಲನ ಕಾಪಾಡಲು ಸಹಕಾರಿ.

 ಬೆಲ್ಲ

ಬೆಲ್ಲ

ಬೆಲ್ಲ ಲಿವರ್‌ ಅನ್ನು ಶುದ್ಧೀಕರಿಸುತ್ತದೆ ಹಾಗೂ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕುತ್ತದೆ. ಬೆಲ್ಲದಲ್ಲಿ ಖನಿಜಾಂಶಗಳಾದ ಕ್ಯಾಲ್ಸಿಯಂ, ಕಬ್ಬಿಣದಂಶ, ಸತು, ರಂಜಕ, ಪೊಟಾಷ್ಯಿಯಂ, ಸೆಲೆನಿಯಂ ಇದ್ದು ಇವುಗಳು ದೇಹದಲ್ಲಿರುವ ಬೇಡದ ಕಶ್ಮಲವನ್ನು ಹೊರ ಹಾಕಲು ಸಹಕಾರಿ. ಅಲ್ಲದೆ ಚಳಿಗಾಲದಲ್ಲಿ ಕಾಡುವ ಉಸಿರಾಟದ ತೊಂದರೆ ತಡೆಗಟ್ಟಲು ಕೂಡ ಬೆಲ್ಲ ಸಹಕಾರಿ.

ಎಳ್ಳು-ಬೆಲ್ಲ:

ಎಳ್ಳು-ಬೆಲ್ಲ:

ಎಳ್ಳು, ಒಣ ಕೊಬ್ಬರಿ, ನೆಲಗಡಲೆ, ಬೆಲ್ಲ ಇವುಗಳ ಮಿಶ್ರಣವಾಗಿದೆ.

ಎಳ್ಳು: ಇದರಲ್ಲಿ ತಾಮ್ರ, ಕ್ಯಾಲ್ಸಿಯಂ, ಸತು, ಕಬ್ಬಿಣದಂಶ ಹಾಗೂ ವಿಟಮಿನ್ ಇ ಇದ್ದು, ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಇದರಲ್ಲಿರುವ ಎಣ್ಣೆಯಂಶ ತ್ವಚೆ ಹಾಗೂ ಕೂದಲಿಗೆ ತುಂಬಾನೇ ಒಳ್ಳೆಯದು.

ಕೊಬ್ಬರಿ: ಇದರಲ್ಲಿ ನಾರಿನಂಶ ಅಧಿಕವಿದ್ದು ತ್ವಚೆ ಸಂಬಂಧಿ ಸೋಂಕು ಬಾರದಂತೆ ತಡೆಗಟ್ಟುತ್ತದೆ.

ನೆಲಗಡಲೆ: ಇದರಲ್ಲಿ ಒಮೆಗಾ 6 ಕೊಬ್ಬಿನಂಶ ಇದ್ದು ತ್ವಚೆಗೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಬಿ ಮತ್ತು ಬಯೋಟಿನ್ ಇರುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

ಕಬ್ಬು:

ಕಬ್ಬು:

ಇದರಲ್ಲಿ ಎಲೆಕ್ಟ್ರೋಲೈಟ್ಸ್, ಕ್ಯಾಲ್ಸಿಯಂ, ಕಬ್ಬಿಣದಂಶ ಇದ್ದು ಲಿವರ್‌ ಶುದ್ಧೀಕರಿಸಲು ತುಂಬಾನೇ ಸಹಕಾರಿ. ಇದು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ, ಸೋಂಕಿನ ವಿರುದ್ಧ ಹೋರಾಡುತ್ತದೆ, ಚಳಿಗಾಲದಲ್ಲಿ ಸವಿಯಬಹುದಾದ ಅತ್ಯುತ್ತಮವಾದ ಜ್ಯೂಸ್ ಆಗಿದೆ.

ಬಾರೆ ಹಣ್ಣು

ಬಾರೆ ಹಣ್ಣು

ಇದರಲ್ಲಿ ವಿಟಮಿನ್ ಸಿ ಇದ್ದು ಆ್ಯಂಟಿಆಕ್ಸಿಡೆಂಟ್ ದೇಹದಲ್ಲಿರುವ ಬೇಡದ ಕಣಗಳ ವಿರುದ್ಧ ಹೋರಾಡುತ್ತದೆ ಹಾಗೂ ಕಣಗಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುತ್ತದೆ. ಮುಖದ ಕಾಂತಿ ಹೆಚ್ಚಿಸುವಲ್ಲಿ ಈ ಹಣ್ಣು ಸಹಕಾರಿ. ಇದು ರಕ್ತವನ್ನು ಕೂಡ ಶುದ್ಧೀಕರಿಸುತ್ತದೆ.

English summary

Health Benefits of Sankranti Foods

Makar Sankranti: Health benefits of eating sankranti foods like jaggery, sesame seeds, Pongal, ber, read on,
Story first published: Tuesday, January 12, 2021, 19:11 [IST]
X
Desktop Bottom Promotion