For Quick Alerts
ALLOW NOTIFICATIONS  
For Daily Alerts

ನಿತ್ಯ ಮಲಗುವ ಮುನ್ನ ಖರ್ಜೂರ ಸೇವಿಸಿದರೆ ಆರೋಗ್ಯದ ಜತೆಗೆ ಸೌಂಧರ್ಯವನ್ನು ವೃದ್ಧಿಸುತ್ತದೆ

|

ನಾವು ನಿತ್ಯ ಮಲಗುವ ಮುನ್ನ ಮಾಡುವ ಕೆಲವು ಅಭ್ಯಾಸಗಳು ನಮ್ಮ ಆಯುಷ್ಯವನ್ನು ವೃದ್ಧಿಸುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್‌ ಬೆಚ್ಚಗಿನ ನೀರು ಕುಡಿಯುವುದು, ಮಲಗುವ ಅರ್ಧ ಗಂಟೆ ಮುನ್ನ ಟಿವಿ, ಮೊಬೈಲ್‌ನಿಂದ ದೂರ ಇರುವುದು, ಹಾಲು ಕುಡಿಯುವುದು, ಅತಿಯಾದ ಆಹಾರ ಸೇವಿಸದೇ ಇರುವುದು ಇದೆಲ್ಲಾ ನಮಗೆ ಉತ್ತಮ ನಿದ್ರೆಯ ಜತೆಗೆ ದೀರ್ಘಾವದಿಯಲ್ಲಿ ಆರೋಗ್ಯವನ್ನು ಸಹ ವೃದ್ಧಿಸುತ್ತದೆ.

ಇಂಥಾ ಆರೋಗ್ಯಕರ ಬೆಡ್‌ ಟೈಮ್‌ ಅಭ್ಯಾಸಗಳಲ್ಲಿ ಇಂದಿನಿಂದಲೇ ನೀವು ಅಳವಡಿಸಿಕೊಳ್ಳಬೇಕಾದ ಮತ್ತೊಂದು ಅಭ್ಯಾಸ ನಿತ್ಯ ರಾತ್ರಿ ಮಲಗುವ ಮುನ್ನ 2 ಖರ್ಜೂರವನ್ನು ಸೇವಿಸುವುದು. ನಿತ್ಯ ಖರ್ಜೂರ ಸೇವನೆ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಡ್ರೈಫ್ರೂಟ್ಸ್‌ಗಳ ಪಟ್ಟಿಗೆ ಸೇರುವ ಈ ಖರ್ಜೂರದಲ್ಲಿ ನೂರಾರು ವಿಧಗಳಿವೆ. ನಿಮಗೆ ಇಷ್ಟವಾದ ಯಾವುದೇ ವಿಧದ ಖರ್ಜೂರವಾದರೂ ಉತ್ತಮವೇ. ಏಕೆಂದರೆ ಖರ್ಜೂರದಲ್ಲಿರುವ ಜೀವಸತ್ವಗಳು, ಖನಿಜಗಳು, ಪ್ರೋಟೀನ್ ಮತ್ತು ಫೈಬರ್ ಅನ್ನು ಹೊಂದಿದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅನೇಕ ರೋಗಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನೀವು ಪ್ರತಿದಿನ ನೀವು ಮಲಗುವ ಮುನ್ನ ಸೇವಿಸುವ ಹಾಲಿನೊಂದಿಗೆ ಸೇರಿಸಿ ಅಥವಾ ಹಾಗೆಯೇ ಸಹ ಖರ್ಜೂರವನ್ನು ಸೇವಿಸಬಹುದು. ಇದರ ಆರೋಗ್ಯ ಪ್ರಯೋಜನಗಳೇನು ಮುಂದೆ ತಿಳಿಯೋಣ...

1. ಖರ್ಜೂರ ಮೂಳೆಗಳನ್ನು ಬಲಪಡಿಸುತ್ತದೆ

1. ಖರ್ಜೂರ ಮೂಳೆಗಳನ್ನು ಬಲಪಡಿಸುತ್ತದೆ

ಖರ್ಜೂರದಲ್ಲಿ ಫಾಸ್ಫರಸ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಹೇರಳವಾಗಿದೆ. ಇದು ಮೂಳೆಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಮೂಳೆಗಳಿಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳನ್ನು ಸಹ ತಡೆಯುತ್ತದೆ.

2. ಕಣ್ಣುಗಳ ಆರೋಗ್ಯಕ್ಕೆ

2. ಕಣ್ಣುಗಳ ಆರೋಗ್ಯಕ್ಕೆ

ಪ್ರತಿದಿನ ಖರ್ಜೂರವನ್ನು ಸೇವಿಸುವುದು ಕಣ್ಣಿಗೆ ಸಹ ತುಂಬಾ ಒಳ್ಳೆಯದು. ಖರ್ಜೂರದಲ್ಲಿರುವ ವಿಟಮಿನ್ ಎ ದೃಷ್ಟಿಯನ್ನು ಹೆಚ್ಚಿಸುತ್ತದೆ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

3. ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ

3. ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ

ಉತ್ತಮ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಕೊರೋನಾ ಸೇರಿದಂತೆ ಬಹುತೇಕ ರೋಗಗಳು ಬಾಧಿಸುವುದಿಲ್ಲ. ಖರ್ಜೂರದಲ್ಲಿರುವ ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ದೇಹಕ್ಕೆ ಶಕ್ತಿ ನೀಡುತ್ತದೆ. ಖರ್ಜೂರದಲ್ಲಿರುವ ಪ್ರೋಟೀನ್ ಸ್ನಾಯುಗಳನ್ನು ಬಲಪಡಿಸುತ್ತದೆ. ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

4. ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ

4. ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ

ಖರ್ಜೂರದಲ್ಲಿ ಫೈಬರ್ ಅಂಶ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಅಲ್ಲದೆ, ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

5. ಹೃದಯದ ಆರೋಗ್ಯ

5. ಹೃದಯದ ಆರೋಗ್ಯ

ಪ್ರತಿದಿನ ಖರ್ಜೂರದ ಸೇವನೆಯಿಂದ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಖರ್ಜೂರವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು ಅದು ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ತುಂಬಾ ಸಹಾಯ ಮಾಡುತ್ತದೆ.

6. ತೂಕವನ್ನು ಕಳೆದುಕೊಳ್ಳಲು ಖರ್ಜೂರ

6. ತೂಕವನ್ನು ಕಳೆದುಕೊಳ್ಳಲು ಖರ್ಜೂರ

ಖರ್ಜೂರದಲ್ಲಿವ ನಾರಿನಂಶ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಈ ಗುಣಲಕ್ಷಣಗಳಿಂದಾಗಿ, ಖರ್ಜೂರವು ತೂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

7. ಉದ್ದ ಕೂದಲು ಮತ್ತು ಹೊಳೆಯುವ ಚರ್ಮಕ್ಕೆ

7. ಉದ್ದ ಕೂದಲು ಮತ್ತು ಹೊಳೆಯುವ ಚರ್ಮಕ್ಕೆ

ಖರ್ಜೂರದಲ್ಲಿ ವಿಟಮಿನ್ ಇ, ಸಿ ಮತ್ತು ಡಿ ಸಮೃದ್ಧವಾಗಿದೆ. ಇದು ಕೂದಲನ್ನು ಆರೋಗ್ಯಕರವಾಗಿ ಮತ್ತು ಬೆಳೆಯಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಮುಖವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ.

8. ಕೀಲು ನೋವಿನ ಸಮಸ್ಯೆಯನ್ನು ನಿವಾರಿಸಿ

8. ಕೀಲು ನೋವಿನ ಸಮಸ್ಯೆಯನ್ನು ನಿವಾರಿಸಿ

ಖರ್ಜೂರದಲ್ಲಿರುವ ಕ್ಯಾಲ್ಸಿಯಂ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ಪೂರೈಸುತ್ತದೆ. ಅಷ್ಟೇ ಅಲ್ಲದೆ, ಕೀಲು ನೋವು, ಮಂಡಿ ನೋವಿನ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

English summary

Health benefits of eating dates before bed in Kannada

Here we are discussing about Health benefits of eating dates before bed in Kannada. You can also consume dates with milk everyday. So let's know its benefits. Read more.
X
Desktop Bottom Promotion