For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಈ ಮೆಂತ್ಯೆ ನೀರನ್ನು ಕುಡಿಯಿರಿ, ಆರೋಗ್ಯದಲ್ಲಾಗುವ ಚಮತ್ಕಾರವನ್ನು ನೀವೇ ನೋಡಿ

|

ಮೆಂತ್ಯ ಬೀಜಗಳು ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆಯಾಗಿದ್ದು, ವಿವಿಧ ಪಾಕವಿಧಾನಗಳಿಗೆ ಸುವಾಸನೆ ಮತ್ತು ಪರಿಮಳವನ್ನು ಸೇರಿಸಲು ಬಳಸಲಾಗುತ್ತದೆ. ಆದರೆ ಮೆಂತ್ಯ ಬೀಜಗಳು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಹೌದು, ಮೆಂತ್ಯ ಬೀಜಗಳು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿಕೊಂಡಿದ್ದು, ನಮ್ಮ ಆಹಾರದಲ್ಲಿ ಸೇರಿಸುವುದು ಅತ್ಯಗತ್ಯ.

ಆದರೆ, ಕೆಲವರು ಆಹಾರದಲ್ಲಿ ಸೇರಿಸುವುದನ್ನು ಇಷ್ಟಪಡುವುದಿಲ್ಲ. ಅಂತಹವರು ಈ ಮೆಂತ್ಯೆ ನೀರಿನ ಮೂಲಕ ಸೇವಿಸಬಹುದು. ಹಾಗಾದರೆ, ಇದನ್ನು ತಯಾರಿಸುವುದು ಹೇಗೆ? ಅದರ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ನೋಡೋಣ.

ಮೆಂತ್ಯೆ ನೀರನ್ನು ತಯಾರಿಸುವುದು ಹೇಗೆ?:

ಮೆಂತ್ಯೆ ನೀರನ್ನು ತಯಾರಿಸುವುದು ಹೇಗೆ?:

ಒಂದು ಬಾಣಲೆಯಲ್ಲಿ, ಮೆಂತ್ಯ ಬೀಜಗಳನ್ನು ಹಾಕಿ, ಹುರಿಯಿರಿ. ಈಗ ಬ್ಲೆಂಡರ್ನಲ್ಲಿ, ಈ ಬೀಜಗಳನ್ನು ಸೇರಿಸಿ, ಚೆನ್ನಾಗಿ ಪುಡಿಮಾಡಿಕೊಳ್ಳಿ.

ಒಂದು ಲೋಟ ಬೆಚ್ಚಗಿನ ನೀರಿನಲ್ಲಿ, 1 ಟೀಸ್ಪೂನ್ ಮೆಂತ್ಯ ಪುಡಿಯನ್ನು ಸೇರಿಸಿ ಮತ್ತು ಮಿಶ್ರಣ ಮಾಡಿದರೆ, ಆರೋಗ್ಯಕರವಾದ ಮೆಂತ್ಯೆ ನೀರು ಕುಡಿಯಲು ಸಿದ್ಧ.

ಮೆಂತ್ಯೆ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು:

ಮೆಂತ್ಯೆ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು:

1. ತೂಕ ನಿರ್ವಹಣೆ:

ಮೆಂತ್ಯೆ ನೀರು ಕುಡಿಯುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿರುತ್ತದೆ. ಮೇಥಿಯು ಫೈಬರ್‌ನಿಂದ ತುಂಬಿದ್ದು, ನಿಮಗೆ ಪೂರ್ಣತೆಯ ಭಾವನೆಯನ್ನು ನೀಡುತ್ತದೆ. ಇದು ನಿಮ್ಮ ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೊಟ್ಟೆ ತುಂಬಿದ್ದರೆ, ಅನಾರೋಗ್ಯಕರ ಆಹಾರ ಸೇವಿಸುವುದನ್ನು ತಡೆಯುತ್ತದೆ. ಇದು ಉಬ್ಬುವಿಕೆಯನ್ನು ಸಹ ತಡೆಯುತ್ತದೆ.

2. ಆರೋಗ್ಯಕರ ಕೂದಲು:

2. ಆರೋಗ್ಯಕರ ಕೂದಲು:

ಮೆಂತ್ಯ ಬೀಜಗಳಲ್ಲಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಪೋಷಕಾಂಶಗಳಿವೆ. ಮೆಂತ್ಯ ನೀರನ್ನು ಸೇವಿಸುವುದರಿಂದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಜೊತೆಗೆ ಕೂದಲಿನ ದಟ್ಟತೆಯನ್ನು ಸುಧಾರಿಸುತ್ತದೆ. ತಲೆಹೊಟ್ಟು, ಒರಟುತನದಂತಹ ಕೂದಲಿನ ಸಮಸ್ಯೆಗಳನ್ನು ದೂರವಿರಿಸುತ್ತದೆ.

3.ಉತ್ತಮ ಜೀರ್ಣಕ್ರಿಯೆ:

3.ಉತ್ತಮ ಜೀರ್ಣಕ್ರಿಯೆ:

ಮೆಂತ್ಯ ಅಥವಾ ಮೆಂತ್ಯ ನೀರು ನಿಮ್ಮ ದೇಹದಿಂದ ಹಾನಿಕಾರಕ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ನಿಮ್ಮ ಕರುಳಿನ ಚಲನೆಯನ್ನು ಸುಧಾರಿಸುವ ಮೂಲಕ, ಜೀರ್ಣಕಾರಿ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆ, ಇತರ ಜೀರ್ಣಕ್ರಿಯೆ ಸಮಸ್ಯೆಗಳ ನಡುವೆ ಅಜೀರ್ಣವನ್ನು ತಡೆಯುತ್ತದೆ.

4. ಮಧುಮೇಹಿಗಳಿಗೆ ಉತ್ತಮ:

4. ಮಧುಮೇಹಿಗಳಿಗೆ ಉತ್ತಮ:

ಮೆಂತ್ಯೆ ಬೀಜಗಳು ಮಧುಮೇಹಿಗಳಿಗೆ ಉತ್ತಮ ಪರಿಹಾರವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೆಂತ್ಯ ಬೀಜಗಳಲ್ಲಿರುವ ಅಮೈನೋ ಆಸಿಡ್ ಸಂಯುಕ್ತಗಳು ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತವೆ, ಇದು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದನ್ನು ಸೇವಿಸುವುದರಿಂದ ಮಧುಮೇಹಿಗಳು ಸಾಮಾನ್ಯವಾಗಿ ಬಳಲುವ ಕಣ್ಣಿನ ಪೊರೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

5. ಮೂತ್ರಪಿಂಡದ ಆರೋಗ್ಯ:

5. ಮೂತ್ರಪಿಂಡದ ಆರೋಗ್ಯ:

ಮೆಂತ್ಯದ ಸೇವನೆಯು ಮೂತ್ರಪಿಂಡದ ಕಲ್ಲುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಈ ಬೀಜಗಳು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

6. ತ್ವಚೆಗೂ ಸಹಕಾರಿ:

6. ತ್ವಚೆಗೂ ಸಹಕಾರಿ:

ಈ ಮೆಂತ್ಯೆ ನೀರು ನಿಮ್ಮ ತ್ವಚೆಗೂ ಉತ್ತಮವಾಗಿದೆ. ಮೆಂತ್ಯೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಲಸ ಮಾಡುತ್ತದೆ ಮತ್ತು ನಿಮ್ಮ ದೇಹದಿಂದ ಎಲ್ಲಾ ಹಾನಿಕಾರಕ ಜೀವಾಣುಗಳನ್ನು ತೆಗೆದುಹಾಕುತ್ತದೆ. ಇದು ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳಾದ ಸೂಕ್ಷ್ಮ ರೇಖೆಗಳು, ಕಪ್ಪು ಕಲೆಗಳು ಮತ್ತು ಸುಕ್ಕುಗಳನ್ನು ತಡೆಯುತ್ತದೆ.

7. ಮೆಂತ್ಯವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಎದೆಯುರಿ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ.

7. ಮೆಂತ್ಯವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಎದೆಯುರಿ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ.

8. ಒಂದು ಅಧ್ಯಯನದ ಪ್ರಕಾರ, ಮೆಂತ್ಯವನ್ನು ಸೇವಿಸುವುದರಿಂದ ಹಾಲುಣಿಸುವ ಮಹಿಳೆಯರಲ್ಲಿ ಎದೆಹಾಲು ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

9. ಮೆಂತ್ಯೆ ಬೀಜಗಳಲ್ಲಿ ನೈಸರ್ಗಿಕವಾಗಿ ಕರಗುವ ನಾರಿನಂಶವಿದೆ ಅದು ನಿಮ್ಮ ಹೃದಯಕ್ಕೆ ಒಳ್ಳೆಯದು. ಇದು ನಿಮ್ಮ ಹೃದಯವನ್ನು ಹೃದಯಾಘಾತದಿಂದ ರಕ್ಷಿಸುತ್ತದೆ. ಈ ಬೀಜಗಳು ಹೃದಯಾಘಾತಕ್ಕೆ ಕಾರಣವಾಗುವ ಅಸಹಜ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.

10. ಮೆಂತ್ಯ ನೀರನ್ನು ಕುಡಿಯುವುದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇವು ಹೃದಯ ಸಮಸ್ಯೆಗಳ ಅಪಾಯವನ್ನು ತಡೆಯುತ್ತದೆ.

ಗಮನಿಸಿ: ನೀವು ಗರ್ಭಿಣಿಯಾಗಿದ್ದರೆ ಈ ಮೆಂತ್ಯೆ ನೀರನ್ನು ಕುಡಿಯುವ ಮೊದಲು ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ಏಕೆಂದರೆ ಇದು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಬಲವಾದ ಪರಿಣಾಮ ಬೀರಬಹುದು. ನೀವು ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಈ ಪಾನೀಯವನ್ನು ನಿಮ್ಮ ದೈನಂದಿನ ಆಹಾರದ ಭಾಗವಾಗಿ ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

English summary

Health Benefits of Drinking Methi or Fenugreek Water in Kannada

Here we talking about Health Benefits of Drinking Methi or Fenugreek Water in Kannada, read on
X
Desktop Bottom Promotion