For Quick Alerts
ALLOW NOTIFICATIONS  
For Daily Alerts

ಉಪ್ಪಿನಕಾಯಿ ರುಚಿಗ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಗೊತ್ತಾ!

|

ನಮ್ಮ ಊಟ ಸಂಪೂರ್ಣ ಆಗ್ಬೇಕು ಅಂದ್ರೆ ಅಲ್ಲಿ ಉಪ್ಪಿನಕಾಯಿ ಇರಲೇಬೇಕು. ಕೆಲವರಂತೂ ಉಪ್ಪಿನಕಾಯಿ ಇಲ್ಲದೇ ಊಟದ ಹತ್ತಿರನೂ ಸುಳಿಯರು.. ಅಷ್ಟು ಉಪ್ಪಿನಕಾಯಿಯ ಪ್ರೇಮಿಗಳಾಗಿರುತ್ತಾರೆ. ಹಾಗಾದ್ರೆ ಈ ಉಪ್ಪಿನಕಾಯಿಂದ ಕೇವಲ ಊಟ ಅಷ್ಟೇ ರುಚಿಕರವಾಗೋದಾ??? ಖಂಡಿತ ಇಲ್ಲ.. ಊಟಕ್ಕೆ ಉಪ್ಪಿನಕಾಯಿಂದ ರುಚಿ ಹೇಗೆ ಸಿಗುತ್ತೋ ಅದೇ ರೀತಿ ಆರೋಗ್ಯಕ್ಕೆ ಒಳ್ಳೆಯ ಪ್ರಯೋಜನನೂ ಕೊಡುತ್ತೆ. ಅರೇ ಉಪ್ಪಿನಕಾಯಿಂದ ಆರೋಗ್ಯನಾ ಅಂತ ಯೋಚ್ನೇ ಮಾಡ್ತಾ ಇದ್ದೀರಾ? ಹೌದು, ಈ ಸ್ಟೋರಿ ಓದಿ ನಿಮಗೆ ತಿಳಿಯುತ್ತೆ.


ಉಪ್ಪಿನಕಾಯಿ ಸೇವನೆಯ ಆರೋಗ್ಯ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ:
ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವುದು

ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವುದು

ವಿನೆಗರ್ ಆಧಾರಿತ ಉಪ್ಪಿನಕಾಯಿ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ವಿನೆಗರ್‌ನಲ್ಲಿರುವ ಅಸಿಟಿಕ್ ಆಮ್ಲವು ಈ ವಿದ್ಯಮಾನಕ್ಕೆ ಕಾರಣ. ಆದಾಗ್ಯೂ, ಹೆಚ್ಚುವರಿ ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸುವುದರಿಂದ ಉಪ್ಪಿನಕಾಯಿ ಸೇವನೆಯನ್ನು ಮಿತಗೊಳಿಸುವುದು ಉತ್ತಮ.

ಜೀರ್ಣಕ್ರಿಯೆಯನ್ನು ಸುಧಾರಿಸುವುದು

ಜೀರ್ಣಕ್ರಿಯೆಯನ್ನು ಸುಧಾರಿಸುವುದು

ಪ್ರೋಬಯಾಟಿಕ್ ಬ್ಯಾಕ್ಟೀರಿಯಾಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಇರುವ ಉತ್ತಮ ಬ್ಯಾಕ್ಟೀರಿಯಾಗಳಾಗಿವೆ. ಈ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಯಲ್ಲಿ ನಮಗೆ ಸಹಾಯ ಮಾಡುತ್ತವೆ. ಕೆಲವೊಮ್ಮೆ, ಆಂಟಿಬಯೋಟಿಕ್ಸ್ ಗಳ ಬಳಕೆಯಿಂದಾಗಿ, ಕೆಟ್ಟ ಬ್ಯಾಕ್ಟೀರಿಯಾದ ಜೊತೆಗೆ, ಈ ಉತ್ತಮ ಬ್ಯಾಕ್ಟೀರಿಯಾಗಳು ಸಹ ನಾಶವಾಗುತ್ತವೆ. ಇದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಈ ಸಮಯದಲ್ಲಿ ಸ್ವಾಭಾವಿಕವಾಗಿ, ಹುದುಗಿಸಿದ ಉಪ್ಪಿನಕಾಯಿಯು ಈ ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸಿ, ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಅವುಗಳ ಸಂಖ್ಯೆಯನ್ನು ಪುನಃ ತುಂಬಿಸುತ್ತದೆ ಮತ್ತು ಆರೋಗ್ಯವನ್ನು ಪುನಃಸ್ಥಾಪಿಸುತ್ತದೆ.

ಲಿವರ್ ಆರೋಗ್ಯಕ್ಕೆ ಉತ್ತಮ

ಲಿವರ್ ಆರೋಗ್ಯಕ್ಕೆ ಉತ್ತಮ

ಜೀರ್ಣಕ್ರಿಯೆಯಂತಹ ಪ್ರಯೋಜನಗಳ ಹೊರತಾಗಿ, ನೆಲ್ಲಿಕಾಯಿ ಉಪ್ಪಿನಕಾಯಿ ಹೆಪಟೊಪ್ರೊಟೆಕ್ಟಿವ್ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಇವು ನಮ್ಮ ಲಿವರನ್ನು ಹಾನಿಯಿಂದ ತಡೆದು, ರಕ್ಷಣೆ ಒದಗಿಸುವುದು. ಆದರೆ, ಈ ಕುರಿತು ಫಲಿತಾಂಶಗಳನ್ನು ಪರೀಕ್ಷಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ಹೊಟ್ಟೆ ಹುಣ್ಣುಗಳನ್ನು ಕಡಿಮೆ ಮಾಡಬಹುದು

ಹೊಟ್ಟೆ ಹುಣ್ಣುಗಳನ್ನು ಕಡಿಮೆ ಮಾಡಬಹುದು

ಹೊಟ್ಟೆ ಅಥವಾ ಅನ್ನನಾಳದ ಹುಣ್ಣುಗಳು ಲೋಳೆಯ ಪೊರೆಗಳ ವೈಫಲ್ಯ ಮತ್ತು ಅಂಗಾಂಶಗಳ ಮೇಲಿನ ಆಸಿಡ್‌ನ ಪರಸ್ಪರ ಕ್ರಿಯೆಯಿಂದ ಉಂಟಾಗುವ ಆಂತರಿಕ ಗಾಯಗಳಾಗಿವೆ . ನಿರ್ದಿಷ್ಟವಾಗಿ, ಗ್ಯಾಸ್ಟ್ರಿಕ್ ಹುಣ್ಣುಗಳು ಲೋಳೆಯ ಪೊರೆಗಳ ದುರ್ಬಲಗೊಳ್ಳುವಿಕೆ ಮತ್ತು ಹೈಪರ್ಆಸಿಡಿಟಿಯಿಂದ ಉಂಟಾಗುತ್ತವೆ. ನೆಲ್ಲಿಕಾಯಿ ಉಪ್ಪಿನಕಾಯಿಗಳ ನಿಯಮಿತ ಸೇವನೆಯು ಹುಣ್ಣುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೈಡ್ರೇಟ್ ಆಗಿರಲು ಸಹಕರಿಸುವುದು:

ಹೈಡ್ರೇಟ್ ಆಗಿರಲು ಸಹಕರಿಸುವುದು:

ಸಾಮಾನ್ಯವಾಗಿ ಬೆವರುವುದರಿಂದ ದೇಹ ತನ್ನ ನೀರು ಹಾಗೂ ಎಲೆಕ್ಟ್ರೋಲೈಟ್‌ಗಳನ್ನು ಕಳೆದುಕೊಳ್ಳುತ್ತದೆ. ಇದನ್ನು ನೀವು ಆಹಾರ ಅಥವಾ ಪಾನೀಯಗಳ ಮೂಲಕ ಮತ್ತೆ ಪುನಃಸ್ಥಾಪಿಸಬಹುದು. ಇದಕ್ಕೆ ನೈಸರ್ಗಿಕವಾಗಿ ಸಹಾಯ ಮಾಡುವುದು ಉಪ್ಪಿನಕಾಯಿ. ಇದರಲ್ಲಿ ನೈಸರ್ಗಿಕ ನೀರು ಹಾಗೂ ಉಪ್ಪು ಇರುವುದರಿಂದ ನೀವು ಕಳೆದುಕೊಂಡ ಎಲೆಕ್ಟ್ರೋಲೈಟ್‌ಗಳನ್ನು ಮತ್ತೆ ದೇಹಕ್ಕೆ ತುಂಬಬಹುದು. ಆದ್ದರಿಂದ ಹೆಚ್ಚು ಬೆವರುವಿಕೆ ಇದ್ದಾಗ, ನೀವು ಹೈಡ್ರೇಟ್ ಆಗಿರಲು ಉಪ್ಪಿನಕಾಯಿಯನ್ನು ಮಿತವಾಗಿ ಸೇವಿಸುವುದು ಉತ್ತಮ.

ಗಮನಿಸಿ

ಗಮನಿಸಿ

ಬಹುತೇಕ ಎಲ್ಲಾ ಉಪ್ಪಿನಕಾಯಿಗಳು ಹೆಚ್ಚಿನ ಪ್ರಮಾಣದ ಉಪ್ಪನ್ನು ಹೊಂದಿರುತ್ತವೆ. ಇದರಿಂದ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು. ಅಧಿಕ ಉಪ್ಪನ್ನು ಸೇವಿಸುವ ಪ್ರಮುಖ ಅಪಾಯಗಳಲ್ಲಿ ಅಧಿಕ ರಕ್ತದೊತ್ತಡವು ಒಂದು . ಇದು ಪಾರ್ಶ್ವವಾಯು ಮತ್ತು ಹೃದಯಾಘಾತವನ್ನು ಉಂಟುಮಾಡುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ , ವಿಶೇಷವಾಗಿ ವಯಸ್ಸಾದವರಲ್ಲಿ.

ಅಧಿಕ ರಕ್ತದೊತ್ತಡದ ಅಪಾಯದ ಹೊರತಾಗಿ, ಉಪ್ಪಿನಕಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಹೊಂದಿರಬಹುದು, ಇದು ನಮ್ಮ ದೇಹದಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಈ ರುಚಿಕರವಾದ ಉಪ್ಪಿನಕಾಯಿಯ ಸೇವನೆಯನ್ನು ಸಾಂದರ್ಭಿಕ ಬಳಕೆಗೆ ಮಾತ್ರ ಸೀಮಿತಗೊಳಿಸುವುದು ಉತ್ತಮ.

English summary

Health benefits of consuming Pickles in Kannada

Here we talking about Health benefits of consuming Pickles in Kannada, read on
Story first published: Thursday, August 11, 2022, 9:00 [IST]
X
Desktop Bottom Promotion