For Quick Alerts
ALLOW NOTIFICATIONS  
For Daily Alerts

ತೆಂಗಿನೆಣ್ಣೆ ಅಡುಗೆಯಲ್ಲಿ ಬಳಸುವುದು ಆರೋಗ್ಯಕರವೇ?

|

ನಮ್ಮ ಭಾರತದಲ್ಲಿ ತೆಂಗಿನಕಾಯಿಗಳಿಗೇನು ಬರವಿಲ್ಲ. ಏಕೆಂದರೆ ತೆಂಗಿನ ಬೆಳೆ ಕಾಲಕಾಲಕ್ಕೆ ಚೆನ್ನಾಗಿ ಆಗಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ. ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ರೈತರಿಗೆ ತಮ್ಮ ಪ್ರೋತ್ಸಾಹ ಕೊಡುತ್ತಿವೆ. ನಾವು ಪ್ರತಿ ದಿನ ತಯಾರು ಮಾಡುವ ಹಲವಾರು ಅಡುಗೆ ಪದಾರ್ಥಗಳಲ್ಲಿ ತೆಂಗಿನಕಾಯಿಯನ್ನು ಬಳಕೆ ಮಾಡುತ್ತೇವೆ. ನಮ್ಮ ಸುತ್ತಮುತ್ತಲಿನ ಹೋಟೆಲ್ ಗಳಲ್ಲಿ ಒಂದು ದಿನಕ್ಕೆ ಅದೆಷ್ಟು ತೆಂಗಿನಕಾಯಿಗಳು ಖರ್ಚಾಗುತ್ತವೆ ಹೇಳಲು ಸಾಧ್ಯವಿಲ್ಲ.

ಈಗ ಅಸಲಿ ವಿಷಯ ಎಂದರೆ ಹಸಿ ತೆಂಗಿನಕಾಯಿಯಿಂದ ತಯಾರು ಮಾಡಲಾಗುವ ತೆಂಗಿನ ಎಣ್ಣೆಯ ಬಳಕೆ ನಮ್ಮ ಆರೋಗ್ಯಕ್ಕೆ ನಿಜಕ್ಕೂ ಒಳ್ಳೆಯದೇ ಅಥವಾ ಅಲ್ಲವೇ ಎಂಬುದು. ದಕ್ಷಿಣ ಭಾರತದ ಹಲವು ಕಡೆ ಈಗಲೂ ಕೂಡ ಬಹುತೇಕ ಮಂದಿ ಸೂರ್ಯಕಾಂತಿ ಎಣ್ಣೆ ಅಥವಾ ಮಾರುಕಟ್ಟೆಗಳಲ್ಲಿ ಸಿಗುವ ಇನ್ನಿತರ ಅಡುಗೆ ಎಣ್ಣೆಗಳ ಬದಲಾಗಿ ತೆಂಗಿನ ಎಣ್ಣೆಯನ್ನು ಬಳಕೆ ಮಾಡುತ್ತಾರೆ. ಕೇರಳ ಮತ್ತು ತಮಿಳುನಾಡು ಇದಕ್ಕೆ ತಾಜಾ ಉದಾಹರಣೆ. ತೆಂಗಿನ ಎಣ್ಣೆಯನ್ನು ಪ್ರತಿ ದಿನ ಬಳಕೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ ಅಥವಾ ದುಷ್ಪರಿಣಾಮ ಉಂಟಾಗಲಿದೆ ಎಂಬುದನ್ನು ಅಳೆದು ತೂಗಿದ ಮಾಹಿತಿ ಇಲ್ಲಿದೆ.

ಫ್ಯಾಟಿ ಆಮ್ಲಗಳ ವಿಷಯ ಬಂದಾಗ : -

ಫ್ಯಾಟಿ ಆಮ್ಲಗಳ ವಿಷಯ ಬಂದಾಗ : -

ನಮ್ಮ ಮನೆಯಲ್ಲಿ ನಾವು ಪ್ರತಿ ದಿನ ವಿವಿಧ ಬಗೆಯ ಅಡುಗೆಗಳನ್ನು ತಯಾರು ಮಾಡಲು ಬಳಕೆ ಮಾಡುವ ಮಾರುಕಟ್ಟೆಗಳಲ್ಲಿ ಸಿಗುವ ಹಲವು ಕಂಪನಿಗಳ ವೆಜಿಟೇಬಲ್ ಆಯಿಲ್ ಗಳಲ್ಲಿ ಫ್ಯಾಟಿ ಆಸಿಡ್ ಗಳ ಪ್ರಮಾಣ ಇದ್ದೇ ಇರುತ್ತದೆ. ಆದರೆ ಅವುಗಳು ಬಹುತೇಕ ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಗಳಾಗಿರುತ್ತವೆ. ಆದರೆ ತೆಂಗಿನ ಎಣ್ಣೆಯಲ್ಲಿ ಸರಿ ಸುಮಾರು ಶೇಕಡ 90 % ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಗಳೇ ತುಂಬಿರುತ್ತವೆ. ತೆಂಗಿನ ಎಣ್ಣೆಯ ಒಟ್ಟು ಕೊಬ್ಬಿನ ಪ್ರಮಾಣದಲ್ಲಿ ಅಳೆದು ನೋಡುವುದಾದರೆ ಲಾರಿಕ್ ಆಮ್ಲ ಎಂಬ ಕೊಬ್ಬಿನ ಆಮ್ಲ ಶೇಕಡ 40 % ತುಂಬಿಕೊಂಡಿರುತ್ತದೆ. ಇದರಿಂದ ನಾವು ಯಾವುದಾದರೂ ಸಂದರ್ಭದಲ್ಲಿ ತೆಂಗಿನ ಎಣ್ಣೆಯನ್ನು ಒಲೆಯ ಮೇಲಿಟ್ಟು ಬಿಸಿ ಮಾಡಲು ಮುಂದಾದಾಗ ಅದು ಆಕ್ಸಿಡೇಶನ್ ಪ್ರಕ್ರಿಯೆಗೆ ಒಳಪಡುವುದಿಲ್ಲ. ಹಾಗಾಗಿ ಕೆಲವರ ಅಭಿಪ್ರಾಯದ ಪ್ರಕಾರ ತೆಂಗಿನ ಎಣ್ಣೆ ಕೇವಲ ತಿಂಡಿಗಳನ್ನು ಕರಿಯಲು ಮಾತ್ರ ಬಳಕೆಗೆ ಬರುತ್ತದೆ. ಇದಲ್ಲದೆ ತಾಜಾ ತೆಂಗಿನ ಎಣ್ಣೆಯಲ್ಲಿ ಮೀಡಿಯಂ ಚೈನ್ ಫ್ಯಾಟಿ ಆಸಿಡ್ ಅಂಶಗಳು ಹೇರಳವಾಗಿವೆ. ಉದಾಹರಣೆಗೆ ಕ್ಯಾಪ್ರಿಲಿಕ್ ಆಮ್ಲ --> 7 % ಮತ್ತು ಕ್ಯಾಪ್ರಿಕ್ ಆಮ್ಲ --> 5 %

ತೆಂಗಿನ ಎಣ್ಣೆಯಲ್ಲಿ ಕಂಡು ಬರುವ ಲಾರಿಕ್ ಆಮ್ಲದ ಬಗ್ಗೆ ಒಂದಿಷ್ಟು ಮಾಹಿತಿ : -

ತೆಂಗಿನ ಎಣ್ಣೆಯಲ್ಲಿ ಕಂಡು ಬರುವ ಲಾರಿಕ್ ಆಮ್ಲದ ಬಗ್ಗೆ ಒಂದಿಷ್ಟು ಮಾಹಿತಿ : -

ಮೇಲೆ ಹೇಳಿದಂತೆ ತೆಂಗಿನ ಎಣ್ಣೆಯಲ್ಲಿ ಇರುವ ಒಟ್ಟು ಕೊಬ್ಬಿನ ಪ್ರಮಾಣದಲ್ಲಿ ಶೇಕಡ 40% ಲಾರಿಕ್ ಆಮ್ಲ ತುಂಬಿರುತ್ತದೆ. ಆದರೆ ನಾವು ಪ್ರತಿ ದಿನ ಅಡುಗೆಗಾಗಿ ಬಳಕೆ ಮಾಡುವ ಬೇರೆ ಬಗೆಯ ಅಡುಗೆ ಎಣ್ಣೆಗಳಲ್ಲಿ ಕೇವಲ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ಈ ಅಂಶ ಲಭ್ಯವಿರುತ್ತದೆ. ( ಪಾಮ್ ಆಯಿಲ್ ನಲ್ಲೂ ಶೇಕಡ 47% ಲಾರಿಕ್ ಆಮ್ಲ ತುಂಬಿಕೊಂಡಿದೆ ) ರಾಸಾಯನಿಕ ದೃಷ್ಟಿಯಲ್ಲಿ ನೋಡುವುದಾದರೆ ಲಾರಿಕ್ ಆಮ್ಲ ಲಾಂಗ್ ಚೈನ್ ಮತ್ತು ಮೀಡಿಯಂ ಚೈನ್ ಫ್ಯಾಟಿ ಆಸಿಡ್ ಗಳ ಮಧ್ಯ ಭಾಗದಲ್ಲಿದ್ದು ಬೇರೊಂದು ಮೀಡಿಯಂ ಚೈನ್ ಫ್ಯಾಟಿ ಆಸಿಡ್ ಅಂಶಗಳನ್ನು ಒಳಗೊಂಡ ಆಹಾರಗಳಿಗೆ ಹೋಲಿಸಿದರೆ ನಮ್ಮ ದೇಹದಲ್ಲಿ ಇದರ ಜೀರ್ಣ ಪ್ರಕ್ರಿಯೆ ಮತ್ತು ಮೆಟಬಾಲಿಸಂ ಪ್ರಕ್ರಿಯೆ ಸಂಪೂರ್ಣವಾಗಿ ಬೇರೆಯಾಗಿಯೇ ಇರುತ್ತದೆ. ಆದರೆ ಯಾವ ಲಾಂಗ್ ಚೈನ್ ಫ್ಯಾಟಿ ಆಸಿಡ್ ಅಂಶಗಳು ನಮ್ಮ ದೇಹದಲ್ಲಿ ಜೀರ್ಣಗೊಳ್ಳುತ್ತವೆ ಮತ್ತು ಮೆಟಬಾಲಿಸಂ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತವೆ ಅಂತಹವುಗಳಿಗೆ ಇದು ಹೋಲಿಕೆಯಾಗುತ್ತದೆ.

ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ : -

ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ : -

ಕೆಲವು ಅಧ್ಯಯನಗಳು ಸಾಬೀತು ಪಡಿಸಿದ ಹಾಗೆ ತೆಂಗಿನ ಎಣ್ಣೆಯ ಸೇವನೆಯಿಂದ ಲಾರಿಕ್ ಆಸಿಡ್ ನಮ್ಮ ದೇಹ ಸೇರುವ ಕಾರಣ ನಮ್ಮ ದೇಹದ ರಕ್ತದ ಹರಿವಿನಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಎಂದು ಕರೆಸಿಕೊಂಡ ಹೈ - ಡೆನ್ಸಿಟಿ ಲಿಪಾಪ್ರೋಟೀನ್ ಅಥವಾ ಹೆಚ್ ಡಿ ಎಲ್ ಅಂಶಗಳು ಹೆಚ್ಚಾಗುತ್ತವೆ. ವೈದ್ಯಲೋಕದ ಪ್ರಕಾರ ನಮ್ಮಲ್ಲಿ ಹೆಚ್ ಡಿ ಎಲ್ ಅಂಶಗಳು ಹೆಚ್ಚಾದಷ್ಟು ಹೃದಯ ಹಾಗೂ ಹೃದಯ ರಕ್ತನಾಳದ ಸಮಸ್ಯೆಗಳು ಕಡಿಮೆ ಆಗುತ್ತವೆ.

ತೆಂಗಿನ ಎಣ್ಣೆಯ ಸೇವನೆಯಿಂದ ಲಿಪಿಡ್ ಅಂಶಗಳು ಅಭಿವೃದ್ಧಿ ಹೊಂದುತ್ತವೆ : -

ತೆಂಗಿನ ಎಣ್ಣೆಯ ಸೇವನೆಯಿಂದ ಲಿಪಿಡ್ ಅಂಶಗಳು ಅಭಿವೃದ್ಧಿ ಹೊಂದುತ್ತವೆ : -

ನಮ್ಮ ದೇಹದಲ್ಲಿ ಲಿಪಿಡ್ ಅಂಶಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ನಮ್ಮ ಹೃದಯಕ್ಕೆ ಸಂಬಂಧ ಪಟ್ಟಂತೆ ಇವುಗಳ ಕಾರ್ಯವನ್ನು ನಾವು ಮರೆಯುವಂತಿಲ್ಲ. ನಿತ್ಯ ನಿಯಮಿತವಾಗಿ ತೆಂಗಿನ ಎಣ್ಣೆಯನ್ನು ನಮ್ಮ ಪ್ರತಿ ದಿನದ ಅಡುಗೆ ಪದಾರ್ಥಗಳಲ್ಲಿ ಬಳಕೆ ಮಾಡುತ್ತಾ ಬಂದರೆ ಕ್ರಮೇಣವಾಗಿ ನಮ್ಮ ರಕ್ತದಲ್ಲಿನ ಲಿಪಿಡ್ ಮಟ್ಟಗಳು ಏರಿಕೆ ಕಂಡು ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಈ ಮಾತನ್ನು ನಾವು ಹೇಳುತ್ತಿಲ್ಲ. ಬದಲಾಗಿ ಸಂಶೋಧಕರು ತೆಂಗಿನ ಎಣ್ಣೆಯ ಮೇಲೆ ಕೈಗೊಂಡ ಸಂಶೋಧನೆಯಲ್ಲಿ ತಮ್ಮ ಅಧ್ಯಯನಕ್ಕಾಗಿ ಬಳಕೆ ಮಾಡಿಕೊಂಡ ಸುಮಾರು 90 ಕ್ಕೂ ಅಧಿಕ ಜನರ ವೈದ್ಯಕೀಯ ರಿಪೋರ್ಟ್ ಗಳು ಹೇಳುತ್ತಿವೆ.

ಅಧ್ಯಯನಗಳು ಏನು ಹೇಳುತ್ತವೆ?

ಅಧ್ಯಯನಗಳು ಏನು ಹೇಳುತ್ತವೆ?

ಅಧ್ಯಯನಕ್ಕಾಗಿ ಬಳಸಿಕೊಂಡ ಜನರಲ್ಲಿ ಕೆಲವರಿಗೆ ಸುಮಾರು ಒಂದು ತಿಂಗಳ ಕಾಲ ಪ್ರತಿ ದಿನ 50 ಗ್ರಾಂ ತೆಂಗಿನ ಎಣ್ಣೆ, ಇನ್ನು ಕೆಲವರಿಗೆ ಶುದ್ಧ ಹಸುವಿನ ಬೆಣ್ಣೆ ಮತ್ತು ಇನ್ನಿತರಿಗೆ ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ ಸೇವಿಸಲು ಹೇಳಿದರು.

ಮೇಲೆ ಹೇಳಿದವರ ಆಹಾರ ಪದ್ಧತಿಯಲ್ಲಿ ಯಾರು ಕೋಕನಟ್ ಆಯಿಲ್ ಬಳಕೆ ಮಾಡಿದ್ದರು ಅವರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂದರೆ ಹೆಚ್ ಡಿ ಎಲ್ ಕೊಲೆಸ್ಟ್ರಾಲ್ ಗಣನೀಯ ಪ್ರಮಾಣದಲ್ಲಿ ಏರಿಕೆಯಾದ ಬಗ್ಗೆ ಮಾಹಿತಿ ಲಭ್ಯವಾಯಿತು. ಬೆಣ್ಣೆ ಮತ್ತು ಎಕ್ಸ್ಟ್ರಾ ವಿರ್ಜಿನ್ ಆಲಿವ್ ಆಯಿಲ್ ಸೇವನೆ ಮಾಡಿದ್ದವರ ಲಿಪಿಡ್ ಪ್ರೊಫೈಲ್ ಪರೀಕ್ಷೆ ಮಾಡಿದಾಗ ಒಂದು ತಿಂಗಳ ಹಿಂದಿನ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣಕ್ಕೆ ಹೋಲಿಸಿದರೆ ಈಗಲೂ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ. ಅದೇ ರೀತಿ ಅವರ ದೇಹದ ತೆಂಗಿನ ಎಣ್ಣೆಯ ಬಳಕೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಅಂಶ ಎನಿಸಿಕೊಂಡ ಎಲ್ ಡಿ ಎಲ್ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿರಲಿಲ್ಲ ಎಂಬುದು ಸಮಾಧಾನಕರ ಸಂಗತಿ.

ಬೊಜ್ಜಿನ ಸಮಸ್ಯೆ ಹೊಂದಿದ ಮಹಿಳೆಯ ಫಲಿತಾಂಶ : -

ಬೊಜ್ಜಿನ ಸಮಸ್ಯೆ ಹೊಂದಿದ ಮಹಿಳೆಯ ಫಲಿತಾಂಶ : -

ಈ ಮೊದಲೇ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯ ದೇಹದಲ್ಲಿ ತೆಂಗಿನ ಎಣ್ಣೆಯ ಮತ್ತು ಸೊಯಾಬೀನ್ ಎಣ್ಣೆಯ ನಿತ್ಯ ನಿಯಮಿತವಾದ ಬಳಕೆಯಿಂದ ಕಂಡು ಬಂದ ಫಲಿತಾಂಶ ಆಶ್ಚರ್ಯದಾಯಕವಾಗಿತ್ತು. ಅದೇನೆಂದರೆ ಆಕೆಯ ದೇಹದಲ್ಲಿ ತೆಂಗಿನ ಎಣ್ಣೆ ಹೆಚ್ ಡಿ ಎಲ್ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚು ಮಾಡಿದರೆ, ಸೋಯ ಬೀನ್ ಎಣ್ಣೆ, ಎಲ್ ಡಿ ಎಲ್ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚು ಮಾಡಿತ್ತು ಜೊತೆಗೆ ದೇಹದಲ್ಲಿರುವ ಸೋಯಾಬಿನ್ ಎಣ್ಣೆ ಸೇವನೆ ಮಾಡಿದಾಗ ಆಕೆಯ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಚ್ ಡಿ ಎಲ್ ಅಂಶ ತಗ್ಗಿ ಹೋಗಿತ್ತು.

ಹಿಂದೆ ನಡೆದ ಅಧ್ಯಯನದಲ್ಲಿ ಸಂಪೂರ್ಣವಾಗಿ ಇದಕ್ಕೆ ವಿರುದ್ಧವಾಗಿ ಫಲಿತಾಂಶಗಳು ಬಂದಿದ್ದವು. ಅದೇನೆಂದರೆ ಪಾಲಿ ಅನ್ ಸ್ಯಾಚುರೇಟೆಡ್ ಫ್ಯಾಟ್ ಅಂಶಗಳನ್ನು ಒಳಗೊಂಡ ಸನ್ ಫ್ಲವರ್ ಆಯಿಲ್ ಗೆ ಹೋಲಿಸಿದರೆ ಕೋಕನಟ್ ಆಯಿಲ್ ಕೆಲವರ ದೇಹದಲ್ಲಿ ಎಲ್ ಡಿ ಎಲ್ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚು ಮಾಡಿತ್ತು.

ಹಾಗಾಗಿ ಈ ಎರಡು ಬಗೆಯ ಅಧ್ಯಯನದ ಸರಾಸರಿ ತೆಗೆದುಕೊಂಡಾಗ ತಿಳಿದು ಬಂದ ಒಂದು ಅಂಶ ಏನೆಂದರೆ ತೆಂಗಿನ ಎಣ್ಣೆ ಸ್ಯಾಚುರೇಟೆಡ್ ಫ್ಯಾಟ್ ಅಂಶಗಳನ್ನು ಒಳಗೊಂಡ ಬೆಣ್ಣೆ ಅಥವಾ ಸೋಯಾಬಿನ್ ಆಯಿಲ್ ಗೆ ಹೋಲಿಸಿದರೆ ನಮ್ಮ ಹೃದಯದ ವಿಚಾರದಲ್ಲಿ ಸಾಕಷ್ಟು ಅನುಕೂಲಕರ ಎಂದು.

ತೆಂಗಿನೆಣ್ಣೆ ಬಳಕೆಯಿಂದ ತೂಕ ನಿರ್ವಹಣೆ ಸಾಧ್ಯವೇ, ಇಲ್ಲವೇ?

ತೆಂಗಿನೆಣ್ಣೆ ಬಳಕೆಯಿಂದ ತೂಕ ನಿರ್ವಹಣೆ ಸಾಧ್ಯವೇ, ಇಲ್ಲವೇ?

ಕೆಲವು ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ತೆಂಗಿನ ಎಣ್ಣೆಯನ್ನು ಪ್ರತಿ ದಿನ ಬಳಕೆ ಮಾಡಿದವರಲ್ಲಿ ಅವರ ದೇಹದ ತೂಕ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾದ ಉದಾಹರಣೆಗಳಿವೆ.

ಅಧ್ಯಯನಕ್ಕಾಗಿ ಬಳಸಿಕೊಂಡ ಸುಮಾರು 40 ಮಹಿಳೆಯರಲ್ಲಿ ಸೋಯಾಬೀನ್ ಆಯಿಲ್ ಬೆಳಗ್ಗೆ ಮಾಡುತ್ತಿದ್ದ ಮಹಿಳೆಯರಿಗೆ ಹೋಲಿಸಿದರೆ ಕೋಕನಟ್ ಆಯಿಲ್ ಬಳಕೆ ಮಾಡುತ್ತಿದ್ದ ಮಹಿಳೆಯರಿಗೆ ಅವರ ಸೊಂಟದ ಸುತ್ತಳತೆ ಕಡಿಮೆಯಾಗಿದ್ದುದು ಕಂಡು ಬಂದಿತು. ಇನ್ನು ಕೆಲವು ಮಹಿಳೆಯರಲ್ಲಿ ಎಕ್ಸ್ಟ್ರಾ ವಿರ್ಜನ್ ಕೋಕನಟ್ ಆಯಿಲ್ ಬಳಕೆಯಿಂದ ಹೊಟ್ಟೆ ಹಸಿವು ಸಾಕಷ್ಟು ನಿಯಂತ್ರಣಕ್ಕೆ ಬಂದಿತ್ತು.

ಸಂಶೋಧಕರು ಇದಕ್ಕೆ ಕಾರಣಗಳನ್ನು ಹುಡುಕಿದಾಗ ತೆಂಗಿನ ಎಣ್ಣೆಯಲ್ಲಿ ಮೀಡಿಯಂ ಚೈನ್ ಫ್ಯಾಟಿ ಆಸಿಡ್ ಅಂಶಗಳು ಸಾಕಷ್ಟಿದ್ದ ಕಾರಣ ದೇಹದ ತೂಕ ನಿಯಂತ್ರಣಗೊಳ್ಳಲು ಸಾಧ್ಯವಾಯಿತು ಎಂದು ತಿಳಿದು ಬಂದಿದೆ.

ಆದರೆ ವಿಜ್ಞಾನಿಗಳು ಮಾತ್ರ ಈ ವಿಚಾರವನ್ನು ಅಲ್ಲಗಳೆದಿದ್ದಾರೆ. ಕೇವಲ ಮೀಡಿಯಂ ಚೈನ್ ಫ್ಯಾಟಿ ಆಸಿಡ್ ಅಂಶಗಳ ವಿಚಾರ ಇಟ್ಟುಕೊಂಡು ಒಬ್ಬ ಮನುಷ್ಯನ ಆರೋಗ್ಯವನ್ನು ತೆಂಗಿನ ಎಣ್ಣೆ ಕಾಪಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಇದರ ಬಗ್ಗೆ ಇನ್ನಷ್ಟು ಆಳವಾದ ಸಂಶೋಧನೆ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

ತೆಂಗಿನ ಎಣ್ಣೆಯ ಐತಿಹಾಸಿಕ ಬಳಕೆ : -

ತೆಂಗಿನ ಎಣ್ಣೆಯ ಐತಿಹಾಸಿಕ ಬಳಕೆ : -

ನಮ್ಮ ಭಾರತ ದೇಶದಲ್ಲಿ ತೆಂಗಿನ ಬೆಳೆ ಬಹಳ ಹಿಂದಿನ ವರ್ಷಗಳಿಂದ ಅಪಾರ ಪ್ರಮಾಣದಲ್ಲಿ ಅಭಿವೃದ್ಧಿ ಕಾಣುತ್ತಿದೆ. ಹೀಗಿರುವಾಗ ಇಲ್ಲಿನ ಜನರು ಪಾಶ್ಚಿಮಾತ್ಯ ದೇಶದ ಜನರಿಗೆ ಹೋಲಿಸಿದರೆ ಬಹಳ ಹಿಂದಿನಿಂದಲೂ ತೆಂಗಿನ ಎಣ್ಣೆಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಮತ್ತು ಅಡುಗೆ ಪದಾರ್ಥಗಳ ತಯಾರಿಯಲ್ಲಿ ಬಳಕೆ ಮಾಡುತ್ತಾ ಬಂದಿದ್ದಾರೆ. ಅನೇಕರಿಗೆ ಕೋಕನಟ್ ಆಯಿಲ್ ಬಳಕೆ ಮಾಡಿದ ನಂತರ ತಮ್ಮ ದೇಹದಲ್ಲಿ ಕ್ಯಾಲೊರಿ ಅಂಶಗಳು ಈ ಹಿಂದಿಗಿಂತ ಹೆಚ್ಚಾದ ಉದಾಹರಣೆಗಳು ಸಾಕಷ್ಟಿವೆ.

ತೆಂಗಿನ ಎಣ್ಣೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬಿನ ಅಂಶಗಳು ಇದ್ದರೂ ಕೂಡ ಕೋಕನಟ್ ಆಯಿಲ್ ನಿಯಮಿತವಾಗಿ ಸೇವನೆ ಮಾಡಿದ ಹಲವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಕಾಣುತ್ತಿರಲಿಲ್ಲ ಮತ್ತು ಇತರರಿಗೆ ಹೋಲಿಸಿದರೆ ಎಲ್ಲಾ ಆಯಾಮಗಳಲ್ಲಿ ಸಾಕಷ್ಟು ಆರೋಗ್ಯದಿಂದ ಜೀವನ ನಡೆಸುತ್ತಿದ್ದರು. ಅವರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ಪಟ್ಟಾಗ ಕಂಡು ಬಂದ ಒಂದು ವಿಚಾರ ಎಂದರೆ ಅವರು ಉತ್ತಮವಾದ ಆರೋಗ್ಯಕರ ಜೀವನ ಶೈಲಿಯನ್ನು ಹೊಂದಿದ್ದರು. ಸಂಸ್ಕರಿಸಿದ ಆಹಾರಗಳನ್ನು ಸಂಪೂರ್ಣವಾಗಿ ಕೈ ಬಿಟ್ಟು ಹೆಚ್ಚು ಹಣ್ಣು - ತರಕಾರಿಗಳನ್ನು ಮತ್ತು ಸಮುದ್ರಾಹಾರಗಳನ್ನು ಸೇವನೆ ಮಾಡುತ್ತಿದ್ದರು. ಆಗಾಗ ನಿಯಮಿತವಾಗಿ ಹಸಿ ತೆಂಗಿನ ಕಾಯಿಗಳನ್ನು, ತಾಜಾ ಎಳನೀರುಗಳನ್ನು ಮತ್ತು ತಾವೇ ನೈಸರ್ಗಿಕ ಪದ್ಧತಿಯ ಮೂಲಕ ಸ್ವತಹ ತಯಾರು ಮಾಡಿದ ತೆಂಗಿನಕಾಯಿಯ ಎಣ್ಣೆ ಮತ್ತು ಬೆಣ್ಣೆ ಸೇವನೆ ಮಾಡುತ್ತಿದ್ದರು. ಹಾಗಾಗಿ ಅವರ ದೇಹಕ್ಕೆ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಫ್ಯಾಟ್ ಅಂಶಗಳು ಸೇರಿದರೂ ಕೂಡ ತುಂಬಾ ಆರೋಗ್ಯದಿಂದ ಕೂಡಿರುತ್ತಿದ್ದರು.

ಇದರಿಂದ ತಿಳಿದು ಬರುವ ಒಂದು ಅಂಶ ಏನೆಂದರೆ ಕೇವಲ ತೆಂಗಿನಕಾಯಿಯ ಪದಾರ್ಥಗಳ ಸೇವನೆ ಮಾಡುವ ಮೂಲಕ ಆರೋಗ್ಯದಿಂದ ಇರಲು ಸಾಧ್ಯವಿಲ್ಲ. ಬದಲಿಗೆ ಉತ್ತಮವಾದ ಜೀವನ ಶೈಲಿಯ ಅಭ್ಯಾಸ ಕೂಡ ಲೆಕ್ಕಕ್ಕೆ ಬರುತ್ತದೆ. ಪ್ರತಿ ದಿನವೂ ವ್ಯಾಯಾಮ ಮಾಡುವುದು, ಆರೋಗ್ಯಕರವಾದ ಆಹಾರ ಸೇವನೆ ಮಾಡುವುದು ಕೋಕನಟ್ ಆಯಿಲ್ ಬಳಕೆ ಮಾಡುವವರಿಗೆ ತುಂಬಾ ಮುಖ್ಯವಾಗುತ್ತದೆ.

ಕೊನೆ ಮಾತು : -

ಕೊನೆ ಮಾತು : -

ಕೋಕನಟ್ ಆಯಿಲ್ ಬಳಕೆಯ ಬಗ್ಗೆ ಈಗಲೂ ಜನರಲ್ಲಿ, ವಿಜ್ಞಾನಿಗಳಲ್ಲಿ ಹಾಗೂ ಸಂಶೋಧನಾಕಾರರಲ್ಲಿ ಅನುಮಾನವಿದೆ. ನಿತ್ಯ ನಿಯಮಿತವಾಗಿ ಸೇವನೆ ಮಾಡುವುದರಿಂದ ಇದರಿಂದ ಯಾವುದೇ ಹಾನಿಯಿಲ್ಲ ಎಂದು ಹೇಳುವುದು ಕಷ್ಟ.

ನಿಮ್ಮ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದರೂ ಹೃದಯದ ಸಮಸ್ಯೆಯ ಮೇಲೆ ಇದರ ಪರಿಣಾಮ ಹೇಗಿರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಲಾರಿಕ್ ಆಸಿಡ್ ಅಂಶದ ಪ್ರಮಾಣ ಇದರಲ್ಲಿ ಹೆಚ್ಚಾಗಿರುವ ಕಾರಣ ಕೋಕನಟ್ ಆಯಿಲ್ ಬಳಕೆಯಿಂದ ನಮ್ಮ ಆರೋಗ್ಯಕ್ಕೆ ಪ್ರಯೋಜನಗಳಿವೆಯೆಂದು ಗೊಂದಲದ ಭಾವನೆಯಿಂದಲೇ ಊಹೆ ಮಾಡಬಹುದು.

ಆದ್ದರಿಂದ ಒಂದು ವೇಳೆ ನೀವು ಇನ್ನು ಮುಂದೆ ಕೋಕನಟ್ ಆಯಿಲ್ ಬಳಕೆ ಮಾಡುತ್ತೀರಿ ಎಂದಾದರೆ ಸಾಧ್ಯವಾದಷ್ಟು ಮಿತಿಯಲ್ಲಿ ಬಳಕೆ ಮಾಡಿ. ಒಂದು ವೇಳೆ ಯಾವುದಾದರೂ ಅಡ್ಡ ಪರಿಣಾಮಗಳು ಕಂಡು ಬಂದರೆ ತಕ್ಷಣವೇ ನಿಮ್ಮ ಮೊದಲಿನ ಅಡುಗೆ ಎಣ್ಣೆಯ ಬಳಕೆಗೆ ಬದಲಾಗಿ.

English summary

Health Benefits of Coconut Oil in kannada

Are you have doubt weather to use coconut oil for food or not read this article, you will come to conclusion.
X
Desktop Bottom Promotion