For Quick Alerts
ALLOW NOTIFICATIONS  
For Daily Alerts

ನೆಲಬೇವು: ಮಧುಮೇಹಕ್ಕೂ ಸೇರಿ ಇದರಲ್ಲಿದೆ 12 ಔಷಧೀಯ ಗುಣಗಳು

|

"ಕಾಲಮೇಘ" ಅಥವಾ ನೆಲ ಬೇವು ಅಂದಾಕ್ಷಣ "ಕಾಲಮೇಘ ಅಂದ್ರೆ ಏನು?" ಅನ್ನೋ ರೀತಿಯಲ್ಲಿ ಹುಬ್ಬೇರಿಸೋರೇ ಜಾಸ್ತಿ. ಕಾಲಮೇಘದ ಪರಿಚಯ ಇರೋರ ಹತ್ರ ಈ ಹೆಸರೆತ್ತಿದ್ರೆ, ಅದರ ಕಹಿಯನ್ನ ನೆನೆಸಿಕೊಂಡು ಅವರು ಮುಖ ಕಿವುಚಿಕೊಂಡಾರು. ಆದರೆ ಕಾಲಮೇಘದ ಸೇವನೆಯಿಂದ ಆಗೋ ಪ್ರಯೋಜನಗಳು ಅವರ ಮನಸ್ಸಿಗೆ ಬಂದ ತಕ್ಷಣ ಅವರ ಮುಖದ ಬಿಗು ಸಡಿಲವಾಗಿ ಮಂದಹಾಸ ಮೂಡೀತು. ಯಾಕಂದ್ರೆ ಕಾಲಮೇಘದ ಆರೋಗ್ಯ ಲಾಭಗಳು ಒಂದಲ್ಲ, ಎರಡಲ್ಲ, ಹಲವಾರು.....

ಆ ಪ್ರಯೋಜನಗಳು ಏನೇನು ಅಂತಾ ಈಗ ಒಂದೊಂದಾಗಿ ನೋಡೋಣ, ಬನ್ನಿ.....

ಕಾಲಮೇಘದ ವೈಜ್ಞಾನಿಕ ಹೆಸರು ಆಂಡ್ರೋಗ್ರಾಫಿಸ್ ಪನಿಕ್ಯುಲಾಟಾ ಅಂತಾ. ನಿರ್ಧಿಷ್ಟ ಋತುವಿನಲ್ಲಿ ಬೆಳೆಯುವ ಕಾಲಮೇಘ ಅನ್ನೋ ಈ ಮೂಲಿಕೆಗೆ ಭಾರತದ ಮತ್ತು ಶ್ರೀಲಂಕಾ ತವರೂರು. ಶೀತ, ಜ್ವರ, ಮಧುಮೇಹ, ಅಧಿಕ ರಕ್ತದೊತ್ತಡ, ಹುಣ್ಣು, ಶ್ವಾಸನಾಳಗಳ ಉರಿಯೂತ, ಚರ್ಮ ರೋಗಗಳು, ಆಮಶಂಕೆ, ಮತ್ತು ಮಲೇರಿಯಾಗಳಂತಹ ಖಾಯಿಲೆಗಳ ಆರೈಕೆ ಮಾಡಲು ಬಳಸಲ್ಪಡುವ ಅತ್ಯಂತ ಜನಪ್ರಿಯ ಜೌಷಧೀಯ ಮೂಲಿಕೆಯೇ ಈ ಕಾಲಮೇಘ. ಇವೆಲ್ಲದರ ಜೊತೆಗೆ ಭಾರತೀಯ ಜೌಷಧ ಪದ್ಧತಿಯಲ್ಲಿ ಕಾಲಮೇಘಾನಾ ಅದರ ಉರಿಶಾಮಕ, ಬ್ಯಾಕ್ಟೀರಿಯಾ ನಿವಾರಕ, ವೈರಾಣು ನಿವಾರಕ ಹಾಗೂ ರೋಗನಿರೋಧಕ ಶಕ್ತಿಯ ಉದ್ಧೀಪಕ ಗುಣಗಳಿಗಾಗಿ ಅದನ್ನ ವ್ಯಾಪಕವಾಗಿ ಬಳಸಿಕೊಳ್ಳಲಾಗತ್ತೆ.

ಇವಿಷ್ಟೇ ಅಲ್ಲ, ಉತ್ತಮ ರೋಗನಿರೋಧಕ ಶಕ್ತಿಗಾಗಿ ಹಾಗೂ ಶ್ವಾಸಕಾಂಗ ವ್ಯೂಹದ ಆರೋಗ್ಯವನ್ನ ಸುಸ್ಥಿತಿಯಲ್ಲಿಟ್ಟುಕೊಳ್ಳುವುದಕ್ಕಾಗಿಯೂ ಸಾಂಪ್ರದಾಯಿಕ ರೀತಿಯಲ್ಲಿ ಕಾಲಮೇಘವನ್ನ ಬಳಕೆ ಮಾಡ್ತಾರೆ. ಜೊತೆಗೆ, ದೇಹದ ಉಷ್ಣತೇನಾ ಸರಿಯಾದ ರೀತಿಯಲ್ಲಿ ಕಾಪಿಟ್ಟುಕೊಳ್ಳೋದಕ್ಕೂ ಕಾಲಮೇಘ ಬಲು ಪ್ರಯೋಜನಕಾರಿ.

ಇವುಗಳ ಹೊರತಾಗಿಯೂ ಕಾಲಮೇಘದ ಇನ್ನಿತರ ಪ್ರಮುಖ ಪ್ರಯೋಜನಗಳನ್ನ ಇಲ್ಲಿ ಕೆಳಗೆ ಪಟ್ಟಿ ಮಾಡಿದ್ದೀವಿ, ನೋಡಿ....

1. ನೆಗಡಿ ನಿವಾರಣೆಗೆ ಬಹಳ ಒಳ್ಳೆಯದು

1. ನೆಗಡಿ ನಿವಾರಣೆಗೆ ಬಹಳ ಒಳ್ಳೆಯದು

ಕಾಲಮೇಘದಂತಹ ಗಿಡಮೂಲಿಕೆಯನ್ನು ಕುದಿಸಿ ಆ ನೀರು ಸೇವಿಸಿದರೆ ಕೆಮ್ಮು ಮತ್ತು ಗಂಟಲು ನೋವು ನಿವಾರಣೆಯಾಗುತ್ತದೆ.

2. ಅಸಹನೀಯ ಸಂಧಿವಾತವನ್ನು ಉಪಶಮನಗೊಳಿಸುತ್ತದೆ

2. ಅಸಹನೀಯ ಸಂಧಿವಾತವನ್ನು ಉಪಶಮನಗೊಳಿಸುತ್ತದೆ

ಕೆಲವರಿಗೆ ಮೊಣಕಾಲಿನಲ್ಲಿ ಸಾಧಾರಣದಿಂದ ತುಸು ಹೆಚ್ಚೇ ಅನ್ನಿಸುವುದರ ಮಟ್ಟಿಗೆ ನೋವು ಮತ್ತು ಸೆಳೆತ ಇರುತ್ತದೆ. ಅಂತಹವರು ಈ ಆಂಡ್ರೋಗ್ರಾಫಿಸ್ ನ ಸಾರವನ್ನ ಪ್ರತಿದಿನ ತೆಗೆದುಕೊಳ್ಳುತ್ತಾ ಬಂದಲ್ಲಿ ಅವರ ಮೊಣಕಾಲಿನ ನೋವು ಮತ್ತು ಸೆಳೆತ ಬಹಳಷ್ಟು ಕಡಿಮೆಯಾಗುತ್ತದೆ.

3. ಆಂಟಿ-ಆಕ್ಸಿಡೆಂಟ್ ಗಳಿಗಾಗಿ ಎಲ್ಲೆಲ್ಲೋ ಹುಡುಕಾಡೋದು ಬೇಕಿಲ್ಲ

3. ಆಂಟಿ-ಆಕ್ಸಿಡೆಂಟ್ ಗಳಿಗಾಗಿ ಎಲ್ಲೆಲ್ಲೋ ಹುಡುಕಾಡೋದು ಬೇಕಿಲ್ಲ

ಕಾಲಮೇಘದಲ್ಲಿ ಆಂಟಿ-ಆಕ್ಸಿಡೆಂಟ್ ಗಳು ಮತ್ತು ಫ಼ಾಲಿಫ಼ೆನಾಲ್ ಗಳು ಅಗಾಧವಾಗಿವೆ. ನಮ್ಮ ದೇಹದಲ್ಲಿರೋ ಹಾನಿಕಾರಕ ಮುಕ್ತ ರಾಡಿಕಲ್ ಗಳ ವಿರುದ್ಧ ಸೆಣಸುವುದೇ ಇವುಗಳ ಕೆಲಸ. ಹೀಗಾದಾಗ, ನಮ್ಮ ಶರೀರದ ಜೀವಕೋಶಗಳು ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಾಣುಗಳಿಂದ ರಕ್ಷಿಸಲ್ಪಡುತ್ತವೆ.

4. ನೆಲಬೇವು ಉರಿ-ಶಮನಕಾರಕ

4. ನೆಲಬೇವು ಉರಿ-ಶಮನಕಾರಕ

ಕಾಲಮೇಘವು ಸೋಂಕುಗಳ ವಿರುದ್ಧ ಪರಿಣಾಮಕಾರಿಯಾಗಿ ನಮ್ಮ ದೇಹವನ್ನ ಸಂರಕ್ಷಿಸುತ್ತದೆ. ಇದು ಹೇಗೆ ಸಾಧ್ಯ ಎನ್ನುವಿರೋ ? ಅದಕ್ಕೆ ಕಾರಣ ಕಾಲಮೇಘದ ಭರಪೂರ ಉರಿ-ಶಮನಕಾರಕ ಅರ್ಥಾತ್ ಆಂಟಿ-ಇನ್ಫ಼್ಲಮೇಟರಿ ಗುಣಧರ್ಮಗಳು. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕಾಲಮೇಘವು ಹಾನಿಗೀಡಾದ ಶರೀರದ ಅಂಗಾಂಶಗಳನ್ನ ದುರಸ್ತಿಗೊಳಿಸುತ್ತದೆ. ಇದಂತೂ ಕಾಲಮೇಘದ ಬಲು ಪ್ರಯೋಜನಕಾರೀ ಗುಣಧರ್ಮ. ಶರೀರದ ಉರಿಯೂತದಿಂದ ತಲೆದೋರಿದ ಬಾವು ಮತ್ತು ನೋವನ್ನೂ ಕಾಲಮೇಘವು ಉಪಶಮನಗೊಳಿಸುತ್ತದೆ.

5.

5. "ಹಸಿವಿಲ್ಲ" ಅನ್ನುತ್ತಿದ್ದವರು ಇದರ ಸೇವನೆ ಮಾಡಿ

ಹೌದು, ಇದು ನಿಜ. ಏಕೆಂದರೆ ಕಾಲಮೇಘಕ್ಕೆ ಜೀರ್ಣಾಂಗವ್ಯೂಹದ ಕಾರ್ಯವೈಖರಿಯನ್ನು ಸುಧಾರಿಸುವ ಶಕ್ತಿ ಇದೆ. ಜೊತೆಗೆ, ಕಾಲಮೇಘವು ಸ್ವಭಾವತ: ಉಷ್ಣಪ್ರಕೃತಿಯದ್ದಾಗಿರೋದ್ರಿಂದ ಜಠರಾಗ್ನಿಯನ್ನು ಉದ್ದೀಪಿಸುತ್ತೆ ಮತ್ತೆ ಹಾಗೇನೇ ಯಕೃತ್ತಿನ (ಲಿವರ್) ಕಾರ್ಯವೈಖರಿಯನ್ನೂ ಸುಧಾರಿಸುತ್ತದೆ.

6. ಯಕೃತ್ತಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು

6. ಯಕೃತ್ತಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಈಗಾಗಲೇ ಹೇಳಿರೋ ಪ್ರಕಾರ, ಕಾಲಮೇಘದಲ್ಲಿ ಆಂಟಿ-ಆಕ್ಸಿಡೆಂಟ್, ಉರಿಶಮನಕಾರಕ, ಹಾಗೂ ಯಕೃತ್-ರಕ್ಷಕ ಗುಣಧರ್ಮಗಳಿವೆ. ಆದ್ದರಿಂದಲೇ ಈ ಕಾಲಮೇಘವು ಶರೀರದ ಮುಕ್ತ ರಾಡಿಕಲ್ ಗಳನ್ನು ನಿವಾರಿಸುವಲ್ಲಿ ಸಶಕ್ತವಾಗಿದೆ ಹಾಗೂ ಆ ಮೂಲಕ ಯಕೃತ್ತಿನ ಅಥವ ಪಿತ್ತಕೋಶದ ಹಾನಿಯನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.

7. ಕರುಳಿನ ಜಂತುಗಳನ್ನೂ ಕೊಲ್ಲುತ್ತದೆ ಈ ಕಾಲಮೇಘ!

7. ಕರುಳಿನ ಜಂತುಗಳನ್ನೂ ಕೊಲ್ಲುತ್ತದೆ ಈ ಕಾಲಮೇಘ!

ತನ್ನ ಕಹಿರುಚಿಯ ಕಾರಣದಿಂದಾಗಿ ಕಾಲಮೇಘವು ಕರುಳಿಗೆ ಹಾನಿಯನ್ನುಂಟು ಮಾಡುವ ಜಂತುಗಳನ್ನು ಕೊಲ್ಲುತ್ತದೆ ಹಾಗೂ ಆ ಮೂಲಕ ಕರುಳಿನ ಆರೋಗ್ಯವನ್ನ ಕಾಪಾಡುತ್ತದೆ.

8. ಮೊಡವೆಗಳನ್ನೂ ನಿವಾರಿಸುತ್ತದೆ ಕಾಲಮೇಘ!!

8. ಮೊಡವೆಗಳನ್ನೂ ನಿವಾರಿಸುತ್ತದೆ ಕಾಲಮೇಘ!!

ಕಾಲಮೇಘದಲ್ಲಿ ಆಂಟಿ-ಬ್ಯಾಕ್ಟೀರಿಯಲ್ ಮತ್ತು ಆಂಟಿ-ಮೈಕ್ರೋಬಿಯಲ್ ಗುಣಲಕ್ಷಣಗಳಿವೆ. ಆದ್ದರಿಂದ, ಅದು ತ್ವಚೆಗೆ ಸಂಬಂಧಿಸಿದ ತೊಂದರೆಗಳನ್ನೂ ನಿವಾರಿಸುವ ಸಾಮರ್ಥ್ಯ ಹೊಂದಿದೆ. ಮುಕ್ತ ರಾಡಿಕಲ್ ಗಳೊಂದಿಗೆ ಸೆಣಸಲು ಬೇಕಾದ ಆಂಟಿ-ಆಕ್ಸಿಡೆಂಟ್ ಗಳು ಕಾಲಮೇಘದಲ್ಲಿ ಹೇರಳವಾಗಿರೋದ್ರಿಂದ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.

9. ಕಾಲಮೇಘದಲ್ಲಿ ಆ್ಯಂಟಿ-ಬ್ಯಾಕ್ಟೀರಿಯಲ್ ಗುಣಲಕ್ಷಣಗಳಿವೆ

9. ಕಾಲಮೇಘದಲ್ಲಿ ಆ್ಯಂಟಿ-ಬ್ಯಾಕ್ಟೀರಿಯಲ್ ಗುಣಲಕ್ಷಣಗಳಿವೆ

ಬ್ಯಾಕ್ಟೀರಿಯಾದಿಂದ ತಲೆದೋರುವ ಸೋಂಕುಗಳು ಪದೇ ಪದೇ ನಿಮ್ಮನ್ನು ಕಾಡುತ್ತವೆಯೇ ? ಹಾಗಿದ್ದಲ್ಲಿ ಕಾಲಮೇಘವು ನಿಮಗೆ ಹೇಳಿಮಾಡಿಸಿದ್ದೇ ಆಗಿದೆ. ಏಕೆಂದರೆ ಕಾಲಮೇಘಕ್ಕೆ ಆಮಶಂಕೆಯನ್ನು ಉಪಶಮನಗೊಳಿಸುವ ಮತ್ತು ಹಾಗೇನೇ ಬ್ಯಾಕ್ಟೀರಿಯಾ ಸೋಂಕುಗಳಿಂದ ಕಾಣಿಸಿಕೊಳ್ಳುವ ರೋಗಲಕ್ಷಣಗಳನ್ನು ಮಟ್ಟಹಾಕುವ ಸಾಮರ್ಥ್ಯವಿದೆ.

10. ಮಧುಮೇಹಿಗಳಿಗೆ ಕಾಲಮೇಘವು ಒಳ್ಳೆಯ ಪರಿಹಾರ

10. ಮಧುಮೇಹಿಗಳಿಗೆ ಕಾಲಮೇಘವು ಒಳ್ಳೆಯ ಪರಿಹಾರ

ಕಾಲಮೇಘದಲ್ಲಿರುವ ಆಂಡ್ರೋಗ್ರಾಫ಼ೋಲೈಡ್ ರಕ್ತದ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ಜೊತೆಗೆ, ಮೇದೋಜೀರಕ ಗ್ರಂಥಿಯ ಕೋಶಗಳಿಂದ ಇನ್ಸುಲಿನ್ ನ ಬಿಡುಗಡೆಯಲ್ಲಿಯೂ ನೆರವಾಗುತ್ತದೆ. ಹೀಗಾದಾಗ ಶರೀರದಲ್ಲಿನ ಗ್ಲುಕೋಸ್ ಸಮರ್ಪಕವಾಗಿ ಬಳಸಿಕೊಳ್ಳಲ್ಪಡುತ್ತದೆ. ಮೊದಲೇ ಹೇಳಿದ ಹಾಗೆ, ಕಾಲಮೇಘದಲ್ಲಿ ಆಂಟಿ-ಆಕ್ಸಿಡೆಂಟ್ ಗಳು ದಂಡಿಯಾಗಿರುವುದರಿಂದ ಅದು ಮಧುಮೇಹದಿಂದಾಗುವ ಅನಾಹುತಗಳ ಅಪಾಯವನ್ನೂ ತಗ್ಗಿಸುತ್ತದೆ.

11. ರಕ್ತ ಹಾಗೂ ತ್ವಚೆಯ ಶುದ್ಧೀಕರಣಕ್ಕೆ ಬಹಳ ಒಳ್ಳೆಯದು

11. ರಕ್ತ ಹಾಗೂ ತ್ವಚೆಯ ಶುದ್ಧೀಕರಣಕ್ಕೆ ಬಹಳ ಒಳ್ಳೆಯದು

ರಕ್ತವನ್ನು ಶುದ್ಧೀಕರಿಸುವ ಗುಣಧರ್ಮಗಳು ಕಾಲಮೇಘದಲ್ಲಿವೆ ಎಂಬ ಅಂಶ ಅಧ್ಯಯನಗಳಿಂದ ಸಾಬೀತಾಗಿದೆ. ಹೀಗಾಗಿ ಕಾಲಮೇಘವು ರಕ್ತವನ್ನು ಶುದ್ಧೀಕರಿಸಿ ಆ ಮೂಲಕ ತ್ವಚೆಯ ರೋಗಗಳಿಗೆ ಚೆನ್ನಾಗಿ ನಿಭಾಯಿಸುತ್ತದೆ. ಇದಕ್ಕೆ ಕಾರಣ ಕಾಲಮೇಘದ ಕಹಿರುಚಿ ಹಾಗೂ ಪಿತ್ತವನ್ನು ಸಮತೋಲನಗೊಳಿಸುವ ಕಾಲಮೇಘದ ಗುಣಧರ್ಮ.

12. ಕಾಲಮೇಘಕ್ಕೆ ವೈರಾಣು-ಪ್ರತಿಬಂಧಕ ( ಆ್ಯಂಟಿ-ವೈರಲ್) ಗುಣಲಕ್ಷಣಗಳಿವೆ

12. ಕಾಲಮೇಘಕ್ಕೆ ವೈರಾಣು-ಪ್ರತಿಬಂಧಕ ( ಆ್ಯಂಟಿ-ವೈರಲ್) ಗುಣಲಕ್ಷಣಗಳಿವೆ

ಕಾಲಮೇಘದಲ್ಲಿರುವ ಆಂಡ್ರೋಗ್ರಾಫ಼ೋಲೈಡ್ ನಲ್ಲಿ ಆಂಟಿ-ವೈರಲ್ ಗುಣಲಕ್ಷಣಗಳಿವೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ನಿಜ ಹೇಳಬೇಕೆಂದರೆ, ಕೊರೋನಾ ವೈರಾಣುವನ್ನು ಹಿಮ್ಮೆಟ್ಟಿಸುವುದಕ್ಕಾಗಿ ಎಲ್ಲ ವೈದ್ಯರು ಆಂಡ್ರೋಗ್ರಾಫಿಸ್ ಅನ್ನು ಕಡ್ಡಾಯವಾಗಿ ಬಳಸಬೇಕೆಂದು ಚೀನಾ ದೇಶವು ಅಲ್ಲಿನ ವೈದ್ಯರಿಗೆ ತಾಕೀತು ಮಾಡಿದೆ. ಆದಾಗ್ಯೂ, ಕೊರೋನಾದಂತಹ ಮಾರಣಾಂತಿಕ ರೋಗವನ್ನು ಹತ್ತಿಕ್ಕುವಲ್ಲಿ ಈ ಮೂಲಿಕೆಯು ನೆರವಾಗುತ್ತದೆಯೆಂದು ಸಾಬೀತುಪಡಿಸುವ ಯಾವುದೇ ವೈದ್ಯಕೀಯ ಸಾಕ್ಷ್ಯವಿನ್ನೂ ಲಭ್ಯವಿಲ್ಲ.

ಒಟ್ಟಾರೆಯಾಗಿ ಹೇಳಬೇಕೆಂದರೆ, ಇಂದು ಕಾಲಮೇಘವು ಜಗತ್ತಿನಾದ್ಯಂತ ಬಳಕೆಯಾಗುತ್ತಿದೆ. ಇಂದಿಗೂ ಈ ಸಸ್ಯವು ಭಾರತದಲ್ಲಿ ಬೆಳೆಸಲ್ಪಡುತ್ತಿದೆ. ರೋಗನಿರೋಧಕ ಶಕ್ತಿಯ ಉದ್ದೇಶವನ್ನೂ ಮೀರಿ ಇನ್ನೂ ಹಲವು ರೀತಿಯ ಪ್ರಯೋಜನಗಳನ್ನು ಕಂಡುಕೊಂಡಿದೆ ಈ ಕಾಲಮೇಘ. ಕಾಲಮೇಘದ ಶುಷ್ಕ ಹಾಗೂ ಆಳವಾಗಿ ಪ್ರವೇಶಿಸುವ ಗುಣಧರ್ಮಗಳು, ಶ್ವಾಸಕೋಶಗಳಲ್ಲಿ ಸಾಂದ್ರವಾಗಿ ಶೇಖರಗೊಂಡ ಕಫ಼ವನ್ನು ನೀರಾಗಿಸಿ ನಿವಾರಿಸಿಬಿಡುತ್ತವೆ. ಜೊತೆಗೆ ಕಾಲಮೇಘವು ಶರೀರದ ಪಿತ್ತವನ್ನೂ ತಗ್ಗಿಸುತ್ತದೆ ಹಾಗೂ ಎದೆ ಮತ್ತು ತಲೆಯಲ್ಲಿನ ಕಫ಼ವನ್ನೂ ಹೋಗಲಾಡಿಸುತ್ತದೆ. ಈ ಮೂಲಕ ದೇಹದ ಸಹಜ ಉಷ್ಣತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ನೆರವಾಗುತ್ತದೆ.

English summary

Health Benefits Of Bitter Herb Kalmegh In Kannada

Here is amazing health benefits of bitter herb Kalmegh, Read on...
X