For Quick Alerts
ALLOW NOTIFICATIONS  
For Daily Alerts

ಆಟಿ ಕಷಾಯದಲ್ಲಿದೆ ಸರ್ವ ರೋಗಕ್ಕೆ ಮದ್ದು

|

ಆಟಿ ಅಮವಾಸ್ಯೆಯ ದಿನವಾದ ಜುಲೈ 17ರಂದು ತುಳುನಾಡಿನಲ್ಲಿ ಆಟಿ ಕಷಾಯ ಮಾಡಿ ಕುಡಿಯುವ ಪದ್ಧತಿ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಆದರೆ ಆಟಿ ಅಮವಾಸ್ಯೆಯಂದು ಹಾಲೆಮರದ ತೊಗಟೆ ಕೆತ್ತಿ ತಂದು ಅದರಿಂದ ಕಷಾಯ ಮಾಡಿ ಸೇವಿಸುತ್ತಾರೆ. ಇಂದು ಅಲ್ಲಿಯ ದೇವಸ್ಥಾನಗಳಿಗೆ ಹೋದರೆ ಈ ಕಷಾಯ ಕೊಡುತ್ತಾರೆ.

Health Benefits Of Aati Kashaya

ದಕ್ಷಿಣ ಕನ್ನಡದಲ್ಲಿ ಸಾಮೂಹಿಕವಾಗಿ ಕಷಾಯ ಮಾಡಿ ಕುಡಿಯುವ ಪದ್ಧತಿ ಇದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಲಾಗುವುದು. ಮಳೆಗಾಲದಲ್ಲಿ ನಿರಂತರವಾಗಿ ಸುರಿಯುವ ಮಳೆಯಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವುದು. ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡುವ ಗುಣ ಈ ಕಷಾಯದಲ್ಲಿದೆ.

1. ಆಟಿ ಕಷಾಯ ಮಾಡುವುದು ಹೇಗೆ?

1. ಆಟಿ ಕಷಾಯ ಮಾಡುವುದು ಹೇಗೆ?

ಸೂರ್ಯ ಹುಟ್ಟುವ ಮುನ್ನ ಹೋಗಿ ಹಾಲೆ ಮರದ ತೊಗಡೆ ಕೆತ್ತಿ ತರುತ್ತಾರೆ. ನಂತರ ಅದಕ್ಕೆ ಕರಿ ಮೆಣಸು, ಬೆಳ್ಳುಳ್ಳಿ, ಓಮ ಕಾಳು ಸೇರಿಸಿ ಆಟಿ ಕಷಾಯ ಮಾಡಿ ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಲಾಗುವುದು.

ಆಟಿ ಕಷಾಯದಲ್ಲಿರುವ ರೋಗ ನಿರೋಧಕ ಗುಣಗಳು:

2. ಶೀತ ವಾತವರಣ ತಡೆಯುವ ಶಕ್ತಿ ದೇಹಕ್ಕೆ ಸಿಗುವುದು

2. ಶೀತ ವಾತವರಣ ತಡೆಯುವ ಶಕ್ತಿ ದೇಹಕ್ಕೆ ಸಿಗುವುದು

ಹಾಲೆ ಮರದ ಕಷಾಯ ಮಾಡಿ ಕುಡಿಯುವುದರಿಂದ ಶೀತ ವಾತಾವರಣ ತಡೆದುಕೊಳ್ಳುವ ಶಕ್ತಿ ದೊರೆಯುತ್ತದೆ ಹಾಗೂ ಜೀರ್ಣಾಂಗ ವ್ಯೂಹದ ಆರೋಗ್ಯ ಕಾಪಾಡುತ್ತದೆ. ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು ಈ ಕಷಾಯ ಕುಡಿಯುವುದರಿಂದ ದೂರವಾಗುವುದು.

3.ಸರ್ವರೋಗ ನಿವಾರಕ ಔಷಧೀಯ ಗುಣ

3.ಸರ್ವರೋಗ ನಿವಾರಕ ಔಷಧೀಯ ಗುಣ

ಹಾಲೆಮರ ಹಾಲಿನಲ್ಲಿ ಸಸ್ಯ ಕ್ಷಾರದಂತಹ ಔಷಧೀಯ ಗುಣಗಳಿವೆ. ಆದ್ದರಿಂದ ಈ ಕಷಾಯ ಸರ್ವರೋಗ ನಿವಾರಣಾ ಗುಣವಿದೆ. ಹೊಟ್ಟೆನೋವು, ಅತಿಸಾರ, ಸಂಧಿವಾತ, ಮಲೇರಿಯಾ, ಜ್ವರ, ಸ್ತ್ರೀರೋಗ, ಹುಟ್ಟು ಈ ರೀತಿಯ ರೋಗಗಳನ್ನು ಗುಣಪಡಿಸುವ ಶಕ್ತಿ ಈ ಮರದಲ್ಲಿದೆ ಎನ್ನುವುದು ವೈದ್ಯಕೀಯವಾಗಿಯೂ ಸಾಬೀತಾಗಿದ್ದು, ಇದು ಅತ್ಯುತ್ತಮವಾದ ಮನೆಮದ್ದಾಗಿದೆ.

4. ಆಯುರ್ವೇದದಲ್ಲೂ ಹಾಲೇಮರಕ್ಕೆ ಪ್ರಾಶಸ್ತ್ಯ ಇದೆ

4. ಆಯುರ್ವೇದದಲ್ಲೂ ಹಾಲೇಮರಕ್ಕೆ ಪ್ರಾಶಸ್ತ್ಯ ಇದೆ

ಹಾಲೆ ಮರದಲ್ಲಿ ಜ್ವರ, ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಗುಣಪಡಿಸುವ ಹಲವು ಬಗೆಯ ಔಷಧೀಯ ಗುಣವಿದೆ ಆದ್ದರಿಂದ ಇದನ್ನು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ. ಬ್ರಾಹ್ಮೀ ಮುಹೂರ್ತದಲ್ಲಿ ಮರಗಳಲ್ಲಿ ಉದ್ದೇಶಿತ ಗುಣಗಳು ಹೆಚ್ಚಿಗೆ ಇರುವುದರಿಂದ ಇದರ ತೊಗಟೆಯನ್ನು ಸೂರ್ಯ ಹುಟ್ಟುವ ಮೊದಲೇ ಸಂಗ್ರಹಿಸುವ ಕ್ರಮ ಚಾಲ್ತಿಗೆ ಬಂದಿದೆ.

ಈ ಹಾಲೇಮರದ ಆರೋಗ್ಯಕರ ಗುಣಗಳ ಬಗ್ಗೆ ತುಳುನಾಡಿನ ಪ್ರತಿಯೊಬ್ಬ ವ್ಯಕ್ತಿಗೂ ಅರಿವಿದೆ, ಆದ್ದರಿಂದಲೇ ಎಲ್ಲಾ ಧರ್ಮದವರು ಆಟಿ ಅಮವಾಸ್ಯೆಯಂದು ಇದರ ಕಷಾಯ ಮಾಡಿ ಕುಡಿಯುತ್ತಾರೆ.

5. ಕಷಾಯ ಎಷ್ಟು ತೆಗೆದುಕೊಳ್ಳಬಹುದು?

5. ಕಷಾಯ ಎಷ್ಟು ತೆಗೆದುಕೊಳ್ಳಬಹುದು?

ತೊಗಟೆಯನ್ನು ಜಜ್ಜಿ ಅದರ ರಸವನ್ನು ನೀರು ಜೊತೆ ಮಿಶ್ರ ಮಾಡುತ್ತಾರೆ. ಇದನ್ನು ವ್ಯಕ್ತಿಯೊಬ್ಬ ಗರಿಷ್ಠ 24 ಮಿ.ಲೀ. ಸೇವಿಸ ಬಹುದು. ಕುದಿಸಿ ಕಷಾಯ ಮಾಡುವುದಾದರೆ ಗರಿಷ್ಠ 50 ಮಿ.ಲೀ. ಸೇವಿಸಬಹುದು. ಹಾಲೇಮರದ ಹಾಲಿಗೆ ಜೀರಿಗೆ, ಬೆಳ್ಳುಳ್ಳಿ, ಅರಶಿಣ, ಓಂಕಾಳು ಹಾಕಿ ಕಷಾಯ ರೀತಿ ಮಾಡಿ ಕುಡಿಯುತ್ತಾರೆ.ತರ ತಾವು ಊಟ ಮಾಡುತ್ತಾರೆ. ಆಟಿಯಲ್ಲಿ ಮದರಂಗಿ ಚಿಗುರನ್ನು ಯಾರೂ ಮುರಿಯುವುದಿಲ್ಲ. ಯಾಕೆಂದರೆ ಆಟಿಯಲ್ಲಿ ಮದರಂಗಿ ಹಚ್ಚುವ ಸಂಭ್ರವನ್ನು ಯಾರೂ ಆಚರಿಸುವುದಿಲ್ಲ.

English summary

Health Benefits Of Aati Kashaya

Drinking aati kashaya in aati amavasya is famous rituals in Dakshina Kannada. Here are aati kashaya health benefits, read on...
X
Desktop Bottom Promotion