For Quick Alerts
ALLOW NOTIFICATIONS  
For Daily Alerts

ನೀರನ್ನು ಹೀಗೆ ಕುಡಿದರೆ ಆರೋಗ್ಯ, ಸೌಂದರ್ಯ ಹೆಚ್ಚುವುದು, ಬೊಜ್ಜು ಕರಗುವುದು

|

ದಿನ ನಿತ್ಯ ನೀವು ಎಷ್ಟು ಲೋಟ ನೀರು ಕುಡಿಯುತ್ತೀರಾ? ಎಂಟು ಲೋಟ ಅಥವಾ ಅದಕ್ಕಿಂತ ಕಡಿಮೆಯೇ? ನೀವು ಕಡಿಮೆ ನೀರು ಕುಡಿಯುತ್ತಿದ್ದರೆ ಈಗ ಗೊತ್ತಾಗಲ್ಲ ಕ್ರಮೇಣ ಅದರ ಪ್ರಭಾವ ನಿಮ್ಮ ದೇಹದಲ್ಲಿ ಕಂಡು ಬರುತ್ತದೆ. ಇದರಿಂದಾಗಿ ಕಿಡ್ನಿ ಸ್ಟೋನ್ ಉಂಟಾಗಬಹುದು ಇನ್ನು ನಿಮ್ಮ ಮುಖದಲ್ಲಿ ನೆರಿಗೆಗಳು ಕೂಡ ಬೇಗನೆ ಮೂಡುತ್ತದೆ.

Health And Beauty Benefits Of Drinking Water In different Ways | Boldsky Kannada
Drink Water This Way To Improve Your Health And Beauty

ಕೆಲವರಿಗೆ ದೇಹಕ್ಕೆ 8 ಲೋಟ ನೀರು ಕುಡಿಯಲೇ ಬೇಕೆಂದು ಗೊತ್ತಿರುತ್ತದೆ. ಆದರೆ ದಾಹ ಆಗಿಲ್ಲ, ಅಲ್ಲದೆ ಖಾಲಿ ನೀರು ಕುಡಿಯುವುದು ಬೋರ್‌ ಈ ಕಾರಣಗಳಿಂದ ನೀರನ್ನು ಕಡಿಮೆ ಕುಡಿಯುತ್ತಾರೆ. ಅಂಥವರಿಗೆ ನೀವು ನೀರು ಹೆಚ್ಚು ಕುಡಿಯುವಂತಾಗಲು ಕೆಲವೊಂದು ಸೂಪರ್ ಟಿಪ್ಸ್ ನೀಡಲಿದ್ದೇವೆ. ಈ ವಿಧಾನಗಳನ್ನು ಅನುಸರಿದ್ದೇ ಆದರೆ ನೀರು ಕುಡಿಯುವುದು ಬೋರ್‌ ಅನಿಸುವುದಿಲ್ಲ ಹಾಗೂ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

ನಾವು ಇಲ್ಲಿ ಹೇಳಿರುವ ವಿಧಾನದಂತೆ ನೀರು ಕುಡಿಯುವುದರಿಂದ ಆಗುವ ಇತರ ಪ್ರಯೋಜನಗಳೆಂದರೆ ನಿಮ್ಮ ತ್ವಚೆ ಕಾಂತಿಯೂ ಹೆಚ್ಚುವುದು ಅಲ್ಲದೆ ಮೈ ಬೊಜ್ಜು ಕೂಡ ಕಡಿಮೆಯಾಗುವುದು.

1. ಬಿಸಿ ನೀರು ಕುಡಿಯುವುದು:

1. ಬಿಸಿ ನೀರು ಕುಡಿಯುವುದು:

ತಣ್ಣೀರು ಕುಡಿದಾಗ ಬೇಗ ಸಾಕು ಅನಿಸುತ್ತದೆ, ಅದೇ ನೀವು ಬಿಸಿ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ, ಆಗ ನೀರು ಕುಡಿಯುವುದು ಸಾಕೆಂದು ಅನಿಸುವುದೇ ಇಲ್ಲ. ಒಂದು ಲೋಟ ನೀರು ಆರಾಮವಾಗಿ ಕುಡಿಯುತ್ತೀರಿ ಅಲ್ಲದೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರು ಕುಡಿದರೆ ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು.

 2. ಬಿಸಿ ನೀರಿಗೆ ನಿಂಬೆರಸ ಮತ್ತು ಜೇನು

2. ಬಿಸಿ ನೀರಿಗೆ ನಿಂಬೆರಸ ಮತ್ತು ಜೇನು

ಇದನ್ನು ಒಂದು ಹೊತ್ತು ಅಷ್ಟೇ ಕುಡಿಯಿರಿ, ಬೆಳಗ್ಗೆ ಬಿಸಿ ನೀರಿಗೆ ಜೇನುತುಪ್ಪ, ನಿಂಬೆರಸ ಬೆರೆಸಿ ಕುಡಿಯುವುದರಿಂದ ಮೈ ಬೊಜ್ಜು ಕೂಡ ಕರಗುವುದು. ಈ ನೀರನ್ನು ಕುಡಿಯುವುದರಿಂದ ಮತ್ತೊಂದು ಪ್ರಯೋಜನವೆಂದರೆ ಜೇನು ಮತ್ತು ನಿಂಬೆರಸ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುಸುತ್ತದೆ.

3. ನೀರಿಗೆ ಗಿಡ ಮೂಲಿಕೆ ಬೇರುಗಳನ್ನು ಹಾಕಿ ಕುಡಿಯುವುದು

3. ನೀರಿಗೆ ಗಿಡ ಮೂಲಿಕೆ ಬೇರುಗಳನ್ನು ಹಾಕಿ ಕುಡಿಯುವುದು

ಖಾಲಿ ನೀರು ಕುಡಿಯುವುದಕ್ಕಿಂತ ಗಿಡ ಮೂಲಿಕೆ ಬೇರುಗಳನ್ನು ಹಾಕಿ ಕುಡಿಯಬಹುದು. ಉದಾಹರಣೆಗೆ ಕುಡಿಯುವ ನೀರಿಗೆ ಲಾವಂಚದ ಬೇರು ಹಾಕಿ ಕುಡಿಯುವುದರಿಂದ ನೀರು ಸುವಾಸನೆಯ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ, ಈ ಬೇರುಗಳನ್ನು ಉನ್ಮಾದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ, ಇದಕ್ಕೆ ನಂಜು ನಿರೋಧಕ ಗುಣವಿದೆ, ಮೆದುಳಿನ ಉರಿಯೂತ ಕೂಡ ಕಡಿಮೆಯಾಗುವುದು.

4. ನೀರಿಗೆ ಅರಿಶಿನ ಹಾಕಿ ಕುಡಿಯುವುದು

4. ನೀರಿಗೆ ಅರಿಶಿನ ಹಾಕಿ ಕುಡಿಯುವುದು

ಇನ್ನು ನೀರಿಗೆ ಚಿಟಿಕೆಯಷ್ಟು ಅರಿಶಿನ ಹಾಕು ಕುಡಿಯುವುದರಿಂದ ನಿಮ್ಮ ತ್ವಚೆ ಕಾಂತಿ ಹೆಚ್ಚುವುದು. ಸೌಂದರ್ಯದ ಬಗ್ಗೆ ವಿಪರೀತ ಕಾಳಜಿ ಇದ್ದರೆ ದಿನದಲ್ಲಿ ಒಂದು ಬಾರಿ ಈ ರೀತಿ ಕುಡಿಯುತ್ತಾ ಬನ್ನಿ. ಮೊಡವೆ ಸಮಸ್ಯೆಯೂ ಇರಲ್ಲ, ಮುಖದ ಕಾಂತಿ ಹೆಚ್ಚುವುದು ಅಲ್ಲದೆ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.

5. ಲವಂಗ ನೀರು

5. ಲವಂಗ ನೀರು

ನೀವು ಬಾಟಲಿನಲ್ಲಿ ನೀರು ತುಂಬಿ ಆಫೀಸ್‌ನಲ್ಲಿ ಕುಡಿಯುವಾಗ ಆ ಬಾಟಲಿಗೆ ಎರಡು ಲವಂಗ ಹಾಕಿರಿ, ಅದೇ ಬಾಟಲಿಗೆ ನೀರು ತುಂಬುತ್ತಾ ಕುಡಿಯಿರಿ, ಹೀಗೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ನೀವು ಈ ವಿಧಾನ ಅನುಸರಿಸಿದರೆ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮು ಕೂಡ ಬರುವುದಿಲ್ಲ.

6.ತರಕಾರಿ ಬಳಸಿ

6.ತರಕಾರಿ ಬಳಸಿ

ಇನ್ನು ನೀವು ಟೊಮೆಟೊ, ಕ್ಯಾರೆಟ್, ಸೌತೆಕಾಯಿ ಈ ರೀತಿಯ ತರಕಾರಿ ಸ್ವಲ್ಪ ಕತ್ತರಿಸಿ ಬಾಟಲಿಗೆ ಹಾಕಿ ಆ ಬಾಟಲಿಗೆ ಬಿಸಿ ನೀರು ತುಂಬುತ್ತಾ ಕುಡಿಯುವುದರಿಂದ ತರಕಾರಿಯಲ್ಲಿರುವ ಪೋಷಕಾಂಶಗಳು ನಿಮ್ಮ ದೇಹಕ್ಕೆ ಸೇರುತ್ತದೆ.

7. ಕಿತ್ತಳೆ ಹಾಕಿ ನೀರು ಕುಡಿಯುವುದು

ಇನ್ನು ನೀವು ಎರಡರಿಂದ ಮೂರು ಎಸಳು ಕಿತ್ತಳೆಯನ್ನು ನಿಮ್ಮ ನೀರಿನ ಬಾಟಲಿಗೆ ಹಾಕಿ ಅದರಲ್ಲಿ ನೀರು ತುಂಬಿ ನೀರು ಕುಡಿಯಿರಿ. ಇದು ಬಾಯಿಗೂ ರುಚಿ ಅನಿಸುವುದು ಅಲ್ಲದೆ ಕಿತ್ತಳೆಯಲ್ಲಿರುವ ವಿಟಮಿನ್ ಸಿ ನಿಮ್ಮ ದೇಹಕ್ಕೆ ಸೇರುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ನಿಮ್ಮ ತ್ವಚೆ ಸೌಂದರ್ಯವೂ ಹೆಚ್ಚುವುದು, ತೂಕವೂ ನಿಯಂತ್ರಣದಲ್ಲಿರುತ್ತದೆ.

7. ಡಿಟಾಕ್ಸ್ ನೀರು

7. ಡಿಟಾಕ್ಸ್ ನೀರು

ನೀವು ತೂಕದ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದರೆ ಈ ಡಿಟಾಕ್ಸ್ ನೀರು ಕುಡಿಯಿರಿ. ಇದು ತೂಕ ಇಳಿಕೆಗೆ ತುಂಬಾ ಸಹಕಾರಿ. ಒಂದು ಬಾಟಲಿಗೆ ಸ್ವಲ್ಪ ಸೌತೆ, ಎರಡು ಎಸಳು ಪುದೀನಾ, ಸ್ವಲ್ಪ ನಿಂಬೆ ತುಂಡುಗಳನ್ನು ಹಾಕಿಡಿ, ಅದರಲ್ಲಿ ನೀರು ತುಂಬಿ ಕುಡಿಯುತ್ತಾ ಇರಿ, ಹೀಗೆ ಮಾಡುವುದರಿಂದ ದೇಹಕ್ಕೆ ಚೈತನ್ಯ ದೊರೆಯುವುದು, ಮೈ ತೂಕ ಹೆಚ್ಚಾಗುವುದನ್ನು ಕೂಡ ತಡೆಯಬಹುದು.

ನೀವೇ ನೋಡಿದರಲ್ಲಾ ನೀರನ್ನು ಎಷ್ಟೊಂದು ಬಗೆಯಾಗಿ ಕುಡಿಯಬಹುದು, ಈ ವಿಧಾನ ಅನುಸರಿಸಿದರೆ ನೀರು ಕುಡಿಯುವುದು ಬೋರ್‌ ಅನಿಸಲ್ಲ, ಅಲ್ಲದೆ ಈ ವಿಧಾನ ಅನುಸರಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಮೈ ತೂಕ ನಿಯಂತ್ರಿಸಬಹುದು, ಅಲ್ಲದೆ ಚಿರಯೌವನದ ಸೌಂದರ್ಯ ಕೂಡ ನಿಮ್ಮದಾಗುವುದು.

ಹೇಗಿದೆ ಈ ಟಿಪ್ಸ್, ಖಂಡಿತ ನಿಮಗೆ ಮೆಚ್ಚುಗೆಯಾಗಿರಬೇಕು ಅಲ್ವಾ?

English summary

Health and Beauty Benefits of Drinking Water

Here are how to drink water to improve your health and beauty, read on,
X
Desktop Bottom Promotion