For Quick Alerts
ALLOW NOTIFICATIONS  
For Daily Alerts

ನೀವು ಹೇರ್ ಡೈ ಬಳಸುತ್ತ ಇದ್ದೀರಾ ? ಹಾಗಾದ್ರೆ ನಿಮಗೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ !!

By Reena Tk
|

ಕಪ್ಪು ಕೂದಲ ರಾಶಿ ನಡುವೆ ಒಂದೆರಡು ಬಿಳಿ ಕೂದಲು ಇಣುಕಲು ಪ್ರಾರಂಭಿಸಿದಾಗ ಆ ಕೂದಲನ್ನು ಮರೆಮಾಚಲು ಹೇರ್ ಡೈ ಮೊರೆ ಹೋಗುತ್ತೇವೆ. ವಯಸ್ಸಾಗುತ್ತಿದ್ದಂತೆ ಕೂದಲು ಬಿಳಿಯಾಗಲಾರಂಭಿಸುತ್ತದೆ. ವಯಸ್ಸನ್ನು ಮರೆ ಮಾಚಲು ಕೆಲವರು ಹೇರ್‌ ಡೈ ಮಾಡಿರದೆ ಮತ್ತೆ ಕೆಲವರಿಗೆ ಅಕಾಲಿಕ ನೆರೆ ಕಾಣಿಸಿಕೊಂಡಿರುತ್ತದೆ. ಇಂಥವರು ಅನಿವಾರ್ಯವಾಗಿ ಹೇರ್ ಡೈ ಮೊರೆ ಹೋಗಬೇಕಾಗುತ್ತದೆ. ಇನ್ನು ಫ್ಯಾಷನ್‌ ಪ್ರಿಯರು ತಮ್ಮ ಕೂದಲಿಗೆ ಕೆಂಪು, ಕೆಂಚು, ಗೋಲ್ಡನ್ ಅಂತ ಹೀಗೆ ನಾನಾ ಬಣ್ಣದ ಹೇರ್‌ ಡೈ ಬಳಸುತ್ತಾರೆ.

ಈ ಹೇರ್‌ ಡೈಗಳಲ್ಲಿ ಹಲವಾರು ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಕೆಲವೊಂದು ಡೈಗಳು ಹಾಕಿದರೆ ತುಂಬಾ ಸಮಯದವರೆಗೆ ಇರುತ್ತದೆ, ಮತ್ತೆ ಕೆಲವು ಹಾಕಿದರೆ ತಿಂಗಳು ಕಳೆಯುತ್ತಿದ್ದಂತೆ ಹೇರ್‌ ಡೈ ಬಣ್ಣ ಕಳೆಗುಂದುವುದು. ಹಾಗಾಗಿ ಕಡಿಮೆಯೆಂದರೂ ತಿಂಗಳಿಗೊಮ್ಮೆ ಹೇರ್ ಡೈ ಮಾಡಬೇಕಾಗುತ್ತದೆ. ಆದರೆ ಕೂದಲಿನ ಅಂದ ಹೆಚ್ಚಿಸಲು ಮಾಡುವ ಹೇರ್ ಡೈ ಆರೋಗ್ಯಕ್ಕೆ ಅಪಾಯ ಎಂಬುವುದು ನಿಮಗೆ ಗೊತ್ತೇ?

Hair Dyes

ಹೌದು, ಮಾರುಕಟ್ಟೆ ಪ್ರಚಾರದಲ್ಲಿ ಈ ಹೇರ್‌ ಡೈನಲ್ಲಿ ನೈಸರ್ಗಿಕ ಬಣ್ಣ ಬಳಸಲಾಗಿದೆ ಎಂದೆಲ್ಲಾ ಹೇಳಿದ್ದರೂ ಪ್ರತಿ ಹೇರ್‌ಡೈನಲ್ಲಿ ರಾಸಾಯನಿಕ ಅಂಶಗಳಿರುತ್ತದೆ. ಈ ರಾಸಾಯನಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಆಕರ್ಷಕ ಕೂದಲಿಗಾಗಿ ಹೇರ್ ಡೈ ಹಚ್ಚಿದರೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ಈ ಕುರಿತು ನಡೆಸಿದ ಅಧ್ಯಯನ ಹೇಳಿದೆ.

Hair Dyes

ನೀವು ಹೇರ್ ಡೈ ಬಳಸುತ್ತ ಇದ್ದೀರಾ ? ಹಾಗಾದ್ರೆ ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು

ಹೇರ್‌ ಡೈ ಯಾರು ಹೆಚ್ಚು ಬಳಕೆ ಮಾಡುತ್ತಾರೋ ಅವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಅಧಿಕವಿದೆ. ಹೇರ್ ಡೈಯನ್ನು ಕೆಲವರು ತಮಗೆ ತಾವೇ ಹಚ್ಚಿಕೊಂಡರೆ ಮತ್ತೆ ಕೆಲವರು ಸಲೂನ್‌ ಹಾಗೂ ಬ್ಯೂಟಿ ಪಾರ್ಲರ್‌ಗಳಲ್ಲಿ ಹೋಗಿ ಹಾಕಿಸಿಕೊಳ್ಳುತ್ತಾರೆ. ಇದರಿಂದಾಗಿ ಹಾಕಿಸಿಕೊಂಡವರಿಗಿಂತ ಹಾಕಿಕೊಡುವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಏಕೆಂದರೆ ಇವರು ತುಂಬಾ ಗ್ರಾಹಕರಿಗೆ ಹೇರ್‌ ಡೈ ಬಳಸುತ್ತಾರೆ, ಇದರಿಂದ ಹೇರ್‌ ಡೈನಲ್ಲಿರುವ ಕಾರ್ಸಿನೋಜೆನ್ಸ್ ಎಂಬ ರಾಸಾಯನಿಕ ಇವರ ದೇಹ ಮೇಲೆ ಕೆಟ್ಟ ಪರಿಣಾಮ ಬೀರುವುದು, ಇದರಿಂದಾಗಿ ಕ್ಯಾನ್ಸರ್ ಅಪಾಯ ಅಧಿಕವಿದೆ. ಯಾರು 1080ರಿಂದ ಡೈ ಬಳಸುತ್ತಾ ಬಂದಿದ್ದಾರೋ ಅವರಿಗೆ ಕ್ಯಾನ್ಸರ್ ಅಪಾಯ ಅಧಿಕವಿದೆ ಎಂದು ಅಧ್ಯಯನ ಹೇಳಿದೆ.

ಕುಟುಂಬದಲ್ಲಿ ಅನುವಂಶೀಯವಾಗಿ ಕ್ಯಾನ್ಸರ್ ಸಮಸ್ಯೆ ಕಾಣಿಸಿಕೊಂಡಿದ್ದರೆ ಅಂಥವರು ಹೇರ್‌ ಡೈ ಬಳಸದಿರುವುದು ಸೂಕ್ತ, ಅನುವಂಶೀಯ ಕ್ಯಾನ್ಸರ್ ಸಮಸ್ಯೆಯ ಹಿನ್ನೆಲೆ ಇರುವವರು ಹೇರ್ ಡೈ ಬಳಸಿದರೆ ಕ್ಯಾನ್ಸರ್‌ ಬರುವ ಸಾಧ್ಯತೆ ಅಧಿಕವಿದೆ. ಹೇರ್‌ ಡೈನಲ್ಲಿರುವ ಸುವಾಸನೆ ಭರಿತ ಅಮೈನ್ಸ್ ಕ್ಯಾನ್ಸರ್‌ ಉಂಟು ಮಾಡುವ ರಾಸಾಯನಿಕವಿದೆ. ಇದು ರಾಸಾಯನಿಕ ಸಾಮಾನ್ಯವಾಗಿ ನಮ್ಮ ದೇಹದಿಂದ ವಿಸರ್ಜನೆಯಾಗುತ್ತದೆ, ಆದರೆ ಕೆಲವರಲ್ಲಿ ಅನುವಂಶೀಯ ಕಾರಣದಿಂದಾಗಿ ರಾಸಾಯನಿಕ ದೇಹದಲ್ಲಿಯೇ ಉಳಿದುಕೊಂಡು ಕ್ಯಾನ್ಸರ್‌ ಕಣಗಳನ್ನು ಉತ್ಪತ್ತಿ ಮಾಡುತ್ತದೆ. ಕೂದಲಿಗೆ ಹಚ್ಚಿದ ಬಣ್ಣದಿಂದಾಗಿ ಲುಕೇಮಿಯಾ(ರಕ್ತ ಕ್ಯಾನ್ಸರ್) ಉಂಟಾಗುವುದು.

ಹೇರ್‌ ಡೈಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಪಾಯಕಾರಿಯಾದ ರಾಸಾಯನಿಕಗಳು

ಅಪರೂಪಕ್ಕೊಮ್ಮೆ ಕೂದಲಿಗೆ ಬಣ್ಣ ಹಚ್ಚಿಕೊಳ್ಳುವವರಿಗಿಂತ ಅಗಾಗ ಕೂದಲಿಗೆ ಬಣ್ಣ ಹಾಕಿಸಿಕೊಳ್ಳುವವರ ಮೇಲೆ ಹೇರ್‌ ಡೈಗಳಲ್ಲಿರುವ ಕಾರ್ಸಿಜೆನಿಕ್ ರಾಸಾಯನಿಕ ಬೀರುವ ಪರಿಣಾಮ ಅಧಿಕ. ಅದರಲ್ಲೂ ಕಂದು ಹಾಗೂ ಕಪ್ಪು ಬಣ್ಣದ ಹೇರ್‌ ಡೈಗಳಲ್ಲಿ ಈ ರಾಸಾಯನಿಕ ಅಧಿಕವಿರುತ್ತದೆ.

Hair Dyes

ತುಂಬಾ ಸಮಯದಿಂದ ಹೇರ್‌ ಡೈ ಬಳಸುತ್ತಿದ್ದರೆ ರಕ್ತಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು

ಶಾಶ್ವತ ಹಾಗೂ ತಾತ್ಕಾಲಿಕ ಕೂದಲಿನ ಬಣ್ಣಗಳನ್ನು ಆಗಾಗ ಬಳಸುತ್ತಿದ್ದರೆ ರಕ್ತ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ. ತಾತ್ಕಾಲಿಕ ಕೂದಲಿನ ಬಣ್ಣ ಹಚ್ಚಿದರೆ 5-10 ಬಾರಿ ತಲೆ ತೊಳೆಯುವಷ್ಟರಲ್ಲಿ ಆ ಬಣ್ಣ ಮಾಸಿರುತ್ತದೆ, ಅದೇ ತುಂಬಾ ಕಾಲ ಬಣ್ಣ ಮಾಸದಿರಲು ಶಾಶ್ವತ ಹೇರ್ ಡೈ ಬಳಸಿದರೆ ಅದರಲ್ಲಿರುವ ರಾಸಾಯನಿಕ ಕೂದಲಿನ ಬುಡದಿಂದ ಹೋಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ತಾತ್ಕಾಲಿಕ ಹೇರ್‌ ಡೈಗಿಂತ ಶಾಶ್ವತ ಹೇರ್ ಡೈ ಹೆಚ್ಚು ಅಪಾಯಕಾರಿ.

ಹೇರ್‌ ಡೈನಿಂದ ರಕ್ತ ಕ್ಯಾನ್ಸರ್ ಬರುವ ಸಾಧ್ಯತೆ ಬಗ್ಗೆ ಹಲವಾರು ಅಧ್ಯಯನಗಳು ನಡೆಯುತ್ತಿವೆ. ಹೇರ್‌ ಡೈನಲ್ಲಿ ಬಳಸುವ ಕಾರ್ಸಿಜೆನಿಕ್ ಅಂಬ ರಾಸಾಯನಿಕದಿಂದ ರಕ್ತ ಕ್ಯಾನ್ಸರ್ ಬರುವ ಸಾಧ್ಯತೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೇರ್ ಡೈ ಸಾಧನಗಳನ್ನು ಸುಮಾರು 5000ಕ್ಕೂ ಅಧಿಕ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗುತ್ತಿದೆ. ಅವುಗಳಲ್ಲಿ ಕೆಲವೊಂದು ಕಾರ್ಸಿಜೆನಿಕ್ ರಾಸಾಯನಿಕಗಳಾಗಿವೆ. ಡೈನಲ್ಲಿರುವ ರಾಸಾಯನಿಕದಿಂದ ರಕ್ತ ಕ್ಯಾನ್ಸರ್ ಮಾತ್ರವಲ್ಲ ಮೂಳೆ ಸಂಬಂಧಿಸಿದ ಕ್ಯಾನ್ಸರ್‌ ಕೂಡ ಉಂಟಾಗುವುದು ಎಂದು ಕೆಲ ಅಧ್ಯಯನಗಳು ಹೇಳಿವೆ.

Hair Dyes

ಕಾರ್ಸಿಜೆನಿಕ್ ರಾಸಾಯನಿಕಗಳು ದೇಹವನ್ನು ಸೇರಿದರೆ ರಕ್ತ ಕ್ಯಾನ್ಸರ್ ಅಲ್ಲದೆ ಈ ಬಗೆಯ ಕ್ಯಾನ್ಸರ್‌ಗೂ ಕಾರಣವಾಗುತ್ತದೆ

ಕರುಳ ಕ್ಯಾನ್ಸರ್: ಕೂದಲಿಗೆ ಹಚ್ಚಿದ ಬಣ್ಣದಲ್ಲಿರುವ ರಾಸಾಯನಿಕದಿಂದ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಆದ್ದರಿಂದ ಈ ರೀತಿಯ ರಾಸಾಯನಿಕಗಳಿಂದ ದೂರವಿರುವುದು ಒಳ್ಳೆಯದು.

ಸ್ತನ ಕ್ಯಾನ್ಸರ್

ಹೇರ್ ಡೈ ಹಾಗೂ ಸ್ತನ ಕ್ಯಾನ್ಸರ್‌ಗೆ ಸಂಬಂಧವಿದೆ ಎಂದು ಅಧ್ಯಯನ ಹೇಳಿದೆ.

ಪ್ರಾಸ್ಟೇಟ್ ಕ್ಯಾನ್ಸರ್

ಕೂದಲಿಗೆ ಬಣ್ಣ ಹಚ್ಚುವುದರಿಂದ ಪುರುಷರಲ್ಲಿ ಪ್ರಾಸ್ಟೇಟ್‌ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಈ ಕುರಿತು ನಡೆಸಿದ ಸಂಶೋಧನೆ ಹೇಳಿದೆ.

ತಾತ್ಕಾಲಿಕ ಹೇರ್‌ ಡೈಗಿಂತ ಶಾಶ್ವತ ಹೇರ್ ಡೈ ಹೆಚ್ಚು ಅಪಾಯಕಾರಿ

ಶಾಶ್ವತ ಹೇರ್ ಡೈ ಬೇಗನೆ ಬಣ್ಣ ಮಾಸದ ಕಾರಣ ಒಳ್ಳೆಯ ಗುಣಮಟ್ಟದ್ದು ಎಂದು ಹೆಚ್ಚು ಬೆಲೆ ತೆತ್ತು ಬಳಸುತ್ತೇವೆ. ಆದರೆ ಇದರಿಂದ ಕ್ಯಾನ್ಸರ್ ಅಪಾಯ ಮತ್ತಷ್ಟು ಹೆಚ್ಚಿದೆ.

ಹೇರ್‌ ಡೈ ಬಳಸುವ ಬದಲು ಏನು ಮಾಡಬಹುದು?

ಬಿಳಿ ಕೂದಲನ್ನು ಮರೆ ಮಾಚ ಬಯಸುವವರು ಯಾವುದೇ ಅಪಾಯಕಾರಿವಲ್ಲದ ಈ ವಿಧಾನ ಅನುಸರಿಸಬಹುದು.

* ಕೂದಲಿಗೆ ಮೆಹಂದಿ ಹಚ್ಚುವುದು

* ಆರ್ಗಾನ್ಯಿಕ್(ನೈಸರ್ಗಿಕ) ಹೇರ್ ಡೈ ಬಳಸುವುದು.

English summary

Hair Dyes May Increase The Risk Of Cancer

If you want to make your hair more attractive by using hair dye, you may be at the risk of developing or increasing the risk of cancer, to know more about this read on..
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more