For Quick Alerts
ALLOW NOTIFICATIONS  
For Daily Alerts

ನಿಮಗೇ ತಿಳಿಯದಂತೆ ನಿಮ್ಮನ್ನು ದಪ್ಪ ಮಾಡುವ ಅಭ್ಯಾಸಗಳಿವು

|

ನಿತ್ಯ ಸೇವಿಸುವ ಆಹಾರ ಕ್ರಮದಿಂದಲೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹಲವು ಮೂಲಗಳಿಂದ ನಮಗೆ ತಿಳಿದಿದೆ.

ಆಹಾರ ಮನುಷ್ಯದ ದೇಹದ ಆರೋಗ್ಯ ಸೂಚಕ, ಒಬ್ಬ ವ್ಯಕ್ತಿಯ ಆಹಾರ ಪದ್ಧತಿಯಿಂದಲೇ ಆತನ ದೈಹಿಕ ಆರೋಗ್ಯವನ್ನು ತಿಳಿಯಬಹುದು. ಆದರೆ ನಾವು ನಿತ್ಯ ಮಾಡುವ ಸಣ್ಣ ಸಣ್ಣ ತಪ್ಪುಗಳೇ ಮುಂದೇ ದೊಡ್ಡ್ ಸಮಸ್ಯೆಯಾಗಿ ಪರಿಣಮಿಸಿಬಿಡುತ್ತದೆ.

ಅಂದರೆ ನಾವು ನಿತ್ಯ ನಮ್ಮ ಆಹಾರ ಪದ್ಧತಿಯಲ್ಲಿ ಮಾಡುವ ಕೆಲವು ಅಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಕೆಟ್ಟದಲ್ಲ, ಇದರಿಂದ ನಮಗೇನೂ ಹಾನಿ ಇಲ್ಲ ಎಂದು ನಾವಂದುಕೊಂಡರೂ ನಾವೂ ಊಹಿಸಲೂ ಸಾಧ್ಯವಾಗದಂಥ ಅಪಾಯವನ್ನು ಇದು ನಮಗೆ ಮಾಡುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ.

ನಮ್ಮ ದೇಹಕ್ಕೆ ಎಂದಿಗೂ ಒಳ್ಳೆಯದಲ್ಲದ ಕೆಟ್ಟ ಆಹಾರ ಪದ್ಧತಿಗಳನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ. ನಿಮ್ಮಲ್ಲೂ ಸಹ ಇಂಥಾ ಕೆಟ್ಟ ಅಭ್ಯಾಸಗಳು ಇದೆ ಎಂದಾದರೆ ಇಂದೇ ಬಿಟ್ಟುಬಿಡಿ:

1. ಬೆಳಗಿನ ಉಪಹಾರ ಸೇವಿಸದೇ ಇರುವುದು

1. ಬೆಳಗಿನ ಉಪಹಾರ ಸೇವಿಸದೇ ಇರುವುದು

ಅನೇಕರಿಗೆ ಬೆಳಗಿನ ತಿಂಡಿಯನ್ನು ತಿನ್ನುವ ಅಭ್ಯಾಸವೇ ಇರುವುದಿಲ್ಲ, ಇನ್ನೂ ಹಲವರು ತಡವಾಗಿ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ರಾತ್ರಿಯಿಡೀ ಗಾಢ ನಿದ್ರೆಯ ನಂತರ ಚಯಾಪಚಯ ಕ್ರಿಯೆಯು ಹೆಚ್ಚುವುದರಿಂದ ಬೆಳಗಿನ ಉಪಹಾರವು ದಿನದ ಪ್ರಮುಖ ಊಟವಾಗಿರುತ್ತದೆ. ದಿನದ ಯಾವುದೇ ಹೊತ್ತಿನ ಊಟಕ್ಕಿಂತ ಬೆಳಗಿನ ಉಪಹಾರ ಉತ್ತಮ ಆರೋಗ್ಯಕ್ಕೆ ಅತ್ಯಂತ ಪ್ರಮುಖವಾದದ್ದು.

ಬೆಳಗಿನ ಉಪಾಹಾರವನ್ನು ಸೇವಿಸದೇ ಇದ್ದರೆ ನಿಮ್ಮ ಚಯಾಪಚಯ ಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ನಿಮ್ಮಲ್ಲಿ ಸೋಮಾರಿತನಕ್ಕೆ ಕಾರಣವಾಗುತ್ತದೆ.

ಬೆಳಗಿನ ಆಹಾರ ಹೇಗಿರಬೇಕು: ಬೆಳಗಿನ ಅಪಹಾರ ಅತ್ಯಂತ ಪೌಷ್ಟಿಕವಾಗಿರಬೇಕು. ಮಧ್ಯಾಹ್ನ ಹಾಗೂ ರಾತ್ರಿಗಿಂತ ಬೆಳಗಿನ ಆಹಾರ ಹೆಚ್ಚು ಸೇವಿಸಬೇಕು. ಆರೋಗ್ಯಕರ ಆಹಾರದ ಆಯ್ಕೆ ನಿಮ್ಮದಾಗಿರಬೇಕು.

2. ರಾತ್ರಿಯ ಸಮಯ ತಿನ್ನುವುದು

2. ರಾತ್ರಿಯ ಸಮಯ ತಿನ್ನುವುದು

ಪೌಷ್ಟಿಕತಜ್ಞರ ಪ್ರಕಾರ ಆಹಾರ ತಿನ್ನುವುದು ಮಾತ್ರವಲ್ಲ, ಸೇವಿಸುವ ಸಮಯವೂ ಸಹ ತುಂಬಾ ಮುಖ್ಯ. ರಾತ್ರಿಯ ಹೊತ್ತಲ್ಲಿ ಹೆಚ್ಚಿನ ಕೊಬ್ಬು ಇರುವ ಆಹಾರಗಳನ್ನು ಸೇವಿಸುವುದು ಹಾನಿಕಾರಕವಾಗಿದೆ. ಹಗಲಿನಲ್ಲಿ ಸೇವಿಸುವ ಅಭ್ಯಾಸ ಉತ್ತಮವಾಗಿದ್ದು, ಹಗಲಿನಲ್ಲಿ ನೀವು ಏನೇ ಸೇವಿಸಿದರೂ ಕನಿಷ್ಠ ದೇಹ ಕೆಲಸದಲ್ಲಿ ನಿರತವಾಗಿರುತ್ತದೆ ಅಥವಾ ಎಚ್ಚರವಿರುತ್ತದೆ, ಈ ವೇಳೆ ಚಯಾಪಚಯಕ್ರಿಯೆ ಉತ್ತಮವಾಗುತ್ತದೆ.

ಹಾಗೂ ರಾತ್ರಿಯಲ್ಲಿ ನಿಮಗೆ ಹಸಿವಾದರೆ ಕೊಬ್ಬಿನ ಆಹಾರ ಅಥವಾ ಜಂಗ್‌ಫುಡ್‌ ಬದಲಾಗಿ ಹಣ್ಣುಗಳನ್ನು ತಿನ್ನಿರಿ, ಏಕೆಂದರೆ ಅವು ಸುಲಭವಾಗಿ ಜೀರ್ಣವಾಗುತ್ತವೆ.

3. ಅತಿಯಾದ ಆಹಾರ ಸೇವನೆ

3. ಅತಿಯಾದ ಆಹಾರ ಸೇವನೆ

ಒಂದೇ ಬಾರಿ ಅತಿಯಾದ ಆಹಾರವನ್ನು ಸೇವಿಸುವುದು ಅರೋಗ್ಯಕರ ಅಭ್ಯಾಸವಲ್ಲ ಎಂದು ಕಾರ್ನೆಲ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ಹೇಳಿದೆ. ಅತಿಯಾದ ಸೇವನೆ ಸಹ ನಿಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ.

ಆಹಾರದ ಪ್ರಮಾಣ ಹೇಗಿರಬೇಕು: ಅತಿಯಾದ ಆಹಾರಗಳನ್ನು ಸೇವಿಸುವ ಅಭ್ಯಾಸ ನಿಮಗಿದ್ದರೆ ಇದನ್ನು ಹೋಗಲಾಡಿಸಲು, ಸಣ್ಣ ಭಕ್ಷ್ಯಗಳಿಂದ ಮತ್ತು ಸೀಮಿತ ಪ್ರಮಾಣದಲ್ಲಿ ತಿನ್ನಲು ಆರಂಭಿಸಿ. ಎಂದಿಗೂ ಕಂಟೇನರ್ ಅಥವಾ ಪ್ಯಾಕೆಟ್‌ನಿಂದ ನೇರವಾಗಿ ತಿನ್ನಬೇಡಿ, ಅದನ್ನು ಪ್ಲೇಟ್‌ ಹಾಕಿಕೊಂಡು ಸೇವಿಸಿ, ಆಗ ಪ್ರಮಾಣದ ಬಗ್ಗೆ ನಿಮಗೇ ತಿಳಿಯುತ್ತದೆ.

4. ಬೇಗನೆ ತಿನ್ನುವುದು

4. ಬೇಗನೆ ತಿನ್ನುವುದು

ಆಹಾರವನ್ನು ಸರಿಯಾಗಿ ಅಗಿಯದೇ ಇರುವುದು ಸಹ ನಾವು ನಿತ್ಯ ಮಾಡುವ ಕೆಟ್ಟ ಅಭ್ಯಾಸಗಳಲ್ಲಿ ಒಂದಾಗಿದೆ. ಆದರೆ ಉತ್ತಮ ಜೀರ್ಣಕ್ರಿಯೆಗಾಗಿ ಚೆನ್ನಾಗಿ ಅಗೆದು ತಿನ್ನುವುದು ಅನಿವಾರ್ಯ ಎಂಬುದನ್ನು ನಾವು ಮರೆಯುತ್ತೇವೆ. ಸರಿಯಾಗಿ ಅಗಿಯದೇ ಇದ್ದರೆ, ಜೀರ್ಣಕ್ರಿಯೆಯು ಒಂದು ಸಮಸ್ಯೆಯಾಗುತ್ತದೆ ಮತ್ತು ಮೇದೋಜ್ಜೀರಕ ಗ್ರಂಥಿಗಳ ಮೇಲೆ ಹೆಚ್ಚು ಒತ್ತಡ ಆಗುತ್ತದೆ. ನೀವು ವೇಗವಾಗಿ ತಿನ್ನುವುದು ಸಹ ನಿಮ್ಮ ತೂಕ ಹೆಚ್ಚಾಗಲು ಕಾರಣವಾಗಬಹುದು.

ಸಾಧ್ಯವಾದಷ್ಟು ನಿಧಾನವಾಗಿ ತಿನ್ನಿರಿ ಮತ್ತು ಚಿಕ್ಕ ಚಿಕ್ಕ ಭಾಗವಾಗಿ ಸೇವಿಸಿ. ಸೇವಿಸುವ ಮಧ್ಯೆ ಆಗಾಗ್ಗೆ ನೀರನ್ನು ಸೇವಿಸಿ, ಅದು ಜೀರ್ಣಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ.

5. ಸ್ನ್ಯಾಕ್ಸ್‌ ಮತ್ತು ಜಂಗ್‌ಫುಡ್‌

5. ಸ್ನ್ಯಾಕ್ಸ್‌ ಮತ್ತು ಜಂಗ್‌ಫುಡ್‌

ನೀವು ಯಾವುದೇ ವಯೋಮಾನದವರಾಗಿರಲಿ ನಿಮ್ಮ ಆಹಾರ ಪದ್ಧತಿಯಲ್ಲಿಅತಿಯಾದ ಸ್ನಾಕ್ಸ್‌, ಜಂಗ್‌ಫುಡ್‌ ಇದೆ ಎಂದಾದರೆ ಇದು ಖಂಡಿತ ನಿಮ್ಮ ಜೀರ್ಣಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಿರಿಯರಿಗೆ ಮಾತ್ರ ಜೀರ್ಣ ಸಮಸ್ಯೆ ಆಗುತ್ತದೆ, ನಾವು ಇನ್ನೂ ಯುವಕರು ನಮಗೇನೂ ಆಗುವುದಿಲ್ಲ ಆಗುವುದಿಲ್ಲ ಎಂಬ ಭ್ರಮೆ ನಿಮಗಿದ್ದರೆ ಇಂದೇ ಬಿಟ್ಟುಬಿಡಿ, ಇದು ತತ್‌ಕ್ಷಣ ಪರಿಣಾಮ ಬೀರದಿದ್ದರೂ, ದೀರ್ಘಕಾಲಿನ ಸಮಸ್ಯೆಯನ್ನು ಖಂಡಿತ ಉಂಟುಮಾಡುತ್ತದೆ.

ನಿಮಗೆ ಆಗಾಗ್ಗೆ ಏನಾದರೂ ತಿನ್ನಬೇಕು ಎನ್ನುವ ಅಭ್ಯಾಸ ಇದ್ದರೆ, ಜಂಗ್‌ ಫುಡ್‌ ಬದಲಿಗೆ ಕ್ಯಾರೆಟ್ ಮತ್ತು ಸೌತೆಕಾಯಿ, ಪಾಪ್‌ಕಾರ್ನ್, ಮೊಸರು ಮತ್ತು ಡ್ರೈ ಫ್ರೂಟ್ಸ್‌ಗಳಂಥ ಆರೋಗ್ಯಕರ ತಿಂಡಿಗಳಿಗೆ ಆದ್ಯತೆ ನೀಡಿ.

6. ಸಾಕಷ್ಟು ನಿದ್ರೆ ಮಾಡದೇ ಇರುವುದು

6. ಸಾಕಷ್ಟು ನಿದ್ರೆ ಮಾಡದೇ ಇರುವುದು

ನಾವು ದಿನವಿಡೀ ತಿನ್ನುತ್ತೇವೆ, ಆದರೆ ವಿಶ್ರಾಂತಿ ಮತ್ತು ನಿದ್ರೆಗೆ ಬಂದಾಗ ಅಷ್ಟೇನೂ ಪ್ರಾಮುಖ್ಯತೆ ನೀಡುವುದಿಲ್ಲ.

ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಮರಳಿ ಪಡೆಯಲು ನಾವು ಎಂದಿಗೂ 8 ಗಂಟೆಗಳ ಆಳವಾದ ನಿದ್ರೆಯನ್ನು ಮಾಡಬೇಕು. ದೇಹಕ್ಕೆ ಅಗತ್ಯವಾದ ನಿದ್ರೆಯ ಮೂಲಕ ವಿಶ್ರಾಂತಿ ನೀಡದೇ ಇದ್ದರೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಅದು ತೂಕ ಹೆಚ್ಚಾಗುವುದು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ನಿತ್ಯ ನಿಮ್ಮದೇ ದಿನಚರಿಯನ್ನು ಮಾಡಿಕೊಳ್ಳಿ, ಬೇಗನೆ ಮಲಗಲು ಪ್ರಯತ್ನಿಸಿ. ದೇಹಕ್ಕೆ ಅಗತ್ಯ ವಿಶ್ರಾಂತಿಗಾಗಿ ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಾಡಿ.

English summary

Habits That Are Secretly Making You Fat

Here we are discussing about Habits That Are Secretly Making You Fat. Always compliment the breakfast plate with smoothies or shakes, as they provide instant energy. Scroll below to know more about such bad eating habits and how you can say NO to them today. Read more.
Story first published: Tuesday, June 15, 2021, 16:30 [IST]
X