For Quick Alerts
ALLOW NOTIFICATIONS  
For Daily Alerts

ನಿಮ್ಮ ಬಾಯಲ್ಲಿ ಈ ಲಕ್ಷಣ ಕಂಡು ಬಂದರೆ ಹೃದಯಾಘಾತದ ಅಪಾಯವಿದೆ

|

ಹಾರ್ಟ್ ಅಟ್ಯಾಕ್ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆ ವ್ಯಕ್ತಿ ಓಡಾಡುತ್ತಾ ಆರಾಮವಾಗಿಯೇ ಇರುತ್ತಾರೆ, ಆದರೆ ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಬಂದು ತೀರಿ ಹೋಗಿರುತ್ತಾರೆ. ಹಾರ್ಟ್ ಅಟ್ಯಾಕ್ ಅಥವಾ ಹೃದಯಾಘಾತ ಮಧ್ಯ ವಯಸ್ಸು ದಾಟಿದವರಲ್ಲಿ ಮಾತ್ರವಲ್ಲ ತುಂಬಾ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತದೆ.

ಹೃದಯಾಘಾತ ಇದ್ದಕ್ಕಿದ್ದಂತೆ ಬಂತೆಂದೆ ಎಲ್ಲರೂ ಹೇಳುತ್ತಾರೆ, ಆದರೆ ಹೃದಯಾಘಾತ ಬರುವ ಮುನ್ನವೇ ಅದರ ಸೂಚನೆಗಳನ್ನು ತೋರಿಸಿರುತ್ತದೆ, ಆದರೆ ಅದನ್ನು ಹೆಚ್ಚಿನವರು ಗಮನಿಸಿರುವುದಿಲ್ಲ, ಹಾಗಾಗಿ ಅಪಾಯ ಸಾಧ್ಯತೆ ಹೆಚ್ಚುವುದು. ಹೃದಯಾಘಾತ ಮುಂಚೆ ಭುಜ ನೋವು, ಸುಸ್ತು ಇವೆಲ್ಲಾ ಕಾಣಿಸಿರುತ್ತದೆ, ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದು ನಮ್ಮ ಬಾಯಲ್ಲಿ ಕಂಡು ಬರುವ ಕೆಲವೊಂದು ಲಕ್ಷಣಗಳು ಹೃದಯಾಘಾತದ ಮುನ್ಸೂಚನೆಯಾಗಿದೆ ಎಂದು ಹೇಳಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.

ವಸಡಿನ ಸಮಸ್ಯೆ ಇರುವವರಿಗೆ ಹೃದಯಾಘಾತದ ಸಾಧ್ಯತೆ ಹೆಚ್ಚು

ವಸಡಿನ ಸಮಸ್ಯೆ ಇರುವವರಿಗೆ ಹೃದಯಾಘಾತದ ಸಾಧ್ಯತೆ ಹೆಚ್ಚು

ಹಾರ್ವಾಡ್ ಸ್ಕೂಲ್ ಆಫ್‌ ಡೆಂಟಲ್ ಮೆಡಿಸಿನ್ ಮತ್ತು ಫೋರ್ಸಿಯತ್ ಇನ್ಸಿಟ್ಯೂಟ್ ನಡೆಸಿದ ಸಂಶೋಧನೆಯು ವಸಡಿನ ಸಮಸ್ಯೆ ಹೇಗೆ ಹೃದಯಾಘಾತಕ್ಕೆ ಕಾರಣವಾಗುತ್ತೆ ಎಂಬುವುದರ ಕುರಿತು ಅಧ್ಯಯನ ನಡೆಸಿತ್ತು. ಈ ಅಧ್ಯಯನದಲ್ಲಿ 304 ವಸಡಿನ ಸಮಸ್ಯೆ ಇರುವ ರೋಗಿಗಳನ್ನು ಒಳಪಡಿಸಿತ್ತು. ನಾಲ್ಕು ವರ್ಷದ ಬಳಿಕ ಇವರಲ್ಲಿ 13 ಜನರಿಗೆ ತೀವ್ರ ಹೃದಯಾಘಾತ ಉಂಟಾಗಿತ್ತು. ಆದ್ದರಿಂದ ಈ ಸಂಶೋಧನೆಯು ವಸಡಿನ ಸಮಸ್ಯೆ ಇರುವವರಲ್ಲಿ ಹೃದಯಾಘಾತದ ಸಾಧ್ಯತೆ ಇದೆ ಎಂದು ಹೇಳಿದೆ.

ಹೇಗೆ?

ಹೇಗೆ?

ಸಂಶೋಧಕರ ಪ್ರಕಾರ ವಸಡಿನ ನೋವು ಇದ್ದಾಗ ಇದು ನರಗಳಲ್ಲಿ ಉರಿಯೂತ ಉಂಟು ಮಾಡುತ್ತದೆ, ಇದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.

ಮಿಲಿಯನ್ ಗಟ್ಟಲೆ ಜನರು ವಸಡಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ

ಮಿಲಿಯನ್ ಗಟ್ಟಲೆ ಜನರು ವಸಡಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ

ಸೆಂಟ್ರಲ್‌ ಡಿಸೀಜ್ ಕಂಟ್ರೋಲ್ ಪ್ರಕಾರ ಶೇ. 47 ಜನರಲ್ಲಿ ವಸಡಿನ ಸಮಸ್ಯೆ ಇರುತ್ತದೆ. ಅದರಲ್ಲೂ ಶೇ.70ರಷ್ಟು ಜನರು 65 ವರ್ಷ ಮೇಲ್ಪಟ್ಟವರಾಗಿರುತ್ತಾರೆ. ವಸಡಿನ ಸಮಸ್ಯೆಗೂ ಹೃದಯಾಘಾತಕ್ಕೂ ನೇರವಾದ ಸಂಬಂಧವಿದೆ.

ವಸಡಿನ ಸಮಸ್ಯೆಯ ಲಕ್ಷಣಗಳೇನು?

ವಸಡಿನ ಸಮಸ್ಯೆಯ ಲಕ್ಷಣಗಳೇನು?

ನೀವು ಹಲ್ಲುಜ್ಜುವಾಗ ವಸಡಿನಲ್ಲಿ ರಕ್ತ ಕಂಡು ಬಂದರೆ ಅದು ವಸಡಿನ ಸಮಸ್ಯೆಯಾಗಿರುತ್ತದೆ. ಬಾಯಿನ ಸ್ವಚ್ಛತೆ ಕಡೆ ಗಮನ ನೀಡುವುದರಿಂದ ವಸಡಿನ ಸಮಸ್ಯೆ ತಡೆಗಟ್ಟಬಹುದು. ದಿನದಲ್ಲಿ ಎರಡು ಬಾರಿ ಹಲ್ಲುಜ್ಜಿ ಹಾಗೂ ಮೌತ್‌ವಾಶ್‌ ಬಳಸಿ. ಅಲ್ಲದೆ ತುಂಬಾ ಹೊತ್ತು ಹಲ್ಲುಜ್ಜುವುದು ಹಾಗೂ ಅಧಿಕ ಬಾರಿ ಮೌತ್‌ವಾಶ್‌ ಬಳಸುವುದು ಕೂಡ ವಸಡಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದಿರಲಿ.

English summary

Gum disease Increases The Risk Of Heart Attacks And Strokes: Study

Gum disease increases the risk of heart attacks and strokes: Study, Read on...
Story first published: Tuesday, March 16, 2021, 11:57 [IST]
X
Desktop Bottom Promotion