For Quick Alerts
ALLOW NOTIFICATIONS  
For Daily Alerts

ಕೋವಿಡ್ -19 ಲಸಿಕೆ ಪಡೆಯುವ ಮುನ್ನ ಹಾಗೂ ನಂತರ ಈ ಬಗ್ಗೆ ಜಾಗ್ರತೆ ವಹಿಸಿ

|

ದೇಶದಲ್ಲಿ ಕೋವಿಡ್‌ ಹರಡುವಿಕೆಯ ಪ್ರಮಾಣ ತಗ್ಗಿಸಲು ಹಾಗೂ ಕೋವಿಡ್‌ ಬಂದರೂ ಮಾರಣಾಂತಿಕ ಹಂತಕ್ಕೆ ತಲುಪದೇ ಇರಲು ಸರ್ಕಾರ ಸಾಕಷ್ಟು ತ್ವರಿತವಾಗಿ ಲಸಿಕೆಯ ಅಭಿಯಾನವನ್ನು ಆರಂಭಿಸಿದೆ. ಭಾರತದಲ್ಲಿ ಈವರೆಗೆ 1.63 ಕೋಟಿಗೂ ಹೆಚ್ಚು ಜನರು ಕೊರೊನಾವೈರಸ್ ಲಸಿಕೆ ಪಡೆದಿದ್ದಾರೆ ಎಂದು ಅಂಕಿಅಂಶ ಹೇಳುತ್ತದೆ.

ಈವರೆಗೂ ಯಾರ ಮೇಲೂ ಯಾವುದೇ ವ್ಯತಿರಿಕ್ತ ಪರಿಣಾಮಗಳಿಲ್ಲ. ಆದರೂ ಲಸಿಕೆ ಪಡೆಯುವ ಮೊದಲು ಹಾಗೂ ಲಸಿಕೆ ಪಡೆದ ನಂತರ ಕೆಲವು ಮಾಡಲೇಬೇಕಾದ ಹಾಗೂ ಮಾಡಲೇಬಾರದ ಸಂಗತಿಗಳಿವೆ. ಇವುಗಳನ್ನು ತಪ್ಪಿಸಿದಲ್ಲಿ ಕೆಲವು ಅಡ್ಡಪರಿಣಾಮಗಳು ಅಥವಾ ಸಣ್ಣಪುಟ್ಟ ಅನಾರೋಗ್ಯ ಬಾಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಂದು ಲಸಿಕೆ ಪಡೆಯದೇ ಇರುವ ತಪ್ಪನ್ನು ಮಾಡುವುದು ಬೇಡ, ಅಗತ್ಯ ಮುಂಜಾಗ್ರತೆ ವಹಿಸಿ ದೇಶ ಕೊರೊನಾ ಮುಕ್ತವಾಗಿಸಲು ನಾವು ಸಹ ಕೈಜೋಡಿಸೋಣ.

ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಮತ್ತು ಲಸಿಕೆ ಹಾಕುವ ಮೊದಲು ನೀವು ತೆಗೆದುಕೊಳ್ಳಬೇಕಾದ ಕೆಲವು

ಕೋವಿಡ್ -19 ಲಸಿಕೆ ತೆಗೆದುಕೊಳ್ಳುವ ಮುನ್ನ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ ಮತ್ತು ಲಸಿಕೆ ಪಡೆಯುವ ಮೊದಲು ನೀವು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳು ತೆಗೆದುಕೊಂಡ ನಂತರ ವಹಿಸಬೇಕಾದ ಜಾಗ್ರತೆಗಳು ಹೀಗಿವೆ:

ಭಾರತದ ಎರಡು ಲಸಿಕೆಗಳು ಸುರಕ್ಷಿತ

ಭಾರತದ ಎರಡು ಲಸಿಕೆಗಳು ಸುರಕ್ಷಿತ

ಭಾರತದಲ್ಲಿ ಸದ್ಯ ಬಳಸುತ್ತಿರುವ ಎರಡೂ ಲಸಿಕೆಗಳಾದ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಮತ್ತು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯ ಆವೃತ್ತಿಯಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಲಸಿಕೆಗೂ ಮುನ್ನ ಈ ಬಗ್ಗೆ ಗಮನವಿರಲಿ

ಲಸಿಕೆಗೂ ಮುನ್ನ ಈ ಬಗ್ಗೆ ಗಮನವಿರಲಿ

* ಯಾವುದೇ ವ್ಯಕ್ತಿಗೆ ಔಷಧಿಯ ಅಲರ್ಜಿ ಇದ್ದರೆ, ವೈದ್ಯರಿಂದ ಸಲಹೆ ಪಡೆಯಿರಿ. ಲಸಿಕೆ ಹಾಕುವ ಮುನ್ನ ವೈದ್ಯರಿಗೆ ತಿಳಿಸುವುದು ಮುಖ್ಯ.

* ಅಲರ್ಜಿ ಇರುವವರು ಸಂಪೂರ್ಣ ರಕ್ತದ ಎಣಿಕೆ (ಸಿಬಿಸಿ), ಸಿ-ರಿಯಾಕ್ಟಿವ್ ಪ್ರೋಟೀನ್ (ಸಿಆರ್‌ಪಿ) ಅಥವಾ ಇಮ್ಯುನೊಗ್ಲಾಬ್ಯುಲಿನ್-ಇ (ಐಜಿಇ) ಮಟ್ಟವನ್ನು ವೈದ್ಯಕೀಯ ಸಲಹೆಯಡಿಯಲ್ಲಿ ಪರಿಶೀಲಿಸಬಹುದು.

* ಲಸಿಕೆ ಹಾಕುವ ಮುನ್ನ ಆಹಾರವನ್ನು ಚೆನ್ನಾಗಿ ಸೇವಿಸಿ ಮತ್ತು ವೈದ್ಯರು ನಿಮಗೆ ನಿಗದಿತ ಔಷಧಿಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದರೆ ಅದನ್ನು ತೆಗೆದುಕೊಳ್ಳಬೇಕು.

* ಲಸಿಕೆ ಪಡೆಯುವ ಮುನ್ನವೂ ಸಹ ಸಾಧ್ಯವಾದಷ್ಟು ಆರಾಮವಾಗಿರಲು ಪ್ರಯತ್ನಿಸಿ, ಆತಂಕ, ಭಯಸ ಬೇಡ, ಅಗತ್ಯವಿದ್ದರೆ ಮುಕ್ತ ಸಮಾಲೋಚನೆ ಸಹಾಯ ಪಡೆಯಿರಿ.

* ಮಧುಮೇಹ ಅಥವಾ ರಕ್ತದೊತ್ತಡ ಇರುವವರು ಮೇಲಿನ ಎಲ್ಲವನ್ನು ತುಸು ಹೆಚ್ಚು ಗಮನದಲ್ಲಿರಿಸಿಕೊಳ್ಳಲೇಬೇಕು. ಕ್ಯಾನ್ಸರ್ ರೋಗಿಗಳು, ವಿಶೇಷವಾಗಿ ಕೀಮೋಥೆರಪಿಯಲ್ಲಿರುವವರು ವೈದ್ಯಕೀಯ ಸಲಹೆಯ ಮೇರೆಗೆ ಲಸಿಕೆ ಪಡೆಯಿರಿ.

* ಕೋವಿಡ್ -19 ಚಿಕಿತ್ಸೆಯ ಭಾಗವಾಗಿ ರಕ್ತ ಪ್ಲಾಸ್ಮಾ ಅಥವಾ ಮೊನೊಕ್ಲೋನಲ್ ಪ್ರತಿಕಾಯಗಳನ್ನು ಪಡೆದ ಜನರು ಅಥವಾ ಕಳೆದ ಒಂದೂವರೆ ತಿಂಗಳಲ್ಲಿ ಸೋಂಕಿಗೆ ಒಳಗಾದವರು ಇದೀಗ ಲಸಿಕೆ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ.

* ಈಗಾಗಲೇ ಕೋವಿಡ್‌ ಸೋಂಕಿಗೆ ಒಳಗಾದವರು ಮೂರು ತಿಂಗಳು ಲಸಿಕೆ ಪಡೆಯುವ ಅಗತ್ಯವಿಲ್ಲ, ಮೂರು ತಿಂಗಳ ನಂತರ ಲಸಿಕೆ ಪಡೆಯಬಹುದು.

ಲಸಿಕೆ ಪಡೆದ ನಂತರದ ಮುಂಜಾಗ್ರತೆಗಳು

ಲಸಿಕೆ ಪಡೆದ ನಂತರದ ಮುಂಜಾಗ್ರತೆಗಳು

* ಲಸಿಕೆ ಪಡೆದ ನಂತರ ಯಾವುದೇ ತೀವ್ರವಾದ ಅಲರ್ಜಿಯ ಪ್ರತಿಕ್ರಿಯೆಯಿಂದ ರಕ್ಷಿಸಲು ಲಸಿಕೆ ಸ್ವೀಕರಿಸುವವರನ್ನು ಲಸಿಕೆ ಕೇಂದ್ರದಲ್ಲಿಯೇ ಮೇಲ್ವಿಚಾರಣೆ ಮಾಡಲಾಗುತ್ತದೆ. ಯಾವುದೇ ಅಡ್ಡ ಪರಿಣಾಮ ಇಲ್ಲದನ್ನು ಖಚಿತಪಡಿಸಿಕೊಂಡ ನಂತರವೇ ಜನರಿಗೆ ಹೊರಹೋಗಲು ಅವಕಾಶವಿದೆ.

* ಲಸಿಕೆ ಪಡೆದ ಸ್ಥಳದಲ್ಲಿ ನೋವು, ಊತ ಮತ್ತು ಜ್ವರ ಮುಂತಾದ ಅಡ್ಡಪರಿಣಾಮಗಳು ಸಾಮಾನ್ಯವಾಗಿದೆ. ಇದಕ್ಕೆ ಭಯಭೀತರಾಗುವ ಅಗತ್ಯವಿಲ್ಲ. ಶೀತ ಮತ್ತು ಆಯಾಸದಂತಹ ಇತರ ಕೆಲವು ಅಡ್ಡಪರಿಣಾಮಗಳನ್ನು ಸಹ ನಿರೀಕ್ಷಿಸಬಹುದು, ಆದರೆ ಇವು ಕೆಲವೇ ದಿನಗಳಲ್ಲಿ ಹೋಗುತ್ತವೆ.

* ಒಂದು ವಾರದ ನಂತರವೂ ಮೇಲಿನ ಯಾವುದೇ ಸಮಸ್ಯೆ ಕಂಡುಬಂದರೆ ವೈದ್ಯರನ್ನು ಭೇಟಿ ಮಾಡಿ.

* ಲಸಿಕೆ ಪಡೆದ ನಂತರ ಭಾರವಾದ ವಸ್ತುಗಳನ್ನು ಎತ್ತಬೇಡಿ, ಆಯಾಸ ಮಾಡಿಕೊಳ್ಳಬೇಡಿ.

* ಲಸಿಕೆಯ ನಂತರ ಕನಿಷ್ಠ ಎರಡು ದಿನ ವಿಶ್ರಾಂತಿ ಪಡೆಯಿರಿ.

ನಿರ್ಲಕ್ಷಿಸಲೇಬಾರದ ಅಂಶಗಳಿವು

ನಿರ್ಲಕ್ಷಿಸಲೇಬಾರದ ಅಂಶಗಳಿವು

* ಲಸಿಕೆಗಳು ಆಂತರಿಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ ಬಾಹ್ಯ ಬೆದರಿಕೆಯನ್ನು ಹೇಗೆ ಗುರುತಿಸಬೇಕು ಮತ್ತು ಹೋರಾಡಬೇಕು ಎಂಬುದನ್ನು ಸಹ ಕಲಿಸುತ್ತವೆ.

* ಲಸಿಕೆ ಪಡೆದ ಕೆಲವು ವಾರಗಳ ನಂತರವೇ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂಬುದು ನೆನಪಿರಲಿ.

* ಇದರ ಅರ್ಥವೇನೆಂದರೆ, ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ಒಬ್ಬ ವ್ಯಕ್ತಿಯು ಕೋವಿಡ್ -19 ಸೋಂಕಿಗೆ ಒಳಗಾಗಬಹುದು, ಏಕೆಂದರೆ ವ್ಯಕ್ತಿಯು ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಸಾಕಷ್ಟು ಸಮಯವನ್ನು ಹೊಂದಿರಲಿಲ್ಲ.

* ಲಸಿಕೆಯ ನಂತರವೂ ಕೊರೊನ ಸೋಂಕಿಗೆ ಸಂಬಂಧಿಸಿದ ಮೂಲ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಲಸಿಕೆ ತೆಗೆದುಕೊಂಡ ನಂತರ ಮಾಸ್ಕ್‌, ಕೈ ನೈರ್ಮಲ್ಯ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದೈಹಿಕ ದೂರವಿರುವುದನ್ನು ತ್ಯಜಿಸಬಾರದು.

English summary

Getting vaccinated against Covid-19 Here are some dos and don’ts in Kannada

Here we are discussing about Getting vaccinated against Covid-19 Here are some dos and don’ts in Kannada. Here are some of the things you need to know, and some precautions that you should take before getting vaccinated. Read more.
Story first published: Thursday, July 8, 2021, 15:00 [IST]
X