For Quick Alerts
ALLOW NOTIFICATIONS  
For Daily Alerts

ಜುಲೈ 15ರಿಂದ ಸಿಗಲಿದೆ ಫ್ರೀ ಬೂಸ್ಟರ್‌ ಲಸಿಕೆ: 18 ವರ್ಷ ಮೇಲ್ಪಟ್ಟವರು ಬೂಸ್ಟರ್‌ ಲಸಿಕೆಗೆ ಅರ್ಹರು

|

ದೇಶದಲ್ಲಿ ಕೊರೊನಾವೈರಸ್‌ ಹೆಚ್ಚಾಗುತ್ತಿರುವುದರಿಂದ ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು 18 ವರ್ಷ ಮೇಲ್ಪಟ್ಟ ಎಲ್ಲರಿಗೆ ಬೂಸ್ಟರ್‌ ನೀಡಲು ಮುಂದಾಗಿದೆ. ಈ ಬೂಸ್ಟರ್ ಡೋಸ್‌ ಅನ್ನು ಫ್ರೀಯಾಗಿ ನೀಡುವುದಾಗಿ ಕೇಂದ್ರ ಮಂತ್ರಿ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

covid-19

ಬೂಸ್ಟರ್ ಲಸಿಕೆ ಯಾವಾಗ ನೀಡಲಾಗುತ್ತಿದೆ, ಎಷ್ಟು ಸಮಯದವರೆ ಈ ಫ್ರೀ ಲಸಿಕೆ ನೀಡಲಾಗುವುದು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ:

ಫ್ರೀ(ಉಚಿತ) ಬೂಸ್ಟರ್‌ ಲಸಿಕೆ ಯಾವಾಗ ದೊರೆಯಲಿದೆ?

ಫ್ರೀ(ಉಚಿತ) ಬೂಸ್ಟರ್‌ ಲಸಿಕೆ ಯಾವಾಗ ದೊರೆಯಲಿದೆ?

ಭಾರತದಲ್ಲಿ ಫ್ರೀ ಬೂಸ್ಟರ್ ಲಸಿಕೆ ಜುಲೈ 15, 2022ರಿಂದ ಮುಂದಿನ 75 ದಿನಗಳವರೆಗೆ ದೊರೆಯಲಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಉಚಿತವಾಗಿ ಬೂಸ್ಟರ್‌ ಲಸಿಕೆ ಪಡೆಯಬಹುದಾಗಿದೆ.

 ಆಜಾದಿ ಕಿ ಅಮೃತ್‌ ಮಹೋತ್ಸವ ಪ್ರಯೋಕ್ತ ಉಚಿತ ಬೂಸ್ಟರ್‌

ಆಜಾದಿ ಕಿ ಅಮೃತ್‌ ಮಹೋತ್ಸವ ಪ್ರಯೋಕ್ತ ಉಚಿತ ಬೂಸ್ಟರ್‌

ಭಾರತವು 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ, ಸರ್ಕಾರದ ಆಜಾದಿ ಕಿ ಅಮೃತ್‌ ಮಹೋತ್ಸವ ಪ್ರಯೋಕ್ತ ಬೂಸ್ಟರ್‌ ಲಸಿಕೆಯನ್ನು ಉಚಿತವಾಗಿ ನೀಡಲು ಮುಂದಾಗಿದೆ.

77 ಕೋಟಿ ಜನರಿಗೆ ಲಸಿಕೆ ಸಿಗಲಿದೆ

77 ಕೋಟಿ ಜನರಿಗೆ ಲಸಿಕೆ ಸಿಗಲಿದೆ

ಸರ್ಕಾರವು 77 ಕೋಟಿ ಜನರಿಗೆ ಬೂಸ್ಟರ್ ಲಸಿಕೆ ನೀಡಲು ತೀರ್ಮಾನಿಸಿದ್ದು ಅದರಲ್ಲಿ 16 ಕೋಟಿ ಜನರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ.

 ಸೆಕೆಂಡ್‌ ಡೋಸ್‌ ಬಳಿಕ ಬೂಸ್ಟರ್‌ ಡೋಸ್‌ ಯಾವಾಗ ತೆಗೆದುಕೊಳ್ಳಬೇಕು?

ಸೆಕೆಂಡ್‌ ಡೋಸ್‌ ಬಳಿಕ ಬೂಸ್ಟರ್‌ ಡೋಸ್‌ ಯಾವಾಗ ತೆಗೆದುಕೊಳ್ಳಬೇಕು?

ಕೇಂದ್ರ ಆರೋಗ್ಯ ಇಲಾಖೆ ಸೆಕೆಂಡ್‌ ಡೋಸ್‌ ಬಳಿಕ ಬೂಸ್ಟರ್‌ ಡೊಸ್‌ ತೆಗೆದುಕೊಳ್ಳುವ ಅಂತರವನ್ನು 9 ತಿಂಗಳಿನಿಂದ 6 ತಿಂಗಳಿಗೆ ಇಳಿಸಿದೆ.

ಬೂಸ್ಟರ್‌ ಡೋಸ್‌ ಅವಶ್ಯಕ ಏಕೆ?

ಬೂಸ್ಟರ್‌ ಡೋಸ್‌ ಅವಶ್ಯಕ ಏಕೆ?

ICMR ಪ್ರಕಾರ ಸೆಕೆಂಡ್‌ ಡೋಸ್‌ ಲಸಿಕೆ ತೆಗೆದು 6 ತಿಂಗಳು ಕಳೆದ ಮೇಲೆ ಅದರ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಹೋಗುವುದು, ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಕೊರೊನಾದ ಪಾಯ ಅದಿಕ, ಇದನ್ನು ತಡೆಗಟ್ಟಲು ಬೂಸ್ಟರ್ ಡೋಸ್‌ ಸಹಕಾರಿಯಾಗಿದೆ.

English summary

Free Booster Covid-19 doses to be Given to All Above 18 Years of Age From July 15; Details in kannada

On the occasion of India's 75 years of independence, from 15th July 2022 till the next 75 days, citizens above 18 years of age will be given booster doses free of cost says Union Minister Anurag Thakur,
Story first published: Thursday, July 14, 2022, 9:05 [IST]
X
Desktop Bottom Promotion