For Quick Alerts
ALLOW NOTIFICATIONS  
For Daily Alerts

ಯೋನಿಯ ದುರ್ವಾಸನೆ ತಡೆಯಲು ಈ ಮನೆಮದ್ದುಗಳೇ ಸಾಕು

|

ಹೆಣ್ಣುಮಕ್ಕಳು ಯೋನಿಯ ಆರೋಗ್ಯವನ್ನು ಮಾಡಿಕೊಳ್ಳಲು ಸಾಕಷ್ಟು ಮಂಜಾಗ್ರತೆಯನ್ನು ವಹಿಸಬೇಕಿದೆ. ಯೋನಿಯು ತನ್ನದೇ ಆದ ವಾಸನೆಯನ್ನು ಹೊಂದಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೂ ಕೆಲವೊಮ್ಮೆ, ಯೋನಿಯು ಮೀನಿನಂಥ ವಾಸನೆಯನ್ನು ಹೊಂದಿರುತ್ತದೆ, ಇದನ್ನು ಬಹುತೇಕ ಹೆಣ್ಣು ಮಕ್ಕಳು ಅನುಭವಿಸಿರುತ್ತಾರೆ. ಹಲವು ಬಾರಿ ಇದು ನಮ್ಮಲ್ಲಿ ಆತ್ಮಸ್ಥೈರ್ಯ, ಹಲವು ಸಂತೋಷದ ಕ್ಷಣಗಳನ್ನು ಕಸಿಯುತ್ತದೆ. ಕೆಲವು ಸಂದರ್ಭದಲ್ಲಿ ಮುಜುಗರವನ್ನುಂಟು ಮಾಡುತ್ತದೆ ಎಂದರೆ ತಪ್ಪಾಗಲಾರದು.

ಯೋನಿಯ ಸೋಂಕು, ಹಾರ್ಮೋನುಗಳ ಬದಲಾವಣೆ ಅಥವಾ ನೈರ್ಮಲ್ಯದಂತಹ ಕಾರಣಗಳಿಂದ ಸಂಭವಿಸಬಹುದು. ಸತ್ಯವನ್ನು ಹೇಳಬೇಕು, ಅಲ್ಲದೇ ನೀವು ಏನನ್ನು ತಿನ್ನುತ್ತೀರಿ ಎನ್ನುವುದು ನಿಮ್ಮ ಯೋನಿಯ ವಾಸನೆಯ ಮೇಲೆ ಪ್ರಭಾವ ಬೀರುತ್ತದೆ.

ಹೌದು, ಯೋನಿಯ ಆರೋಗ್ಯ ಕಾಪಾಡುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಅಂದರೆ ಯೋನಿಯು ಸುಗಂಧ ದ್ರವ್ಯದಂತ ವಾಸನೆಯನ್ನು ಹೊಂದಿರಬೇಕೇ ಎಂದು ನಿರೀಕ್ಷಿಸಬೇಡಿ. ಆರೋಗ್ಯಕರ ಯೋನಿಯು ಸ್ವಲ್ಪ ವಿಭಿನ್ನ ವಾಸನೆಯನ್ನು ನೀಡುತ್ತದೆ ಮತ್ತು ಅದರ ವಾಸನೆ ಕೂಡ ಬದಲಾಗುತ್ತದೆ. ಯೋನಿಯ ಅರೋಗ್ಯಕ್ಕಾಗಿ ಹಾಗೂ ಕೆಟ್ಟ ವಾಸನೆ ಬರದಿರಲು ಉತ್ತಮವಾದ ನೈಸರ್ಗಿಕವಾದ ಕೆಲವು ಆಹಾರಗಳಿವೆ. ಯಾವುದು ಈ ಆಹಾರಗಳು ಮುಂದೆ ನೋಡೋಣ:

1. ಅನಾನಸ್

1. ಅನಾನಸ್

ಅನಾನಸ್ ಯೋನಿ ಸ್ರವಿಸುವಿಕೆಯ ವಾಸನೆಯನ್ನು ಸಿಹಿಗೊಳಿಸುತ್ತದೆ ಎನ್ನಲಾಗುತ್ತದೆ. ಇದರಲ್ಲಿ ವಿಟಮಿನ್ ಸಿ, ಬಿ ಮತ್ತು ಫೈಬರ್ ಸಮೃದ್ಧವಾಗಿರುವ ಕಾರಣ ಇದನ್ನು ತಿನ್ನುವುದು ಪ್ರಯೋಜನಕಾರಿಯಾಗಿದೆ. ನಿಮ್ಮ ಕರುಳಿನ ಆರೋಗ್ಯಕ್ಕೆ ಮತ್ತು ನಿಮ್ಮ ಯೋನಿಯ ಆರೋಗ್ಯವನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತವೆ.

2. ಕಲ್ಲಂಗಡಿ

2. ಕಲ್ಲಂಗಡಿ

ಕಲ್ಲಂಗಡಿ ನಿಮ್ಮ ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ ಮತ್ತು ನಿಮ್ಮ ಯೋನಿ ಸ್ವಚ್ಛವಾಗಿಡಲು ಪರಿಣಾಮಕಾರಿ ಹಣ್ಣಾಗಿದೆ. ಇದು ಸೋಂಕನ್ನು ತಡೆಯುತ್ತದೆ ಮತ್ತು ವಿಲಕ್ಷಣವಾದ ವಾಸನೆಯನ್ನು ತೊಡೆದುಹಾಕುತ್ತದೆ. ಇದು ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುವ ಮತ್ತು ಯೋನಿಗೆ ಉತ್ತಮ ಬ್ಯಾಕ್ಟೀರಿಯಾವನ್ನು ಪರಿಚಯಿಸುವ ಪ್ರೋಬಯಾಟಿಕ್‌ ಗಳನ್ನು ಒಳಗೊಂಡಿರುವ ಹಣ್ಣು.

3. ಮೊಸರು

3. ಮೊಸರು

ಬಹುತೇಕರು ಡೈರಿ ಉತ್ಪನ್ನಗಳ ಅತಿಯಾದ ಬಳಕೆ ಯೋನಿಯ ವಾಸನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ, ಆದರೆ ಮೊಸರು ಇದಕ್ಕೆ ಹೊರತಾಗಿದೆ. ಮೊಸರಿನಲ್ಲಿ ಕಂಡುಬರುವ ಉತ್ತಮ ಬ್ಯಾಕ್ಟೀರಿಯಾ ಅಥವಾ ಪ್ರೋಬಯಾಟಿಕ್‌ಗಳು ನಿಮ್ಮ ಯೋನಿಯ ಬ್ಯಾಕ್ಟೀರಿಯಾದ ಸಮತೋಲನವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಆದರೆ ಮೊಸರಿಗೆ ಸಕ್ಕರೆ ಸೇರಿಸಿ ಸೇವಿಸುವುದನ್ನು ತಪ್ಪಿಸಿ, ಏಕೆಂದರೆ ಅವು ನಿಮ್ಮ ಯೋನಿಯ ವಾಸನೆಯನ್ನು ಇನ್ನಷ್ಟು ಹದಗೆಡಿಸುತ್ತವೆ.

4. ಪುದೀನಾ

4. ಪುದೀನಾ

ಪುದೀನಾ ಚಹಾ ಅಥವಾ ಪುದಿನಾ ಎಲೆಯನ್ನು ಸೇವಿಸಿ ನಂತರ ನಿಮ್ಮ ಯೋನಿ ವಾಸನೆಯಲ್ಲಿನ ವ್ಯತ್ಯಾಸವನ್ನು ಗಮನಿಸಿ. ಪುದೀನಾ ಅದರ ಆರೊಮ್ಯಾಟಿಕ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ಇದು ನಿಮ್ಮ ಯೋನಿಯ ವಾಸನೆಯನ್ನು ಉತ್ತಮಗೊಳಿಸುತ್ತದೆ.

5. ಕ್ರಾನ್ಬೆರಿ

5. ಕ್ರಾನ್ಬೆರಿ

ಕ್ರಾನ್ಬೆರಿ ರಸವನ್ನು ಕುಡಿಯುವುದರಿಂದ ಮೂತ್ರದ ಸೋಂಕು ಬರುವ ಸಾಧ್ಯತೆಗಳು ಕಡಿಮೆ ಎಂದು ಕೇಳಿರಬಹುದು. ಕ್ರಾನ್ಬೆರಿಗಳಲ್ಲಿನ ಸಂಯುಕ್ತಗಳು ಯೋನಿಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ ಮತ್ತು ಅದರ ಆಮ್ಲೀಯ ಗುಣಲಕ್ಷಣಗಳು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಆರೋಗ್ಯಕರ ಮತ್ತು ಸೋಂಕು ರಹಿತ ಯೋನಿಯಲ್ಲಿ ಕೆಟ್ಟ ವಾಸನೆಯನ್ನು ಇರುವುದಿಲ್ಲ.

ದಾಲ್ಚಿನ್ನಿ

ದಾಲ್ಚಿನ್ನಿ

ಯೋನಿಯ ಆಮ್ಲವನ್ನು ಸಮತೋಲನಗೊಳಿಸಲು ದಾಲ್ಚಿನ್ನಿ ಅದ್ಭುತವಾಗಿದೆ. ದಾಲ್ಚಿನ್ನಿಯಲ್ಲಿ ಕ್ಷಾರೀಯ ಮಸಾಲೆ ಇದ್ದು, ಅದು ಯಾವುದೇ ಹೆಚ್ಚುವರಿ ಆಮ್ಲೀಯತೆಯನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ, ಸೌಮ್ಯ ಪ್ರತಿಜೀವಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯೀಸ್ಟ್ ಸೋಂಕನ್ನು ತಡೆಯುತ್ತದೆ. ದಾಲ್ಚಿನ್ನಿ ನಿಮ್ಮ ಯೋನಿಯ ಆರೋಗ್ಯವನ್ನು ಸುಧಾರಿಸುತ್ತದೆ.

English summary

Foods That Keep Your Vagina Smelling Right in Kannada

Here we are discussing about Foods That Keep Your Vagina Smelling Right in Kannada. several all-natural foods that you can eat for a better vagina smelling. Read more.
X
Desktop Bottom Promotion