Just In
- 1 hr ago
ಮಳೆಗಾಲದಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ: ಈ ಅಪಾಯಕಾರಿ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ
- 3 hrs ago
ಒಟ್ಟಿಗೆ ಯುದ್ಧ ವಿಮಾನವನ್ನು ಹಾರಿಸುವ ಮೂಲಕ ಇತಿಹಾಸ ಬರೆದ ಅಪ್ಪ-ಮಗಳು
- 4 hrs ago
ಮಾನ್ಸೂನ್ನಲ್ಲಿ ಕಾಡುವ ಈ ತ್ವಚೆಯ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ
- 6 hrs ago
ಕಾಂಟಾಕ್ಟ್ ಲೆನ್ಸ್ ಹಾಕಿಯೇ ಮಲಗೋದ್ರಿಂದ ಏನಾಗುತ್ತೆ ಗೊತ್ತಾ..? ಈ ತಪ್ಪು ಮಾಡಲೇಬೇಡಿ..!
Don't Miss
- Finance
Gold Rate Today: ಚಿನ್ನದ ಬೆಲೆ ಇಳಿಕೆ: ಪ್ರಮುಖ ನಗರಗಳಲ್ಲಿ ಜು.6ರ ದರ ಎಷ್ಟಿದೆ?
- Movies
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಶರ್ಟ್ ಬಿಚ್ಚಿಸಿದ ಕಮೀಷನರ್
- Sports
ಅತಿಯಾದ ನಾಯಕತ್ವ ಬದಲಾವಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ
- News
ಏಕ ಬಳಕೆ ಪ್ಲಾಸ್ಟಿಕ್ ನಿಷೇಧ: ಮೂರೇ ದಿನದಲ್ಲಿ 2 ಲಕ್ಷ ರುಪಾಯಿ ದಂಡ ಸಂಗ್ರಹಿಸಿದ ಬಿಬಿಎಂಪಿ
- Automobiles
ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ
- Education
DC Office Tumakuru Recruitment 2022 : 7 ಲೋಡರ್ಸ್ ಮತ್ತು ಕ್ಲೀನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಅಮೆಜಾನ್ ಪ್ರೈಮ್ ಡೇ ಸೇಲ್ 2022 ಡೇಟ್ ಫಿಕ್ಸ್! ಡಿಸ್ಕೌಂಟ್ ಏನಿದೆ?
- Travel
ಪರಿಪೂರ್ಣದೃಶ್ಯಗಳನ್ನು ಹೊಂದಿರುವ ತಾಣ - ಶಿರ್ಸಿ
ಆಗಾಗ ತಲೆನೋವು ಕಾಡುತ್ತಿದೆಯೇ? ಈ ಆಹಾರಗಳು ಕಾರಣವಾಗಿರಬಹುದು
ಕೆಲವರಿಗೆ ಆಗಾಗ ತಲೆನೋವಿನ ಸಮಸ್ಯೆ ಕಾಡುತ್ತಿರುತ್ತದೆ. ತಲೆನೋವು ಬಂದರೆ ಆ ದಿನವನ್ನೇ ಹಾಳು ಮಾಡಿ ಬಿಡುತ್ತದೆ. ಯಾವ ಕೆಲಸದ ಕಡೆಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ತಲೆನೋವು ಕಡಿಮೆ ಮಾಡಲು ಔಷಧಿಗಳ ಮೊರೆ ಹೋಗಬೇಕಾಗುತ್ತದೆ.
ಆಗಾಗ ನೋವು ನಿವಾರಕ ನುಂಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ನೋವು ನಿವಾರಕ ನುಂಗುವುದರಿಂದ ಕಿಡ್ನಿ ಆರೋಗ್ಯ ಹಾಳಾಗುವುದು. ಆಗಾಗ ತಲೆನೋವು ಉಂಟಾಗುತ್ತಿದ್ದರೆ ಅದಕ್ಕೆ ಏನು ಕಾರಣ ಎನ್ನುವುದು ತಿಳಿದುಕೊಳ್ಳುವುದು ಒಳ್ಳೆಯದು. ಕೆಲವೊಮ್ಮೆ ದೊಡ್ಡ ಆರೋಗ್ಯ ಸಮಸ್ಯೆಯೇನೂ ಇರುವುದಿಲ್ಲ, ನಾವು ತಿನ್ನುವ ಆಹಾರಗಳಿಂದಾಗಿ ತಲೆನೋವು ಕಾಡುತ್ತಿರುತ್ತದೆ.
ನಿಮಗೆ ಆಗಾಗ ತಲೆನೋವು ಉಂಟಾಗುತ್ತಿದ್ದರೆ ಈ ನಿಮ್ಮ ಆಹಾರ ಅಭ್ಯಾಸ ಒಂದು ಕಾರಣವಾಗಿರಬಹುದು:

1. ತುಂಬಾ ಕಾಫಿ ಕುಡಿಯುವುದು
ದಿನದಲ್ಲಿ ಎರಡು ಲೋಟ ಕಾಫಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು, ಆದರೆ ಕೆಲವರಿಗೆ ನಾಲ್ಕರಿಂದ ಐದು ಲೋಟ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಇದರಿಂದಾಗಿ ದೇಹದಲ್ಲಿ ಕೆಫೀನ್ ಅಂಶ ಹೆಚ್ಚಾಗಿ ತಲೆನೋವು ಕಾಡುವುದು. ಮೈಗ್ರೇನ್ ಇದ್ದರಂತೂ ತುಂಬಾ ಕಾಫಿ ಕುಡಿಯಲೇಬಾರದು.
ನಿಮ್ಮ ಕಾಫಿ ಅಭ್ಯಾಸವನ್ನು ದಿನದಲ್ಲಿಎರಡು ಲೋಟಕ್ಕೆ ಇಳಿಸಿ ನೋಡಿ, ಆಗ ತಲೆನೋವಿನ ಕಾಟವೂ ಇಲ್ಲವಾಗುವುದು.

2. ಚಾಕೋಲೆಟ್
ತುಂಬಾ ಚಾಕೊಲೆಟ್ ತಿನ್ನುವ ಅಭ್ಯಾಸವಿದೆಯೇ, ಅದು ಕೂಡ ತಕೆನೋವು ಬರಲು ಒಂದು ಕಾರಣವಾಗಿರಬಹುದು. ಕಡಿಮೆ ಕೋಕಾ ಅಂಶವಿರುವ ಚಾಕೋಲೆಟ್ ತಿನ್ನುವುದರಿಂದ ತಲೆನೋವು ಉಂಟಾಗುವುದು.

3. ಮದ್ಯಪಾನ
ಮದ್ಯಪಾನಿಗಳಿಗೆ ತಲೆನೋವು ಕಾಡುವುದು ಸಾಮಾನ್ಯ. ಅತ್ಯಧಿಕ ಮದ್ಯಪಾನ ಮಾಡುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ, ಇದರಿಂದ ಮೆದುಳಿಗೆ ಅಧಿಕ ರಕ್ತಸಂಚಾರ ಆಗುತ್ತದೆ. ಇದರಿಂದ ತಲೆನೋವು ಉಂಟಾಗುವುದು.

4. ಕೃತಕ ಸಿಹಿ
ಕೃತಕ ಸಿಹಿ ಇರುವ ಆಹಾರಗಳು, ಪಾನೀಯಗಳನ್ನು ತೆಗೆದುಕೊಳ್ಳುವುದರಿಂದ ತಲೆನೋವು ಉಂಟಾಗುವುದು. ಕೃತಕ ಸಿಹಿ ಇರುವ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಲ್ಲ.

5. ಹಳೆಯ ಚೀಸ್ ತಿನ್ನುವುದು
ತುಂಬಾ ಹಳೆಯದಾದ ಚೀಸ್ನಲ್ಲಿ ಟೈರಾಮೈನ್ ಇದ್ದು, ಇದು ಪ್ರೊಟೀನ್ ಅನ್ನು ವಿಭಜಿಸುವುದರಿಂದ ತಲೆನೋವು ಉಂಟಾಗುವುದು. ಫೆಟಾ ಚೀಸ್, ಪರ್ಮಸೇನ್ ಚೀಸ್, ಬ್ಲೂ ಚೀಸ್ ಇವುಗಳಲ್ಲಿ ಟೈರಾಮೈನ್ ಅಧಿಕವಿರುತ್ತದೆ.

6.MSG ಇರುವ ಆಹರ ಸೇವನೆ
MSG ಎಂದರೆ ಮೋನೋಸೋಡಿಯಮ್ ಗ್ಲುಟೇಮೇಟ್ ಇರುವ ಆಹಾರಗಳೆಂದರೆ ಸೋಯಾ ಸಾಸ್, ಟೊಮೆಟೊ ಸಾಸ್, ಸಂಸ್ಕರಿಸಿದ ಮಾಂಸ. ಮೈಗ್ರೇನ್ ಇರುವವರು ಇಂಥ ಆಹಾರಗಳನ್ನು ತಿನ್ನುವುದರಿಂದ ತಲೆನೋವು ಅಧಿಕವಾಗುವುದು.

7. ಐಸ್ಕ್ರೀಮ್
ಕೆಲವರಿಗೆ ಐಸ್ಕ್ರೀಮ್ ತಿಂದರೆ ತಲೆನೋವು ಉಂಟಾಗುವುದು. ತುಂಬಾ ತಣ್ಣಗಿನ ಆಹಾರವನ್ನು ತಿಂದಾಗ ಕೆಲವು ನರಗಳು ಉತ್ತೇಜಿಸುತ್ತದೆ. ಇದರಿಮದ ಮೆದುಳಿಗೆ ರಕ್ತ ಸಂಚಾರವಾಗುವುದರಲ್ಲಿ ವ್ಯತ್ಯಾಸ ಉಂಟಾಗಿ ತಲೆನೋವು ಉಂಟಾಗುವುದು.

8. ಸಂಸ್ಕರಿಸಿದ ಮಾಂಸ
ಸಂಸ್ಕರಿಸಿದ ಮಾಂಸ ಬಾಯಿಗೆ ರುಚಿ ಅನಿಸಿದರೂ ಇದನ್ನು ತಿನ್ನುವುದರಿಂದ ತಲೆನೋವು ಉಂಟಾಗುವುದು. ಏಕೆಂದರೆ ಸಂಸ್ಕರಿಸಿದ ಮಾಂಸದಲ್ಲಿ ನೈಟ್ರೇಟ್ಸ್ ಅಂಶವಿರುತ್ತದೆ. ಇಂಥ ಮಾಂಸ ತಿಂದಾಗ ನಿಮಗೆ ತಲೆನೋವು ಕಾಡುತ್ತಿದ್ದರೆ ಸಂಸ್ಕರಿಸಿದ ಮಾಂಸ ತಿನ್ನದಿರುವುದು ಒಳ್ಳೆಯದು.

9. ತಣ್ಣನೆಯ ಉಪ್ಪಿನ ಪದಾರ್ಥಗಳು
ಯೋಗರ್ಟ್, ಪಾಸ್ತಾ ಸಾಸ್, ನಟ್ಸ್, ಇನ್ಸ್ಟಾಂಟ್ ನೂಡಲ್ಸ್ ಇವುಗಳನ್ನೆಲ್ಲಾ ತಿನ್ನುವುದರಿಂದ ತಲೆ ನೋವು ಬರುವುದು. ಅಲ್ಲದೆ ಅಧಿಕ ಉಪ್ಪಿನಂಶವಿರುವ ಆಹಾರಗಳು ಆರೋಗ್ಯಕರವೂ ಅಲ್ಲ.

10. ನೆಲಗಡಲೆ
ಕೆಲವರಿಗೆ ನೆಲಗಡಲೆ ತಿಂದಾಗ ತಲೆನೋವು ಉಂಟಾಗುವುದು. ಇನ್ನು ಇದರಿಂದ ತಯಾರಿಸುವ ಪೀನಟ್ ಬಟರ್ ಕೂಡ ಮೈಗ್ರೇನ್ ಸಮಸ್ಯೆ ಉಂಟು ಮಾಡುತ್ತದೆ. ಮತ್ತೆ ಕೆಲವರಿಗೆ ಹುಳಿ ಪದಾರ್ಥ, ಬ್ರೆಡ್, ಪಿಜ್ಜಾ, ಆಲೂಗಡ್ಡೆ ಚಿಪ್ಸ್, ಡ್ರೈ ಫ್ರುಟ್ಸ್, ಸೂಪ್ ಇವುಗಳನ್ನು ತಿಂದರೆ ತಲೆನೋವು ಉಂಟಾಗುವುದು.
ಸಲಹೆ: ಕೆಲವೊಂದು ಆಹಾರಗಳನ್ನು ತಿಂದಾಗ ನಿಮಗೆ ತಲೆನೋವು ಕಾಡುತ್ತಿದ್ದರೆ, ಅಂಥ ಆಹಾರಗಳನ್ನು ತಿನ್ನದಿದ್ದರೆ ತಲೆನೋವು ಸಮಸ್ಯೆ ಕಾಡುವುದಿಲ್ಲ.

ತಲೆನೋವಿನ ಬಗ್ಗೆ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು
ಬೆಳಗ್ಗೆ ಏಳುವಾಗ ದಿನಾ ತಲೆನೋವು ಕಾಡುವುದು ಏಕೆ?
ನಿದ್ದೆ ಸರಿಯಾಗಿ ಆಗದಿದ್ದರೆ, ಮಾನಸಿಕ ಒತ್ತಡ ಇವುಗಳಿಂದಾಗಿ ಬೆಳಗ್ಗೆ ಎದ್ದಾಗ ತಲೆನೋವು ಉಂಟಾಗುವುದು.
ಬ್ರೆಡ್ ತಿನ್ನುವುದರಿಂದ ತಲೆನೋವು ಉಂಟಾಗುವುದಾ?
ಕೆಲವರಿಗೆ ಬ್ರೆಡ್ ತಿನ್ನುವುದರಿಂದ ತಲೆನೋವು ಉಂಟಾಗುವುದು.
ಜೇನು ತಿಂದರೆ ತಲೆನೋವು ಉಂಟಾಗುವುದೇ?
ಕೆಲವರಿಗೆ ಜೇನು ಅಲರ್ಜಿ ಇರುತ್ತದೆ, ಅಂಥವರು ಜೇನು ಸೇವಿಸಿದರೆ ತಲೆನೀವು, ವಾಂತಿ ಬೇಧಿ ಉಂಟಾಗುವುದು.
ಯಾವ ಆಹಾರ ತಲೆನೋವು ಕಡಿಮೆ ಮಾಡುತ್ತದೆ?
ಒಣ ಏಪ್ರಿಕಾಟ್, ಬಾಳೆಹಣ್ಣು, ಬೆಣ್ಣೆಹಣ್ಣು, ಗೋಡಂಬಿ, ಧಾನ್ಯಗಳು, ಕುಂಬಳಕಾಯಿ ಬೀಜ ಇವುಗಳು ತಲೆನೋವು ಕಡಿಮೆ ಮಾಡುತ್ತದೆ.
ತಲೆನೋವು ಬೇಗನೆ ಕಡಿಮೆ ಮಾಡಲು ಏನು ಮಾಡಬೇಕು?
ಹಾಟ್ ವಾಟರ್ ಕಂಪ್ರೆಸ್, ಹೆಡ್ ಮಸಾಜ್, ನಿದ್ದೆ ಮಾಡುವುದು, ಬಿಸಿ ನೀರಿನ ಸ್ನಾನ ಇವೆಲ್ಲಾ ಸಹಕಾರಿ.