For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್‌ನ ಅಪಾಯ ಹೆಚ್ಚಿಸುವ ಈ ಆಹಾರಗಳ ಬಗ್ಗೆ ಇರಲಿ ಎಚ್ಚರ!

|

ಹೆಚ್ಚು ಸಿಗರೇಟ್, ಆಲ್ಕೋಹಾಲ್ ಮತ್ತು ತಂಬಾಕು ಸೇವನೆಯು ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ನಿಮಗೆ ಳಿದಿರಲೇಬೇಕು, ಆದರೆ ಕೆಲವು ಆಹಾರ ಪದಾರ್ಥಗಳು ಕ್ಯಾನ್ಸರ್ ಕೋಶಗಳು ಬೆಳೆಯಲು ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ?

ಹೌದು, ದೇಹದಲ್ಲಿ ಕ್ಯಾನ್ಸರ್‌ ಗೆಡ್ಡೆಗಳು ಬೆಳೆಯುವದಕ್ಕೆ ಕೌಟುಂಬಿಕ ಇತಿಹಾಸ, ಅಣುವಂಶೀಯತೆ ಒಂದು ಕಾರಣವಾದರೆ, ಬಾಹ್ಯ ಅಂಶಗಳು ಅಂದ್ರೆ ನಮ್ಮ ಜೀವನಶೈಲಿಯು ಸುಮಾರು ೮೦-೯೦ಶೇದವರೆಗೆ ಪ್ರಭಾವ ಬೀರಲಿದೆ. ಈ ಜೀವನಶೈಲಿಯ ಅಂಶಗಳಲ್ಲಿ ನಾವು ಸೇವಿಸುವ ಆಹಾರವೇ ಪ್ರಮುಖ ಪಾತ್ರ ವಹಿಸುವುದು. ಅಂತಹ ಆಹಾರಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಕ್ಯಾನ್ಸರ್‌ ಅಪಾಯ ಹೆಚ್ಚಿಸುವ ಆಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಸಿಹಿತಿಂಡಿಗಳು ಮತ್ತು ಬೇಕರಿ ಉತ್ಪನ್ನಗಳು:

ಸಿಹಿತಿಂಡಿಗಳು ಮತ್ತು ಬೇಕರಿ ಉತ್ಪನ್ನಗಳು:

ಬೇಕರಿ ಉತ್ಪನ್ನಗಳು, ತಂಪು ಪಾನೀಯಗಳು, ಸೋಡಾ, ಬಿಳಿ ಬ್ರೆಡ್, ಸಿಹಿತಿಂಡಿಗಳೆಲ್ಲವೂ ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರ ಪದಾರ್ಥಗಳು. ಇವುಗಳನ್ನು ತಿನ್ನುವುದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಗ್ಲೈಸೆಮಿಕ್ ಸೂಚ್ಯಂಕವು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಲು ಕಾರಣವಾಗುವ ಅಂಶಗಳಾಗಿವೆ. ಆದ್ದರಿಂದ ಅವುಗಳನ್ನು ಸಂಪೂರ್ಣವಾಗಿ ತಪ್ಪಿಸಿ ಏಕೆಂದರೆ ಕ್ಯಾನ್ಸರ್ ಕೋಶಗಳು ಬೆಳೆಯಲು ಕೇವಲ ಸಕ್ಕರೆಯನ್ನು ಇಂಧನವಾಗಿ ಬಳಸುತ್ತವೆ.

ಕೆಂಪು ಮಾಂಸ:

ಕೆಂಪು ಮಾಂಸ:

ಕೆಂಪು ಮಾಂಸವೆಂದರೆ, ಕುರಿಮರಿ, ಹಂದಿಮಾಂಸ ಮತ್ತು ಗೋಮಾಂಸದವರೆಗೆ ಇರುತ್ತದೆ. ಸಂಸ್ಕರಿಸಿದ ಮಾಂಸದ ರುಚಿ ಮತ್ತು ತಾಜಾತನವನ್ನು ದೀರ್ಘಕಾಲದವರೆಗೆ ಸಂರಕ್ಷಿಸಲು ಉಪ್ಪು, ಹುದುಗುವಿಕೆ, ಹೊಗೆಯಂತಹ ವಿವಿಧ ಪ್ರಕ್ರಿಯೆಗಳನ್ನು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಅವುಗಳ ಸೇವನೆಯು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸುತ್ತದೆ.

ಕ್ಯಾನ್ ಫುಡ್ಸ್:

ಕ್ಯಾನ್ ಫುಡ್ಸ್:

ಬಿಪಿಎ ಎಂಬ ಅತ್ಯಂತ ಅಪಾಯಕಾರಿ ರಾಸಾಯನಿಕವನ್ನು ಕ್ಯಾನ್‌ಗೆ ಲೇಪಿಸಲು ಬಳಸಲಾಗುತ್ತದೆ, ಇದು ಹಾರ್ಮೋನುಗಳ ಮಟ್ಟವನ್ನು ಹಾಳುಮಾಡುವುದು ಮಾತ್ರವಲ್ಲದೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.

ಆಲೂಗಡ್ಡೆ ಚಿಪ್ಸ್ / ಫ್ರೆಂಚ್ ಫ್ರೈಸ್:

ಆಲೂಗಡ್ಡೆ ಚಿಪ್ಸ್ / ಫ್ರೆಂಚ್ ಫ್ರೈಸ್:

ಫ್ರೆಂಚ್ ಫ್ರೈಸ್ ಮತ್ತು ಆಲೂಗೆಡ್ಡೆ ಚಿಪ್ಸ್ ಮಾಡುವ ಪ್ರಕ್ರಿಯೆಯಲ್ಲಿ ಬಹಳಷ್ಟು ಎಣ್ಣೆ ಮತ್ತು ಉಪ್ಪನ್ನು ಬಳಕೆ ಮಾಡಲಾಗುತ್ತದೆ. ಅವು ತಿನ್ನಲು ತುಂಬಾ ರುಚಿಯಾಗಿರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಮಕ್ಕಳು ಇದನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ ಆದರೆ ಅದರಲ್ಲಿ ಉಪ್ಪು, ಅನಾರೋಗ್ಯಕರ ಕೊಬ್ಬಿನ ಜೊತೆಗೆ ಅಕ್ರಿಲಾಮೈಡ್ ಎಂಬ ರಾಸಾಯನಿಕವು ಸಮೃದ್ಧವಾಗಿದೆ ಎಂದು ನಿಮಗೆ ತಿಳಿದಿದೆಯೇ? ಇದು ಹೆಚ್ಚಿನ ತಾಪಮಾನದಲ್ಲಿ ಅಡುಗೆ ಮಾಡುವುದರಿಂದ ಉಂಟಾಗುತ್ತದೆ. ಅಕ್ರಿಲಾಮೈಡ್ ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಉತ್ತೇಜಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಸಂಸ್ಕರಿಸಿದ ಆಹಾರ:

ಸಂಸ್ಕರಿಸಿದ ಆಹಾರ:

ಹಾಟ್‌ಡಾಗ್ಸ್‌, ಸಾಸೇಜ್‌ನಂತಹ ಸಂಸ್ಕರಿಸಿದ ಆಹಾರಗಳಿಗೆ ಅವುಗಳು ಹಾಳಾಗದಂತೆ ಕಾಪಾಡಲು ಅಧಿಕ ಪ್ರಮಾಣದಲ್ಲಿ ಉಪ್ಪು ಮತ್ತು ರಾಸಾಯನಿಕ ಪದಾರ್ಥಗಳನ್ನು ಮಿಶ್ರಣ ಮಾಡಲಾಗುತ್ತದೆ. ಅದರಲ್ಲೂ ಇವುಗಳಿಗೆ ಹಾಕುವ ನೈಟ್ರೇಟ್ ಎಂಬ ರಾಸಾಯನಿಕದಿಂದ ಎನ್-ನೈಟ್ರೊಸೊ ಎಂಬ ಕಾರ್ಸಿನೋಜೆನ್ಗಳು ಉತ್ಪತ್ತಿಯಾಗಬಹುದು. ೨೦೦೯ರಲ್ಲಿ ನಡೆದ ಅಧ್ಯಯನವೊಂದು, ಇದು ಹೊಟ್ಟೆಯ ಕ್ಯಾನ್ಸರ್ ಹಾಗೂ ಸಂಸ್ಕರಿಸಿದ ಮಾಂಸದ ಹೆಚ್ಚಿನ ಬಳಕೆಯು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ನಿರ್ಧರಿಸಿದ್ದಾರೆ .

ಸಂಸ್ಕರಿಸಿದ ಬಿಳಿ ಹಿಟ್ಟು:

ಸಂಸ್ಕರಿಸಿದ ಬಿಳಿ ಹಿಟ್ಟು:

ಸಂಸ್ಕರಿಸಿದ ಹಿಟ್ಟು ಮೂಲ ಗೋಧಿ ಹಿಟ್ಟಿನಲ್ಲಿರುವ ಪೌಷ್ಟಿಕಾಂಶಗಳನ್ನು ತೆಗೆದು ಹಾಕುತ್ತದೆ. ಇಷ್ಟೇ ಅಲ್ಲದೇ ಹೊಳೆಯುವ ಬಿಳಿ ಬಣ್ಣಕ್ಕಾಗಿ ಹಿಟ್ಟನ್ನು ಕ್ಲೋರಿನ್ ಗ್ಯಾಸ್ ನಿಂದ ಬ್ಲೀಚ್ ಮಾಡಲಾಗುತ್ತದೆ. ಇದರ ಸೇವನೆಯಿಂದ ಕ್ಯಾನ್ಸರ್ ಕಾಯಿಲೆ ಕಟ್ಟಿಟ್ಟ ಬುತ್ತಿ. ಇದರಿಂದ ಅಂಡಾಶಯ , ಸ್ತನ ಮತ್ತು ಎಂಡೊಮೆಟ್ರಿಯಲ್ (ಗರ್ಭಾಶಯ) ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಅಲ್ಕೋಹಾಲ್:

ಅಲ್ಕೋಹಾಲ್:

ನೀವು ಆಲ್ಕೋಹಾಲ್ ಸೇವಿಸಿದಾಗ ಲಿವರ್ ಆಲ್ಕೋಹಾಲ್ ಅನ್ನು ಅಸೆಟಾಲ್ಡಿಹೈಡ್, ಕಾರ್ಸಿನೋಜೆನಿಕ್ ಸಂಯುಕ್ತವಾಗಿ ವಿಭಜಿಸುತ್ತದೆ. ಇದು ನಿಮ್ಮ ಡಿಎನ್ಎ ಹಾನಿ ಮಾಡುವುದಲ್ಲದೇ, ರೋಗನಿರೋಧಕ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತದೆ, ಜೊತೆಗೆಮಹಿಳೆಯರಲ್ಲಿ, ಆಲ್ಕೋಹಾಲ್ ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಸ್ತನ ಕ್ಯಾನ್ಸರ್ಗೆ ಕಾರಣವಾಗಬಹುದು.

English summary

Foods Items That Can Increase Your Risk of Cancer in kannada

Here we talking about Foods Items That Can Increase Your Risk of Cancer in kannada, read on
Story first published: Wednesday, December 1, 2021, 17:18 [IST]
X
Desktop Bottom Promotion