For Quick Alerts
ALLOW NOTIFICATIONS  
For Daily Alerts

ಥೈರಾಯ್ಡ್‌ ಸಮಸ್ಯೆ ಇರುವವರಿಗೆ ಯಾವ ಆಹಾರಗಳು ಒಳ್ಳೆಯದು? ಯಾವುದು ಒಳ್ಳೆಯದಲ್ಲ

|

ಥೈರಾಯ್ಡ್ ಹಾರ್ಮೋನ್‌ ನಮ್ಮ ದೇಹದ ಕಾರ್ಯಚಟುವಟಿಕೆ ನಿಯಂತ್ರಿಸುವ ಪ್ರಮುಖವಾದ ಹಾರ್ಮೋನ್‌ ಆಗಿದೆ. ಇದು ನಮ್ಮ ದೇಹದಲ್ಲಿ ಚಯಪಚಯ ಕ್ರಿಯೆ ಸರಿಯಾಗಿ ನಡೆಯಲು ಅವಶ್ಯಕವಾಗಿದೆ. ಇದು ದೇಹದ ಉಷ್ಣತೆ ನಿಯಂತ್ರಿಸುತ್ತದೆ, ಕೊಬ್ಬು ಕರಗಿಸುವ ಕಾರ್ಯ ಮಾಡುತ್ತದೆ. ಈ ಹಾರ್ಮೋನ್‌ ಉತ್ಪತ್ತಿಯಲ್ಲಿ ವ್ಯತ್ಯಾಸವಾದರೆ ತೊಂದರೆಯಾಗುವುದು.

ಥೈರಾಯ್ಡ್‌ ಸಮಸ್ಯೆ ಎಂಬುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಥೈರಾಯ್ಡ್‌ ಗ್ರಂಥಿಯಲ್ಲಿ ಹಾರ್ಮೋನ್‌ಗಳು ಅತೀ ಕಡಿಮೆ ಅಥವಾ ಅತೀ ಹೆಚ್ಚು ಉತ್ಪತ್ತಿಯಾದಾಗ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ.

ಥೈರಾಯ್ಡ್‌ ಹಾರ್ಮೋನ್ ಕಡಿಮೆ ಉತ್ಪತ್ತಿಯಾದರೆ ಹೈಪೋಥೈರಾಯ್ಡ್‌, ಅಧಿಕ ಉತ್ಪತ್ತಿಯಾದರೆ ಹೈಪರ್‌ ಥೈರಾಯ್ಡ್‌ ಸಮಸ್ಯೆ ಉಂಟಾಗುವುದು.

ಹೈಪೋಥೈರಾಯ್ಡ್ ಲಕ್ಷಣಗಳು

ಹೈಪೋಥೈರಾಯ್ಡ್ ಲಕ್ಷಣಗಳು

* ಚಯಪಚಯ ಕ್ರಿಯೆ ನಿಧಾನವಾಗುವುದು

* ತಲೆಸುತ್ತು

* ತಂಪಾದ ವಸ್ತುಗಳನ್ನು ತಿಂದರೆ ಆಗಲ್ಲ

* ಮಲಬದ್ಧತೆ

* ಒಣ ತ್ವಚೆ

* ಮೈ ತೂಕ ಹೆಚ್ಚಾಗುವುದು

* ಹೃದಯ ಬಡಿತ ಕಡಿಮೆಯಾಗುವುದು

*ಸ್ನಾಯುಗಳು ಬಲಹೀನವಾಗುವುದು

* ಉದ್ವೇಗ'

* ಅನಿಯಮಿತ ಋತುಸ್ರಾವ

ಹೈಪರ್‌ಥೈರಾಯ್ಡ್‌

ಹೈಪರ್‌ಥೈರಾಯ್ಡ್‌

* ಬೇಗ ಹಸಿವಾಗುವುದು

* ತಲೆಸುತ್ತು

* ಸೆಕೆ ಸಹಿಸಲು ಸಾಧ್ಯವಾಗುವುದೇ ಇಲ್ಲ

* ಆಗಾಗ ಮಲವಿಸರ್ಜನೆಗೆ ಹೋಗುವುದು

* ತುಂಬಾ ಬೆವರುವುದು

* ತೂಕ ಇಳಿಕೆ

* ಸ್ನಾಯುಗಳಲ್ಲಿ ನೋವು

* ಖಿನ್ನತೆ

* ಮುಟ್ಟಿನ ಸಮಯದಲ್ಲಿ ಅತ್ಯಧಿಕ ಋತುಸ್ರಾವ

ಥೈರಾಯ್ಡ್ ಸಮಸ್ಯೆ ಇರುವವರಿಗೆ ಅತ್ಯುತ್ತಮ ಆಹಾರಗಳು

ಥೈರಾಯ್ಡ್ ಸಮಸ್ಯೆ ಇರುವವರಿಗೆ ಅತ್ಯುತ್ತಮ ಆಹಾರಗಳು

* ಮಾಂಸ: ಥೈರಾಯ್ಡ್ ಸಮಸ್ಯೆ ಇರುವವರಲ್ಲಿ ಸ್ನಾಯುಗಳು ಬಲಹೀನವಾಗುವುದು. ಪ್ರೊಟೀನ್ ಅಧಿಕವಿರುವ ಆಹಾರಗಳು ಸ್ನಾಯುಗಳನ್ನು ಬಲಪಡಿಸುವುದು. ಕುರಿ ಮಾಂಸ, ಚಿಕನ್ ಇವೆಲ್ಲಾ ಒಳ್ಳೆಯದು. ಮೊಟ್ಟೆ ತಿನ್ನುವುದು ಕೂಡ ಒಳ್ಳೆಯದು.

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಿರುತತದೆ. ಅಲ್ಲದೆ ನಾರಿನಂಶ ಅಧಿಕವಿರುವ ಆಹಾರ ವಸತುಗಳ ಸೇವನೆ ಕೂಡ ಒಳ್ಳೆಯದು.

ಗ್ಲುಟೇನ್‌ ಫ್ರೀ ಆಹಾರ ವಸ್ತುಗಳು

ಥೈರಾಯ್ಡ್ ಸಮಸ್ಯೆ ಇರುವವರು ಗ್ಲುಟೇನ್‌ ಆಹಾರ ವಸ್ತುಗಳ ಸೇವನೆ ಒಳ್ಳೆಯದು. ಗ್ಲುಟೇನ್ ಫ್ರೀ ಅಕ್ಕಿ, ಗೋಧಿ, ನವಣೆ ಇವುಗಳಿಂದ ಆಹಾರ ಸೇವಿಸಿ ತಿನ್ನಿ.

ನೀರು

ಸಾಕಷ್ಟು ನೀರು ಕುಡಿಯಬೇಕು. ಇದು ದೇಹದ ಉಷ್ಣತೆ ಸರಿಯಾಗಿಡಲು, ಮಲಬದ್ಧತೆ ಸಮಸ್ಯೆ ನಿವಾರಿಸಲು ಸಹಕಾರಿ.

ಯಾವ ಆಹಾರಗಳನ್ನು ತಿನ್ನದಿದ್ದರೆ ಒಳ್ಳೆಯದು

ಯಾವ ಆಹಾರಗಳನ್ನು ತಿನ್ನದಿದ್ದರೆ ಒಳ್ಳೆಯದು

ಸೋಯಾ ಉತ್ಪನ್ನಗಳು, ಕಾಫಿ, ಮದ್ಯ ಇವುಗಳನ್ನು ಸೇವಿಸಬೇಡಿ. ಒಂದು ವೇಳೆ ನೀವು ಈ ಆಹಾರ ಸೇವಿಸುವುದಾದರೆ ಔಷಧಿ ಸೇವಿಸಿದ ತಕ್ಷಣ ತಿನ್ನಬೇಡಿ, ಕೆಲವು ಗಂಟೆಗಳ ಬಳಿಕ ತಿನ್ನಿ, ಇಲ್ಲದಿದ್ದರೆ ಈ ಆಹಾರ ವಸ್ತುಗಳು ಔಷಧಿಯ ಪ್ರಭಾವ ತಗ್ಗಿಸುತ್ತೆ.

* ಸಂಸ್ಕರಿಸಿದ ಆಹಾರಗಳಿಂದ ದೂರವಿರಿ.

English summary

Foods Good and Bad for Thyroid Patients in Kannada

Foods good and bad for thyroid patients, read on...
Story first published: Thursday, June 24, 2021, 13:16 [IST]
X
Desktop Bottom Promotion