For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಮೂಳೆಗಾಗಿ ನೀವು ತಪ್ಪದೇ ಸೇವಿಸಲೇಬೇಕಾದ ಆಹಾರಗಳು ಇಲ್ಲಿವೆ

|

ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದ್ದರೂ, ಇದು ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಮೂಳೆಗಳು ದೇಹದ ಆಕಾರ, ರಚನೆ ಮತ್ತು ಬಲ ನೀಡುವಲ್ಲಿ ಸಹಕಾರಿಯಾಗಿದೆ. ಅನಾರೋಗ್ಯಕರ ಮೂಳೆಗಳು ಆಸ್ಟಿಯೊಪೊರೋಸಿಸ್, ರಿಕೆಟ್ಸ್, ಮೂಳೆ ಕ್ಯಾನ್ಸರ್, ಮೂಳೆಯ ಸೋಂಕುಗಳು ಮತ್ತು ಮೂಳೆಯ ಕಾಯಿಲೆಯಂತಹ ಆರೋಗ್ಯ ಸ್ಥಿತಿಗಳಿಗೆ ಕಾರಣವಾಗಬಹುದು.

ಮೂಳೆಯ ಆರೋಗ್ಯವನ್ನು ಆರೋಗ್ಯಕರ ಆಹಾರ, ಜೀವನಶೈಲಿ ಬದಲಾವಣೆಗಳಂತಹ ವಿವಿಧ ವಿಧಾನಗಳಿಂದ ಕಾಪಾಡಿಕೊಳ್ಳಬಹುದು. ಈ ಮಳೆಗಾಲದಲ್ಲಿ ನಿಮ್ಮ ಆಹಾರದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ಮೂಳೆಗಳನ್ನು ಸುಧಾರಿಸಲು ನೈಸರ್ಗಿಕ ಮಾರ್ಗಗಳನ್ನು ಹುಡುಕುತ್ತಿದ್ದರೆ, ಈ ಕೆಳಗೆ ನೋಡಿ.

ನಿಮ್ಮ ಮೂಳೆಯ ಆರೋಗ್ಯವನ್ನು ಹೆಚ್ಚಿಸಲು ನೀವು ಸೇವಿಸಲೇಬೇಕಾದ ಕೆಲವು ಆಹಾರಗಳು ಇಲ್ಲಿವೆ:

ಮೂಳೆಯ ಆರೋಗ್ಯಕ್ಕೆ ಏನು ಮುಖ್ಯ?:

ಮೂಳೆಯ ಆರೋಗ್ಯಕ್ಕೆ ಏನು ಮುಖ್ಯ?:

ಆರೋಗ್ಯಭರಿತವಾದ ಮೂಳೆ ಪಡೆಯಬೇಕಾದರೆ, ಕ್ಯಾಲ್ಸಿಯಂ ಅತ್ಯಗತ್ಯ. ದೇಹದಲ್ಲಿ ಅಥವಾ ನಾವು ಸೇವಿಸುವ ಆಹಾರದಲ್ಲಿ ಕ್ಯಾಲ್ಸಿಯಂ ಕೊರತೆಯುಂಟಾದರೆ, ಮೂಳೆಗೆ ಸಂಬಂಧಿಸಿದ ನಾನಾ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಕ್ಯಾಲ್ಸಿಯಂಭರಿತವಾದ ಆಹಾರದ ಜೊತೆಗೆ ವಿಟಮಿನ್ ಡಿ, ವಿಟಮಿನ್ ಕೆ ಹಾಗೂ ಪ್ರೋಟೀನ್ ಸಮೃದ್ಧವಾದ ಆಹಾರಗಳನ್ನು ಸೇವಿಸಬೇಕು. ಅಷ್ಟೇ ಅಲ್ಲ, ಪ್ರತಿದಿನ ಸಣ್ಣ ಮಟ್ಟದ ವ್ಯಾಯಾಮ ಮಾಡುವುದರಿಂದಲೂ ನಿಮ್ಮ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಬೀಜಗಳು:

ಬೀಜಗಳು:

ಇದು ನಿಮ್ಮ ಅಚ್ಚುಮೆಚ್ಚಿನ ನಟ್ಸ್ ಗಳನ್ನು ತಿನ್ನುವ ಸಮಯ. ವಾಲ್ನಟ್ಸ್, ಪೆಕನ್, ಬ್ರೆಜಿಲ್ ನಟ್ಸ್ ಮತ್ತು ಬಾದಾಮಿಯಂತಹ ಹಲವಾರು ಬಗೆಯ ನಟ್ಸ ಗಳು ನಮಗೆ ಲಭ್ಯವಿದೆ. ಬಾದಾಮಿ ಸೇವನೆ ಮೂಳೆಗಳ ಜೊತೆಗೆ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಸಹಕಾರಿಯಾಗಿದೆ. ಅವು ಮೂಳೆಯ ಆರೋಗ್ಯವನ್ನು ಹೆಚ್ಚಿಸುವ ಪೋಷಕಾಂಶಗಳಾದ ಕ್ಯಾಲ್ಸಿಯಂ, ಆಂಟಿಆಕ್ಸಿಡೆಂಟ್ ಗಳು, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ರಂಜಕಗಳಿಂದ ಸಮೃದ್ಧವಾಗಿವೆ. ಆದ್ದರಿಂದ ಇವುಗಳನ್ನು ನಿಮ್ಮ ಆಹಾರದ ಪ್ರಮುಖ ಭಾಗವಾಗಿ ಸೇರಿಸಿಕೊಳ್ಳುವುದು ಉತ್ತಮ.

ಸಾಲ್ಮನ್:

ಸಾಲ್ಮನ್:

ಈ ಮೀನುಗಳು ಆರೋಗ್ಯಕರ ಕೊಬ್ಬುಗಳು ಮತ್ತು ಒಮೆಗಾ-ಇ ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ. ಇದಲ್ಲದೆ, ಮೀನುಗಳು ವಿಟಮಿನ್ ಡಿ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತವೆ. ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಡಿ ಎರಡೂ ಮೂಳೆಗಳ ಬೆಳವಣಿಗೆಗೆ ಕೊಡುಗೆ ನೀಡುತ್ತವೆ. ಆದ್ದರಿಂದ ವಾರದಲ್ಲಿ ಎರಡು ಬಾರಿಯಾದರೂ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಬೇಕು.

ಹಾಲು:

ಹಾಲು:

ಮೂಳೆಗಳನ್ನು ಆರೋಗ್ಯಕರವಾಗಿರಿಸಲು ಕ್ಯಾಲ್ಸಿಯಂ ಎಷ್ಟು ಅಗತ್ಯ ಎಂಬುದು ಇಂದು ನಿನ್ನೆಯ ಮಾತಲ್ಲ. ಬಹಳ ಹಿಂದಿನಿಂದಲೂ ಮೂಳೆಯ ಆರೋಗ್ಯಕ್ಕೆ ಕ್ಯಾಲ್ಸಿಯಂ ಅತ್ಯಗತ್ಯ ಎಂಬುದು ತಿಳಿದಿದೆ. ಆದ್ದರಿಂದ ಹಾಲನ್ನು ಬಿಟ್ಟು ಕ್ಯಾಲ್ಸಿಯಂನ ಉತ್ತಮ ಮೂಲ ಬೇರಾವುದಿದೆ ಅಲ್ಲವೇ?, ಆದ್ದರಿಂದ ಮೂಳೆಯ ಉತ್ತಮ ಆರೋಗ್ಯಕ್ಕೆ ನಿಮ್ಮ ಉಪಹಾರದ ಭಾಗವಾಗಿ ಹಾಲನ್ನು ಸೇವಿಸಬಹುದು, ಸ್ಮೂಥಿಗಳನ್ನು ತಯಾರಿಸಬಹುದು ಅಥವಾ ನಿಮ್ಮ ಓಟ್ಸ್ ಗೆ ಹಾಲನ್ನು ಸೇರಿಸಿ ತಿನ್ನಬಹುದು. ಹಾಲನ್ನು ಸೇವಿಸಲು ಇಷ್ಟಪಡದೇ ಇರುವವರು, ಹಾಲಿನ ಬೇರೆ ಪದಾರ್ಥಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಸೇರಿಸಿ.

ಮೊಟ್ಟೆ:

ಮೊಟ್ಟೆ:

ದೇಹದಲ್ಲಿ ಪ್ರೋಟೀನ್ ಕಡಿಮೆಯಾಗುವುದು ಸಹ ಮೂಳೆ ಬೆಳವಣಿಗೆಗೆ ಅಡ್ಡಿಯಾಗಬಹುದು. ಆದ್ದರಿಂದ ಅಗತ್ಯ ಪ್ರಮಾಣದ ಪ್ರೋಟೀನ್ ಸೇವಿಸುವುದು ಮುಖ್ಯವಾಗುತ್ತದೆ. ಮೊಟ್ಟೆ ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ ಮತ್ತು ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಿದರೆ, ನಿಮ್ಮ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಲಭ್ಯವಾಗುವುದು. ಇದರಿಂದ ಮೂಳೆಗಳು ಸದೃಢವಾಗಿರುವುದು ಜೊತೆಗೆ ಮೊಟ್ಟೆ ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿದೆ.

ಪಾಲಕ್ :

ಪಾಲಕ್ :

ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಕೆ ಅನ್ನು ಸೇರಿಸುವುದು ಮುಖ್ಯವಾಗಿದೆ. ಈ ವಿಟಮಿನ್ ಕೆ ಪಾಲಕ್ ನಂತಹ ಹಸಿರು ಎಲೆಗಳ ತರಕಾರಿಗಳಲ್ಲಿ ಸಮೃದ್ಧವಾಗಿರುತ್ತದೆ. ಆದ್ದರಿಂದ ಇಂತಹ ಸೊಪ್ಪು ತರಕಾರಿಗಳನ್ನು ತಿನ್ನುವುದು ನಿಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನೀವು ಪಾಲಕ್, ಹರಿವೆ, ಪುದಿನಾದಂತಹ ಹಸಿರು ಸೊಪ್ಪುಗಳನ್ನು ಕೂಡ ಆಹಾರಕ್ಕೆ ಸೇರಿಸಬಹುದು.

English summary

Foods for Increasing Bone Health During Monsoon in Kannada

Here we talking about Foods for increasing bone health during monsoon in Kannada, read on
Story first published: Wednesday, August 4, 2021, 17:34 [IST]
X
Desktop Bottom Promotion