For Quick Alerts
ALLOW NOTIFICATIONS  
For Daily Alerts

ಜೀರ್ಣಕ್ರಿಯೆ ಸಮಸ್ಯೆ ನಿಮಗಿದ್ಯಾ?: ಐಸ್ ವಾಟರ್ ಅಥವಾ ಹಾಟ್ ಲೆಮನ್ ಟೀ ಯಾವುದನ್ನು ಸೇವಿಸಬೇಕು? ಇಲ್ಲಿದೆ ಮಾಹಿತಿ

|

ಮನುಷ್ಯನ ದೇಹದಲ್ಲಿ ಜೀರ್ಣಕ್ರಿಯೆ ಅತೀ ಮುಖ್ಯ ಯಾಕೆಂದರೆ ಜೀರ್ಣಕ್ರಿಯೆ ಸರಿಯಾಗಿ ಆಗಿಲ್ಲದಿದ್ದರೆ ಮನುಷ್ಯನಿಗೆ ಸಹಜವಾಗಿ ಕಿರಿಕಿರಿ ಉಂಟಾಗುತ್ತದೆ. ಆರೋಗ್ಯ ಕೆಡುತ್ತದೆ. ಹೊಟ್ಟೆಯು ಆರೋಗ್ಯವಾಗಿ ಇದ್ದರೆ ಆಗ ಸಂಪೂರ್ಣ ದೇಹ ಕೂಡ ಆರೋಗ್ಯವಾಗಿ ಇರುತ್ತದೆ ಎನ್ನುವ ಮಾತು ಕೂಡ ಇದೆ.

Food swaps for digestion: Should you have ice water or hot lemon tea in kannada

ಹೀಗಾಗಿ ಆರೋಗ್ಯವಾಗಿರಲು ಜೀರ್ಣಕ್ರಿಯೆ ಹಾಗೂ ಚಯಪಚಯ ಸರಿಯಾಗಿ ಇರಬೇಕು. ಹಾಗಾದರೆ ಸರಿಯಾಗಿ ಜೀರ್ಣಕ್ರಿಯೆ ಆಗಬೇಕು ಎಂದರೆ ಏನು ಮಾಡಬೇಕು. ಕೆಲವರು ಊಟ ಆದ ಬಳಿಕ ತಂಪಾದ ನೀರು ಕುಡಿದರೆ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ ಎನ್ನುತ್ತಾರೆ. ಇನ್ನು ಕೆಲವರು ಬಿಸಿ ಬಿಸಿಯಾದ ಲೆಮನ್ ಟೀ ಕುಡಿದರೆ ಜೀರ್ಣಕ್ರಿಯೆ ಚೆನ್ನಾಗಾಗುತ್ತದೆ ಎನ್ನುತ್ತಾರೆ. ಇನ್ನು ಕೆಲವರು ಜ್ಯೂಸ್ ಅಥವಾ ಸ್ಮೂಥಿಗಳನ್ನು ಕುಡಿದರೆ ಒಳ್ಳೆಯದು ಎನ್ನುತ್ತಾರೆ. ಹಾಗಾದರೆ ಯಾವುದು ಒಳ್ಳೆಯದು? ನಿಮ್ಮ ಗೊಂದಲಕ್ಕೆ ಈ ಸ್ಟೋರಿ ಮೂಲಕ ಉತ್ತರ ನೀಡುತ್ತೇವೆ.

ಈ ಬಗ್ಗೆ ತಜ್ಞರು ಹೇಳುವುದೇನು?

ಈ ಬಗ್ಗೆ ತಜ್ಞರು ಹೇಳುವುದೇನು?

ಇನ್ನು ತಜ್ಞರು ಐಸ್ ವಾಟರ್ ಅಥವಾ ಹಾಟ್ ಲೆಮನ್ ಟೀ ಜೀರ್ಣಕ್ರಿಯೆಗೆ ಅನುಕೂಲವಾಗುತ್ತಾ ಅನ್ನುವುದನ್ನು ತಿಳಿಸಿದ್ದು, ಅವರ ಪ್ರಕಾರ ಐಸ್ ವಾಟರ್ ಅಥವಾ ತಂಪಾದ ನೀರು ಜೀರ್ಣಕ್ರಿಯೆಗೆ ಸಹಾಯ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಹೌದು, ಕೋಲ್ಡ್ ಅಥವಾ ಐಸ್ ವಾಟರ್ ಜೀರ್ಣಕ್ರಿಯೆ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆಯಂತೆ. ಅಂದರೆ, ತಂಪು ನೀರು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತವೆ ಮತ್ತು ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತವೆ. ಅಲ್ಲದೇ, ಜೀರ್ಣಕ್ರಿಯೆಯ ಸಮಯದಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವ ನೈಸರ್ಗಿಕ ಪ್ರಕ್ರಿಯೆಯು ಅಡ್ಡಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ಜೀರ್ಣಕ್ರಿಯೆಗಾಗಿ ಐಸ್ ವಾಟರ್ ಅಥವಾ ತಂಪಾದ ನೀರು ಕುಡಿಯೋದು ಒಳ್ಳೆಯ ಯೋಚನೆ ಅಲ್ಲ ಎಂದಿದ್ದಾರೆ. ಅದರ ಬದಲು ಹಾಟ್ ಲೆಮನ್ ಟೀ ಅಥವಾ ನಿಂಬೆ ಹಣ್ಣಿನ ಬಿಸಿ ಚಹಾ ಜೀರ್ಣಕ್ರಿಯೆಗೆ ಅತ್ಯುತ್ತಮ ಸಂಜೀವಿನಿ ಎಂದು ತಿಳಿಸಿದ್ದಾರೆ. ನಿಂಬೆ, ಶುಂಠಿ ಹಾಗೂ ನೀರು ಕೂಡ ಉತ್ತಮ ಆಯ್ಕೆ ಎಂದು ತಿಳಿಸಿದ್ದಾರೆ. ಯಾಕೆಂದರೆ ನಿಂಬೆ ಮತ್ತು ಶುಂಠಿ ಎರಡೂ ವಸ್ತುಗಳು ರಾಸಾಯನಿಕಗಳನ್ನು ಒಳಗೊಂಡಿರುತ್ತವೆ, ಇದು ಅಜೀರ್ಣದಿಂದ ಉಂಟಾಗುವ ಸಣ್ಣ ಹೊಟ್ಟೆ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ ಹೀಗಾಗಿ ಈ ಆಹಾರವನ್ನು ಜೀರ್ಣಕ್ರಿಯೆ ಸರಿಯಾಗಲು ಬಳಕೆ ಮಾಡಬಹುದು.

ಜೀರ್ಣಕ್ರಿಯೆಗೆ ಯಾವ ಎಣ್ಣೆ ಉತ್ತಮ?

ಜೀರ್ಣಕ್ರಿಯೆಗೆ ಯಾವ ಎಣ್ಣೆ ಉತ್ತಮ?

ಇನ್ನು ಜೀರ್ಣಕ್ರಿಯೆಗೆ ಕೋಲ್ಡ್ ಪ್ರೆಸ್ಸಡ್ ಎಣ್ಣೆ ಮತ್ತು ಸಂಸ್ಕರಿಸಿದ ಎಣ್ಣೆ ಪೈಕಿ ಯಾವುದು ಒಳ್ಳೆಯದು ಎಂಬ ಬಗ್ಗೆ ತಜ್ಞರು ಹಲವು ವಿಚಾರಗಳನ್ನು ತಿಳಿಸಿದ್ದಾರೆ. ತಜ್ಞ ಪ್ರಕಾರ ಕೋಲ್ಡ್ ಪ್ರೆಸ್ಸ್ ಡ್ ಎಣ್ಣೆ ಜೀರ್ಣಕ್ರಿಯೆಗೆ ಅತ್ಯುತ್ತಮವಂತೆ. ಏಕೆಂದರೆ ಅವುಗಳು ಪ್ರಮುಖ ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಇ, ವಿಟಮಿನ್ ಕೆ, ವಿಟಮಿನ್ ಸಿ ಮತ್ತು ಇತರ ಪ್ರಯೋಜನಕಾರಿ ಕೊಬ್ಬುಗಳಿಂದ ಸಮೃದ್ಧವಾಗಿವೆ ಮತ್ತು ಅವುಗಳು ತಮ್ಮ ಘಟಕಗಳ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತವೆ. ಅಲ್ಲದೇ ಇದು ನೈಸರ್ಗಿಕ ರೂಪದಲ್ಲಿ ಸಿಗುವಂತಾಹುದಾಗಿದೆ. ಹೀಗಾಗಿ ಈ ರೀತಿಯ ಎಣ್ಣೆ ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸಂಸ್ಕರಿಸಿದ ಎಣ್ಣೆ ಅಜೀರ್ಣ ಉಂಟುಮಾಡುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೀರ್ಣಕ್ರಿಯೆಗೆ ಸ್ಮೂಥಿಯೇ ಉತ್ತಮ

ಜೀರ್ಣಕ್ರಿಯೆಗೆ ಸ್ಮೂಥಿಯೇ ಉತ್ತಮ

ಇನ್ನು ಜೀರ್ಣ ಕ್ರಿಯೆಗೆ ಯಾವುದು ಆರೋಗ್ಯಕರ, ಜ್ಯೂಸ್ ಅಥವಾ ಸ್ಮೂಥಿಯೋ ಎನ್ನುವುದರ ಬಗ್ಗೆಯೂ ಪೌಷ್ಟಿಕ ತಜ್ಞರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ವಿಟಮಿನ್-ಸಮೃದ್ಧ ನಾರಿನ ತಿರುಳನ್ನು ಹೊರಹಾಕದ ಕಾರಣ ಸ್ಮೂಥಿಗಳು ಕೆಲವು ಹೆಚ್ಚುವರಿ ಪೋಷಕಾಂಶಗಳನ್ನು ಹೊಂದಿರುತ್ತವೆ. ಸ್ಮೂಥಿಗಳು ಪ್ರಮುಖ ಪೋಷಕಾಂಶಗಳು, ಖನಿಜಗಳು ಮತ್ತು ಫೈಟೊಕೆಮಿಕಲ್ ಗಳ ಅತ್ಯುತ್ತಮ ಮೂಲವಾಗಿದೆ ಲಘು ಆಹಾರವಾಗಿ ಅಥವಾ ಊಟಕ್ಕೆ ಹೆಚ್ಚುವರಿಯಾಗಿ, ವಿಶೇಷವಾಗಿ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ಬಳಸಿದರೆ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಆಮ್ಲೀಯ ಆಹಾರಗಳಿಂದ ದೂರ ಇರಬೇಕು. ಅಂದರೆ ಟೊಮೆಟೊ ಸಾಸ್, ಸಿಟ್ರಿಸ್ ಹಣ್ಣುಗಳಾಗಿರುವಂತಹ ಕಿತ್ತಳೆ, ಮೂಸಂಬಿ, ಲಿಂಬೆ ಇತ್ಯಾದಿಗಳು ನೈಸರ್ಗಿಕವಾಗಿ ಆಮ್ಲೀಯ ಗುಣ ಹೊಂದಿದೆ. ಇದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗುವುದು ಮತ್ತು ಹೊಟ್ಟೆಯಲ್ಲಿನ ಪರಿಸ್ಥಿತಿಗೆ ತೊಂದರೆ ಉಂಟು ಮಾಡುವುದು. ಕೋಲಾ ಮತ್ತು ಕಾರ್ಬೋಹೈಡ್ರೇಟ್ಸ್ ಪಾನೀಯಗಳು ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಉಂಟಾಗುವುದು. ಆಮ್ಲೀಯ ಆಹಾರಗಳು ಅತಿಯಾಗಿ ತಿಂದರೆ ಅದರಿಂದ ಹೊಟ್ಟೆಗೆ ಹಾನಿ ಉಂಟಾಗುವುದು ಮತ್ತು ಅತಿಸಾರ ಕಂಡುಬರುವುದು. ಇದರಿಂದ ದೇಹಕ್ಕೆ ಮತ್ತಷ್ಟು ಕಿರಿಕಿರಿ ಆಗುತ್ತದೆ.

ಕಾರ್ಬೊಹೈಡ್ರೇಟ್ಸ್ ಆಹಾರ ತಪ್ಪಿಸಿ

ಕಾರ್ಬೊಹೈಡ್ರೇಟ್ಸ್ ಆಹಾರ ತಪ್ಪಿಸಿ

ಕಾರ್ಬೊಹೈಡ್ರೇಟ್ಸ್ ಅಧಿಕವಾಗಿ ಇರುವಂತಹ ಆಹಾರವನ್ನು ದೀರ್ಘಕಾಲ ಸೇವಿಸಿದರೆ ಅದರಿಂದ ಹೊಟ್ಟೆಯಲ್ಲಿ ಉರಿಯೂತ ಉಂಟಾಗುವುದು ಮತ್ತು ಬಟಾಟೆಯು ಅಧಿಕ ಕಾರ್ಬೋಹೈಡ್ರೇಟ್ಸ್ ಇರುವಂತಹ ಆಹಾರ ಎಂದು ಹೇಳಬಹುದು. ಆದರೆ ಇದರಲ್ಲಿ ನೀರಿನಾಂಶವು ಅಧಿಕವಾಗಿದೆ. ಪಾಸ್ತಾ, ಡೌನಟ್ಸ್, ಪ್ರೆಟ್ಜೆಲ್, ಬಾಗಲ್ ಗಳು ಕಾರ್ಬೋಹೈಡ್ರೇಟ್ಸ್ ಅಧಿಕವಾಗಿ ಇರುವ ಆಹಾರ ಮತ್ತು ದೀರ್ಘಕಾಲ ಸೇವಿಸಿದರೆ ಅದರಿಂದ ಕರುಳಿಗೆ ಹಾನಿ ಉಂಟುಮಾಡುತ್ತದೆ. ಅಲ್ಲದೇ ಜೀರ್ಣಕ್ರಿಯೆಯೂ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಳ್ಳುತ್ತದೆ.

ಸಂಸ್ಕರಿತ ಆಹಾರ ತಪ್ಪಿಸಿ

ಸಂಸ್ಕರಿತ ಆಹಾರ ತಪ್ಪಿಸಿ

ನಮ್ಮ ಆರೋಗ್ಯವನ್ನು ಕೆಡಿಸುವಲ್ಲಿ ಸಂಸ್ಕರಿತ ಆಹಾರವು ಮೊದಲ ಸ್ಥಾನಲದಲ್ಲಿದೆ. ಇದರಲ್ಲಿ ಯಾವುದೇ ಪೋಷಕಾಂಶ ಮೌಲ್ಯಗಳು ಇಲ್, ನಾರಿನಾಂಶವು ಇಲ್ಲ ಮತ್ತು ಕೃತಕ ಸಂಸ್ಕರಣೆ ಮತ್ತು ಬಣ್ಣದಿಂದಾಗಿ ಇದು ಹೊಟ್ಟೆಗೆ ಕಿರಿಕಿರಿ ಉಂಟು ಮಾಡುತ್ತದೆ. ಕೆಲವೊಂದು ಆಹಾರದಲ್ಲಿ ಲ್ಯಾಕ್ಟೋಸ್ ಕೂಡ ಇದೆ ಮತ್ತು ಇದು ಜೀರ್ಣಕ್ರಿಯೆಗೆ ತೊಂದರೆ ಉಂಟು ಮಾಡುತ್ತದೆ.

English summary

Food swaps for digestion: Should you have ice water or hot lemon tea in kannada

Here we are discussing about Food swaps for digestion: Should you have ice water or hot lemon tea in kannada. Read more.
Story first published: Friday, September 30, 2022, 14:44 [IST]
X
Desktop Bottom Promotion