For Quick Alerts
ALLOW NOTIFICATIONS  
For Daily Alerts

ವಯಸ್ಸಾದ ಮೇಲೆ ದೃಷ್ಟಿ ಸಮಸ್ಯೆ ಬರದೇ ಇರಲು, ಈಗ ಈ ಆಹಾರಗಳನ್ನು ಸೇವಿಸಿ

|

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಕಣ್ಣುಗಳೂ ಒಂದು. ಈ ಹಿಂದೆಲ್ಲಾ ವಯಸ್ಸಾದ ಮೇಲೆ ಉಂಟಾಗುತ್ತಿದ್ದ ದೃಷ್ಟಿ ಸಮಸ್ಯೆ ಇದೀಗ ಸಣ್ಣ ವಯಸ್ಸಿನಲ್ಲಿಯೇ ಕಂಡುಬರುತ್ತಿದೆ. ಅದಕ್ಕೆ ಮುಖ್ಯ ಕಾರಣ ನಮ್ಮ ಅನಾರೋಗ್ಯಕರ ಜೀವನಶೈಲಿ.

ಆದ್ದರಿಂದ ಆರೋಗ್ಯಕರ ಜೀವನಶೈಲಿಯು ಕಣ್ಣಿನ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಕಣ್ಣುಗಳಿಗೆ ಅಗತ್ಯವಿರುವ ಆಹಾರಗಳು ಮತ್ತು ಉತ್ತಮ ದೃಷ್ಟಿಗಾಗಿ ನಮ್ಮ ಆಹಾರಗಳಲ್ಲಿ ಸೇರಿಸಬಹುದಾದ ಕೆಲವು ವಿಷಯಗಳನ್ನು ನಾವಿಂದು ಹೇಳಲಿದ್ದೇವೆ.

ಉತ್ತಮ ದೃಷ್ಟಿಗಾಗಿ ಆಹಾರದಲ್ಲಿ ಸೇರಿಸಬೇಕಾದ ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ:

ಕಿತ್ತಳೆ:

ಕಿತ್ತಳೆ:

ಕಿತ್ತಳೆಗಳು ವಿಟಮಿನ್-ಸಿ ಯ ಉತ್ತಮ ಮೂಲವಾಗಿದ್ದು, ಇದು ಕಾಲಜನ್ ರಚನೆ, ಕಬ್ಬಿಣದ ಹೀರಿಕೊಳ್ಳುವಿಕೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆ ಸೇರಿದಂತೆ ಅನೇಕ ದೇಹದ ಕಾರ್ಯಗಳನ್ನು ಸುಧಾರಿಸುತ್ತದೆ. ಕಿತ್ತಳೆ ಸೇವನೆಯು ಕಣ್ಣಿನಲ್ಲಿ ಪೊರೆ ಬೆಳೆಯುವ ಅಪಾಯವನ್ನು ಕಡಿಮೆ ಮಾಡುತ್ತದೆ ಜೊತೆಗೆ ಕಣ್ಣುಗಳ ಉರಿಯೂತದ ಪರಿಸ್ಥಿತಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಕ್ಯಾರೆಟ್:

ಕ್ಯಾರೆಟ್:

ಕ್ಯಾರೆಟ್‌ಗಳಲ್ಲಿ ಬೀಟಾ ಕ್ಯಾರೋಟಿನ್ ತುಂಬಿದ್ದು, ಇದು ದೇಹದಲ್ಲಿ ವಿಟಮಿನ್ ಎ ಆಗಿ ಬದಲಾಗುತ್ತದೆ. ವಿಟಮಿನ್ ಎ ಕಣ್ಣುಗಳಿಗೆ ಒಂದು ಪ್ರಮುಖ ಪೋಷಕಾಂಶವಾಗಿದ್ದು, ಜೀವಕೋಶದ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಬೀಟಾ ಕ್ಯಾರೋಟಿನ್ ಎಂಬುದು ಕ್ಯಾರೆಟ್‌ನಂತಹ ತರಕಾರಿಗಳಿಗೆ ಪ್ರಕಾಶಮಾನವಾದ ಹಳದಿ ಅಥವಾ ಕಿತ್ತಳೆ ಬಣ್ಣವನ್ನು ನೀಡುವ ಸಂಯುಕ್ತವಾಗಿದೆ.

ಏಪ್ರಿಕಾಟ್:

ಏಪ್ರಿಕಾಟ್:

ಈ ಹಣ್ಣುಗಳು ಬೀಟಾ-ಕ್ಯಾರೋಟಿನ್ ಜೊತೆಗೆ ಲುಟೀನ್, ಝೀಕ್ಸಾಂಥಿನ್ ಮತ್ತು ವಿಟಮಿನ್ ಸಿ ಮತ್ತು ಇ ನೊಂದಿಗೆ ಸಮೃದ್ಧವಾಗಿದೆ. ಈ ಎಲ್ಲಾ ಪೋಷಕಾಂಶಗಳು ಕಣ್ಣುಗಳಿಗೆ ಹಾನಿಯಾಗದಂತೆ ತಡೆಯುತ್ತದೆ. ಈ ಸಾಮಾನ್ಯ ಬೇಸಿಗೆಯ ಹಣ್ಣು ಕಣ್ಣುಗಳ ವಯಸ್ಸಾಗುವಿಕೆಯ ವಿರುದ್ಧವೂ ಪ್ರಯೋಜನಕಾರಿ.

ರಾಗಿ:

ರಾಗಿ:

ರಾಗಿ ಪಾಲಿಫಿನಾಲ್‌ಗಳ ಅಗತ್ಯ ಮೂಲವಾಗಿದ್ದು, ಇದು ಕಣ್ಣಿನ ಪೊರೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಮಧುಮೇಹ ಮತ್ತು ರಕ್ತದಲ್ಲಿನ ಸಕ್ಕರೆಯ ಹೆಚ್ಚಳದಿಂದಾಗಿ ಕಣ್ಣಿನ ಪೊರೆ ಉಂಟಾಗುತ್ತದೆ. ರಾಗಿಯನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅದರ ಬೀಜದ ಕೋಟ್‌ನಲ್ಲಿರುವ ಪಾಲಿಫಿನಾಲ್ ಗಳು ಕಣ್ಣಿನ ಪೊರೆ ವಿರೋಧಿ ಸಾಮರ್ಥ್ಯವನ್ನು ಹೊಂದಿದೆ.

ನೆಲ್ಲಿಕಾಯಿ:

ನೆಲ್ಲಿಕಾಯಿ:

ನೆಲ್ಲಿಕಾಯಿ, ಅನೇಕ ರೋಗಗಳಿಗೆ ಆಯುರ್ವೇದ ಪರಿಹಾರವಾಗಿದೆ. ಇದು ನಮ್ಮ ರೋಗನಿರೋಧಕ ಶಕ್ತಿ ವೃದ್ಧಿಸುವುದರ ಜೊತೆಗೆ ದೃಷ್ಟಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದು, ಕಣ್ಣಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವಿಟಮಿನ್ ಭರಿತ ಬೆರ್ರಿ ಕೂಡ ಕಣ್ಣನ್ನು ಕಣ್ಣಿನ ಪೊರೆಯಿಂದ ರಕ್ಷಿಸುತ್ತದೆ.

ಇತರ ಆಹಾರಗಳು:

ಇತರ ಆಹಾರಗಳು:

ಮೇಲಿನ ಹಣ್ಣುಗಳಲ್ಲದೇ, ಮಾಂಸಾಹಾರಿಗಳು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಣ್ಣೆಯುಕ್ತ ಮೀನುಗಳು ಒಳ್ಳೆಯದು. ಗೋಡಂಬಿ, ಬೇಳೆ, ಹಸಿರು ತರಕಾರಿಗಳು, ಹಸಿರು ಸೊಪ್ಪುಗಳು ಕಣ್ಣಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸಾಕಷ್ಟು ನೀರು ಕುಡಿಯುವುದು ಕಣ್ಣುಗಳು ಒಣಗದಂತೆ ಮತ್ತು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ.

English summary

Food Choices that are Good for Eyes in Kannada

Here we talking about Food choices that are good for eyes in kannada, read on
Story first published: Saturday, October 23, 2021, 17:15 [IST]
X
Desktop Bottom Promotion