For Quick Alerts
ALLOW NOTIFICATIONS  
For Daily Alerts

ಎತ್ತರದ ಅಥವಾ ಜೋರು ಧ್ವನಿ ಇರುವವರು ನೋಡಲು ಆಕರ್ಷಕವಾಗಿ ಹಾಗೂ ಚಿಕ್ಕವರಾಗಿ ಕಾಣುತ್ತಾರಂತೆ: ಸಂಶೋಧನೆ

|

ಬಹಳದ ದೊಡ್ಡದಾದ ಅಥವಾ ಗಡುಸಾಗಿ ಧ್ವನಿ ಇರುವವರು ನೋಡಲು ತುಂಬಾ ಆಕರ್ಷಕವಾಗಿ ಹಾಗೂ ನೋಡಲು ಬಹಳ ಚಿಕ್ಕವಯಸ್ಸಿವರಂತೆ ಕಾಣುತ್ತಾರೆ ಅಲ್ಲದೆ ಇವರು ಆರೋಗ್ಯವಾಗಿರುತ್ತಾರೆ ಎಂದು ಸಂಶೋಧನೆಯೊಂದು ಹೇಳುತ್ತದೆ.

 Female Voices With Higher Pitch Have Younger-Looking Faces

ಹೌದು ಸಾಮಾನ್ಯವಾಗಿ ನಾವು ದೊಡ್ಡ ಧ್ವನಿ ಇರುವವರನ್ನು ಬಹಳ ಘಟವಾಣಿ, ಜೋರು, ನೋಡಲು ಸಹ ದೊಡ್ಡವರಾಗಿ ಕಾಣುತ್ತಾರೆ ಎಂಬೆಲ್ಲಾ ಕಲ್ಪನೆ ಇರುತ್ತದೆ. ಆದರೆ ಮನೋವಿಜ್ಞಾನಿಗಳು ಮತ್ತು ಜೀವಶಾಸ್ತ್ರಜ್ಞರು ನಡೆಸಿದ ಅಧ್ಯಯನದಲ್ಲಿ ಇಂಥಾ ಕಲ್ಪನೆ ಬಗ್ಗೆ ತಪ್ಪು ಎಂದು ಹೇಳುತ್ತದೆ. ಬದಲಾಗಿ ಬಹಳ ದೊಡ್ಡದಾದ ಅಥವಾ ಜೋರಾಗಿ ಮಾತನಾಡುವವರು ನೋಡಲು ತಾನು ಇರುವ ವಯಸ್ಸಿಗಿಂತ ಬಹಳ ಚಿಕ್ಕವರಾಗಿ ಕಾಣುತ್ತಾರೆ ಮತ್ತು ಆಕರ್ಷಕವಾಗಿ ಕಾಣುತ್ತಾರೆ ಅಷ್ಟೇ ಅಲ್ಲದೆ ಆರೋಗ್ಯವಂತರು ಎಂದು ಹೇಳುತ್ತದೆ.

1. ಕೇವಲ ಧ್ವನಿಯಲ್ಲಿ ಮಾತ್ರ ಸಂಶೋಧನೆಯೇ?

1. ಕೇವಲ ಧ್ವನಿಯಲ್ಲಿ ಮಾತ್ರ ಸಂಶೋಧನೆಯೇ?

ಆರಂಭದಲ್ಲಿ ಸಂಶೋಧನೆಯ ಗಮನವು ಮುಖ್ಯವಾಗಿ ಧ್ವನಿ ಮತ್ತು ಆಕರ್ಷಣೆಯ ಅರ್ಥದಲ್ಲಿ ಮಾತ್ರ ನಡೆಸಲಾಗಿತ್ತು, ಕ್ರಮೇಣ, ಧ್ವನಿ ಅಥವಾ ವಾಸನೆಯಂತಹ ಇತರ ಗುಣಲಕ್ಷಣಗಳನ್ನು ಸಹ ಸಂಶೋಧನೆಯಲ್ಲಿ ಸೇರಿಸಲಾಯಿತು.

2. ಸಂಶೋಧನೆ ಏನು ಹೇಳುತ್ತದೆ?

2. ಸಂಶೋಧನೆ ಏನು ಹೇಳುತ್ತದೆ?

ನಮ್ಮ ಧ್ವನಿ ಸಹ ನಮ್ಮ ವ್ಯಕ್ತಿತ್ವ ಬಗ್ಗೆ ಸಾಕಷ್ಟು ಹಾಗೂ ಪ್ರಮುಖ ಮಾಹಿತಿಯನ್ನು ನೀಡುತ್ತದೆ ಎಂದು ಸಂಶೋಧಕರು ದೀರ್ಘಕಾಲದ ಸಂಶೋಧನೆಯಿಂದ ಪತ್ತೆ ಮಾಡಿದ್ದಾರೆ. ಹಿಂದಿನ ಪ್ರಯೋಗಗಳಲ್ಲಿ, ಮಹಿಳೆಯರಲ್ಲಿ ಹೆಚ್ಚಿನ ಧ್ವನಿ ಪಿಚ್ ಅನ್ನು ಹೊಂದಿರುವವರು ಹೆಚ್ಚು ಆಕರ್ಷಕ, ಕಿರಿಯ ಮತ್ತು ಆರೋಗ್ಯಕರ ಗುಣಗಳನ್ನು ಹೊಂದಿರುವುದು ಕಂಡುಬಂದಿದೆ.

ಆದರೆ ದೈನಂದಿನ ಜೀವನದಲ್ಲಿ ಮುಖ ಮತ್ತು ಧ್ವನಿ ದೃಢವಾಗಿ ಲಿಂಕ್ ಆಗಿರುವುದರಿಂದ ಇದು ಎಷ್ಟು ನಿಜ, ಇದರಿಂದ ನಿರ್ಣಯಕ್ಕೆ ಬರುವುದು ಸರಿಯೇ ಎಂದು ಹೊಸ ಅಧ್ಯಯನ ಮಾಡಲಾಯಿತು. ಪಿಎಚ್‌ಡಿ ವಿದ್ಯಾರ್ಥಿನಿ ಕ್ರಿಸ್ಟಿನಾ ಕ್ರುಂಫೋಲ್ಜ್, ಪ್ರೊಫೆಸರ್ ಹೆಲ್ಮಟ್ ಲೆಡರ್ ಮತ್ತು ಅವರ ಸಹೋದ್ಯೋಗಿಗಳು ನಡೆಸಿದ ಈ ಅಧ್ಯಯನದಲ್ಲಿ, ಭಾಗವಹಿಸುವವರಿಗೆ ಆಕರ್ಷಣೆ, ವಯಸ್ಸು ಮತ್ತು ಆರೋಗ್ಯದ ಬಗ್ಗೆ ಸ್ತ್ರೀ ಮುಖಗಳು ಹಾಗೂ ಅವರ ಧ್ವನಿಯ ವೀಡಿಯೊಗಳನ್ನು ರೇಟ್ ಮಾಡಲಾಯಿತು.

3. ಸೂಕ್ಷ್ಮ ವ್ಯತ್ಯಾಸ

3. ಸೂಕ್ಷ್ಮ ವ್ಯತ್ಯಾಸ

ಇದರಲ್ಲಿ ಧ್ವನಿ ಪಿಚ್ ಅನ್ನು ಗ್ರಹಿಸುವುದನ್ನು ಬಹಳ ಕುಶಲತೆಯಿಂದ ನಿರ್ವಹಿಸಲಾಗಿದೆ, ಭಾಗವಹಿಸುವವರು ಒಂದೇ ವೀಡಿಯೊಗಳನ್ನು ಎರಡು ಬಾರಿ ನೋಡಿದರು ಧ್ವನಿಯ ಪಿಚ್‌ನಲ್ಲಿನ ಈ ಸೂಕ್ಷ್ಮ ವ್ಯತ್ಯಾಸಗಳು ಮುಖಗಳ ಮೌಲ್ಯಮಾಪನದ ಮೇಲೆ ಪ್ರಭಾವ ಬೀರುತ್ತವೆಯೇ, ಧ್ವನಿಯನ್ನು ನಿರ್ಲಕ್ಷಿಸಬಹುದೇ ಅಥವಾ ಅದು ಅನಿವಾರ್ಯವಾಗಿ ತೀರ್ಪಿನ ಮೇಲೆ ಪ್ರಭಾವ ಬೀರುತ್ತದೆಯೇ ಎಂಬುದನ್ನು ತನಿಖೆ ಮಾಡುವುದು ಗುರಿಯಾಗಿತ್ತು.

ಆದರೆ ಈ ಅಧ್ಯಯನದಲ್ಲೂ ತಿಳಿದುಬಂದ ವರದಿಯ ಪ್ರಕಾರ, "ಹೆಚ್ಚಿನ ಧ್ವನಿಯು ಮುಖಗಳನ್ನು ಸರಾಸರಿ ಅರ್ಧ ವರ್ಷ ಕಿರಿಯ ಎಂದು ನಿರ್ಣಯಿಸಲು ಕಾರಣವಾಗುತ್ತದೆ. ಆದ್ದರಿಂದ ಇಲ್ಲಿ ಧ್ವನಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ, ಮುಖಗಳನ್ನು ಮೌಲ್ಯಮಾಪನ ಮಾಡುವಾಗ ನಾವು ಧ್ವನಿಯನ್ನು ನಿರ್ಲಕ್ಷಿಸುವಂತಿಲ್ಲ", ಎಂದು ಕ್ರಿಸ್ಟಿನಾ ಕ್ರುಂಫೋಲ್ಜ್ ವಿವರಿಸುತ್ತಾರೆ.

--

English summary

Female Voices With Higher Pitch Have Younger-Looking Faces

Here we are discussing about Female Voices With Higher Pitch Have Younger-Looking Faces. Read more.
Story first published: Monday, July 25, 2022, 12:49 [IST]
X
Desktop Bottom Promotion