For Quick Alerts
ALLOW NOTIFICATIONS  
For Daily Alerts

ಆಲ್ಕೋಹಾಲ್ ಮಾತ್ರವಲ್ಲ ಈ ಅಭ್ಯಾಸಗಳಿದ್ದರೂ ಲಿವರ್‌ ಸಮಸ್ಯೆ ಬರುವುದು

|

ದೇಹವನ್ನು ಆರೋಗ್ಯವಾಗಿಡುವಲ್ಲಿ ಯಕೃತ್ತು ಅಥವಾ ಲಿವರ್ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಪ್ರೋಟೀನುಗಳನ್ನು ಉತ್ಪಾದಿಸಲು, ಜೀರ್ಣಕ್ರಿಯೆಗೆ ಪಿತ್ತರಸವನ್ನು ಉತ್ಪಾದಿಸಲು, ಪೋಷಕಾಂಶಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು, ರಕ್ತದಿಂದ ಬ್ಯಾಕ್ಟೀರಿಯಾ ಮತ್ತು ಜೀವಾಣುಗಳನ್ನು ತೆಗೆದುಹಾಕುವ ಮೂಲಕ ಸೋಂಕುಗಳ ವಿರುದ್ಧ ಹೋರಾಡಲು ಹೀಗೆ ನಾನಾ ವಿಚಾರಗಳಿಗೆ ಲಿವರ್ ಸಹಾಯ ಮಾಡುತ್ತದೆ.

ಆದರೆ, ಸಣ್ಣ ಅಜಾಗರೂಕತೆಯು ನಮ್ಮನ್ನು ಕೊಬ್ಬಿನ ಯಕೃತ್ ಅಥವಾ ಫ್ಯಾಟಿ ಲಿವರ್ ಸಮಸ್ಯೆಗೆ ಬಲಿಪಶುವಾಗಿಸಬಹುದು. ಕೇವಲ ಆಲ್ಕೊಹಾಲ್ ಸೇವನೆಯಿಂದ ಮಾತ್ರ ಲಿವರ್ ಹಾನಿಗೊಳಗಾಗುವುದಲ್ಲ, ಇತ್ತೀಚಿನ ದಿನಗಳಲ್ಲಿ ಒತ್ತಡ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಹೆಚ್ಚಿನ ಜನರು ಕೊಬ್ಬಿನ ಲಿವರ್ ಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಈ ಫ್ಯಾಟಿ ಲಿವರ್ ಎಂದರೇನು? ಅದರ ಹಿಂದಿನ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಫ್ಯಾಟಿ ಲಿವರ್ ಎಂದರೇನು? ಅದರ ಹಿಂದಿನ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಫ್ಯಾಟಿ ಲಿವರ್ ಎಂದರೇನು?:

ಫ್ಯಾಟಿ ಲಿವರ್ ಎಂದರೇನು?:

ಫ್ಯಾಟಿ ಲಿವರ್ ಎಂದರೆ ಯಕೃತ್ತಿನಲ್ಲಿ ಅಧಿಕ ಕೊಬ್ಬಿನ ಶೇಖರಣೆ. ಇದು ಹೆಚ್ಚಾದರೆ, ಇದು ಲಿವರ್ ವೈಫಲ್ಯ ಅಥವಾ ಲಿವರ್ ಸಿರೋಸಿಸ್‌ಗೂ ಕಾರಣವಾಗಬಹುದು. ಈ ಸಮಸ್ಯೆ ಸಾಮಾನ್ಯವಾಗಿ ಕಂಡುಬರುತ್ತಿದ್ದು, ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆಯಿಂದ ಹೆಚ್ಚಾಗಿ ತೊಂದರೆಗೊಳಗಾಗುತ್ತಾರೆ. ಉದಾಹರಣೆ- ಕೆಲವೊಮ್ಮೆ ಸ್ವಲ್ಪ ತಿಂದರೂ ಅತಿಯಾಗಿ ತಿಂದ ಭಾವನೆ, ಅಥವಾ ಅತಿಯಾಗಿ ತಿಂದ ನಂತರವೂ ತಮ್ಮ ಹೊಟ್ಟೆ ತುಂಬಿದಂತೆ ಅನಿಸುವುದಿಲ್ಲ.

ತಜ್ಞರ ಪ್ರಕಾರ, ಫ್ಯಾಟಿ ಲಿವರ್ ಕಡಿಮೆ ದೈಹಿಕ ಚಟುವಟಿಕೆ ಇರುವ ಅಥವಾ ಮೆಟಾಬಾಲಿಕ್ ಸಿಂಡ್ರೋಮ್ ಹೊಂದಿರುವ ಜನರಲ್ಲಿ ಕಂಡುಬರುತ್ತದೆ. ಮೆಟಾಬಾಲಿಕ್ ಸಿಂಡ್ರೋಮ್ ಎಂದರೆ ಅಧಿಕ ರಕ್ತದೊತ್ತಡ, ಅಧಿಕ ರಕ್ತದಲ್ಲಿ ಸಕ್ಕರೆ, ಕಡಿಮೆ ಥೈರಾಯ್ಡ್ ಮಟ್ಟ ಮತ್ತು ಅಸಹಜ ಕೊಲೆಸ್ಟ್ರಾಲ್ ಮಟ್ಟಗಳು. ಈ ವಿಷಯಗಳನ್ನು ಸರಿಯಾಗಿ ನಿಯಂತ್ರಿಸದಿದ್ದರೆ, ಇದು ಲಿವರ್ ಸಿರೋಸಿಸ್ಗೆ ಕಾರಣವಾಗಬಹುದು. ಅದಕ್ಕಾಗಿಯೇ, 35 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾದವರು ವರ್ಷಕ್ಕೊಮ್ಮೆ ಅಲ್ಟ್ರಾಸೌಂಡ್ ಮೂಲಕ ತಮ್ಮ ಪಿತ್ತಜನಕಾಂಗವನ್ನು ಪರೀಕ್ಷಿಸಿಕೊಳ್ಳಬೇಕು.

ಫ್ಯಾಟಿ ಲಿವರ್ ನ ವಿಧಗಳು:

ಫ್ಯಾಟಿ ಲಿವರ್ ನ ವಿಧಗಳು:

ಕೊಬ್ಬಿನ ಪಿತ್ತಜನಕಾಂಗದಲ್ಲಿ ಎರಡು ವಿಧಗಳಿವೆ.

ಆಲ್ಕೊಹಾಲ್ಯುಕ್ತ ಫ್ಯಾಟಿ ಲಿವರ್:

ಇದು ಅತಿಯಾದ ಮದ್ಯಪಾನ ಅಥವಾ ಕಳಪೆ ಗುಣಮಟ್ಟದ ಮದ್ಯ ಸೇವನೆಯಿಂದ ಉಂಟಾಗುತ್ತದೆ. ಅತಿಯಾಗಿ ಮದ್ಯ ಸೇವಿಸುವ ಜನರ ಲಿವರ್ ಕುಗ್ಗುತ್ತದೆ.

ಆಲ್ಕೊಹಾಲ್ ಅಲ್ಲದ ಫ್ಯಾಟಿ ಲಿವರ್:

ಆಲ್ಕೊಹಾಲ್ ಅಲ್ಲದ ಫ್ಯಾಟಿ ಲಿವರ್:

ಆನುವಂಶಿಕ ಕಾರಣಗಳಿಂದ ಅಥವಾ ಅನಾರೋಗ್ಯಕರ ಜೀವನಶೈಲಿಯಿಂದ ಇದನ್ನು ಪಡೆಯಬಹುದು. ಬೊಜ್ಜು ಮತ್ತು ಮಧುಮೇಹವು ಈ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ, ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ, ನೀವು ಈ ರೋಗವನ್ನು ತಡೆಯಬಹುದು.

ಫ್ಯಾಟಿ ಲಿವರ್ ಅಪಾಯ ಯಾರಿಗೆ ಹೆಚ್ಚು?:

ಫ್ಯಾಟಿ ಲಿವರ್ ಅಪಾಯ ಯಾರಿಗೆ ಹೆಚ್ಚು?:

  • ಅತಿಯಾದ ತೂಕ ಹೊಂದಿರುವವರಿಗೆ
  • ಹೆಚ್ಚು ಮದ್ಯ ಸೇವಿಸುವವರಿಗೆ
  • ಟೈಪ್ 2 ಮಧುಮೇಹ ಇರುವವರಿಗೆ
  • ಮೆಟಾಬಾಲಿಸಮ್ ಸಿಂಡ್ರೋಮ್ ಇದ್ದವರಿಗೆ
  • ಕೊಲೆಸ್ಟ್ರಾಲ್ ಸಮಸ್ಯೆ ಇರುವವರಿಗೆ
  • ಫ್ಯಾಟಿ ಲಿವರ್ ಅಥವಾ ಕೊಬ್ಬು ತುಂಬಿದ ಲಿವರ್ ನ ಲಕ್ಷಣಗಳು:

    ಫ್ಯಾಟಿ ಲಿವರ್ ಅಥವಾ ಕೊಬ್ಬು ತುಂಬಿದ ಲಿವರ್ ನ ಲಕ್ಷಣಗಳು:

    ಲಿವರ್ ನಲ್ಲಿ ಕೊಬ್ಬು ಇರುವ ಸಮಸ್ಯೆಯನ್ನು ಹೊಂದಿರುವ ಜನರು, ಹೆಚ್ಚಾಗಿ ವೀಕ್ ಆಗಿದ್ದು, ಯಾವಾಗಲೂ ದಣಿದಿರುತ್ತಾರೆ.

    ಇವರು ಇದ್ದಕ್ಕಿದ್ದಂತೆ ತೂಕವನ್ನು ಕಳೆದುಕೊಳ್ಳಬಹುದು ಮತ್ತು ಹಸಿವು ಕಡಿಮೆಯಾಗಬಹುದು.

    ಹೊಟ್ಟೆ ನೋವಿನ ಸಮಸ್ಯೆ ಹೆಚ್ಚಾಗಿ ಕಾಡತೊಡಗುವುದು.

    ಕಾಮಾಲೆಯ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳಲಾರಂಭಿಸುತ್ತವೆ ಅಂದರೆ ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

    ಫ್ಯಾಟಿ ಲಿವರ್ ತಡೆಗಟ್ಟುವ ಕ್ರಮಗಳು:

    -ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಫೈಬರ್ ಭರಿತ ದ್ವಿದಳ ಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ

    -ಸಕ್ಕರೆ, ಉಪ್ಪು, ಟ್ರಾನ್ಸ್ ಕೊಬ್ಬು, ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡಿ.

    -ಮದ್ಯವನ್ನು ತಪ್ಪಿಸಿ

    -ಥೈರಾಯ್ಡ್ ಮತ್ತು ಕೊಲೆಸ್ಟ್ರಾಲ್ ಮಟ್ಟನ್ನು ನಿಯಂತ್ರಿಸಿ

    - ತೂಕ ನಿಯಂತ್ರಣದಲ್ಲಿಡಿ

    -ಮಧುಮೇಹವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳಿ

    -ನಿಯಮಿತವಾಗಿ ವ್ಯಾಯಾಮ ಮಾಡಿ ಅಥವಾ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿ.

English summary

Fatty Liver Disease Causes, Symptoms, Risk Factors and Treatment in Kannada

Here we talking about Fatty Lever Disease Causes, Symptoms, Risk Factors and Treatment in Kannada, read on
X
Desktop Bottom Promotion