For Quick Alerts
ALLOW NOTIFICATIONS  
For Daily Alerts

ದೇಹದಲ್ಲಿ ಕಿಡ್ನಿ ವೈಫಲ್ಯದ ಲಕ್ಷಣಗಳಿವು

|

ದೇಹದ ಇತರ ಅಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾದರೆ ಕಿಡ್ನಿ ಆರೋಗ್ಯ ತುಂಬಾ ಮುಖ್ಯ. ಕಿಡ್ನಿಯ ಪ್ರಮುಖ ಕೆಲಸ ದೇಹದಲ್ಲಿನ ರಕ್ತವನ್ನು ಶುದ್ಧ ಮಾಡುವುದು ಹಾಗೂ ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕುವುದು. ಕಿಡ್ನಿ ಬೇಡದ ಕಶ್ಮಲಗಳನ್ನು ಮೂತ್ರ ಪಿಂಡಕ್ಕೆ ಕಳುಹಿಸುತ್ತದೆ, ನಂತರ ಅದು ಮೂತ್ರದ ಮೂಲಕ ಹೊರ ಹೋಗುತ್ತದೆ.

kidney failure

ಯಾವಾಗ ಕಿಡ್ನಿ ಈ ಕಾರ್ಯಗಳನ್ನು ಮಾಡಲು ವಿಫಲವಾಗುತ್ತದೆಯೋ ಆಗ ಕಿಡ್ನಿ ತೊಂದರೆ ಉಂಟಾಗಿದೆ ಎಂದು ಹೇಳಬಹುದು. ಅನೇಕ ಕಾರಣಗಳಿಂದ ಕಿಡ್ನಿ ತೊಂದರೆ ಉಂಟಾಗುವುದು.

ಕಿಡ್ನಿ ವೈಫಲ್ಯಕ್ಕೆ ಕಾರಣಗಳು

ಕಿಡ್ನಿ ವೈಫಲ್ಯಕ್ಕೆ ಕಾರಣಗಳು

* ಕಲುಷಿತ ವಾತಾವರಣ

*ಕೆಲವೊಂದು ಔಷಧಿಗಳು

* ನೀರು ಕಡಿಮೆ ಕುಡಿಯುವುದು

* ಕಿಡ್ನಿ ಕಾಯಿಲೆ

ಈ ರೀತಿ ಉಂಟಾದಾಗ ದೇಹದಲ್ಲಿ ಕಶ್ಮಲಗಳು ಹೆಚ್ಚಾಗಿ ಇತರ ಕಾಯಿಲೆಗಳು ಕೂಡ ಉಂಟಾಗುವುದು.

 ಕಿಡ್ನಿ ತೊಂದರೆ ಉಂಟಾದಾಗ ಕಂಡು ಬರುವ ಲಕ್ಷಣಗಳು:

ಕಿಡ್ನಿ ತೊಂದರೆ ಉಂಟಾದಾಗ ಕಂಡು ಬರುವ ಲಕ್ಷಣಗಳು:

* ಮೂತ್ರ ವಿಸರ್ಜನೆ ಕಡಿಮೆಯಾಗುವುದು

* ಕಾಲುಗಳಲ್ಲಿ ಊತ, ಪಾದ, ಮೊಣಕಾಲಿನ ಭಾಗದಲ್ಲಿ ನೀರು ನಿಂತಂತೆ ಕಾಣುವುದು

* ಕಾರಣವಿಲ್ಲದೆ ಉಸಿರಾಟದ ತೊಂದರೆ

* ತೂಕಡಿಕೆ ಹಾಗೂ ತಲೆಸುತ್ತು

*ವಾಂತಿ

*ಗೊಂದಲ

* ಎದೆ ಭಾಗದಲ್ಲಿ ಒತ್ತಡ ಹಾಗೂ ನೋವು

* ಕೋಮಾ

ಕಿಡ್ನಿ ತೊಂದರೆಯ ಪ್ರಾರಂಭಿಕ ಲಕ್ಷಣಗಳು

ಕಿಡ್ನಿ ತೊಂದರೆಯ ಪ್ರಾರಂಭಿಕ ಲಕ್ಷಣಗಳು

ಕಿಡ್ನಿ ಸಮಸ್ಯೆ ಪ್ರಾರಂಭಿಕ ಹಂತದಲ್ಲಿ ಗುರುತಿಸುವುದು ಕಷ್ಟ, ಈ ಲಕ್ಷಣಗಳು ಕಂಡು ಬಂದರೆ ಕಿಡ್ನಿ ಆರೋಗ್ಯದ ಬಗ್ಗೆ ವೈದ್ಯರನ್ನು ಕಂಡು ಮಾಹಿತಿಯನ್ನು ಪಡೆಯುವುದು ಒಳ್ಳೆಯದು.

* ಮೂತ್ರ ಕಡಿಮೆಯಾಗುವುದು

* ಕಾಲುಗಳಲ್ಲಿ ಊತ

* ಉಸಿರಾಟದಲ್ಲಿ ತೊಂದರೆ

ಕಿಡ್ನಿ ತೊಂದರೆಗೆ ಕಾರಣಗಳು

ಕಿಡ್ನಿ ತೊಂದರೆಗೆ ಕಾರಣಗಳು

ಕಿಡ್ನಿಗೆ ರಕ್ತಸಂಚಾರ ಇದ್ದಕ್ಕಿದ್ದಂತೆ ಕಡಿಮೆಯಾದಾಗ ಕಿಡ್ನಿ ವೈಫಲ್ಯ ಉಂಟಾಗುವುದು. ಈ ಸಂದರ್ಭದಲ್ಲಿ ಕಿಡ್ನಿಗೆ ರಕ್ತ ಸಂಚಾರ ಕಡಿಮೆಯಾಗಿ ಕಿಡ್ನಿ ವೈಫಲ್ಯ ಉಂಟಾಗಬಹುದು.

* ಹೃದಯಾಘಾತವಾದಾಗ

* ಹೃದಯದ ತೊಂದರೆ

* ನಿರ್ಜಲೀಕರಣ

* ಅಲರ್ಜಿ

* ಸೋಂಕು

ಈ ಕ್ಯಾನ್ಸರ್‌ಗಳು ಕಿಡ್ನಿ ವೈಫಲ್ಯ ಉಂಟು ಮಾಡುತ್ತವೆ

ಈ ಕ್ಯಾನ್ಸರ್‌ಗಳು ಕಿಡ್ನಿ ವೈಫಲ್ಯ ಉಂಟು ಮಾಡುತ್ತವೆ

*ಪ್ರೊಸ್ಟ್ರೇಟ್ ಕ್ಯಾನ್ಸರ್‌

* ಕರುಳಿನ ಕ್ಯಾನ್ಸರ್

* ಜಠರದ ಕ್ಯಾನ್ಸರ್

* ಮೂತ್ರಪಿಂಡದ ಕ್ಯಾನ್ಸರ್

ಈ ಸಂದರ್ಭದಲ್ಲೂ ಕಿಡ್ನಿ ವೈಫಲ್ಯ ಉಂಟಾಗುವುದು

ಈ ಸಂದರ್ಭದಲ್ಲೂ ಕಿಡ್ನಿ ವೈಫಲ್ಯ ಉಂಟಾಗುವುದು

  • ಮೂತ್ರದಲ್ಲಿ ಕಲ್ಲು
  • ಪ್ರೊಸ್ಟ್ರೇಟ್ ಗಾತ್ರ ದೊಡ್ಡದಾದಾಗ
  • ನರಗಳಿಗೆ ತೊಂದರೆ ಉಂಟಾದಾಗ
  • ಇತರ ಕಾರಣಗಳು

    *ಕಿಡ್ನಿ ಸುತ್ತ ರಕ್ತ ಹೆಪ್ಪುಗಟ್ಟುವುದು

    * ಸೋಂಕು

    *ರಾಸಾಯನಿಕಗಳು ದೇಹವನ್ನು ಹೆಚ್ಚಾಗಿ ಸೇರಿದಾಗ

    * ಔಷಧಿ ಅಥವಾ ಮದ್ಯಪಾನ

    * ರಕ್ತನಾಳಗಳಲ್ಲಿ ಉರಿಯೂತ

    * ಕೀಮೋಥೆರಪಿ

    * ಕೆಲವೊಂದು ಆ್ಯಂಟಿಬಯೋಟಿಕ್

    *ನಿಯಂತ್ರಣಕ್ಕೆ ಬಾರದ ಮಧುಮೇಹ

    *ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು

    scleroderma, multiple myeloma, hemolytic uremic syndrome ಹಾಗೂ lupus ಈ ರೀತಿಯ ತೊಂದರೆಗಳು ಕಾಣಿಸಿದಾಗ ಕಿಡ್ನಿ ವೈಫಲ್ಯ ಉಂಟಾಗುವುದು.

    5 ಬಗೆಯ ಕಿಡ್ನಿ ವೈಫಲ್ಯಗಳು ಉಂಟಾಗುತ್ತವೆ

    5 ಬಗೆಯ ಕಿಡ್ನಿ ವೈಫಲ್ಯಗಳು ಉಂಟಾಗುತ್ತವೆ

    1. ಅಕ್ಯೂಟ್ ಪ್ರಿರ್ರೆನಲ್ ವೈಫಲ್ಯ: ಇದರಲ್ಲಿ ಕಿಡ್ನಿಗೆ ರಕ್ತ ಸಂಚಾರ ಕಡಿಮೆಯಾಗಿ, ರಕ್ತದಲ್ಲಿರುವ ಕಶ್ಮಲಗಳನ್ನು ಬೇರ್ಪಡಿಸಲು ಕಿಡ್ನಿಗೆ ಸಾಧ್ಯವಾಗುವುದಿಲ್ಲ. ಈ ಕಿಡ್ನಿ ಸಮಸ್ಯೆ ಗುಣಪಡಿಸಬಹುದು.

    2. ಅಕ್ಯೂಟ್ ಇಂಟ್ರಿನ್ಸಿಂಕ್ ಕಿಡ್ನಿ ವೈಫಲ್ಯ

    ಕಿಡ್ನಿಯಲ್ಲಿ ತೊಂದರೆ ಉಂಟಾಗಿ ಅಂದರೆ ಅಪಘಾತವಾದಾಗ ದೇಹಕ್ಕೆ ಆಮ್ಲಜನಕ ಕೊರತೆ ಉಂಟಾಗಿ ಕಿಡ್ನಿ ವೈಫಲ್ಯ ಉಂಟಾಗುವುದು.

    3.ಕ್ರೋನಿಲ್ ಪ್ರಿರ್ರೆನಲ್ ಕಿಡ್ನಿ ವೈಫಲ್ಯ

    ಕಿಡ್ನಿಗೆ ಕೆಲವು ಸಮಯದವರೆಗೆ ರಕ್ತ ಪೂರೈಕೆ ಆಗದೇ ಹೋದಾಗ ಅದು ತನ್ನ ಕಾರ್ಯ ಮಾಲು ವಿಫಲವಾಗುತ್ತದೆ.

    4. ಕ್ರೋನಿಕ್ ಇನ್ಸ್ಟ್ರಿಂಕ್ ಕಿಡ್ನಿ ವೈಫಲ್ಯ

    ಕಿಡ್ನಿಗೆ ನೇರವಾಗಿ ಪೆಟ್ಟಾಗಿ ತುಂಬಾ ರಕ್ತಸ್ರಾವ ಉಂಟಾದಾಗ ಈ ರೀತಿಯ ಸಮಸ್ಯೆ ಉಂಟಾಗುತ್ತದೆ

    5.ಕ್ರೋನಿಕ್ ಪೋಸ್ಟ್ ರೆನಲ್ ಕಿಡ್ನಿ ವೈಫಲ್ಯ

    ತುಂಬಾ ಸಮಯದಿಂದ ಮೂತ್ರಪಿಂಡದಲ್ಲಿಅಡಚಣೆ ಉಂಟಾಗಿದ್ದರೆ ಇದರಿಂದ ಕಿಡ್ನಿ ಮೇಲೆ ಒತ್ತಡ ಬಿದ್ದು ಕಿಡ್ನಿ ಹಾಳಾಗುವುದು.

    ಕಿಡ್ನಿ ವೈಫಲ್ಯ ಕಂಡು ಹಿಡಿಯುವ ಪರೀಕ್ಷೆಗಳು

    ಕಿಡ್ನಿ ವೈಫಲ್ಯ ಕಂಡು ಹಿಡಿಯುವ ಪರೀಕ್ಷೆಗಳು

    • ಮೂತ್ರ ಪರೀಕ್ಷೆ
    • ಮೂತ್ರದ ಪ್ರಮಾಣದ ಎಷ್ಟಿದೆಯೆಂದು ಪರಿಶೀಲಿಸುವುದು
    • ರಕ್ತ ಪರೀಕ್ಷೆ
    • MRI, CT ಸ್ಕ್ಯಾನ್
    • ಕಿಡ್ನಿ ಟಿಶ್ಯೂ ಸ್ಯಾಂಪಲ್
    • ಕಿಡ್ನಿ ವೈಫಲ್ಯದ ಹಂತಗಳು

      ಕಿಡ್ನಿ ವೈಫಲ್ಯದ ಹಂತಗಳು

      ಸ್ಟೇಜ್ 1

      ಈ ಸ್ಟೇಜ್ ಹೆಚ್ಚೇನು ಅಪಾಯಕಾರಿಯಲ್ಲ, ಈ ಹಂತದಲ್ಲಿ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ, ಆದರೆ ಸಮಸ್ಯೆ ನಿಧಾನಕ್ಕೆ ಹೆಚ್ಚಾಗಬಹುದು. ಆರೋಗ್ಯಕರ ಆಹಾರಕ್ರಮ, ವ್ಯಾಯಾಮ, ಸಮತೂಕ ಹೊಂದುವುದರ ಮೂಲಕ ಈ ಸಮಸ್ಯೆ ಇಲ್ಲವಾಗಿಸಬಹುದು. ಮಧುಮೇಹಿಗಳು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವುದು ಒಳ್ಳೆಯದು.

      ಸ್ಟೇಜ್ 2

      ಈ ಹಂತದಲ್ಲಿ ಕೂಡ ಹೆಚ್ಚೇನು ಅಪಾಯವಿಲ್ಲ, ಸ್ಟೇಜ್‌ 1ರಲ್ಲಿ ಹೇಳಿದ ಜೀವನಶೈಲಿ ಅನುಸರಿಸಿದರೆ ಆರೋಗ್ಯಕರವಾಗಿರಬಹುದು.

      ಸ್ಟೇಜ್ 3

      ಈ ಸ್ಟೇಜ್‌ನಲ್ಲಿ ದೇಹದಲ್ಲಿ ಕೆಲವೊಂದು ಲಕ್ಷಣಗಳು ಕಂಡು ಬರುವುದು.ಕಾಲುಗಳಲ್ಲಿ ಊತ, ಸೊಂಟ ನೋವು, ಮೂತ್ರದ ಬಣ್ಣದಲ್ಲಿ ವ್ಯತ್ಯಾಸ ಇವೆಲ್ಲಾ ಕಂಡು ಬರುವುದು. ಈ ಹಂತದಲ್ಲಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು.

      ಸ್ಟೇಜ್ 4

      ಈ ಹಂತದಲ್ಲಿ ಕಿಡ್ನಿ ತನ್ನ ಕಾರ್ಯ ಸರಿಯಾಗಿ ನಿಭಾಯಿಸುವುದಿಲ್ಲ, ಆದರೆ ಸಂಪೂರ್ಣ ವೈಫಲ್ಯ ಉಂಟಾಗಿರುವುದಿಲ್ಲ, ಆದರೆ ರಕ್ತಹೀನತೆ, ರಕ್ತದೊತ್ತಡ, ಮೂಳೆ ಸಂಬಂಧಿತ ಸಮಸ್ಯೆ ಕಾಣಿಸುವುದು. ಚಿಕಿತ್ಸೆ ಜೊತೆಗೆ ಆರೋಗ್ಯಕರ ಜೀವನಶೈಲಿ ಪಾಲಿಸಿದರೆ ಮಾತ್ರ ಗುಣಮುಖರಾಗಲು ಸಾಧ್ಯ.

      ಸ್ಟೇಜ್ 5

      ಈ ಹಂತದಲ್ಲಿ ಕಿಡ್ನಿ ವೈಫಲ್ಯ ಉಂಟಾಗುತ್ತದೆ. ಈ ಹಂತದಲ್ಲಿ ವಾಂತಿ, ಉಸಿರಾಟದಲ್ಲಿ ತೊಣದರೆ, ತ್ವಚೆ ತುರಿಕೆ ಮುಂತಾದ ತೊಂದರೆ ಕಾಣುವುದು.

      ಚಿಕಿತ್ಸೆ

      • ಡಯಾಲಿಸಿಸ್
      • ಕಿಡ್ನಿ ಟ್ರಾನ್ಸ್‌ಪ್ಲಾಂಟ್
English summary

Everything You Need to Know About Kidney Failure

Here are everything you need to know about kidney failure, read on.
Story first published: Thursday, March 12, 2020, 17:09 [IST]
X
Desktop Bottom Promotion