For Quick Alerts
ALLOW NOTIFICATIONS  
For Daily Alerts

Eta Variant of COVID: ಮಂಗಳೂರಿನ ವ್ಯಕ್ತಿಯಲ್ಲಿ ಈಟ ವೈರಸ್ ಪತ್ತೆ, ಈ ಕೊರೊನಾ ರೂಪಾಂತರ ಅಪಾಯಕಾರಿಯೇ?

|

ಕೊರೊನಾ ವೈರಸ್‌ 3ನೇ ಆತಂಕ ಎದುರಾಗಿದೆ, ಇದೀಗ ಕರ್ನಾಟಕದಲ್ಲಿ ಕೊರೊನಾವೈರಸ್‌ನ ಮತ್ತೊಂದು ರೂಪಾಂತರ ಈಟ ವೈರಸ್‌ ಪತ್ತೆಯಾಗಿದೆ. ನಾಲ್ಕು ತಿಂಗಳ ಹಿಂದೆ ದುಬೈನಿಂದ ಮಂಗಳೂರಿಗೆ ಬಂದಿರುವ ವ್ಯಕ್ತಿಯಲ್ಲಿ ಪತ್ತೆಯಾಗಿದೆ. ಅವರಿಗೆ ಈಟ ವೈರಸ್‌ ತಗುಲಿರುವುದು ಆಗಸ್ಟ್‌ 5ಕ್ಕೆ ಖಚಿತವಾಗಿದೆ.

ಈಟ ವೈರಸ್‌ ಇತರ ರೂಪಾಂತರಗಳಿಗಿಂತಲೂ ಪರಿಣಾಮಕಾರಿಯೇ, ಲಸಿಕೆ ಇದರ ವಿರುದ್ಧ ಪರಿಣಾಮ ಬೀರುವುದೇ? ಈ ರೂಪಾಂತರ ಬೇಗನೆ ಹರಡುವುದೇ ಎಂಬೆಲ್ಲಾ ಮಾಹಿತಿ ತಿಳಿಯೋಣ:

ಭಾರತದಲ್ಲಿ ಈಟ ವೈರಸ್‌ ಪತ್ತೆಯಾಗಿರುವುದು ಇದೇ ಮೊದಲಲ್ಲ

ಭಾರತದಲ್ಲಿ ಈಟ ವೈರಸ್‌ ಪತ್ತೆಯಾಗಿರುವುದು ಇದೇ ಮೊದಲಲ್ಲ

ಗಮನಿಸಬೇಕಾದ ಒಂದು ವಿಷಯ ಏನೆಂದರೆ ಕೊರೊನಾ ರೂಪಾಂತರ ಈಟ ವೈರಸ್ ಪತ್ತೆಯಾಗಿರುವುದು ಇದೇ ಮೊದಲಲ್ಲ, 2020 ಏಪ್ರಿಲ್‌ನಲ್ಲೂ ಈ ವೈರಸ್‌ ಕಂಡು ಬಂದಿತ್ತು. ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಯ ವೈರಾಲಾಜಿ ಲ್ಯಾಬ್‌ ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ನೀಡಿತ್ತು.

ಜುಲೈ, 2021ರಲ್ಲಿ ಭಾರತದಲ್ಲಿ ಮತ್ತೊಂದು ಈಟ ವೈರಸ್‌ ಕೇಸ್‌ ಪತ್ತೆಯಾಯ್ತು. ಮಿಜೋರಾಂನ 75 ಜನರ ಸ್ಯಾಂಪಲ್ ತೆಗೆದು ಪರೀಕ್ಷಿಸಿದಾಗ ಅಲ್ಲಿಯೂ ಈ ವೈರಸ್ ಪತ್ತೆಯಾಗಿತ್ತು.

ಮೊದಲಿಗೆ ಈ ವೈರಸ್‌ ಎಲ್ಲಿ ಪತ್ತೆಯಾಯ್ತು?

ಮೊದಲಿಗೆ ಈ ವೈರಸ್‌ ಎಲ್ಲಿ ಪತ್ತೆಯಾಯ್ತು?

ಟ ರೂಪಾಂತರ ಅಥವಾ B.1.525 ರೂಪಾಂತರ ವೈರಸ್‌ ಡಿಸೆಂಬರ್ 2020ರಲ್ಲಿ ಯುಕೆ ಮತ್ತು ನೈಜೀರಿಯಾದಲ್ಲಿ ಕಂಡು ಬಂತು

ಈಟ ರೂಪಾಂತರ ಅಪಾಯಕಾರಿಯೇ?

ಈಟ ರೂಪಾಂತರ ಅಪಾಯಕಾರಿಯೇ?

ಈಟ ರೂಪಾಂತರ ಇತರ ರೂಪಾಂತರಗಳಂತೆಯೇ ಪರಿಣಾಮ ಬೀರುವುದು. ಈಟ ರೂಪಾತರ ಇತರ ರೂಪಾಂತರಗಳಾದ ಆಲ್ಫಾ, ಬೇಟಾ, ಗಾಮಾದಂತೆ N501Y ರೂಪಾಂತರ ಹರಡುವುದಿಲ್ಲ. ಅಲ್ಲದೆ ಇತರ ವೈರಸ್‌ಗಳಿಗಿಂತ ಬೇಗನೆ ಹರಡುವುದೋ ಇಲ್ಲ. ಈ ರೂಪಾಂತರ ವೈರಸ್‌ನ ಲಕ್ಷಣಗಳು ಇತರ ಕೊರೊನಾ ವೈರಸ್‌ನಂತೆಯೇ ಇರುವುದು.

ಈಟ ವೈರಸ್‌ ಇತರ ವೈರಸ್‌ಗಳಂತೆಯೇ ಸ್ವಭಾವ ಲಕ್ಷಣಗಳನ್ನು ಹೊಂದಿದೆ, ಇತರ ರೂಪಾಂತರ ವೈರಸ್‌ ತಗುಲಿದಾಗ ಉಂಟಾಗುವ ಆರೋಗ್ಯ ಸಮಸ್ಯೆಗಳು ಈಟ ವೈರಸ್‌ ತಗುಲಿದಾಗಲೂ ಉಂಟಾಗುವುದು.

ರೂಪಾಂತರಗಳ ವಿರುದ್ಧ ಲಸಿಕೆ ಪರಿಣಾಮಕಾರಿಯೇ?

ರೂಪಾಂತರಗಳ ವಿರುದ್ಧ ಲಸಿಕೆ ಪರಿಣಾಮಕಾರಿಯೇ?

ಲಸಿಕೆ ಆಲ್ಫಾ, ಬೇಟಾ, ಗಾಮ, ಡೆಲ್ಟಾ, ಈಟ ರೂಪಾಂತರ ವಿರುದ್ಧ ಪರಿಣಾಮಕಾರಿಯಾಗಿದೆ. ಎರಡು ಡೋಸ್‌ ಲಸಿಕೆ ಪಡೆದವರು ಈ ರೂಪಾಂತರ ವೈರಸ್‌ ವಿರುದ್ಧ ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿರುತ್ತಾರೆ.

English summary

Eta Variant of COVID in Karnataka: What Is It? How Is It Different? Details in Kannada

Eta Variant of COVID in Karnataka: What Is It? How Is It Different? Details in Kannada, read on..
X
Desktop Bottom Promotion