For Quick Alerts
ALLOW NOTIFICATIONS  
For Daily Alerts

ಮೊಟ್ಟೆ ಮತ್ತು ಕೊಲೆಸ್ಟ್ರಾಲ್: ಎಷ್ಟು ಮೊಟ್ಟೆ ತಿನ್ನುವುದು ಸುರಕ್ಷಿತ?

|

ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ, ಇದು ನಮ್ಮ ಕುಕ್ಕುಟ ಉದ್ಯಮದ ಧ್ಯೇಯವಾಕ್ಯ. ಆದರೆ ಮೊಟ್ಟೆ ತಿನ್ನುವವರು ಒಂದೇ ಮೊಟ್ಟೆಗೆ ತೃಪ್ತರಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಮೊಟ್ಟೆಯೊಂದು ಮರಿಯಾಗಲು ಬೇಕಾಗುವ ಎಲ್ಲಾ ಪೋಷಕಾಂಶಗಳು ಇದರಲ್ಲಿವೆ. ಇವು ಹೆಚ್ಚಿನ ಸಾಂದ್ರತೆಯಲ್ಲಿರುವ ಕಾರಣವೇ ಮೊಟ್ಟೆಯನ್ನು ಹೆಚ್ಚಾಗಿ ಸೇವಿಸದಂತೆ ತಡೆಯುತ್ತವೆ. ವಿಶೇಷವಾಗಿ ಇದರಲ್ಲಿರುವ ಅತಿ ಹೆಚ್ಚಿನ ಪ್ರಮಾಣದ ಕೊಲೆಸ್ಟಾಲ್. ಹಾಗಾದರೆ ವಾಸ್ತವದಲ್ಲಿ ದಿನಕ್ಕೆಷ್ಟು ಮೊಟ್ಟೆ ತಿನ್ನಬಹುದು?

ಕೊಲೆಸ್ಟ್ರಾಲ್ ಒಂದು ಜಿಡ್ಡಿನ ಪದಾರ್ಥವಾಗಿದ್ದು ನಮ್ಮ ಆರೋಗ್ಯಕ್ಕೆ ಅಗತ್ಯವಿರುವುದೇ ಆಗಿದೆ ಹಾಗೂ ಅಗತ್ಯವಿದ್ದಷ್ಟು ಉತ್ಪಾದಿಸಿಕೊಳ್ಳುತ್ತದೆ. ಒಂದು ವೇಳೆ ಕೊಲೆಸ್ಟಾಲ್ ಹೆಚ್ಚಾಗಿ ಆಹಾರದಿಂದ ಲಭ್ಯವಾದರೆ ಇದನ್ನು ಸರಿದೂಗಿಸಲು ಕೊಲೆಸ್ಟಾಲ್ ಉತ್ಪಾದನೆ ಕಡಿಮೆಯಾಗುತ್ತದೆ. ಆದ್ದರಿಂದ ಮೊಟ್ಟೆಯನ್ನು ತಿನ್ನುವುದರಿಂದಲೇ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂದ ಮಾತ್ರಕ್ಕೆ ಎಷ್ಟು ಸಾಧ್ಯವೋ ಅಷ್ಟೂ ತಿನ್ನುವಂತಿಲ್ಲ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಷ್ಟು ಮೊಟ್ಟೆಗಳನ್ನು ಸುರಕ್ಷಿತವಾಗಿ ಸೇವಿಸಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ಕೊಲೆಸ್ಟ್ರಾಲ್ ಎಂಬುದನ್ನು ನೆಗೆಟಿವ್ ಆಗಿ ನೋಡಲಾಗುತ್ತಿದೆ

ಕೊಲೆಸ್ಟ್ರಾಲ್ ಎಂಬುದನ್ನು ನೆಗೆಟಿವ್ ಆಗಿ ನೋಡಲಾಗುತ್ತಿದೆ

ಹೃದಯ ಸಂಬಂಧಿ ಕಾಯಿಲೆಗಳಿಗೂ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವುದಕ್ಕೂ ಹಾಗೂ ಚಿಕ್ಕ ವಯಸ್ಸಿನ ಸಾವುಗಳಿಗೂ ಸಂಬಂಧ ಇರುವುದನ್ನು ಅಧ್ಯಯನಗಳು ಸಾಬೀತು ಪಡಿಸಿವೆ. ವಾಸ್ತವದಲ್ಲಿ, ಈ ಸಾವುಗಳಿಗೆ ಕೇವಲ ಕೊಲೆಸ್ಟ್ರಾಲ್ ಮೇಲೆ ಮಾತ್ರವೇ ಗೂಬೆ ಕೂರಿಸುವುದು ಸರಿಯಲ್ಲ. ಏಕೆಂದರೆ ಕೊಲೆಸ್ಟ್ರಾಲ್ ಸಹಾ ನಮ್ಮ ಆರೋಗ್ಯಕ್ಕೆ ಅತಿ ಅಗತ್ಯವಾಗಿದೆ. ನಮ್ಮ ದೇಹದ ಪ್ರತಿ ಜೀವಕೋಶದ ಪದರ ನಿರ್ಮಾಣಕ್ಕೆ ಇದು ಅಗತ್ಯವಾಗಿದೆ. ಅಲ್ಲದೇ ಅಗತ್ಯ ರಸದೂತಗಳಾದ ಟೆಸ್ಟಾಸ್ಟೆರಾನ್, ಈಸ್ಟೋಜೆನ್ ಮತ್ತು ಕಾರ್ಟಿಸೋಲ್ ಮೊದಲಾದವುಗಳನ್ನು ಉತ್ಪಾದಿಸಲೂ ಇವು ಅಗತ್ಯವಾಗಿವೆ. ಹಾಗಾಗಿ, ಜೀವಿತಕಾಲದ ಉದ್ದಕ್ಕೂ ನಮಗೆ ನಿತ್ಯವೂ ಒಂದು ನಿಯಮಿತ ಪ್ರಮಾಣದ ಕೊಲೆಸ್ಟ್ರಾಲ್ ಲಭಿಸುತ್ತಲೇ ಇರಬೇಕು. ಈ ಅಗತ್ಯತೆಯನ್ನು ನಮ್ಮ ಯಕೃತ್ ನೈಸರ್ಗಿಕವಾಗಿ ಪೂರೈಸುತ್ತದೆ. ಒಂದು ವೇಳೆ ಆಹಾರದಿಂದ ಇದು ಲಭ್ಯವಾದರೆ ಯಕೃತ್ತಿಗೆ ಅಷ್ಟು ಮಟ್ಟಿಗಿನ ಪ್ರಮಾಣವನ್ನು ಕಡಿಮೆ ಉತ್ಪಾದಿಸಿದರೆ ಸಾಕಾಗುತ್ತದೆ.

ಆದ್ದರಿಂದ, ಒಂದು ವೇಳೆ ಕೊಲೆಸ್ಟ್ರಾಲ್ ಇರುವ ಆಹಾರಗಳ ಸೇವನೆಯಿಂದ ದೇಹದಲ್ಲಿ ಇದರ ಪ್ರಮಾಣ ಹೆಚ್ಚಾದರೂ ಯಕೃತ್ ಉತ್ಪಾದಿಸುವ ಪ್ರಮಾಣ ಕಡಿಮೆಯಾಗಿ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟದಲ್ಲಿ ಅತಿ ಹೆಚ್ಚು ಎನ್ನುವಷ್ಟೇನೂ ಬದಲಾವಣೆ ಕಾಣಿಸಿಕೊಳ್ಳುವುದಿಲ್ಲ. ಯಕೃತ್ ನಿಂದಲೇ ಆಗಲಿ ಅಥವಾ ಆಹಾರದಿಂದಲೇ ಆಗಲಿ ದೇಹಕ್ಕೆ ಒಟ್ಟಾರೆ ಅಗತ್ಯ ಪ್ರಮಾಣದ ಕೊಲೆಸ್ಟ್ರಾಲ್ ಸಿಕ್ಕಿದರೆ ಸರಿ.

ಅಂದ ಮಾತ್ರಕ್ಕೆ ನೀವು ಭಾರೀ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುವ ಆಹಾರಗಳನ್ನು ಸೇವಿಸಬಾರದು. ಆದ್ದರಿಂದ ದೇಹದ ಅಗತ್ಯಕ್ಕೆ ಮೀರದಷ್ಟು ಪ್ರಮಾಣ ನೀಡುವ ಆಹಾರವನ್ನು ಮಾತ್ರವೇ ಸೇವಿಸಬೇಕು.

ಸಾರಾಂಶ

ನಿಮ್ಮ ಯಕೃತ್ ಹೆಚ್ಚಿನ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ಮೊಟ್ಟೆಗಳಂತಹ ಕೊಲೆಸ್ಟ್ರಾಲ್ ಭರಿತ ಆಹಾರವನ್ನು ನೀವು ಸೇವಿಸಿದಾಗ, ನಿಮ್ಮ ಯಕೃತ್ತು ಕಡಿಮೆ ಉತ್ಪಾದಿಸುವ ಮೂಲಕ ಈ ಮಟ್ಟವನ್ನು ಸರಿದೂಗಿಸುತ್ತದೆ.

ಒಂದು ವೇಳೆ ದಿನವೊಂದರಲ್ಲಿ ಹಲವಾರು ಮೊಟ್ಟೆಗಳನ್ನು ಸೇವಿಸಿದರೆ ಏನಾಗುತ್ತದೆ?

ಒಂದು ವೇಳೆ ದಿನವೊಂದರಲ್ಲಿ ಹಲವಾರು ಮೊಟ್ಟೆಗಳನ್ನು ಸೇವಿಸಿದರೆ ಏನಾಗುತ್ತದೆ?

ಮೊಟ್ಟೆಯನ್ನು ಹೆಚ್ಚಾಗಿ ತಿನ್ನದಿರಿ, ಒಂದು ವೇಳೆ ತಿನ್ನಲೇಬೇಕಾಗಿದ್ದರೆ ಹಳದಿ ಭಾಗವನ್ನು ಹೊರತು ಪಡಿಸಿ ಕೇವಲ ಬಿಳಿಭಾಗವನ್ನು ಮಾತ್ರವೇ ತಿನ್ನಿ ಎಂದು ಹಿರಿಯರು ಹೇಳುತ್ತಲೇ ಬಂದಿದ್ದಾರೆ.

ಒಂದೇ ಮಧ್ಯಮ ಗಾತ್ರದ ಮೊಟ್ಟೆಯಲ್ಲಿ 186 ಮಿಗ್ರಾಂ ಕೊಲೆಸ್ಟ್ರಾಲ್ ಇದೆ, ಇದು ಶಿಫಾರಸು ಮಾಡಿದ ದೈನಂದಿನ ಸೇವನೆಯ (RDI)ನ 62% ಪ್ರಮಾಣವಾಗಿದೆ. ಇದಕ್ಕೆ ವಿರುದ್ಧವಾಗಿ, ಬಿಳಿ ಭಾಗದಲ್ಲಿ ಹೆಚ್ಚಾಗಿ ಪ್ರೋಟೀನ್ ಮತ್ತು ಅತಿ ಕಡಿಮೆ ಕೊಲೆಸ್ಟ್ರಾಲ್ ಇರುತ್ತದೆ.

ಆಹಾರ ತಜ್ಞರು ಶಿಫಾರಸ್ಸು ಮಾಡುವ ಪ್ರಕಾರ ವಾರವೊಂದರಲ್ಲಿ 2-6 ಹಳದಿ ಭಾಗಗಳನ್ನು ಸುರಕ್ಷಿತವಾಗಿ ಸೇವಿಸಬಹುದು. ಆದರೆ ಈ ಅಂಶವನ್ನು ವೈಜ್ಞಾನಿಕ ಸಂಶೋಧನೆಗಳು ಇನ್ನಷ್ಟೇ ದೃಢಪಡಿಸಬೇಕಿದೆ.

ಮೊಟ್ಟೆಯ ಸೇವನೆ ಮತ್ತು ಕೊಲೆಸ್ಟ್ರಾಲ್ ಮಟ್ಟಗಳ ನಡುವಣ ಸಂಬಂಧವನ್ನು ಕಂಡುಹಿಡಿಯಲು ಕೆಲವು ಅಧ್ಯಯನಗಳನ್ನು ನಡೆಸಲಾಯ್ತು.

ಈ ಅಧ್ಯಯನದಲ್ಲಿ ಪಾಲ್ಗೊಂಡ ವ್ಯಕ್ತಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪಿನ ವ್ಯಕ್ತಿಗಳಿಗೆ ದಿನವೊಂದರಲ್ಲಿ 1-3 ಇಡಿಯ ಮೊಟ್ಟೆಗಳನ್ನು ಸೇವಿಸಲು ನೀಡಲಾಯಿತು. ಇನ್ನೊಂದು ಗುಂಪಿನ ವ್ಯಕ್ತಿಗಳಿಗೆ ಮೊಟ್ಟೆಗಳಿಗೆ ಬದಲಾಗಿ ಇದೇ ಪ್ರಮಾಣದ ಬೇರೆ ಆಹಾರಗಳನ್ನು ನೀಡಲಾಯಿತು. ಕೆಲವು ದಿನಗಳವರೆಗೆ ಈ ಆಹಾರಕ್ರಮ ಅನುಸರಿಸಿದ ಬಳಿಕ ಆರೋಗ್ಯದ ಅಂಕಿ ಅಂಶಗಳನ್ನು ವಿಶ್ಲೇಷಿಸಲಾಯಿತು.

ಅಧ್ಯಯನದ ವರದಿ ಹೀಗಿದೆ:

ಅಧ್ಯಯನದ ವರದಿ ಹೀಗಿದೆ:

ಬಹುತೇಕ ಎಲ್ಲಾ ವ್ಯಕ್ತಿಗಳಲ್ಲಿ"ಒಳ್ಳೆಯ ಕೊಲೆಸ್ಟ್ರಾಲ್" ಅಥವಾ HDL ಮಟ್ಟ ಹೆಚ್ಚಾಗಿತ್ತು.

ಒಟ್ಟು ಕೆಟ್ಟ ಕೊಲೆಸ್ಟ್ರಾಲ್ ಅಥವಾ LDL ಬಹುತೇಕ ಒಂದೇ ಮಟ್ಟದಲ್ಲಿತ್ತು ಹಾಗೂ ಕೆಲವರಲ್ಲಿ ಮಾತ್ರವೇ ಅಲ್ಪ ಮಟ್ಟಿಗಿನ ವ್ಯತ್ಯಾಸ ಹೊಂದಿತ್ತು.

ಒಮೆಗಾ -3-ಅಂಶದೊಂದಿಗೆ ಲಭ್ಯವಿರುವ ಮೊಟ್ಟೆಗಳನ್ನು ತಿನ್ನುವುದರಿಂದ ರಕ್ತದಲ್ಲಿ ಟ್ರೈಗ್ಲಿಸರೈಡ್‌ಗಳ ಮಟ್ಟ ಕಡಿಮೆ ಮಾಡಬಹುದು, ಇದು ಮತ್ತೊಂದು ಪ್ರಮುಖ ಅಪಾಯದ ಸಾಧ್ಯತೆಯಾಗಿದೆ.

ರಕ್ತದಲ್ಲಿರುವ ಕ್ಯಾರೊಟಿನಾಯ್ಡ್ ಆಂಟಿಆಕ್ಸಿಡೆಂಟ್‌ಗಳಾದ ಲುಟೀನ್ ಮತ್ತು ಜ಼ಿಯಾಕ್ಸಾಂಥಿನ್ ( lutein ಮತ್ತು zeaxanthin) ಮಟ್ಟಗಳು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಆದರೆ ಇಡಿಯ ಮೊಟ್ಟೆಯನ್ನು ತಿನ್ನುವ ವ್ಯಕ್ತಿಯ ಆರೋಗ್ಯವನ್ನು ಅನುಸರಿಸಿ ಈ ಮಟ್ಟಗಳು ಬೇರೆಬೇರೆಯೇ ಇರುತ್ತವೆ.

70% ಜನರಲ್ಲಿ, ಮೊಟ್ಟೆಗಳು ಒಟ್ಟು ಅಥವಾ "ಕೆಟ್ಟ" LDL-ಕೊಲೆಸ್ಟ್ರಾಲ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಆದಾಗ್ಯೂ, ಅತಿ ಸೂಕ್ಷ್ಮ ಸಂವೇದಿಯಾಗಿರುವ 30% ಜನರಲ್ಲಿ - (hyper-responder) - ಈ ಲಕ್ಷಣಗಳು ಸ್ವಲ್ಪ ಹೆಚ್ಚಾಗುತ್ತವೆ.

ದಿನವೊಂದರಲ್ಲಿ ಕೆಲವು ಮೊಟ್ಟೆಗಳನ್ನು ತಿನ್ನುವ ಮೂಲಕ ಕೆಲವು ಜನರಲ್ಲಿ ರಕ್ತದ ಕೊಲೆಸ್ಟ್ರಾಲ್ ನ ಮಟ್ಟಗಳು ಹೆಚ್ಚಾದರೂ ಇವುಗಳು ಶೀಘ್ರದಲ್ಲಿಯೇ ಸಾಂದ್ರತೆಯನ್ನು ಹೆಚ್ಚಿಸಿಕೊಂಡು ದೊಡ್ಡ ಕಣಗಳಾಗಿ ಕೆಟ್ಟ ಕೊಲೆಸ್ಟ್ರಾಲ್ ನ ಗುಣಗಳನ್ನೂ ಕಳೆದುಕೊಳ್ಳುತ್ತವೆ.

ಪ್ರಧಾನವಾಗಿ ದೊಡ್ಡ LDL ಕೊಲೆಸ್ಟ್ರಾಲ್ ಕಣಗಳನ್ನು ಹೊಂದಿರುವ ಜನರಿಗೆ ಹೃದ್ರೋಗದ ಅಪಾಯ ಕಡಿಮೆ. ಆದ್ದರಿಂದ ಮೊಟ್ಟೆಗಳು ಒಟ್ಟು ಮತ್ತು LDL ಕೊಲೆಸ್ಟ್ರಾಲ್ ಮಟ್ಟದಲ್ಲಿ ಸೌಮ್ಯ ಹೆಚ್ಚಳಕ್ಕೆ ಕಾರಣವಾಗಿದ್ದರೂ ಸಹ, ಇದು ಗಾಬರಿ ಬೀಳುವಷ್ಟು ಹೆದರಲೇನೂ ಕಾರಣವಲ್ಲ.

ಆರೋಗ್ಯವಂತ ವ್ಯಕ್ತಿಗಳಿಗೆ ದಿನಕ್ಕೆ 3 ಸಂಪೂರ್ಣ ಮೊಟ್ಟೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ವಿಜ್ಞಾನದ ಅಧ್ಯಯನಗಳು ಸ್ಪಷ್ಟಪಡಿಸಿವೆ.

ಸಾರಾಂಶ:

ಮೊಟ್ಟೆಗಳ ಸೇವನೆಯಿಂದ ದೇಹದಲ್ಲಿ HDL ("ಉತ್ತಮ") ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ. 70% ಜನರಲ್ಲಿ ಕೊಲೆಸ್ಟ್ರಾಲ್ ಇರುವ ಅಹಾರ ಸೇವನೆಯ ಬಳಿಕವೂ LDL ಕೊಲೆಸ್ಟ್ರಾಲ್ ಮಟ್ಟ ಅತಿ ಎನ್ನುವಷ್ಟು ಏರುವುದಿಲ್ಲ. ಕೆಲವು ಜನರಲ್ಲಿ LDL ಹಾನಿಕರವಲ್ಲದ ಉಪಪ್ರಕಾರದಲ್ಲಿ ಸ್ವಲ್ಪ ಏರಿಕೆ ಕಂಡುಬರಬಹುದು.

ಮೊಟ್ಟೆ ಮತ್ತು ಹೃದಯದ ಕಾಯಿಲೆಗೂ ಏನು ಸಂಬಂಧ?

ಮೊಟ್ಟೆ ಮತ್ತು ಹೃದಯದ ಕಾಯಿಲೆಗೂ ಏನು ಸಂಬಂಧ?

ಅನೇಕ ಅಧ್ಯಯನಗಳು ಮೊಟ್ಟೆಯ ಬಳಕೆಯಿಂದ ಹೃದ್ರೋಗದ ಅಪಾಯದ ಸಾಧ್ಯತೆ ಎದುರಾಗುವುದನ್ನು ಪರೀಕ್ಷಿಸಿವೆ.

ಇವುಗಳಲ್ಲಿ ಹಲವು ವೀಕ್ಷಣಾ ಅಧ್ಯಯನಗಳಾಗಿವೆ, ಇದರಲ್ಲಿ ದೊಡ್ಡ ಗುಂಪುಗಳ ಜನರ ಆರೋಗ್ಯದ ಮಾಹಿತಿಗಳನ್ನು ಅನೇಕ ವರ್ಷಗಳಿಂದ ಸಂಗ್ರಹಿಸುತ್ತಾ ಬರಲಾಗಿದ್ದು ಕಾಲಕಾಲಕ್ಕೆ ವಿಶ್ಲೇಷಿಸಲಾಗುತ್ತಿದೆ.

ಕೆಲವು ಅಭ್ಯಾಸಗಳು - ಆಹಾರ, ಧೂಮಪಾನ ಅಥವಾ ವ್ಯಾಯಾಮದಂತಹ ಕೆಲವು ಅಭ್ಯಾಸಗಳು ಕೆಲವು ರೋಗಗಳು ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆಯೇ ಅಥವಾ ಹೆಚ್ಚಿಸುತ್ತವೆಯೇ ಎಂದು ನಿರ್ಧರಿಸಲು ಸಂಶೋಧಕರು ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ಬಳಸುತ್ತಾರೆ.

ಈ ಅಧ್ಯಯನಗಳು ಕೆಲವು ಲಕ್ಷದಷ್ಟು ಜನರನ್ನು ಒಳಗೊಂಡಿದ್ದು ಇದುವರೆಗೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಇಡಿಯ ಮೊಟ್ಟೆಗಳನ್ನು ತಿನ್ನುವ ಜನರಿಗೆ ಹೃದಯ ಕಾಯಿಲೆ ಬರುವ ಸಾಧ್ಯತೆ ಮೊಟ್ಟೆ ತಿನ್ನದವರಿಗಿಂತ ಹೆಚ್ಚೇನೂ ಇಲ್ಲ ಎಂದು ಸತತವಾಗಿ ತೋರಿಸುತ್ತಿವೆ.

ಕೆಲವು ಅಧ್ಯಯನಗಳಂತೂ ಈ ವ್ಯಕ್ತಿಗಳಲ್ಲಿ ಹೃದಯ ಸ್ತಂಭನದ ಸಾಧ್ಯತೆ ಕಡಿಮೆಯಾಗಿರುವುದನ್ನೂ ತೋರಿಸಿವೆ.

ಆದರೆ, ಈ ಸಂಶೋಧನೆಯು ಟೈಪ್ 2 ಡಯಾಬಿಟಿಸ್ ಹೊಂದಿರುವ ಮತ್ತು ಸಾಕಷ್ಟು ಮೊಟ್ಟೆಗಳನ್ನು ತಿನ್ನುವ ಜನರಿಗೆ ಹೃದ್ರೋಗ ಎದುರಾಗುವ ಅಪಾಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಸೂಚಿಸುತ್ತದೆ.

ಟೈಪ್ 2 ಮಧುಮೇಹ ಇರುವವರ ಮೇಲೆ ನಡೆಸಲಾದ ಒಂದು ನಿಯಂತ್ರಿತ ಅಧ್ಯಯನದಲ್ಲಿ ವಾರಕ್ಕೆ ಆರು ದಿನಗಳು, ದಿನಕ್ಕೆ ಎರಡು ಮೊಟ್ಟೆಗಳನ್ನು ಮೂರು ತಿಂಗಳ ಕಾಲ ತಿಂದರೂ ಇವರ ರಕ್ತದ ಲಿಪಿಡ್ ಮಟ್ಟದ ಮೇಲೆ ಗಮನಾರ್ಹವಾದ ಪರಿಣಾಮ ಏನೂ ಕಾಣಬರಲಿಲ್ಲ (33Trusted Source).

ಆರೋಗ್ಯದ ಪರಿಣಾಮಗಳು ನೀವು ಸೇವಿಸುವ ಆಹಾರದ ಮೇಲೂ ಅವಲಂಬಿತವಾಗಿರುತ್ತದೆ. ಮಧುಮೇಹ ಇರುವವರಿಗೆ ಉತ್ತಮ ಆಹಾರವಾಗಿರುವ ಕಡಿಮೆ ಕಾರ್ಬೋಹೈಡ್ರೇಟುಗಳ ಆಹಾರದಲ್ಲಿ ಮೊಟ್ಟೆಗಳು ಹೃದ್ರೋಗ ಎದುರಾಗುವ ಅಪಾಯಕಾರಿ ಅಂಶಗಳ ಸುಧಾರಣೆಗೆ ಕಾರಣವಾಗುತ್ತವೆ.

ಸಾರಾಂಶ:

ಅನೇಕ ವೀಕ್ಷಣಾ ಅಧ್ಯಯನಗಳಿಂದ ಮೊಟ್ಟೆಗಳನ್ನು ತಿನ್ನುವ ಜನರಿಗೆ ಹೃದ್ರೋಗ ಎದುರಾಗುವ ಸಾಧ್ಯತೆಯೇನೂ ಹೆಚ್ಚುವುದಿಲ್ಲ ಎಂದು ತೋರಿಸುತ್ತದೆ, ಆದರೆ ಕೆಲವು ಅಧ್ಯಯನಗಳು ಟೈಪ್ 2 ಮಧುಮೇಹ ಹೊಂದಿರುವ ಜನರು ಹೆಚ್ಚಿನ ಮೊಟ್ಟೆ ಸೇವಿಸಿದರೆ ಹೆಚ್ಚಿನ ಅಪಾಯದ ಸಾಧ್ಯತೆಯನ್ನು ತೋರಿಸುತ್ತವೆ.

ಮೊಟ್ಟೆಗಳು ಹಲವಾರು ಇತರ ಆರೋಗ್ಯ ಪ್ರಯೋಜನಗಳನ್ನೂ ಹೊಂದಿವೆ

ಮೊಟ್ಟೆಗಳು ಹಲವಾರು ಇತರ ಆರೋಗ್ಯ ಪ್ರಯೋಜನಗಳನ್ನೂ ಹೊಂದಿವೆ

ಮೊಟ್ಟೆಗಳಲ್ಲಿ ಕೇವಲ ಕೊಲೆಸ್ಟ್ರಾಲ್ ಮಾತ್ರವಲ್ಲದೇ ಇತರ ಪೋಷಕಾಂಶಗಳೂ ಇವೆ ಎಂಬುದನ್ನು ನಾವು ಮರೆಯಬಾರದು. ಈ ಪೋಷಕಾಂಶಗಳು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ದಿಸುತ್ತವೆ:

ಅವುಗಳು ಲ್ಯೂಟೀನ್ ಮತ್ತು ಜ಼ಿಯಾಕ್ಸಾಂಥಿನ್ ಎಂಬ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದ್ದು, ಕಣ್ಣಿನ ಕಾಯಿಲೆಗಳಾದ ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಕಣ್ಣಿನ ಪೊರೆ ಮೊದಲಾದವು ಎದುರಾಗುವ ಅಪಾಯವನ್ನೂ ಕಡಿಮೆ ಮಾಡುತ್ತದೆ.

ಮೊಟ್ಟೆಗಳಲ್ಲಿ ಕೋಲೈನ್ (choline) ಎಂಬ ಅಂಶ ಪ್ರಮುಖವಾಗಿದ್ದು ಇದು ಎಲ್ಲಾ ಜೀವಕೋಶಗಳಲ್ಲಿ ಅತ್ಯಗತ್ಯ ಪಾತ್ರವನ್ನು ವಹಿಸುವ ಪೋಷಕಾಂಶವಾಗಿದೆ.

ಅವುಗಳು ಗುಣಮಟ್ಟದ ಪ್ರಾಣಿಜನ್ಯ ಪ್ರೋಟೀನ್‌ ಅನ್ನು ಅಧಿಕ ಪ್ರಮಾಣದಲ್ಲಿ ಹೊಂದಿವೆ, ಇದರ ಪ್ರಯೋಜನವೆಂದರೆ ಹೆಚ್ಚಿದ ಸ್ನಾಯುವಿನ ದ್ರವ್ಯರಾಶಿ ಮತ್ತು ಉತ್ತಮ ಮೂಳೆಗಳ ದೃಢತೆ ಹೆಚ್ಚುವುದು. ಇದೇ ಕಾರಣಕ್ಕೆ ದೇಹ ದಾರ್ಢ್ಯ ಪಟುಗಳು ಮೊಟ್ಟೆಗಳನ್ನು ನಿತ್ಯವೂ ಸೇವಿಸುತ್ತಾರೆ.

ಮೊಟ್ಟೆಗಳು ಹೊಟ್ಟೆ ತುಂಬಿರುವ ಭಾವನೆಯನ್ನು ಹೆಚ್ಚಿಸುತ್ತವೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.

ಅಷ್ಟೇ ಅಲ್ಲ, ಮೊಟ್ಟೆಗಳು ಅತಿ ರುಚಿಕರ ಮತ್ತು ತಯಾರಿಸುವುದು ನಂಬಲಾಗದಷ್ಟು ಸುಲಭ. ಅಲ್ಲದೇ ಇದು ಯಾವುದೇ ಅಂಗಡಿಯಲ್ಲಿ ಯಾವಾಗ ಬೇಕಾದರೂ ಸುಲಭವಾಗಿ ಸಿಗುವ ಅತ್ಯಂತ ಅಗ್ಗದ ಅಹಾರವೂ ಆಗಿದೆ. ಇವೆಲ್ಲವೂ ಋಣಾತ್ಮಕ ಅಂಶಗಳಿದ್ದರೂ ಅತ್ಯಂತ ಬೇಕಾದ ಆಹಾರವಾಗಿಸಿವೆ.

ಸಾರಾಂಶ:

ಮೊಟ್ಟೆಗಳು ಈ ಭೂಮಿಯ ಮೇಲೆ ದೊರಕುವ ಅತ್ಯಂತ ಪೌಷ್ಟಿಕ ಆಹಾರಗಳಲ್ಲಿ ಪ್ರಮುಖವಾಗಿವೆ. ಅವು ನಿಮ್ಮ ಮೆದುಳಿಗೆ ಅಗತ್ಯವಾದ ಪೋಷಕಾಂಶಗಳು ಮತ್ತು ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಗುಣಗಳನ್ನು ಒಳಗೊಂಡಿರುತ್ತವೆ.

ಎಷ್ಟು ಮೊಟ್ಟೆಗಳನ್ನು ತಿನ್ನುವುದು ಸುರಕ್ಷಿತ?

ಎಷ್ಟು ಮೊಟ್ಟೆಗಳನ್ನು ತಿನ್ನುವುದು ಸುರಕ್ಷಿತ?

ದುರದೃಷ್ಟವಶಾತ್, ಯಾವುದೇ ಅಧ್ಯಯನಗಳು ಜನರಿಗೆ ದಿನಕ್ಕೆ ಮೂರು ಮೊಟ್ಟೆಗಳಿಗಿಂತ ಹೆಚ್ಚು ಪ್ರಮಾಣವನ್ನು ನೀಡಿ ಪರೀಕ್ಷಿಸಿಲ್ಲ. ಆದ್ದರಿಂದ ದಿನಕ್ಕೆ ಮೂರಕ್ಕೂ ಹೆಚ್ಚಿನ ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆಗಳನ್ನಿ ಸೇವಿಸಿದರೆ ಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಮೂರಕ್ಕಿಂತ ಹೆಚ್ಚಿನದನ್ನು ಸೇವಿಸುವುದು ಎಂಬುದನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಇನ್ನೂ ಯಾವ ಸಂಶೋಧನೆಯೂ ನಡೆಸಿಲ್ಲದ ಕ್ಷೇತ್ರವಾಗಿದೆ.

ಆದರೆ, ಒಂದು ಪ್ರಕರಣ ಅಧ್ಯಯನದಲ್ಲಿ 88 ವರ್ಷದ ವ್ಯಕ್ತಿಯೊಬ್ಬರು ದಿನಕ್ಕೆ 25 ಮೊಟ್ಟೆಗಳನ್ನು ಸೇವಿಸುತ್ತಿದ್ದರು. ಅವರು ಸಾಮಾನ್ಯ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿದ್ದರೂ ಉತ್ತಮ ಆರೋಗ್ಯದಲ್ಲಿಯೇ ಇದ್ದರು.

ವಿಪರೀತ ಮೊಟ್ಟೆಯ ಸೇವನೆಯಿಂದ ಒಬ್ಬ ವ್ಯಕ್ತಿಯು ಪ್ರತಿಕ್ರಿಯಿಸುವ ವಿಧಾನವನ್ನು ಎಲ್ಲಾ ಜನರಿಗೂ ಅನ್ವಯಿಸಲು ಸಾಧ್ಯವಿಲ್ಲ. ಆದರೆ, ಇದು ಏಕೆ ಎಂಬ ಪ್ರಶ್ನೆ ಹುಟ್ಟುಹಾಕುವ ಮೂಲಕ ಆಸಕ್ತಿ ಕೆರಳಿಸುತ್ತದೆ.

ಎಲ್ಲಾ ಮೊಟ್ಟೆಗಳು ಒಂದೇ ಆಗಿರುವುದಿಲ್ಲ ಎಂಬುದನ್ನೂ ನೆನಪಿನಲ್ಲಿರಿಸಿಕೊಳ್ಳುವುದು ಸಹ ಮುಖ್ಯವಾಗಿದೆ. ಸೂಪರ್ಮಾರ್ಕೆಟ್ಟುಗಳಲ್ಲಿ ಹೆಚ್ಚಿನ ಮೊಟ್ಟೆಗಳು ಕೋಳಿ ಫಾರಮ್ಮುಗಳಲ್ಲಿ ಬೆಳೆದ ಮತ್ತು ಧಾನ್ಯ ಆಧಾರಿತ ಆಹಾರ ಸೇವಿಸಿದ ಕೋಳಿಗಳಿಂದ ಈ ಮೊಟ್ಟೆಗಳು ಕೃತಕ ವಿಧಾನದಲ್ಲಿ, ಅಂದರೆ ಹುಂಜದ ಸಂಪರ್ಕವಿಲ್ಲದೇ ಈ ಮೊಟ್ಟೆಗಳು ಉತ್ಪತ್ತಿಯಾಗುತ್ತವೆ.

ಅತ್ಯಂತ ಆರೋಗ್ಯಕರ ಮೊಟ್ಟೆಗಳು ಎಂದರೆ ಒಮೆಗಾ -3-ಕೊಬ್ಬಿನ ಆಮ್ಲ ಹೊಂದಿರುವ ಮೊಟ್ಟೆಗಳು ಅಥವಾ ಹುಲ್ಲುಗಾವಲಿನ ಮೇಲೆ ಬೆಳೆದ ಕೋಳಿಗಳಿಂದ ಲಭಿಸಿದ ಸಹಜವಾದ ಮೊಟ್ಟೆಗಳು. ಈ ಮೊಟ್ಟೆಗಳು ಒಮೆಗಾ -3 ಗಳಲ್ಲಿ ಮತ್ತು ಕೊಬ್ಬಿನಲ್ಲಿ ಕರಗುವ ಪ್ರಮುಖ ಜೀವಸತ್ವಗಳೊಂದಿಗೆ ಸಮೃದ್ಧವಾಗಿವೆ.

ಒಟ್ಟಾರೆಯಾಗಿ ಹೇಳಬೇಕೆಂದರೆ, ನೀವು ದಿನಕ್ಕೆ 3 ರಷ್ಟು ಮೊಟ್ಟೆಗಳನ್ನು ತಿನ್ನುತ್ತಿದ್ದರೆ ಈ ಆಹಾರ ಸಂಪೂರ್ಣವಾಗಿ ಸುರಕ್ಷಿತವಾಗಿದೆ.

ಅವುಗಳಲ್ಲಿರುವ ವಿವಿಧ ಪೋಷಕಾಂಶಗಳು ಮತ್ತು ಶಕ್ತಿಯುತ ಆರೋಗ್ಯಕರ ಪ್ರಯೋಜನಗಳನ್ನು ಗಮನಿಸಿದರೆ, ಗುಣಮಟ್ಟದ ಮೊಟ್ಟೆಗಳು ಈ ಗ್ರಹದಲ್ಲಿ ಲಭ್ಯವಿರುವ ಆರೋಗ್ಯಕರ ಆಹಾರಗಳಲ್ಲಿ ಪ್ರಮುಖವಾಗಿವೆ.

English summary

Eggs and Cholesterol: How Many Eggs Can You Safely Eat?

Eggs and Cholesterol here are the information how much eggs you can safely eat, have a look,
X
Desktop Bottom Promotion