For Quick Alerts
ALLOW NOTIFICATIONS  
For Daily Alerts

ಗಂಟಲು ಕಿರಿಕಿರಿ, ನೋವಿಗೆ ಇಲ್ಲಿದೆ ಪರಿಣಾಮಕಾರಿಯಾದ ಮನೆಮದ್ದು

|

ಚಳಿಗಾಲ ಬಂತೆಂದರೆ ಗಂಟಲಿನಲ್ಲಿ ಕಿರಿಕಿರಿ ಸರ್ವೇ ಸಾಮಾನ್ಯ. ಹೊರಗಿನ ತಣ್ಣನೆಯ ಗಾಳಿಯ ಜೊತೆಗೆ ಈ ಸಮಯದಲ್ಲಿ ದೂಳು ಕೂಡ ಹೆಚ್ಚಿರುವುದರಿಂದ ಅಲರ್ಜಿಯಿಂದಾಗಿ ಕೆಮ್ಮು, ಶೀತ, ಗಂಟಲಿನಲ್ಲಿ ಕೆರೆತ ಮುಂತಾದ ತೊಂದರೆ ಉಂಟಾಗುವುದು.

Home Remedies For Sore Throat

ಗಂಟಲು ಕೆರೆತ, ಗಂಟಲಿನಲ್ಲಿ ನೋವು ಕಾಣಿಸಿಕೊಂಡರೆ ಮಾತನಾಡಲು, ಆಹಾರವನ್ನು ಸೇವಿಸಲು ತುಂಬಾ ಕಷ್ಟವಾಗುವುದು. ಸೋಂಕುಣುಗಳ ದಾಳಿಯಿಂದ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು. ಇನ್ನು ಕೆಲವರಿಗೆ ತಣ್ಣನೆಯ ವಸ್ತುಗಳನ್ನು ಸೇವಿಸಿದಾಗ, ಮೊಸರು ತಿಂದಾಗ, ಫ್ರಿಡ್ಜ್‌ನಲ್ಲಿಟ್ಟ ವಸ್ತುಗಳನ್ನು ಸೇವಿಸಿದಾಗ ಗಂಟಲು ಕೆರೆತ ಉಂಟಾಗುವುದು. ಈ ರೀತಿಯ ಗಂಟಲು ಕೆರೆತ ಹೋಗಲಾಡಿಸುವ ಕೆಲವೊಂದು ಮನೆಮದ್ದುಗಳು ತುಂಬಾ ಸಹಕಾರಿ. ಇಲ್ಲಿ ಸುಮಾರು 20 ಬಗೆಯ ಮನೆಮದ್ದು ರೆಸಿಪಿ ನೀಡಿದ್ದೇವೆ. ಇವುಗಳಲ್ಲಿ ನಿಮಗೆ ಸೂಕ್ತವಾದ ಮನೆಮದ್ದು ಮಾಡಿ ಗಂಟಲು ಕೆರೆತದಿಂದ ಮುಕ್ತಿ ಪಡೆಯಬಹುದು.

1. ಬೆಳ್ಳುಳ್ಳಿ

1. ಬೆಳ್ಳುಳ್ಳಿ

ಗಂಟಲು ಕೆರೆತ ಹೋಗಲಾಡಿಸಲು ಬೆಳ್ಳುಳ್ಳಿ ಅತ್ಯುತ್ತವಾದ ಮನೆಮದ್ದಾಗಿದೆ. ಇದರಲ್ಲಿರುವ ಅಲೆಸಿನ್ ಅಂಶ ಗಂಟಲು ಕೆರೆತಕ್ಕೆ ಕಾರಣವಾದ ಬ್ಯಾಕ್ಟಿರಿಯಾಗಳನ್ನು ಕೊಂದು ಹಾಕುತ್ತದೆ. ಹಸಿ ಬೆಳ್ಳೂಳ್ಳಿಯ ಒಂದು ಎಸಳು ಬಾಯಿಗೆ ಹಾಕಿ ಮೆಲ್ಲನೆ ಜಗಿಯಿತ್ತಾ ಅದರ ರಸ ನುಂಗಿ. ಹಸಿ ಬೆಳ್ಳುಳ್ಳಿ ಜಗಿದು ಅದರ ರಸ ನುಂಗುವುದು ಸ್ವಲ್ಪ ಕಷ್ಟ ಅನಿಸಿದರೂ ಗಂಟಲು ಕೆರೆತ ಬೇಗನೆ ಕಡಿಮೆಯಾಗುವುದು. ಇನ್ನು 2-3 ಬೆಳ್ಳುಳ್ಳಿ ಎಸಳನ್ನು ಒಂದು ಕಪ್ ನೀರಿಗೆ ಹಾಕಿ ಕುದಿಸಿ, ಆ ನೀರು ಬಿಸಿ ಬಿಸಿ ಇರುವಾಗಲೇ ಅದರಿಂದ ಬಾಯಿ ಮುಕ್ಕಳಿಸಿ (ನೀರು ತುಂಬಾ ಬಿಸಿ ಹಾಕಬೇಡಿ). ದಿನದಲ್ಲಿ 3-4 ಬಾರಿ ಬಾಯಿ ಮುಕ್ಕಳಿಸಿ. ಹೀಗೆ ಮಾಡಿದರೆ ಗಂಟಲು ಕೆರೆತ ಬೇಗನೆ ಕಡಿಮೆಯಾಗುವುದು.

ಬೆಳ್ಳುಳ್ಳಿಯನ್ನು ಇವುಗಳ ಜತೆ ಕೂಡ ಬಳಸಬಹುದು

ಬೆಳ್ಳುಳ್ಳಿ ಮತ್ತು ಜೇನು: ಬೆಳ್ಳುಳ್ಳಿ ರಸ ಅರ್ಧ ಚಮಚ, ಜೇನು ರಸ ಅರ್ಧ ಚಮಚ ಮಿಸ್ರ ಮಾಡಿ ಸವಿಯಿರಿ.

ಬೆಳ್ಳುಳ್ಳಿ ಮತ್ತು ನಿಂಬೆ ರಸ: ಅರ್ದ ಚಮಚ ಬೆಳ್ಳುಳ್ಳಿ 1 ಚಮಚ ನಿಂಬೆರಸ ಮಿಶ್ರ ಮಾಡಿ ದಿನದಲ್ಲಿ ಎರಡು ಬಾರಿ ಸವಿಯಿರಿ.

ಬೆಳ್ಳುಳ್ಳಿ ಮಸಾಲೆ ಟೀ: ಒಂದು ಪಾತ್ರೆಗೆ 3 ಕಪ್ ನೀರು ಹಾಕಿ ಅದಕ್ಕೆ 3 ಬೆಳ್ಳುಳ್ಳಿ ಹಾಕಿ ಕುದಿಸಿ. ಅದಕ್ಕೆ 3 ಚಮಚ ಜೇನು, 3 ಚಮಚ ನಿಂಬೆರಸ ಹಾಕಿ ಮಿಶ್ರ ಮಾಡಿ. ಇದನ್ನು ದಿನದಲ್ಲಿ ಮೂರು ಹೊತ್ತು ಕುಡಿಯಿರಿ.

ಬೆಳ್ಳುಳ್ಳಿ ಮತ್ತು ಆಲೀವ್ ಎಣ್ಣೆ: ಒಂದು ಚಮಚ ಆಲೀವ್‌ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಜಜ್ಜಿದ ಬೆಳ್ಳುಳ್ಳಿ ಹಾಕಿ. ನಂತರ ತಣ್ಣಗಾದ ಬಳಿಕ ದಿನದಲ್ಲಿ ಒಂದು ಬಾರಿ ಸಿರಪ್ ರೀತಿ ಬಳಸಿ.

ಆ್ಯಪಲ್ ಸಿಡರ್ ವಿನೆಗರ್

ಆ್ಯಪಲ್ ಸಿಡರ್ ವಿನೆಗರ್

ಆ್ಯಪಲ್ ಸಿಡರ್ ವಿನೆಗರ್ ಕೂಡ ಗಂಟಲು ಕೆರೆತಕ್ಕೆ ತುಂಬಾ ಒಳ್ಳೆಯದು. ಇದು ಗಂಟಲು ಕೆರೆತ ಬೇಗ ಕಡಿಮೆ ಮಾಡುತ್ತದೆ. ಇದರಲ್ಲಿರುವ ಅಸಿಡಿಟಿ ಪ್ರಮಾಣ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ. ಇದು ಗಂಟಲು ನೋವು ಕಡಿಮೆ ಮಾಡುತ್ತದೆ.

ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಆ್ಯಪಲ್ ಸಿಡರ್ ವಿನೆಗರ್, ಸ್ವಲ್ಪ ನಿಂಬೆರಸ ಹಾಗೂ ಒಂದು ಚಮಚ ಜೇನು ಹಾಕಿ ಮಿಶ್ರ ಮಾಡಿ ಕುಡಿಯಿರಿ.

3. ನಿಂಬೆಹಣ್ಣು

3. ನಿಂಬೆಹಣ್ಣು

ಇದರಲ್ಲಿರುವ ಆಸ್ಟ್ರಿಜೆಂಟ್ ಅಂಶ ಗಂಟಲು ಕೆರೆತ ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ. ಇದು ಗಾಳಿಯಲ್ಲಿ ಬರುವ ಸೋಂಕಾಣು ಹಾಗೂ ಬ್ಯಾಕ್ಟಿರಿಯಾಗಳು ನಮ್ಮ ದೇಹದ ಮೇಲೆ ಪ್ರಭಾವ ಬೀರದಂತೆ ನಮ್ಮ ದೇಹವನ್ನು ರಕ್ಷಣೆ ಮಾಡುತ್ತದೆ.

ಬಳಸುವುದು ಹೇಗೆ?

* ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ನಿಂಬೆ ರಸ ಹಾಕಿ, ಅದಕ್ಕೆ ಅರ್ಧ ಚಮಚ ಜೇನು ಹಾಕಿ ಆ ನೀರಿನಲ್ಲಿ ಮುಕ್ಕಳಿಸಿ. ದಿನದಲ್ಲಿ 3-4 ಬಾರಿ ಈ ನೀರನ್ನು ಬಿಸಿ ಮಾಡಿ ಬಾಯಿ ಮುಕ್ಕಳಿಸಬೇಕು.

* ಒಂದು ಚಮಚ ಜೇನಿನ ರಸಕ್ಕೆ ನಿಂಬೆ ಹೋಳು ಚಿಕ್ಕದಾಗಿ ಕತ್ತರಿಸಿ ಹಾಕಿಡಿ. ಅದನ್ನು ದಿನದಲ್ಲಿ 2-3 ಬಾರಿ ತಿಂದರೆ ಗಂಟಲು ಕೆರೆತ ಕಡಿಮೆಯಾಗುವುದು.

4. ಜೇನು

4. ಜೇನು

ಗಂಟಲು ಕೆರೆತ ಹೋಗಲಾಡಿಸಲು ಗಿಣ್ಣನ್ನು ಬಳಸುತ್ತೇವೆ. ಗಂಟಲು ಕೆರೆತಕ್ಕೆ ಜೇನು ಬಳಸುವುದು ಒಳ್ಲೆಯದೆಂದು ವೈದ್ಯರು ಕೂಡ ಹೇಳುತ್ತಾರೆ.

ಬಳಸುವುದು ಹೇಗೆ?

ಒಂದು ಲೋಟ ಬಿಸಿ ನೀರಿಗೆ 2 ಚಮಚ ಜೇನು ಹಾಕಿ ಕುಡಿದರೆ ಒಳ್ಳೆಯದು. ಮಲಗುವ ಮುಂಚೆ ಈ ರೀತಿ ಮಾಡಿದರೆ ಮಾರನೆಯದ ದಿನಕ್ಕೆ ಗಂಟಲು ನೋವು ಕಡಿಮೆಯಾಗಿರುತ್ತದೆ.

5. ಚಕ್ಕೆ

5. ಚಕ್ಕೆ

ಇದರಲ್ಲಿ ಅಧಿಕ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಕೆಮ್ಮು, ಶೀತ, ಗಂಟಲು ಕೆರೆತ ಈ ರೀತಿಯ ಸಮಸ್ಯೆ ಹೋಗಲಾಡಿಸಲು ತುಂಬಾ ಪ್ರಯೋಜನಕಾರಿ.

ಬಳಸುವುದು ಹೇಗೆ?

2-3 ಹನಿ ಚಕ್ಕೆ ಎಣ್ಣೆಗೆ 1 ಚಮಚ ಜೇನು ಹಾಕಿ ಕುಡಿಯಿರಿ. ಈ ರೀತಿ ದಿನದಲ್ಲಿ ಎರಡು ಬಾರಿ ಕುಡಿಯಿರಿ. ಇಲ್ಲದಿದ್ದರೆ ಬ್ಲ್ಯಾಕ್‌ ಟೀ ಮಾಡುವಾಗ ಚಕ್ಕೆ ಹಾಕಿ ಕುಡಿಯಿರಿ.

6. ಅರಿಶಿಣ

6. ಅರಿಶಿಣ

ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಅರಿಶಿಣವನ್ನು ಮನೆಮದ್ದಾಗಿ ಬಳಸಲಾಗುವುದು. ಇದರಲ್ಲಿರುವ ಆ್ಯಂಟಿಬ್ಯಾಕ್ಟಿರಿಯಾ ಗುಣ ಚಿಕ್ಕ-ಪುಟ್ಟ ಕಾಯಿಲೆ ಗುಣ ಪಡಿಸುವಲ್ಲಿ ಪರಿಣಾಮಕಾರಿ.

ಬಳಸುವುದು ಹೇಗೆ?

ಒಂದು ಲೋಟ ಬಿಸಿ ನೀರಿಗೆ ಅರ್ಧ ಚಮಚ ಅರಿಶಿಣ, ಅರ್ಧ ಚಮಚ ಉಪ್ಪು ಹಾಕಿ ಆ ನೀರಿನಿಮದ ಬಾಯಿ ಮುಕ್ಕಳಿಸಿದರೂ ಗಂಟಲು ಕೆರೆತ ಕಡಿಮೆಯಾಗುತ್ತದೆ. ಮಲಗುವ ಮುಂಚೆ ಅರಿಶಿಣ ಹಾಗೂ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಗಂಟಲಿನ ಕಿರಿಕಿರಿಯಿಲ್ಲದೆ ನಿದ್ದೆ ಮಾಡಬಹುದು.

7. ಮೆಂತೆ

7. ಮೆಂತೆ

ಗಂಟಲ ಕಿರಿಕಿರಿ ಕಡಿಮೆ ಮಾಡುವ ಗುಣ ಮೆಂತೆಯಲ್ಲಿ ಕೂಡ ಇದೆ. ಇದು ಬ್ಯಾಕ್ಟಿರಿಯಾಗಳನ್ನು ಕೊಂದು ಗಂಟಲು ನೋವು ಕಡಿಮೆ ಮಾಡುವುದು.

ಬಳಸುವುದು ಹೇಗೆ?

ಮೂರು ಚಮಚ ಮೆಂತೆಯನ್ನು ನೀರಿಗೆ ಹಾಕಿ ಕುದಿಸಿ, ನಂತರ ಸೋಸಿ ಆ ನೀರಿನಲ್ಲಿ ಬಾಯಿ ಮುಕ್ಕಳಿಸಿ. ದಿನದಲ್ಲಿ ನಲ್ಕೈದು ಬಾರಿ ಈ ನೀರಿನಿಂದ ಬಾಯಿ ಮುಕ್ಕಳಿಸಿದರೆ ಗಂಟಲು ಕೆರೆತ, ನೋವು ಕಡಿಮೆ ಮಾಡುವುದು.

8. ಲವಂಗ

8. ಲವಂಗ

ಲವಂಗದಲ್ಲಿ ಕೂಡ ಗಂಟಲು ನೋವಿಗೆ ಕಾರಣವಾದ ಬ್ಯಾಕ್ಟರಿಯಾಗಳನ್ನು ಕೊಲ್ಲುವ ಗುಣವಿದೆ. ಇದು ಗಂಟಲು ನೋವು ಬೇಗ ವಾಸಿಯಾಗಲು ಪರಿಣಾಮಕಾರಿಯಾದ ಮನೆಮದ್ದಾಗಿದೆ.

ಮಾಡುವುದು ಹೇಗೆ?

ಬಿಸಿ ನೀರಿಗೆ ಲವಂಗ ಹಾಕಿ ಕುದಿಸಿ ಬಾಯಿ ಮುಕ್ಕಳಿಸಿದರೆ ಒಳ್ಳೆಯದು. ಒಂದೆಸಳು ಲವಂಗವನ್ನು ಬಾಯಿಯಲ್ಲಿ ಹಾಕಿ ಅದರ ರಸ ನುಂಗುತ್ತಿದ್ದರೆ ಗಂಟಲ ಕೆರೆತ ಕಡಿಮೆಯಾಗುವುದು.

9. ಶುಂಠಿ

9. ಶುಂಠಿ

ಕೆಮ್ಮು, ಶೀತ ಇಂಥ ಸಮಸ್ಯೆಗಳು ಕಾಣಿಸಿಕೊಂಡಾಗ ತಕ್ಷಣ ನೆನಪಿಗೆ ಬರುವ ಮನೆ ಮದ್ದೆಂದರೆ ಅದು ಶುಂಠಿ. ಶುಂಠಿ ಕಾಯಿಲೆಗೆ ಕಾರಣವಾದ ಬ್ಯಾಕ್ಟಿರಿಯಗಳ ವಿರುದ್ಧ ಹೋರಾಡುತ್ತದೆ.

ಬಳಸುವುದು ಹೇಗೆ?

ಎರಡು ಇಂಚಿನಷ್ಟು ದೊಡ್ಡದಿರುವ ಶುಂಠಿಯನ್ನು ಜಜ್ಜಿ ಅದನ್ನು ಒಂದು ಕಪ್ ನೀರಿಗೆ ಹಾಕಿ, ಚಿಟಿಕೆಯಷ್ಟು ಉಪ್ಪು ಹಾಕಿ ಕುದಿಸಿ, ನಂತರ ಆ ನೀರನ್ನು ಸೋಸಿ ದಿನದಲ್ಲಿ ಎರಡು ಬಾರಿ ಕುಡಿಯಿರಿ. ಬೇಕಿದ್ದರೆ ಒಂದು ಚಮಚ ನಿಂಬೆರಸ ಸೇರಿಸಿ ಕುಡಿದರೆ ಒಳ್ಳೆಯದು.

ಶುಂಠಿ ಡಿಕಾಷನ್ ಈ ರೀತಿ ಮಾಡಿ ಕುಡಿಯಿರಿ

ಬಿಸಿ ನೀರಿಗೆ ಒಂದು ಚಮಚ ಜೇನು, ಅರ್ಧ ಚಮಚ ಸಕ್ಕರೆ, ನಿಂಬೆರಸ ಹಾಕಿ ಮಿಶ್ರ ಮಾಡಿ, 10 ನಿಮಿಷಕ್ಕೊಮ್ಮೆ ಬಾಯಿ ಮುಕ್ಕಳಿಸುತ್ತಾ ಇದ್ದರೆ ಸಮಸ್ಯೆ ಬೇಗನೆ ಇಲ್ಲವಾಗುವುದು.

ಕಾಳು ಮೆಣಸು

ಕಾಳು ಮೆಣಸು

ಗಂಟಲು ಕೆರೆತ ಉಂಟಾದಾ ಕಾಳುಮೆಣಸನ್ನು ಕೂಡ ಮನೆಮದ್ದಾಗಿ ಬಳಸಬಹುದು. ಕಾಳು ಮೆಣಸಿನಿಂದ ಮನೆಮದ್ದು ಮಾಡುವುದು ಹೇಗೆ ಎಂದು ನೋಡೋಣ:

ಒಂದು ಚಮಚ ಕಾಳು ಮೆಣಸನ್ನು ಜಜ್ಜಿ ಪುಡಿ ಮಾಡಿ ಒಂದು ಕಪ್ ನೀರಿಗೆ ಹಾಕಿ ಕಾಯಿಸಿ, ನಂತರ ಆ ನೀರನ್ನು ಸೋಸಿ 1 ಚಮಚ ಜೇನು ಹಾಕಿ ಕುಡಿಯಿರಿ. ಈ ನೀರನ್ನು ಬಿಸಿ ಬಿಸಿಯಾಗಿ ಸ್ವಲ್ಪ ಸ್ವಲ್ಪ ದಿನವಿಡೀ ತೆಗೆದುಕೊಳ್ಳಿ. ಹೀಘೆ ಮಾಡುವುದರಿಂದ ಗಂಟಲು ಕೆರೆತ ಕಡಿಮೆಯಾಗುವುದು.

ಟೊಮೆಟೊ ರಸದಿಂದ ಬಾಯಿ ಮುಕ್ಕಳಿಸುವುದು

ಟೊಮೆಟೊ ರಸದಿಂದ ಬಾಯಿ ಮುಕ್ಕಳಿಸುವುದು

ಗಂಟಲು ಕೆರೆತ ಉಂಟಾದಾಗ ಟೊಮೆಟೊ ರಸದಿಂದ ಬಾಯಿ ಮುಕ್ಕಳಿಸಿದರೆತುಂಬಾ ಹಿತವಾಗುವುದು. ಇದು ಗಂಟಲು ಕೆರೆತ ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ.

ಮಾಡುವುದು ಹೇಗೆ

ಅರ್ಧ ಕಪ್ ಟೊಮೆಟೊ ರಸಕ್ಕೆ, ಅರ್ಧ ಕಪ್ ನೀರು ಹಾಕಿ ಕುದಿಸಿ, ಆ ನೀರಿನಿಂದ 5 ನಿಮಿಷ ಬಾಯಿ ಮುಕ್ಕಳಿಸಿ.

ದೊಡ್ಡಪ್ರತ್ರೆ ಎಣ್ಣೆ (ಒರೆಗ್ನೋ ಆಯಿಲ್)

ದೊಡ್ಡಪ್ರತ್ರೆ ಎಣ್ಣೆ (ಒರೆಗ್ನೋ ಆಯಿಲ್)

ಗಂಟಲು ತುಂಬಾ ನೋಯುತ್ತಿದ್ದು, ಮಾತನಾಡಲು ಕಷ್ಟವಾಗುತ್ತಿದ್ದರೆ ಇದನ್ನು ಗುಣಪಡಿಸಲು ಒರೆಗ್ನೋ ಆಯಿಲ್ ತುಂಬಾ ಪ್ರಯೋಜನಕಾರಿ.

ಬಳಸುವುದು ಹೇಗೆ?

ಬಿಸಿ ನೀರಿಗೆ 2-3 ಹನಿ ಒರೆಗ್ನೋ ಆಯಿಲ್ ಹಾಕಿ ಹಬೆ ತೆಗೆದುಕೊಳ್ಳಿ. ಇದರಿಂದ ಮೂಗು ಕಟ್ಟಿದ್ದರೆ ಸರಿಯಾಗುವುದು . ಗಂಟಲು ಕೆರೆತ ಕೂಡ ಕಡಿಮೆಯಾಗುವುದು.

 ತುಳಸಿ

ತುಳಸಿ

ತುಳಸಿ ಎಲೆಯನ್ನು ಜಗಿಯವುದು ಕೂಡ ಗಂಟಲು ಕೆರೆತ ಕಡಿಮೆ ಮಾಡಲು ಸಹಾಯಕಾರಿ. ಕುಡಿಯುವ ನೀರಿಗೆ ಸ್ವಲ್ಪ ತುಳಸಿ ಎಲೆ ಹಾಕಿ ಕುದಿಸಿ ಕುಡಿಯುವುದು ಒಳ್ಳೆಯದು. ನೀರು ಬಿಸಿ-ಬಿಸಿಯಿದ್ದರೆ ಅದಕ್ಕೆ ನಿಂಬೆರಸ ಹಾಗೂ ಜೇನು ಹಾಕಿ ಕುಡಿದರೆ ಒಳ್ಳೆಯದು.

ಏಲಕ್ಕಿ

ಏಲಕ್ಕಿ

ಏಲಕ್ಕಿಯಲ್ಲಿ ಅನೇಕ ಆರೋಗ್ಯಕರ ಗುಣಗಳಿವೆ. ಇದರಲ್ಲಿ ಉರಿಯೂತ ಕಡಿಮೆ ಮಾಡುವ ಗುಣ ನೋವು ಕಡಿಮೆ ಮಾಡುವಲ್ಲಿ ಸಹಕಾರಿ. ಅದರಲ್ಲೂ ಶೀತದಿಂದ ಮುಖ ಊದಿಕೊಂಡಿದ್ದರೆ, ಗಂಟಲು ನೋವಿದ್ದರೆ ಏಲಕ್ಕಿಯನ್ನು ಹೀಗೆ ಬಳಸಿ.

ಬಳಸುವುದು ಹೇಗೆ?

2-3 ಏಲಕ್ಕಿಯನ್ನು ನೀರಿನಲ್ಲಿ ಹಾಕಿ ಕುದಿಸಿ ಬಾಯಿ ಮುಕ್ಕಳಿಸಿದರೆ ನೋವು ಕಡಿಮೆಯಾಗುವುದು.

ಮಾವಿನ ಎಲೆ ಚಿಗುರು

ಮಾವಿನ ಎಲೆ ಚಿಗುರು

ಗಂಟಲು ಕೆರೆತಕ್ಕೆ ಮಾವಿನ ಎಲೆಯ ಚಿಗುರು ತುಂಬಾ ಒಳ್ಳೆಯದು. ಇದನ್ನು ಮದ್ದಾಗಿ ಆಯುರ್ವೇದದಲ್ಲಿ ಕೂಡ ಬಳಸುತ್ತಾರೆ.

ಬಳಸುವುದು ಹೇಗೆ?

ಚಿಗುರು ಎಲೆಯನ್ನು ಅರಿದು ಅದರ ರಸ ಹಿಂಡಿ, ಆ ರಸವನ್ನು ಬಿಸಿ ನೀರಿನಲ್ಲಿ ಹಾಕಿ ಬಾಯಿ ಮುಕ್ಕಳಿಸಬುದು. ಇನ್ನು ಎಲೆಯ ರಸವನ್ನು ಕತ್ತಿಗೆ ಹಚ್ಚಿದರೆ ನೋವು ಕಡಿಮೆಯಾಗುವುದು.

ಉಪ್ಪು

ಉಪ್ಪು

ಗಂಟಲು ನೋವು ಕಾಣಿಸಿದಾಗ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವಂತೆ ವೈದ್ಯರು ಕೂಡ ಸಲಹೆ ನೀಡುತ್ತಾರೆ. ಇನ್ನು ನೀವಿರುವ ಜಾಗಕ್ಕೆ ಉಪ್ಪು ನೀರಿನ ಶಾಖ ಕೂಡ ಒಳ್ಳೆಯದು.

ಬಳಸುವುದು ಹೇಗೆ?

ಬಿಸಿ ನೀರಿಗೆ ಉಪ್ಪು ಹಾಕಿ ಗಂಟೆಗೊಮ್ಮೆ ಬಾಯಿ ಮುಕ್ಕಳಿಸಿದರೆ ಗಂಟಲು ಕೆರೆತ ಕಡಿಮೆಯಾಗುವುದು.

ಅಡುಗೆ ಸೋಡಾ

ಅಡುಗೆ ಸೋಡಾ

ಅಡುಗೆ ಸೋಡಾ ಬಳಸಿ ಬಾಯಿ ಮುಕ್ಕಳಿಸಿದರೆ ಗಂಟಲು ಕೆರೆತ ಕಡಿಮೆಯಾಗುವುದು. ಇದು ಬಾಯಿಯಲ್ಲಿರುವ ರೋಗಾಣು ಬ್ಯಾಕ್ಟಿರಿಯಾಗಳನ್ನು ಕೊಂದು ಹಾಕಿ ನೋವನ್ನು ಕಡಿಮೆ ಮಾಡುತ್ತದೆ.

ಮಾಡುವುದು ಹೇಗೆ?

ಒಂದು ಕಪ್ ಬಿಸಿ ನೀರಿಗೆ 1/4ಕಪ್ ಅಡುಗೆ ಸೋಡಾ, 1/4 ಕಪ್ ಉಪ್ಪು ಹಾಕಿ ಗಂಟಲು ನೋವು ಕಡಿಮೆಯಾಗುವವರಿಗೆ ಪ್ರತಿದಿನ ಬೆಳಗ್ಗೆ ಬಾಯಿ ಮುಕ್ಕಳಿಸಬೇಕು.

ಸೂಚನೆ

* ಈ ಮನೆಮದ್ದು ಮಾಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ. ಯಾವುದಾದರೂ ಆರೋಗ್ಯ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ವೈದ್ಯರ ಸಲಹೆ ಪಡೆಯದೆ ತೆಗದುಕೊಳ್ಳಬೇಡಿ.

* ತುಂಬಾ ವಿಶ್ರಾಂತಿ ತೆಗೆದುಕೊಳ್ಳಿ.

* ಬೆಚ್ಚಗೆ ಇರಿ.

English summary

Effective Home Remedies For Sore Throat

A sore throat is quite a common occurrence, and all of us have been affected by it at some point.Here are effective home remedies to cure sore throat.
X
Desktop Bottom Promotion