For Quick Alerts
ALLOW NOTIFICATIONS  
For Daily Alerts

ದೀರ್ಘಕಾಲದ ಆರೋಗ್ಯ ವೃದ್ಧಿಗೆ ಈ ತರಕಾರಿಗಳನ್ನು ಹಸಿಯಾಗಿ ಸೇವಿಸುವುದನ್ನು ತಪ್ಪಿಸಲೇಬೇಡಿ

|

ನಮ್ಮ ಆರೋಗ್ಯವನ್ನು ನಿರ್ಧರಿಸುವ ಬಹುಮುಖ್ಯ ಅಂಶ ಎಂದರೆ ನಮ್ಮ ಆಹಾರ ಪದ್ಧತಿ. ದೈಹಿಕವಾಗಿ ಸದೃಡರಾಗಿರಲು ಬಯಸುವವರು, ವೈದ್ಯರಿಂದ ಆದಷ್ಟು ದೂರ ಇರಬೇಕು ಎಂದು ಇಷ್ಟಪಡುವವರೆಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಆದ್ಯತೆಯ ವಿಚಾರವೆಂದರೆ ಆರೋಗ್ಯಕರ ಆಹಾರ ಪದ್ಧತಿ.

ನಾವು ನಿತ್ಯ ಸೇವಿಸುವ ಆಹಾರ ಆರೋಗ್ಯಕರವಾಗಿಯೇ ಇರುತ್ತದೆ, ಆದರೆ ಈ ಆಹಾರಗಳನ್ನು ಸೇವಿಸುವ ರೀತಿಯಿಂದ ನ್ಮಮ ಆರೋಗ್ಯದ ಮೇಲೆ ಇನ್ನಷ್ಟು ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಾವೆಲ್ಲರೂ ಆರೋಗ್ಯದ ದೃಷ್ಟಿಯಿಂದ ನಿತ್ಯ ತರಕಾರಿ ಸೊಪ್ಪುಗಳನ್ನು ಸೇವಿಸುತ್ತಲೇ ಇದ್ದೇವೆ ಆದರೆ ಹೇಗೆ? ಇದು ಮುಖ್ಯವಾಗುತ್ತದೆ.

ನಾವು ಈ ಕೆಳಗೆ ಹೇಳಿರುವ ತರಕಾರಿ, ಮೊಳಕೆ ಕಾಳುಗಳು ಮತ್ತು ಸೊಪ್ಪನ್ನು ಹಸಿಯಾಗಿಯೇ ಸೇವಿಸಿದರೆ ಬೇಯಿಸಿ ಸೇವಿಸುವುದಕ್ಕಿಂತ ದುಪ್ಪಟ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಹೆಚ್ಚಿನ ಶಾಖಕ್ಕೆ ಒಡ್ಡುವುದರಿಂದ ಅವುಗಳ ಪೌಷ್ಟಿಕಾಂಶದ ಅಂಶ ಮತ್ತು ಅವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಯಾವೆಲ್ಲಾ ತರಕಾರಿ ಮುಂದೆ ನೋಡಿ:

ಈರುಳ್ಳಿ

ಈರುಳ್ಳಿ

ಭಾರತೀಯರ ಪ್ರತಿ ಮನೆಗಳಲ್ಲೂ ನಿತ್ಯ ತಪ್ಪದೇ ಬಸುವ ತರಕಾರಿಗಳ ಪಟ್ಟಿಯಲ್ಲಿ ಈರುಳ್ಳಿಗೆ ಆದ್ಯತೆಯ ಸ್ಥಾನ. ಇದನ್ನು ಬೆಳಗಿನ ತಿಂಡಿಯಿಂದ, ಸಾಂಬಾರ್‌, ಪಲ್ಯ, ದಾಲ್, ಸ್ನ್ಯಾಕ್ಸ್ ಯಾವುದೇ ತಯಾರಿಸಲು ಈರುಳ್ಳಿ ಬೇಕೇ ಬೇಕು. ಆದರೆ ಸಲಾಡ್‌ನಲ್ಲಿ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಈರುಳ್ಳಿ ಯಕೃತ್ತಿಗೆ ಉತ್ತಮವಾದ ಹಲವಾರು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ. ಇದು ಅಲಿಸಿನ್ ಎಂಬ ಸಂಯುಕ್ತವನ್ನು ಸಹ ಹೊಂದಿದೆ, ಇದು ಈರುಳ್ಳಿಗೆ ಅದರ ವಿಶಿಷ್ಟ ವಾಸನೆಯನ್ನು ನೀಡುತ್ತದೆ. ಈರುಳ್ಳಿಯನ್ನು ಹಸಿಯಾಗಿಯೇ ಸೇವಿಸಿದಾಗ, ಈರುಳ್ಳಿಯಲ್ಲಿರುವ ಅಲಿಸಿನ್ ಹೃದ್ರೋಗವನ್ನು ತಡೆಯಲು ಸಹಾಯ ಮಾಡುತ್ತದೆ, ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಬೀಟ್ರೂಟ್

ಬೀಟ್ರೂಟ್

ಬೀಟ್ರೂಟ್ ಕಬ್ಬಿಣಾಂಶ ಹೆಚ್ಚಿರುವ ಸಸ್ಯಾಹಾರಿ ಆಗಿದ್ದು ಇದನ್ನು ಸಲಾಡ್ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸುವುದು ಉತ್ತಮ. ಬೀಟ್ರೂಟ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದೈಹಿಕ ತಾಲೀಮು, ದೈಹಿಕ ಶ್ರಮ ಹೆಚ್ಚು ಮಾಡುವ ಸಂದರ್ಭಗಳಲ್ಲಿ ಹಸಿ ಬೀಟ್ರೂಟ್‌ ರಸ ನಿಮಗೆ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೊಳಕೆ ಕಾಳುಗಳು

ಮೊಳಕೆ ಕಾಳುಗಳು

ಪೌಷ್ಟಿಕತಜ್ಞರ ಪ್ರಕಾರ, ದ್ವಿದಳ ಧಾನ್ಯಗಳು ಅಥವಾ ದ್ವಿದಳ ಧಾನ್ಯಗಳಿಂದ ತಯಾರಿಸಿದ ಮೊಳಕೆ ಕಾಳುಗಳು, ಮೊಳಕೆಯೊಡೆಯುವ ಪ್ರಕ್ರಿಯೆಯಲ್ಲಿ ಎಲ್ಲಾ ಪೋಷಕಾಂಶಗಳಿಂದ ಅದರ ಪೌಷ್ಟಿಕಾಂಶದ ಮೌಲ್ಯವನ್ನು ಹಲವು ಪಟ್ಟು ಹೆಚ್ಚಿಸುತ್ತವೆ. ಇವುಗಳು ಹಸಿಯಾಗಿದ್ದರೆ ಇದರಲ್ಲಿ ವಿಟಮಿನ್ ಸಿ ನ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು, ಆದರೆ ಮೊಳಕೆ ಕಾಳುಗಳನ್ನು ಬೇಯಿಸಿದಾಗ ಇದರಲ್ಲಿರುವ ವಿಟಮಿನ್‌ ಸಿ ನಾಶವಾಗುತ್ತದೆ.

ಟೊಮ್ಯಾಟೊ

ಟೊಮ್ಯಾಟೊ

ಟೊಮ್ಯಾಟೋ ನಮ್ಮ ದೈನಂದಿನ ಆಹಾರದ ಒಂದು ಭಾಗವಾಗಿದೆ, ನಾವು ಅವುಗಳನ್ನು ವಿವಿಧ ರೀತಿಯಲ್ಲ, ವಿಭಿನ್ನ ಖಾದ್ಯಗಳಲ್ಲಿ ಸೇವಿಸುತ್ತೇವೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಟೊಮೆಟೊಗಳನ್ನು ಮೂಲಭೂತವಾಗಿ ಸಲಾಡ್‌ಗಳಲ್ಲಿ ಕಚ್ಚಾ ಸೇವಿಸಿದರೆ ಉತ್ತಮ. ಟೊಮೆಟೊಗಳಲ್ಲಿ ಉತ್ಕರ್ಷಣ ನಿರೋಧಕಗಳಿವೆ, ಇದು ಬೇಯಿಸಿದ ನಂತರ ಕಡಿಮೆಯಾಗಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ಹಸಿವಾಗಿ ತಿನ್ನುವುದು ಕಷ್ಟವಾಗಬಹುದು ಅಥವಾ ವಿಚಿತ್ರ ಅನುಭವ ನೀಡಬಹುದು, ಆದರೆ ಇದು ನಿಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಉತ್ತಮ ಫಲಿತಾಂಶಗಳಿಗಾಗಿ, ನೀವು ಬೆಳ್ಳುಳ್ಳಿಯನ್ನು ಮುಂಜಾನೆಯೇ ಒಂದು ಬೆಳ್ಳುಳ್ಳಿ ತುಂಡನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಅದರ ಮೇಲೆ ಕೆಲವು ಹನಿ ಜೇನುತುಪ್ಪವನ್ನು ಹಾಕಿ ಸ್ವಲ್ಪ ಹೊತ್ತು ಜಗಿಯಿರಿ. ಇದನ್ನು ಸೇವಿಸುವ ಮುನ್ನ ಒಂದು ಲೋಟ ಅಥವಾ ಎರಡು ಲೋಟ ನೀರನ್ನು ಸೇವಿಸಬಹುದು.

ಹಸಿ ಬೆಳ್ಳುಳ್ಳಿ ಔಷಧೀಯ ಪ್ರಯೋಜನಗಳನ್ನು ಹೊಂದಿದೆ ಮತ್ತು ವಾರಕ್ಕೆ ಎರಡು ಅಥವಾ ಹೆಚ್ಚು ಬಾರಿ ಸೇವಿಸುವುದರಿಂದ ನಿಮ್ಮ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ. ಹಸಿ ಬೆಳ್ಳುಳ್ಳಿ ಉರಿಯೂತ ನಿವಾರಕವಾಗಿ ಕೆಲಸ ಮಾಡುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಡ್ರೈ ಫ್ರೂಟ್ಸ್‌

ಡ್ರೈ ಫ್ರೂಟ್ಸ್‌

ಸಾಮಾನ್ಯವಾಗಿ ನಾವು ಡ್ರೈ ಫ್ರೂಟ್ಸ್‌ ಗಳನ್ನು ಉಪ್ಪು ಅಥವಾ ಸಿಹಿಯಾಗಿ ಸೇವಿಸುವುದು ಅಭ್ಯಾಸ. ಆದರೆ ಡ್ರೈ ಫ್ರೂಟ್ಸ್‌ ಬೀಜಗಳನ್ನು ಕಚ್ಚಾ ತಿನ್ನುವುದು ಹೆಚ್ಚು ಆರೋಗ್ಯಕರ ಪರ್ಯಾಯವಾಗಿದೆ. ಹುರಿದ ಬೀಜಗಳಿಗೆ ಉಪ್ಪು ಅಥವಾ ಸಕ್ಕರೆಯನ್ನು ಸೇರಿಸುವುದರಿಂದ ಬೀಜಗಳ ಕ್ಯಾಲೋರಿ ಅಂಶವೂ ಹೆಚ್ಚಾಗುತ್ತದೆ. ಬಾದಾಮಿ ಮತ್ತು ವಾಲ್್ನಟ್ಸ್ ನಿಂದ ಗೋಡಂಬಿ ಮತ್ತು ಪಿಸ್ತಾಗಳವರೆಗೆ, ಟೇಸ್ಟಿ ಮತ್ತು ಆರೋಗ್ಯಕರವಾಗಿರುವ ಹಲವಾರು ಬೀಜಗಳಿವೆ. ಬೀಜಗಳನ್ನು ಹುರಿಯುವುದು ಅಥವಾ ಮೂಲಭೂತವಾಗಿ ಅವುಗಳನ್ನು ಶಾಖಕ್ಕೆ ಒಡ್ಡುವುದು ಅವುಗಳ ಉತ್ಕರ್ಷಣ ನಿರೋಧಕ ಮತ್ತು ವಿಟಮಿನ್ ಅಂಶವನ್ನು ಕಡಿಮೆ ಮಾಡಬಹುದು, ಹೀಗಾಗಿ, ಅವುಗಳನ್ನು ಕಚ್ಚಾ ಸೇವಿಸುವುದು ಉತ್ತಮ ಆಯ್ಕೆ.

ಬ್ರೊಕೊಲಿ

ಬ್ರೊಕೊಲಿ

ಬ್ರೊಕೊಲಿಯು ನಿಮ್ಮ ದೈನಂದಿನ ಆಹಾರದಲ್ಲಿ ಕಡ್ಡಾಯವಾಗಿ ಸೇರಿಸಬೇಕಾದ ಆರೋಗ್ಯಕರ ತರಕಾರಿಗಳಲ್ಲಿ ಒಂದಾಗಿದೆ. ಬ್ರೊಕೊಲಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ತುಂಬಿದೆ. ಈ ಕಡು ಹಸಿರು ಬಣ್ಣದ ಸಸ್ಯಾಹಾರದಲ್ಲಿ ಸಲ್ಫೊರಾಫೇನ್ ಎಂಬ ಸಂಯುಕ್ತವಿದೆ, ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆರೋಗ್ಯ ಅಂಶವನ್ನು ಹೆಚ್ಚಿಸಲು ಇದು ನಿಮ್ಮ ಸಲಾಡ್‌ಗಳಿಗೆ ಪರಿಪೂರ್ಣ ಸೇರ್ಪಡೆಯಾಗಬಹುದು. ನೀವು ಬಯಸಿದರೆ ಒಂದು ಅಥವಾ ಎರಡು ನಿಮಿಷಗಳ ಕಾಲ ಬ್ರೊಕೊಲಿಯನ್ನು ಲಘುವಾಗಿ ಹುರಿಯಬಹುದು, ಆದರೆ ಅದನ್ನು ಬೇಯಿಸುವುದನ್ನು ತಪ್ಪಿಸಿ. ಆದರೆ ಸೇವಿಸುವ ಮೊದಲು ಉಪ್ಪು ನೀರಿನಲ್ಲಿ ತೊಳೆಯುವುದು ಬಹಳ ಮುಖ್ಯ.

English summary

Eat these foods raw to get maximum health benefits in kannada

Here we are discussing about Eat these foods raw to get maximum health benefits in kannada. Read more.
Story first published: Monday, August 2, 2021, 17:46 [IST]
X
Desktop Bottom Promotion