For Quick Alerts
ALLOW NOTIFICATIONS  
For Daily Alerts

ಆರೋಗ್ಯದಲ್ಲಿ ಹಠಾತ್ ಕಂಡುಬರುವ ಈ ಲಕ್ಷಣಗಳು ಹೃದಯಾಘಾತದ ಮುನ್ಸೂಚನೆಯಾಗಿರಬಹುದು, ನಿರ್ಲಕ್ಷ್ಯ ಬೇಡ..

|

ಇತ್ತೀಚಿನ ದಿನಗಳಲ್ಲಿ ಹೃದಯಾಘಾತವೂ ಹೆಚ್ಚಿನ ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ಕಟ್ಟುಮಸ್ತಾಗಿದ್ದು ಯುವಕರೇ ಇದಕ್ಕೆ ಹೆಚ್ಚು ಗುರಿಯಾಗುತ್ತಿರುವುದು ದುರಂತವೇ ಸರಿ. ಇದರ ಲಕ್ಷಣಗಳನ್ನು ಗುರುತಿಸುವುದು ಕಷ್ಟ. ಏಕೆಂದರೆ, ಹೆಚ್ಚಿನ ರೋಗಿಗಳು ಎದೆ ನೋವು, ಭಾರ ಅಥವಾ ಅಸ್ವಸ್ಥತೆ, ಹೃದಯ ಬಡಿತ ಏರಿಕೆ, ತಣ್ಣನೆಯ ಬೆವರು ಮತ್ತು ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳನ್ನ ಹೊಂದಿದ್ದರೆ, ಇತರರು, ವಿಶೇಷವಾಗಿ ಮಹಿಳೆಯರು, ಆಯಾಸ, ಅಸಮಾಧಾನ, ಅಸ್ವಸ್ಥತೆ, ಬೆನ್ನು ಅಥವಾ ಹೊಟ್ಟೆ ನೋವು, ಮತ್ತು ತಾಳ್ಮೆ ಕಳೆದುಕೊಳ್ಳುವುದು ಮೊದಲಾದ ಕೆಲವು ಅಸಾಮಾನ್ಯ ಲಕ್ಷಣಗಳನ್ನು ಅನುಭವಿಸುತ್ತಾರೆ. ಹೃದಯಾಘಾತ ಸಂಭವಿಸುವ ತಿಂಗಳುಗಳ ಮೊದಲು ಎರಡೂ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಈ ಲೇಖನದಲ್ಲಿ, ಹೃದಯಾಘಾತದ 5 ಆರಂಭಿಕ ಲಕ್ಷಣಗಳನ್ನು ಚರ್ಚಿಸಿದ್ದೇವೆ. ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು:

ಎದೆ ನೋವು:

ಎದೆ ನೋವು:

ಇದು ಹೃದಯಾಘಾತದ ಸಾಮಾನ್ಯ ಲಕ್ಷಣವಾಗಿದೆ, ಆದರೆ ಇದು ವೈದ್ಯಕೀಯ ತುರ್ತುಸ್ಥಿತಿ ಎಂದು ಅನೇಕ ಜನರಿಗೆ ತಿಳಿದಿಲ್ಲ. ಹೃದಯಾಘಾತದ ವೇಳೆ ಸಾಮಾನ್ಯವಾಗಿ ಎದೆಯಲ್ಲಿ ಭಾರ, ಬಿಗಿತ ಅಥವಾ ಒತ್ತಡದ ಭಾವನೆ ಉಂಟಾಗುತ್ತದೆ. ಜನರು ಇದನ್ನು 'ಆನೆಯೊಂದು ನನ್ನ ಎದೆಯ ಮೇಲೆ ಕುಳಿತಂತಾಗುತ್ತಿದೆ' ಅಥವಾ 'ನನ್ನ ಎದೆಯ ಸುತ್ತ ಬಿಗಿಯಾದ ಬ್ಯಾಂಡ್‌ ಸುತ್ತಿದಂತೆ ಭಾಸವಾಗುತ್ತಿದೆ,' ಎಂಬಂತೆ ವಿವರಣೆ ನೀಡುತ್ತಾರೆ. ಎದೆಕಟ್ಟಿದ ಭಾವನೆ ನಿಮಗಾಗುತ್ತಿದ್ದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

ಕಾಲುಗಳಲ್ಲಿ ನೋವು:

ಕಾಲುಗಳಲ್ಲಿ ನೋವು:

ವಾಕಿಂಗ್ ಮಾಡುವಾಗ ನಿಮ್ಮ ಕಾಲುಗಳಲಿ ಹಿಡಿತ, ಸೆಳೆತದ ಸಂವೇದನೆ ಬಂದರೆ, ವೈದ್ಯರನ್ನು ಸಂಪರ್ಕಿಸಿ ಏಕೆಂದರೆ ಇದು PAD (ಬಾಹ್ಯ ಅಪಧಮನಿಯ ಕಾಯಿಲೆ) ಚಿಹ್ನೆಯಾಗಿರಬಹುದು. ಇದು ವಿಶೇಷವಾಗಿ ಧೂಮಪಾನಿಗಳು ಮತ್ತು ಮಧುಮೇಹಿಗಳಲ್ಲಿ ಕಂಡುಬರುತ್ತದೆ.

ಹೊಟ್ಟೆ, ಕುತ್ತಿಗೆ, ದವಡೆ ಮತ್ತು ತೋಳಿನ ನೋವು:

ಹೊಟ್ಟೆ, ಕುತ್ತಿಗೆ, ದವಡೆ ಮತ್ತು ತೋಳಿನ ನೋವು:

ಹೃದಯಾಘಾತದ ಲಕ್ಷಣ ಕೇವಲ ಎದೆಗೆ ಸೀಮಿತವಾಗಿಲ್ಲ. ಹೃದಯಾಘಾತವು ನಿಮ್ಮ ತೋಳು, ಬೆನ್ನು, ಕುತ್ತಿಗೆ, ದವಡೆ ಅಥವಾ ಹೊಟ್ಟೆಯಲ್ಲಿ ನೋವು ಅಥವಾ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಆದರೆ, ಅನೇಕರು ಈ ಸಮಸ್ಯೆಗಳು ಹೃದಯಾಘಾತದೊಂದಿಗೆ ಸಂಬಂಧ ಹೊಂದಿದೆ ಎಂಬುದುನ್ನು ಅರಿತಿಲ್ಲ, ಆದ್ದರಿಂದ ಈ ವೇಳೆ ತುರ್ತು ವೈದ್ಯಕೀಯ ಸಹಾಯ ಪಡೆಯಲು ವಿಫಲರಾಗಬಹುದು.

ಉಸಿರಾಟದ ತೊಂದರೆ, ವಾಕರಿಕೆ, ಮತ್ತು ತಲೆನೋವು:

ಉಸಿರಾಟದ ತೊಂದರೆ, ವಾಕರಿಕೆ, ಮತ್ತು ತಲೆನೋವು:

ಹೃದಯಾಘಾತದ ಸಮಯದಲ್ಲಿ, ಎದೆ ನೋವಿನೊಂದಿಗೆ ಅಥವಾ ಉಸಿರಾಟದ ತೊಂದರೆ ಬೆಳೆಯಬಹುದು. ಹೃದಯಾಘಾತದ ಮೊದಲು ಇದು ಸಂಭವಿಸಬಹುದು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ, ವಿಶೇಷವಾಗಿ ಮಹಿಳೆಯರಲ್ಲಿ. ಸಂಶೋಧನೆಯ ಪ್ರಕಾರ, ಮಹಿಳೆಯರಲ್ಲಿ ಹೃದಯಾಘಾತಕ್ಕೆ ಮುನ್ನ ಸಾಮಾನ್ಯವಾಗಿ ವರದಿಯಾಗುವ ಮೂರನೆಯ ಲಕ್ಷಣವೆಂದರೆ ಉಸಿರಾಟದ ತೊಂದರೆ.

ಊದಿಕೊಂಡ ಪಾದದ ಗಂಟುಗಳು:

ಊದಿಕೊಂಡ ಪಾದದ ಗಂಟುಗಳು:

ಇದನ್ನು ನಿರ್ಲಕ್ಷಿಸಬಾರದು, ವಿಶೇಷವಾಗಿ ಪಾದದ ಗಂಟುಗಳು ದೊಡ್ಡದಾಗಿದ್ದರೆ, ಇದು ಹೃದಯ ವೈಫಲ್ಯದ ಸಂಕೇತವಾಗಬಹುದು, ಆದರೆ ಇದು ತುಂಬಾ ಸಾಮಾನ್ಯವಾಗಿದ್ದು, ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳ ಕಾರಣ ಸೇರಿದಂತೆ, ಇತರ ಕಾರಣಗಳಿಗೂ ಆಗಬಹುದು- ಉದಾಹರಣೆಗೆ, ರಕ್ತದೊತ್ತಡ ಔಷಧಿಯು ಪಾದದ ಗಂಟುಗಳು ಊತಕ್ಕೆ ಕಾರಣವಾಗುವುದು.

ತಿರುಗುವಿಕೆ:

ಸಾಕಷ್ಟು ನೀರು ಕುಡಿಯದಿರುವುದು, ಊಟವನ್ನು ಬಿಟ್ಟುಬಿಡುವುದು ಅಥವಾ ಬೇಗನೆ ಎದ್ದು ನಿಲ್ಲುವುದು ಸೇರಿದಂತೆ ಹಲವು ವಿಷಯಗಳು ತಲೆತಿರುಗುವಿಕೆಗೆ ಕಾರಣವಾಗಬಹುದು. ಆದರೆ, ತಲೆತಿರುಗುವಿಕೆ ಅಥವಾ ತಲೆನೋವು, ಎದೆ ನೋವು ಮತ್ತು ಉಸಿರಾಟದ ತೊಂದರೆಯೊಂದಿಗೆ ಸೇರಿಕೊಂಡರೆ, ರಕ್ತದೊತ್ತಡ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ, ಇದು ಹೃದಯಾಘಾತ ಸನ್ನಿಹಿತವಾಗಿದೆ ಎಂಬುದರ ಸೂಚನೆ.

FAQ's
  • ಹಾರ್ಟ್ ಅಟ್ಯಾಕ್ ಹೆಚ್ಚಾಗಿ ಯಾವ ಸಮಯದಲ್ಲಿ ಆಗುವುದು?

    ಸಾಮಾನ್ಯವಾಗಿ, ಹೆಚ್ಚಿನ ಹೃದಯಾಘಾತಗಳು ಬೆಳಗ್ಗಿನ ಜಾವ ಆಗುತ್ತವೆ. ಅಧ್ಯಯನದ ಪ್ರಕಾರ, ಬೆಳಗ್ಗೆ 6ರಿಂದ ಮಧ್ಯಾಹ್ನದವರೆಗೆ ಹೆಚ್ಚಿನ ರೋಗಿಗಳು ಚಿಕಿತ್ಸೆ ಪಡೆದಿದ್ದು, ಕೆಲವು ಪ್ರಕರಣಗಳು ಮಾತ್ರ ಮಧ್ಯರಾತ್ರಿ ಸಂಭವಿಸಿವೆ.

  • ಹೃದಯಾಘಾತಕ್ಕೆ ಕಾರಣವೇನು?

    ಹಾರ್ಟ್ ಅಟ್ಯಾಕ್ ಆಗಲು ಬಹುಮುಖ್ಯ ಕಾರಣವೆಂದರೆ, ಹೃದಯದ ಸ್ನಾಯುಗಳಿಗೆ ರಕ್ತಪೂರೈಕೆ ಆಗದೇ ಇರುವುದು. ಹೇಗೆಂದರೆ, ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಾಣವಾಗಿ, ಅದು ಹೃದಯದ ಸ್ನಾಯುಗಳಿಗೆ ರಕ್ತ ಬರುವುದನ್ನು ತಡೆಯುತ್ತದೆ. ಇದರ ಜೊತೆಗೆ ರಕ್ತ ಹೆಪ್ಪುಗಟ್ಟುವಿಕೆ ಅಥವಾ ಹರಿದ ರಕ್ತನಾಳದಿಂದಲೂ ಹೃದಯಾಘಾತ ಉಂಟಾಗಬಹುದು.

     

English summary

Early Signs of Heart attack you must Know in Kannada

Here we talking about Early signs of Heart attack you must know in kannada, read on
X
Desktop Bottom Promotion