For Quick Alerts
ALLOW NOTIFICATIONS  
For Daily Alerts

ಪುನಾರಂಭವಾದ ಹೊಟೇಲ್‌ಗಳಲ್ಲಿ ಸರ್ವಥಾ ಮಾಡಬಾರದ ಸಂಗತಿಗಳು

|

COVID-19 ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಯಲು ದೇಶದಾದ್ಯಂದ ಲಾಕ್‌ಡೌನ್ ಮಾಡಿದ ಬಳಿಕ ಈಗ ಕೆಲವು ಕಟ್ಟುಪಾಡುಗಳೊಂದಿಗೆ ಜನಜೀವನ ಸಹಜವಾಗುವಂತೆ ಸಡಿಲಿಸಲಾಗಿದೆ. ಕ್ರಮೇಣ ನಗರದೆಲ್ಲೆಡೆ ರೆಸ್ಟೋರೆಂಟುಗಳೂ ಗ್ರಾಹಕರಿಗಾಗಿ ತೆರೆದಿವೆ. ಆದರೆ ಗ್ರಾಹಕರಾಗಿ ಹೋಗುವಾಗ ಈ ಸ್ಥಳಗಳಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಕೆಲವು ಸಂಗತಿಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

Dont Do These Things In Reopened Restaurants

ನೀವು ನಿಮ್ಮ ನೆಚ್ಚಿನ ರೆಸ್ಟೋರೆಂಟ್ ನಲ್ಲಿ ಊಟಕ್ಕಾಗಿ ಹೋಗುವ ಮೊದಲು, ನಿಮ್ಮ ಆರೋಗ್ಯ ಮತ್ತು ಇತರರ ಆರೋಗ್ಯವನ್ನು ಅಪಾಯಕ್ಕೆ ತಳ್ಳುವಂತಹ ಈ 13 ತಪ್ಪುಗಳನ್ನು ಖಂಡಿತಾ ಎಸಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

1) ಮಾಸ್ಕ್ ಧರಿಸದೇ ಎಂದೂ ಆಗಮಿಸದಿರಿ

1) ಮಾಸ್ಕ್ ಧರಿಸದೇ ಎಂದೂ ಆಗಮಿಸದಿರಿ

COVID-19 ಸಾಂಕ್ರಾಮಿಕ ರೋಗ ಇಂದು ಎಲ್ಲೆಡೆ ಹಬ್ಬಿದೆ. ಯಾರಿಂದ ಯಾರಿಗೆ ಹಬ್ಬಬಹುದು ಹಬ್ಬಲಾರದು ಎಂದು ಹೇಳಲೇ ಸಾಧ್ಯವೇ ಇಲ್ಲ. ಹಾಗಾಗಿ, ಇತರ ಯಾವುದೇ ಸ್ಥಳಕ್ಕೆ ಹೋಗುವಂತೆಯೇ ರೆಸ್ಟೋರೆಂಟ್‌ಗೆ ಹೋಗುವಾಗಲೂ ಮಾಸ್ಕ್ ಧರಿಸದೇ ಹೋಗದಿರಿ. ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲಿತ ಅಧ್ಯಯನದ ಪ್ರಕಾರ, ಮಾಸ್ಕ್ ಧರಿಸುವುದರಿಂದ ಕರೋನವೈರಸ್ ಕಾದಂಬರಿಯ ಹರಡುವಿಕೆಯನ್ನು ಶೇಕಡಾ 85 ರಷ್ಟು ಕಡಿಮೆ ಮಾಡಬಹುದು. ಪುನಃ ತೆರೆಯಲಾದ ರೆಸ್ಟೋರೆಂಟ್‌ಗೆ ಹೋಗುವಾಗ ನೀವು ಮಾಡಬಾರದ ಅತಿ ಮುಖ್ಯ ವಿಷಯವೆಂದರೆ ಮಾಸ್ಕ್ ಇಲ್ಲದೇ ಬರುವುದು.

"ಸಿಡಿಸಿ ಪ್ರಕಾರ, ರೋಗದ ಹರಡುವಿಕೆಯನ್ನು ನಿಗ್ರಹಿಸಲು ನಡೆಸುವ ಪ್ರಯಗಳಲ್ಲಿ ಇದು ರಕ್ಷಣೆಯ ಒಂದು ಪ್ರಮುಖ ಪದರವಾಗಿದೆ" ಎಂದು ಆಹಾರ ತಜ್ಞರು ತಿಳಿಸುತ್ತಾರೆ. ಆದರೆ ಮುಖದ ಮಾಸ್ಕ್ ಧರಿಸಿದ್ದಂತೆ ನೀವು ಊಟ ಮಾಡುವುದಾದರೂ ಹೇಗೆ? ನೀವು ರೆಸ್ಟೋರೆಂಟ್‌ಗೆ ಪ್ರವೇಶಿಸುವಾಗ ಅಥವಾ ಒಳಾಂಗಣದಲ್ಲಿ ಹೊರಾಂಗಣ ಆಸನಗಳಲ್ಲಿ ಆಸೀನರಾಗಿ ಊಟ ಆಗಮಿಸುವವರೆಗೂ ಮಾಸ್ಕ್ ಧರಿಸಿಯೇ ಇರಿ. ಕೇವಲ ಊಟ ಪ್ರಾರಂಭಿಸುವ ಮುನ್ನವೇ ಮಾಸ್ಕ್ ಕಳಚಿ ಊಟ ಪ್ರಾರಂಭಿಸಿ.

ನಿಮ್ಮ ನೆಚ್ಚಿನ ಉಪಾಹಾರ ಗೃಹಕ್ಕೆ ನೀವು ಹಿಂತಿರುಗಿದಾಗ, ಅದು ನೀವು ಹಿಂದಿನ ಭಾರಿ ಭೇಟಿ ನೀಡಿದ್ದಾಗ ಇದ್ದಂತಿಲ್ಲದೇ ಕೊಂಚ ಭಿನ್ನವಾಗಿರಬಹುದು. COVID-19 ಲಾಕ್‌ಡೌನ್ ಅನ್ನು ಸಡಿಲಿಸಿದ ಬಳಿಕ ರೆಸ್ಟೋರೆಂಟ್‌ಗಳು ಸರ್ಕಾರದ ಕ್ರಮಗಳನ್ನು ಅನುಸರಿಸುವ ಕಾರಣದಿಂದಾಗಿ ಈ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

 2) ಪ್ರತಿ ರೆಸ್ಟೋರೆಂಟ್ ವಿಧಿಸುವ ತನ್ನದೇ ಆದ ಪ್ರತ್ಯೇಕ ಕಟ್ಟುಪಾಡುಗಳನ್ನು ಕಡೆಗಣಿಸದಿರಿ

2) ಪ್ರತಿ ರೆಸ್ಟೋರೆಂಟ್ ವಿಧಿಸುವ ತನ್ನದೇ ಆದ ಪ್ರತ್ಯೇಕ ಕಟ್ಟುಪಾಡುಗಳನ್ನು ಕಡೆಗಣಿಸದಿರಿ

ಹೆಚ್ಚಿನ ರೆಸ್ಟೋರೆಂಟ್‌ಗಳು ಸರ್ಕಾರ ಸೂಚಿಸಿರುವ ಕಡ್ಡಾಯ ಮಾರ್ಗಸೂಚಿಗಳನ್ನು ಅನುಸರಿಸುಲೇ ಬೇಕು. ಇದರ ಹೊರತಾಗಿ ಕೆಲವು ನಿರ್ದಿಷ್ಟ ರೆಸ್ಟೋರೆಂಟ್‌ಗಳು ತಮ್ಮದೇ ಆದ ಕೆಲವು ಹೆಚ್ಚುವರಿ ಕಟ್ಟುಪಾಡುಗಳನ್ನೂ ಹೊಂದಿರಬಹುದು, ನೀವು ಅತಿಥಿಯಾಗಿ ಆಗಮಿಸಿದಾಗ ಈ ಕಟ್ಟುಪಾಡುಗಳನ್ನೂ ಗೌರವಿಸಬೇಕು ಮತ್ತು ಅನುಸರಿಸಬೇಕು.

ಉದಾಹರಣೆಗೆ ನಿಮ್ಮ ಆಗಮನದದ ಸಮಯದಲ್ಲಿ ರೆಸ್ಟೋರೆಂಟ್ ಸಿಬ್ಬಂದಿ ನಿಮ್ಮ ದೇಹದ ತಾಪಮಾನವನ್ನು ತೆಗೆದುಕೊಳ್ಳಲು ಬಯಸಿದರೆ ಅಥವಾ ಪ್ರವೇಶದ ನಂತರ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಬಳಸುವುದಕ್ಕೆ ಆಗ್ರಹಿಸಿದರೆ, ಇದಕ್ಕೆ ಸಹಕರಿಸಿ. ಪ್ರತಿ ರೆಸ್ಟೋರೆಂಟ್‌ಗಳೂ ನಿಮ್ಮನ್ನು ಮತ್ತು ಅವರ ಸಿಬ್ಬಂದಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ. ನಿಮ್ಮ ಟೇಬಲ್ ಸಿದ್ಧವಾಗುವವರೆಗೆ ನಿಮ್ಮ ವಾಹನದಲ್ಲಿಯೇ ಕಾಯಬೇಕೆಂದು ಒಂದು ವೇಳೆ ವಿನಂತಿಸಿಕೊಂಡರೆ ಹಾಗೇ ಮಾಡಿ ಎಂದು ತಜ್ಞರು ಸಲಹೆ ಮಾಡುತ್ತಾರೆ.

3) ಕೈಗಳಿಂದ ತಿನ್ನದಿರಿ

3) ಕೈಗಳಿಂದ ತಿನ್ನದಿರಿ

ನೀವು ಆಯ್ಕೆ ಮಾಡಿದ ಆಹಾರ ನಿಮ್ಮ ಮೇಜಿಗೆ ಆಗಮಿಸಿದ ಬಳಿಕ ಎಂದಿಗೂ ಕೈಗಳಿಂದ ತಿನ್ನಲು ಅವಸರಿಸದಿರಿ. ಏಕೆಂದರೆ ನೀವು ಊಟಕ್ಕೂ ಮೊದಲು ಅರಿವಿದ್ದೋ ಇಲ್ಲದೆಯೋ ಕೆಲವಾರು ವಸ್ತುಗಳನ್ನು ಸ್ಪರ್ಶಿಸಿರಬಹುದು. ರೆಸ್ಟೋರೆಂಟ್ ಸಹಾ ಸಾರ್ವಜನಿಕ ಸ್ಥಳವಾಗಿದ್ದು ನೀವು ಸ್ಪರ್ಶಿಸಿದ ವಸ್ತುಗಳನ್ನು ಇತರರೂ ಸ್ಪರ್ಶಿಸಿದ್ದಿರಬಹುದು.

ಉದಾಹರಣೆಗೆ ಲೋಟಗಳು, ಮೆನು ಕಾರ್ಡ್, ಕುರ್ಚಿ ಮೇಜುಗಳ ಅಂಚುಗಳು ಇತ್ಯಾದಿ. ಯಾವುದೋ ಮಾಯೆಯಲ್ಲಿ ನೀವು ಸ್ಪರ್ಶಿಸಿದ ವಸ್ತು ಸೋಂಕಿಗೆ ಒಳಗಾಗಿದ್ದರೆ ನೀವು ಅದೇ ಕೈಗಳಿಂದ ಊಟ ಮಾಡಿದಾಗ ನಿಮ್ಮ ದೇಹ ಸೇರಬಹುದು. ಹಾಗಾಗಿ ಈ ಮೂಲಕ ನಿಮಗೆ ನೀವೇ ಸೋಂಕು ಹರಡಿಸಿಕೊಳ್ಳುವ ಸಂಭವವನ್ನು ಅಪಾರವಾಗಿ ಹೆಚ್ಚಿಸಿಕೊಳ್ಳುತ್ತೀರಿ. ಆದ್ದರಿಂದ ರೆಸ್ಟೋರೆಂಟ್ ಗಳೇ ಒದಗಿಸುವ ಚಾಕು ಚಮಚ ಫೋರ್ಕ್ ಗಳನ್ನು ಬಳಸಿಯೇ ಊಟ ಮಾಡಿ.

4) ಅತಿ ಹೆಚ್ಚಿನ ಜನರೊಂದಿಗೆ ಊಟ ಮಾಡದಿರಿ

4) ಅತಿ ಹೆಚ್ಚಿನ ಜನರೊಂದಿಗೆ ಊಟ ಮಾಡದಿರಿ

ನೀವು ರೆಸ್ಟೋರೆಂಟ್‌ನಲ್ಲಿದ್ದರೂ ಸಹ, ನೀವು ಸಾಧ್ಯವಾದಷ್ಟು ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಬೇಕು. ಅಲ್ಲದೇ ಹೆಚ್ಚಿನ ಜನರಿರುವ ಗುಂಪಿನೊಂದಿಗೆ ಊಟ ಮಾಡಲು ಹೋಗುವುದು ತರವಲ್ಲ ಎಂದು ತಜ್ಞರು ಸಲಹೆ ಮಾಡುತ್ತಾರೆ. ಜನರು ಮೇಜಿನ ಸುತ್ತ ಕುಳಿತ ಬಳಿಕ ಪರಸ್ಪರ ಮಾತನಾಡಲು ಒಲವು ತೋರಬಹುದು, ಇದರ ಪರಿಣಾಮವಾಗಿ ನಿಕಟ ಸಂಪರ್ಕಗಳಲ್ಲಿ ಉಸಿರಾಟದ ಮೂಲಕ ಸೋಂಕಿಗೀಡಾದ ಹನಿಗಳು ಹರಡುವ ಸಾಧ್ಯತೆಯನ್ನು ಕಡೆಗಣಿಸಲಾರದು.

5) ನೋಟುಗಳಲ್ಲಿ ಪಾವತಿಸದಿರಿ

5) ನೋಟುಗಳಲ್ಲಿ ಪಾವತಿಸದಿರಿ

ಊಟದ ಬಳಿಕ ಪಾವತಿಸಲು ನಿಮ್ಮ ವ್ಯಾಲೆಟ್ ಅಥವಾ ಕೈಚೀಲ ತೆರೆಯುವುದು ಮತ್ತು ನೋಟುಗಳ ಮೂಲಕ ಪಾವತಿಸುವುದು ಇದುವರೆಗೆ ನೀವು ನಡೆಸಿಕೊಂಡು ಬಂದಿದ್ದಿರಬಹುದು, ಆದರೆ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ, ಸಂಪರ್ಕವನ್ನು ಕಡಿಮೆ ಮಾಡುವ ಮೂಲಕ ಸೂಕ್ಷ್ಮಜೀವಿಗಳ ಹರಡುವಿಕೆಯನ್ನು ಮಿತಿಗೊಳಿಸುವುದು ಮುಖ್ಯವಾಗಿದೆ. ನೋಟುಗಳು ಕೆಲವಾರು ಕೈಗಳನ್ನು ದಾಟಿ ಬಂದಿರುವ ಕಾರಣ ಸ್ವತಃ ಬಹಳಷ್ಟು ರೋಗಾಣುಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚು, ಮತ್ತು ಹಣವನ್ನು ಮುಟ್ಟಿದ ನಂತರ ನೀವು ಕೈ ತೊಳೆಯದಿದ್ದರೆ, ನಿಮಗೆ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಆದಷ್ಟೂ ಎಲೆಕ್ಟ್ರಾನಿಕ್ ಮಾಧ್ಯಮಗಳಾದ ಡೆಬಿಟ್ ಕಾರ್ಡ್, ಕ್ರೆಡಿಡ್ ಕಾರ್ಡ್ ಅಥವಾ ಬೇರೆ ವಿಧಾನಗಳಿಂದ ಪಾವತಿಸಿ.

6) ರೆಸ್ಟೋರೆಂಟ್ ಒದಗಿಸುವ ಪೆನ್ ಉಪಯೋಗಿಸದಿರಿ

6) ರೆಸ್ಟೋರೆಂಟ್ ಒದಗಿಸುವ ಪೆನ್ ಉಪಯೋಗಿಸದಿರಿ

ಹಿಂದಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ನಿಂದ ಪಾವತಿಸಿದಾಗ ರಸೀದಿಗೆ ಸಹಿ ಮಾಡಬೇಕಾಗಿತ್ತು. ಹೀಗೆ ಸಹಿ ಮಾಡಲು ರೆಸ್ಟೋರೆಂಟ್ ನಿಮಗೆ ಪೆನನ್ನೂ ಒದಗಿಸುತ್ತಿತ್ತು. ಆದರೆ ಈಗ ಹಾಗೆ ಮಾಡಬೇಕಾಗಿದ್ದರೆ ದಯವಿಟ್ಟು ನಿಮ್ಮದೇ ಆದ ಪೆನ್ ಉಪಯೋಗಿಸಿ. ಏಕೆಂದರೆ ಈ ಪೆನ್ನನ್ನು ನೀವು ಮುಟ್ಟುವ ಮುನ್ನ ಅದೆಷ್ಟು ಜನರು ಮುಟ್ಟಿರುತ್ತಾರೋ ಗೊತ್ತಿಲ್ಲ. ಹಾಗಾಗಿ ನಿಮ್ಮ ಜಾಗ್ರತೆ ನಿಮಗಿರಲು ಈ ಕ್ರಮ ಅನುಸರಿಸುವುದು ಅಗತ್ಯ.

7) ಆದಷ್ಟೂ ಬಾಗಿಲಿನ ಹಿಡಿಕೆಗಳನ್ನು ಮುಟ್ಟದಿರಿ

7) ಆದಷ್ಟೂ ಬಾಗಿಲಿನ ಹಿಡಿಕೆಗಳನ್ನು ಮುಟ್ಟದಿರಿ

ರೆಸ್ಟೋರೆಂಟ್ ಒಳಭಾಗದಲ್ಲಿ ಸಿಬ್ಬಂದಿ ನೈರ್ಮಲ್ಯವನ್ನು ಕಾಪಾಡಲು ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡಿಯೇ ಮಾಡುತ್ತಾರೆ. ಆದರೂ ಇವರ ಪ್ರಯತ್ನಗಳನ್ನು ಮೀರಿ ಆಗಮಿಸುವ ಅತಿಥಿಗಳು ಸ್ಪರ್ಶಿಸುವ ಕೆಲವು ಸಾಮಾನ್ಯ ವಸ್ತುಗಳು ಸೋಂಕಿಗೊಳಗಾಗುವ ಸಾಧ್ಯತೆ ಇರುತ್ತದೆ. ಈ ಸಾಮಾನ್ಯ ವಸ್ತುಗಳನ್ನು ಸೋಂಕುರಹಿತವಾಗಿಸಬೇಕಾದರೆ ಸಿಬ್ಬಂದಿ ಪ್ರತಿ ನಿಮಿಷ ನಿಮಿಷಕ್ಕೂ ಇವುಗಳನ್ನು ಸ್ವಚ್ಛಗೊಳಿಸುತ್ತಲೇ ಇರಬೇಕಾಗುತ್ತದೆ.

ಇದು ಖಂಡಿತಾ ವಾಸ್ತವಿಕವಲ್ಲ! ಹಾಗಾಗಿ ಅತಿಥಿಗಳಾಗಿ ಬಂದಿರುವ ನೀವು ನಿಮ್ಮ ಜಾಗ್ರತೆಯಲ್ಲಿರಬೇಕಾದರೆ ಆದಷ್ಟೂ ಸಾಮಾನ್ಯವಾಗಿ ಜನರು ಸ್ಪರ್ಶಿರುವ ವಸ್ತುಗಳನ್ನು ಸ್ಪರ್ಶಿಸುವುದನ್ನು ತಪ್ಪಿಸುವುದು ಅಗತ್ಯ. ಇದು ಹೋಟೆಲಿನ ಮುಖ್ಯದ್ವಾರವೇ ಆಗಿರಬಹುದು ಅಥವಾ ಸಾಮಾನ್ಯ ಶೌಚಾಲಯದ ಬಾಗಿಲ ಹಿಡಿಕೆಯೇ ಆಗಿರಬಹುದು.

8) ರೆಸ್ಟೋರೆಂಟಿನ ಮೆನು ಕಾರ್ಡ್ ಸ್ಪರ್ಶಿಸದಿರಿ

8) ರೆಸ್ಟೋರೆಂಟಿನ ಮೆನು ಕಾರ್ಡ್ ಸ್ಪರ್ಶಿಸದಿರಿ

ಸಾಮಾನ್ಯವಾಗಿ ಈಗ ಎಲ್ಲಾ ರೆಸ್ಟೋರೆಂಟುಗಳೂ ತಮ್ಮ ಮೆನು ಗಳನ್ನು ಆನ್ಲೈನ್ ಮೂಲಕ ಪ್ರಕಟಿಸುತ್ತವೆ. ಹಾಗಾಗಿ, ರಸ್ಟೋರೆಂಟ್ ಒದಗಿಸುವ ಮುದ್ರಿತ ಮೆನು ಕಾರ್ಡ್ ಸ್ಪರ್ಶಿಸಿ ಆಹಾರವನ್ನು ಆಯ್ದುಕೊಳ್ಳುವ ಬದಲು ಆನ್ಲೈನ್ ಮೂಲಕ ನೀವು ನಿಮ್ಮ ಆಹಾರವನ್ನು ಮುಂಚಿತವಾಗಿಯೇ ಆಯ್ದುಕೊಂಡು ಆ ಪ್ರಕಾರವೇ ಒದಗಿಸುವಂತೆ ಸಿಬ್ಬಂದಿಯನ್ನು ಕೇಳಿಕೊಳ್ಳಬಹುದು.

ಇದು ಸಾಧ್ಯವಾಗದೇ ಇದ್ದರೆ ಒಮ್ಮೆ ಬಳಸಿ ಎಸೆಯುವಂತಹ ಅಂದಿನ ದಿನದ ವಿಶೇಷಗಳನ್ನು ಮುದ್ರಿಸಿರುವ ಕಾಗದವನ್ನು ಕೇಳಿಕೊಳ್ಳಬಹುದು. ಕೇವಲ ಮೆನು ಕಾರ್ಡ್ ಮಾತ್ರವಲ್ಲ, ಸಾಮಾನ್ಯ ವಸ್ತುಗಳಾದ ಉಪ್ಪು ಮತ್ತು ಕಾಳುಮೆಣಸಿನ ಬಾಟಲಿಗಳು ಇತ್ಯಾದಿ ವಸ್ತುಗಳನ್ನುಸ್ಪರ್ಶಿಸುವುದನ್ನೂ ತಪ್ಪಿಸಿ.

9) ಒಂದು ವೇಳೆ ನಿಮಗೆ ಅಲ್ಲಿ ಅಸಹನೀಯವೆನಿಸಿದರೆ ಸುಮ್ಮನಿರದಿರಿ

9) ಒಂದು ವೇಳೆ ನಿಮಗೆ ಅಲ್ಲಿ ಅಸಹನೀಯವೆನಿಸಿದರೆ ಸುಮ್ಮನಿರದಿರಿ

ರೆಸ್ಟೋರೆಂಟ್ ಮೂಲತಃ ಒಂದು ವಾಣಿಜ್ಯ ಕೇಂದ್ರವಾಗಿದ್ದು ತಮಗೆ ಒದಗಿಸಲಾಗಿರುವ ಕಟ್ಟುಪಾಡುಗಳೊಂದಿಗೇ ಆದಷ್ಟೂ ತಮ್ಮ ಗ್ರಾಹಕರಿಗೆ ಪರಿಪೂರ್ಣ ಸೇವೆ ಒದಗಿಸಿ ಆದಾಯ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿರುತ್ತವೆ. ಹಾಗಾಗಿ, ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿರಬಹುದು. ಅಲ್ಲದೇ ನೀವು ನಿರೀಕ್ಷಿಸಿದಷ್ಟು ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿರದೆಯೂ ಇರಬಹುದು.

ಉದಾಹರಣೆಗೆ ಪರಿಚಾರಕರು ಒಬ್ಬರಿಂದ ಒಬ್ಬರಿಗೆ ಕಾಯ್ದುಕೊಳ್ಳಬೇಕಾದ ಅಂತರವನ್ನು ಕಾಯ್ದುಕೊಳ್ಳದೇ ಇರುವುದು, ಮೇಜುಗಳನ್ನು ಅತಿ ಹತ್ತಿರ ಇರಿಸಿರುವುದು, ಒಳಗಿರುವ ವ್ಯಕ್ತಿಗಳಲ್ಲಿ ಯಾರೋ ಒಬ್ಬರು ಸತತವಾಗಿ ಕೆಮ್ಮುತ್ತಿರುವುದು ಅಥವಾ ಸೀನುತ್ತಿರುವುದನ್ನು ನಿಮ್ಮ ಗಮನಕ್ಕೆ ಬರಬಹುದು. ಒಟ್ಟಾರೆಯಾಗಿ ನೀವು ಅಲ್ಲಿರುವ ಸಮಯದಲ್ಲಿ ನಿಮಗೆ ಯಾವುದಾದರೂ ಅಸಹನೀಯ ಎಂಬ ಭಾವನೆ ಮೂಡಿದರೆ ಸುಮ್ಮನಿರದಿರಿ. ಈ ಬಗ್ಗೆ ಸೂಕ್ತ ಸಮರ್ಥನೆಯನ್ನು ಕೇಳಿ. ಸಾಧ್ಯವಾದರೆ ನಿಮ್ಮ ಸ್ಥಳವನ್ನು ಬೇರೆಡೆಗೆ ಸ್ಥಳಾಂತರಿಸಲು ವಿನಂತಿಸಿಕೊಳ್ಳಿ.

ಹೊರಗಡೆ ತೆರೆದ ಅಂಗಳದಲ್ಲಿಯಾದರೂ ಸರಿ. ಯಾರಾದರೂ ಕೆಮ್ಮುವಾಗ ಅಥವಾ ಸೀನುವಾಗ ಹನಿಗಳು ಆರು ಅಡಿ [ಎರಡು ಮೀಟರ್] ಗಿಂತ ಹೆಚ್ಚು ಹರಡಬಹುದು ಎಂದು ತಜ್ಞರು ಈಗಾಗಲೇ ಎಚ್ಚರಿಸಿರುವ ಕಾರಣ ಕೆಮ್ಮುವ ಅಥವಾ ಸೀನುವ ಸದ್ದುಗಳು ಮೂಡಿದರೆ ಆ ಸ್ಥಳದಿಂದ ಆದಷ್ಟೂ ದೂರವಿರುವುದೇ ಒಳ್ಳೆಯದು.

10) ಅಪ್ಪಣೆಯಿಲ್ಲದೇ ಮೇಜು ಕುರ್ಚಿಗಳನ್ನು ಸ್ಥಳಾಂತರಿಸದಿರಿ

10) ಅಪ್ಪಣೆಯಿಲ್ಲದೇ ಮೇಜು ಕುರ್ಚಿಗಳನ್ನು ಸ್ಥಳಾಂತರಿಸದಿರಿ

ಕೆಲವು ಬಾರಿ ನಿಮಗೆ ನೀವು ಕುಳಿತ ಮೇಜು ಅಥವಾ ಕುರ್ಚಿಗಳನ್ನು ಕೊಂಚ ಬದಲಿಸಬೇಕೆಂದು ನಿಮಗೆ ಅನ್ನಿಸಬಹುದು. ಆದರೆ ನೀವು ಇದನ್ನು ಸರ್ವಥಾ ಮಾಡಬಾರದು. ಬದಲಿಗೆ ಹೋಟೆಲಿನ ಮ್ಯಾನೇಜರ್ ಅಥವಾ ಜವಾಬ್ದಾರಿಯುತ ಹುದ್ದೆಯ ಸಿಬ್ಬಂದಿಗೆ ತಿಳಿಸುವುದು ಒಳ್ಳೆಯದು. ಸಾಮಾನ್ಯವಾಗಿ ಪ್ರತಿ ರೆಸ್ಟೋರೆಂಟುಗಳೂ ಸರ್ಕಾದ ಆದೇಶಕ್ಕನುಗುಣವಾಗಿಯೇ ಪೀಠೋಪಕರಣಗಳನ್ನು ಮರುಹೊಂದಿಸಿರುತ್ತಾರೆ. ಒಂದು ವೇಳೆ ನೀವು ಏನಾದರೂ ಬದಲಿಸಬೇಕಿದ್ದರೆ ಇದು ಸರ್ಕಾರದ ನೀತಿಗಳಿಗೆ ವಿರುದ್ದವಾಗಿದ್ದರೆ ನಿಮ್ಮ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದೇ ಹೋಗಬಹುದು. ಹಾಗಾಗಿ ನಿಮಗೆ ಬೇಕಿರುವುದನ್ನು ಸಿಬ್ಬಂದಿಯ ಮೂಲಕವೇ ಕೇಳಿಕೊಳ್ಳಿ.

11) ಆಹಾರವನ್ನು ಹಂಚಿಕೊಳ್ಳದಿರಿ

11) ಆಹಾರವನ್ನು ಹಂಚಿಕೊಳ್ಳದಿರಿ

ಒಂದು ವೇಳೆ ನೀವು ಹೆಚ್ಚಿನ ಆಹಾರವನ್ನು ತರಿಸಿ ಹಲವರು ಹಂಚಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಆಹಾರವನ್ನು ರುಚಿ ನೀಡುವುದು, ಅರ್ಧ ಕುಡಿದ ಮಿಲ್ಕ್ ಶೇಕ್ ಇನ್ನೊಬ್ಬರು ಕುಡಿಯುವುದು, ಒಮ್ಡೆ ತಟ್ಟೆಯಲ್ಲಿ ಇಬ್ಬರು ಊಟ ಮಾಡುವುದು ಇದೆಲ್ಲಾ ಕೋವಿಡ್ ಸಾಂಕ್ರಾಮಿಕ ರೋಗ ಹಬ್ಬುವ ಮೊದಲ ಕಥೆಯಾಯಿತು. ಈಗ ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ಆಹಾರವನ್ನು ತರಿಸುವುದೇ ಒಳ್ಳೆಯ ಮತ್ತು ಸೂಕ್ತ ಕ್ರಮವಾಗಿದೆ. ಅಲ್ಲದೇ ಕುಟುಂಬದವರ ಹೊರತಾಗಿ ಇತರರೊಂದಿಗೆ ಊಟ ಮಾಡುವಾಗ ಆದಷ್ಟೂ ಹೆಚ್ಚಿನ ಜಾಗರೂಕತೆ ವಹಿಸಬೇಕು. ಒಂದು ವೇಳೆ ಹೀಗೆ ಹೊರಗೆ ಊಟಕ್ಕೆ ಹೋಗುವುದು ಆಪಾಯಕ್ಕೆ ಆಹ್ವಾನ ಎಂದು ನಿಮಗನ್ನಿಸಿದರೆ ಮನೆಯಲ್ಲಿಯೇ ಊಟ ಮಾಡುವುದು ಅತ್ಯುತ್ತಮ.

12) ಶೌಚಾಲಯವನ್ನು ಬಳಸದಿರಿ

12) ಶೌಚಾಲಯವನ್ನು ಬಳಸದಿರಿ

Physics of Fluids ಎಂದ ಮಾಧ್ಯಮದಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯದ ಮೂಲಕ ಶೌಚಾಲಯದಲ್ಲಿ ನೀರು ಹಾಯಿಸಿದ ನಂತವೂ ಇದರಿಂದ ಸಿಡಿದ ಹನಿಗಳು ಸುಮಾರು ಮೂರು ಅಡಿ ಗಾಳಿಯಲ್ಲಿ ಹರಡಿರುತ್ತವೆ ಎಂದು ತಿಳಿದುಬಂದಿದೆ. ಈ ಹನಿಗಳಲ್ಲಿ ಮಾರಕ ಕೊರೋನಾ ವೈರಸ್ ಗಳೂ ಇರುವುದನ್ನು ಕಂಡುಕೊಳ್ಳಲಾಗಿದೆ. ಶೌಚಾಲಯದ ಸುತ್ತಲ ಈ ಮೂರು ಅಡಿ ವ್ಯಾಸದಲ್ಲಿ ಹನಿಗಳು ಚೆದುರಿರುವುದನ್ನು "toilet plume" ಎಂದು ಕರೆಯುತ್ತಾರೆ. ಇದು ಕೇವಲ ಶೌಚಾಲಯ ಮಾತ್ರವಲ್ಲ, ಸೋಂಕು ಪೀಡಿತ ವ್ಯಕ್ತಿ ಒಂದು ವೇಳೆ ಬಯಲಿನಲ್ಲಿ ಮಲವಿಸರ್ಜನೆ ಮಾಡಿದ್ದರೆ ಈ ಜಾಗದ ಸುತ್ತಲೂ ಈ ಸೋಂಕಿನ ಗಾಳಿ ಆವರಿಸಿರಬಹುದು. ಹಾಗಾಗಿ, ಅತ್ಯಂತ ಅನಿವಾರ್ಯವಾಗದ ಹೊರತು ರೆಸ್ಟೋರೆಂಟಿನ ಶೌಚಾಲಯವನ್ನು ಬಳಸದಿರಿ. ಕೇವಲ ರೆಸ್ಟೋರೆಂಟಿನ ಮಾತ್ರವಲ್ಲ, ಸಾರ್ವಜನಿಕ ಶೌಚಾಲಯವನ್ನೂ ಬಳಸದೇ ಇರುವುದೇ ಉತ್ತಮ.

13) ಒಂದು ವೇಳೆ ಬಳಸಲೇಬೇಕಾಗಿದ್ದರೆ ಕಾಲಿನಿಂದ ಫ್ಲಶ್ ಮಾಡದಿರಿ

13) ಒಂದು ವೇಳೆ ಬಳಸಲೇಬೇಕಾಗಿದ್ದರೆ ಕಾಲಿನಿಂದ ಫ್ಲಶ್ ಮಾಡದಿರಿ

ಶೌಚಾಲಯವನ್ನು ಉಪಯೋಗಿಸಿದ ಬಳಿಕ ಫ್ಲಶ್ ಮಾಡಲು ಕೈಗಳನ್ನು ಉಪಯೋಗಿಸುವ ಬದಲು ಕಾಲಿನಿಂದ ಫ್ಲಶ್ ಮಾಡುವ ಅಭ್ಯಾಸವನ್ನು ಕೆಲವರು ಹೊಂದಿರುತ್ತಾರೆ. ಅದರೆ ವಾಸ್ತವದಲ್ಲಿ ಹೀಗೆ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆಯನ್ನು ಹೆಚ್ಚಿಸಿದಂತಾಗುತ್ತದೆ. ಶೌಚಾಲಯದ ನೆಲದಲ್ಲಿ ಕೊರೋನಾ ಸಹಿತ ಇನ್ನೂ ಹಲವು ಬಗೆಯ ಕ್ರಿಮಿಗಳಿರಬಹುದು. ಇವುಗಳು ಪಾದರಕ್ಷೆಗೆ ಅಂಟಿಕೊಂಡಿದ್ದು ಫ್ಲಶ್ ಮಾಡುವ ಹಿಡಿಕೆಗೆ ಅಂಟಿಕೊಳ್ಳುತ್ತವೆ ಮತ್ತು ಪಾದರಕ್ಷೆಯಿಂದ ಸೋರಿದ ಹನಿಗಳು ಇತರ ಭಾಗಗಳ ಮೇಲೂ ಚೆಲ್ಲಬಹುದು. ಇದನ್ನು ಸ್ಪರ್ಶಿಸುವ ಯಾರಿಗೂ ಸೋಂಕು ತಗಲಬಹುದು.

ಹಾಗಾಗಿ ಕೈಯಿಂದಲೇ ಸಾಮಾನ್ಯವಾದ ಕ್ರಮದಲ್ಲಿ ಫ್ಲಶ್ ಮಾಡಿ ಬಳಿಕ ಸ್ವಚ್ಛವಾಗಿ ಕೈಗಳನ್ನು ತೊಳೆದುಕೊಳ್ಳುವುದೇ ಉತ್ತಮ. ಫ್ಲಶ್ ಮಾಡಲು ಟಿಶ್ಯೂ ಪೇಪರ್ ನಿಂದ ಈ ಹಿಡಿಕೆಯನ್ನು ಒತ್ತಿ ಬಳಿಕ ಕಸದ ಬುಟ್ಟಿಗೆ ಎಸೆಯುವುದೂ ಒಳ್ಳೆಯ ಕ್ರಮ. ಹಿಡಿಕೆಯನ್ನು ಹಿಡಿಯಲು ಟಾಯ್ಲೆಟ್ ಟಿಶ್ಯೂ ಬಳಸಿ, ಸೋಪ್ ಮತ್ತು ನೀರಿನಿಂದ ನಿಮ್ಮ ಕೈಗಳನ್ನು ತೊಳೆಯಿರಿ ಬಳಿಕ ಬಾಗಿಲನ್ನು ತಳ್ಳಿ ಹೊರಬರುವಾಗಲೂ ಹಿಡಿಕೆಯನ್ನು ಹಿಡಿಯಲು ಪೇಪರ್ ಟವೆಲ್ ಬಳಸಿ.

English summary

Dont Do These Things at Reopened Restaurants

Here we are discussing about Dont Do These Things In Reopened Restaurants. 13 mistakes that could put your health—and the health of others—at risk. Read more.
X
Desktop Bottom Promotion