For Quick Alerts
ALLOW NOTIFICATIONS  
For Daily Alerts

ಈ ಭಾರತೀಯ ಸಂಪ್ರದಾಯಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ

|

ಹಿರಿಯರು ಮಾಡುವ ಎಷ್ಟೋ ಕಾರ್ಯಗಳನ್ನು ಕಿರಿಯರು ಗೊಡ್ಡು ಸಂಪ್ರದಾಯವೆಂಬಂತೆ ಮೂಗು ಮುರಿಯುತ್ತಾರೆ. ಅತಿಯಾದ ಮಡಿಯನ್ನು ಈಗ ಯಾರೂ ಇಷ್ಟಪಡುವುದಿಲ್ಲ.

ಹೊರಗಡೆ ಹೋಗಿ ಬಂದ ತಕ್ಷಣ ಕಾಲುಕೈ ತೊಳೆದು ಒಳಗೆ ಬರಬೇಕು, ಬಂದ ತಕ್ಷಣ ಬಟ್ಟೆಗಳನ್ನು ಬದಲಾಯಿಸಬೇಕು ಊಟ ಮಾಡುವಾಗ ನೆಲದಲ್ಲಿ ಕೂತು ಊಟ ಮಾಡಬೇಕು ಈ ರೀತಿಯಲ್ಲಾ ಹೇಳಿವಾಗ ಈಗಿನವರು ಅವುಗಳನ್ನು ಕೇಳುವುದು ಅಷ್ಟಾಗಿ ಇಷ್ಟಪಡುವುದಿಲ್ಲ.

Indian Culture

ಆದರೆ ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ನಮ್ಮ ಹಿರಿಯರು ಮಾಡುವ ಕೆಲವೊಂದು ಸಂಪ್ರದಾಯ, ಆಚರಣೆಗಳು ವೈಜ್ಞಾನಿಕ ದೃಷ್ಟಿಯಿಂದಲೂ ತುಂಬಾ ಆರೋಗ್ಯಕರವಾಗಿರುತ್ತದೆ. ಆದರೆ ನಾವು ಆ ನಿಟ್ಟಿನಲ್ಲಿ ಯೋಚಿಸಿರುವುದಿಲ್ಲ.

ಇಲ್ಲಿ ನಾವು ನಮ್ಮ ಹಿರಿಯರು ಪಾಲಿಸಲು ಹೇಳುವ ಕೆಲವೊಂದು ಸಂಪ್ರದಾಯಗು ಹಾಗೂ ಅವುಗಳನ್ನು ಪಾಲಿಸುವುದರಿಂದ ಆಗುವ ಪ್ರಯೋಜನಗಳೇನು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

 ಸ್ವಚ್ಛತೆ

ಸ್ವಚ್ಛತೆ

ಬೆಳಗ್ಗೆ ಎದ್ದ ತಕ್ಷಣ ಮನೆಯೆಲ್ಲಾ ಗುಡಿಸಿ ಸ್ವಚ್ಛ ಮಾಡಬೇಕು, ಮನೆಯ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿಡಬೇಕು. ಆಹಾರ ಸೇವಿಸುವ ಮುನ್ನ ಕೈ ತೊಳೆಯಬೇಕು, ಒಂದೇ ಪ್ಲೇಟ್‌ನಲ್ಲಿ ಆಹಾರವನ್ನು ಸೇವಿಸಬೇಡಿ, ಒಬ್ಬರು ತಿಂದ ಆಹಾರ ಸೇವಿಸಬೇಡಿ, ಬಾತ್‌ ರೂಂಗೆ ಹೋಗಿ ಬಂದ ಬಳಿಕ ಕೈಗಳನ್ನುತೊಳೆಯಿರಿ ಎಂದೆಲ್ಲಾ ಹೇಳುತ್ತಾರೆ. ಆದರೆ ಇವೆಲ್ಲಾ ಮೊದಲು ನೋಡಿದಾಗ ಅತಿಯಾದ ಮಡಿ, ಮೈಲಿಗೆ ಎಂದು ಯೋಚಿಸುತ್ತಿದ್ದರು. ಆದರೆ ಈಗ ನೋಡಿದರೆ ಆಚರಣೆಯ ಹಿಂದಿರುವ ಅರ್ಥ ತಿಳಿಯುತ್ತದೆ ಅಲ್ಲವೇ?

ಆಯುರ್ವೇದ

ಆಯುರ್ವೇದ

ಹಿರಿಯರು ಸಣ್ಣ ಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗಲು ಇಚ್ಛೆ ಪಡುವುದಿಲ್ಲ. ಬದಲಿಗೆ ಮನೆಯಲ್ಲಿಯೇ ಔಷಧ ಮಾಡುತ್ತಾರೆ. ಆದ್ದರಿಂದಲೇ ನಮ್ಮಲ್ಲಿ ಆಯುರ್ವೇದ ಔಷಧಿಗೆ ತುಂಬಾ ಪ್ರಾಶಸ್ತ್ಯ. ಈಗಲೂ ಅಷ್ಟೇ ಕೊರೊನಾ ತಡೆಗಟ್ಟಲು ಆಯುಷ್ ನೀಡಿರುವ ಸಲಹೆ ಪಾಲಿಸುವಂತೆ ಪ್ರಧಾನಿ ಮಂತ್ರಿಗಳು ಸೂಚಿಸಿದ್ದಾರೆ. ಕೊರೊನಾ ಬಾರದಂತೆ ತಡೆಗಟ್ಟಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಜನರು ಕೂಡ ಕಷಾಯ ಮಾಡಿ ಸೇವಿಸುತ್ತಿದ್ದಾರೆ.

ಸಂಬಾರ ಪದಾರ್ಥಗಳು

ಸಂಬಾರ ಪದಾರ್ಥಗಳು

ನಮ್ಮ ಭಾರತೀಯರ ಅಡುಗೆಯಲ್ಲಿ ಸಂಬಾರ ಪದಾರ್ಥಗಳದ್ದೇ ಮೇಲುಗೈ. ಆಹಾರ ರುಚಿ ಹೆಚ್ಚಿಸುವುದೇ ಈ ಆಹಾರ ಪದಾರ್ಥಗಳು. ಸಂಬಾರ ಪದಾರ್ಥಗಳಾದ ಅರಿಶಿಣ, ಚಕ್ಕೆ, ಲವಂಗ, ಕಾಳುಮೆಣಸು ಇವುಗಳಲ್ಲಿ ರುಚಿ ಹೆಚ್ಚಿಸುವ ಗುಣ ಮಾತ್ರವಲ್ಲ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವೂ ಇದೆ.

ಸಮತೋಲನದ ಆಹಾರ ಸೇವನೆ

ಸಮತೋಲನದ ಆಹಾರ ಸೇವನೆ

ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ, ಮಿತಿಯಾದ ಆಹಾರ ತಿನ್ನಬೇಕೆಂದು ಹಿರಿಯರು ಹೇಳುತ್ತಾರೆ. ಇದು ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು. ನಾವೆಲ್ಲಾ ರೆಸ್ಟೋರೆಂಟ್‌ಗೆ ಹೋದಾಗ ಅಥವಾ ಪಾರ್ಟಿ ಮಾಡುವಾಗ ಸೇವಿಸುವ ಆಹಾರವೇನು, ಎಷ್ಟು ತಿನ್ನುತ್ತಿದ್ದೇವೆ ಎಂದು ಗಮನಿಸುವುದೇ ಇಲ್ಲ, ಪರಿಣಾಮ ಚಿಕ್ಕ ಪ್ರಾಯದಲ್ಲಿಯೇ ಬೊಜ್ಜು ಸಮಸ್ಯೆ ಕಾಡುವುದು, ನಂತರ ಒಂದೊಂದೇ ಸಮಸ್ಯೆ ಕಾಡುವುದು.

 ನೆಲದಲ್ಲಿ ಕೂತು ತಿನ್ನಬೇಕು?

ನೆಲದಲ್ಲಿ ಕೂತು ತಿನ್ನಬೇಕು?

ಈಗ ಎಲ್ಲರೂ ಡೈನಿಂಗ್ ಟೇಬಲ್ ಮೇಲೆ ತಿನ್ನುತ್ತಾರೆ. ಆದರೆ ಹಿಂದೆ ಎಲ್ಲರೂ ನೆಲದಲ್ಲಿ ಕೂತು ತಿನ್ನುತ್ತಿದ್ದರು. ನೆಲದಲ್ಲಿ ಕೂತು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ, ಇದರಿಂದ ಆರೋಗ್ಯ ವೃದ್ಧಿಯಾಗುವುದು.

English summary

Don't Neglect these Indian Practices and Lifestyles

Here are why we should not neglect Indian practice, that is worth following, read on
X
Desktop Bottom Promotion