For Quick Alerts
ALLOW NOTIFICATIONS  
For Daily Alerts

ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್‌ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ

|

2020ರಲ್ಲಿ ಇಡೀ ವಿಶ್ವವನ್ನೇ ನಡುಗಿಸಿದ ಕೊರೊನಾವೈರಸ್‌ ಅಬ್ಬರ 2021ರಲ್ಲಿ ಸ್ವಲ್ಪ ಕಡಿಮೆಯಾಗಿದೆ. ಜನರಿಗೆ ಈ ವೈರಸ್ ಕುರಿತು ಆತಂಕ ಕಡಿಮೆಯಾಗುತ್ತಾ ಬಂದಿದೆ. ಕೊರೊನಾವೈರಸ್ ಸೋಂಕಿತರ ಸಂಖ್ಯೆ ಕೂಡ ಗಮನಾರ್ಹವಾಗಿ ಇಳಿಮುಖವಾಗುತ್ತಿದ್ದು, ಇವುಗಳನ್ನು ನೋಡಿದಾಗ ಇನ್ನು ಸ್ವಲ್ಪ ತಿಂಗಳಿನಲ್ಲಿ ಕೊರೊನಾವೈರಸ್ ಆತಂಕವಿಲ್ಲದೆ ಆರಾಮಾಗಿರಬಹುದು ಎಂದು ಎಲ್ಲರಿಗೆ ಅನಿಸಲಾರಂಭಿಸಿದೆ. ಆದರೆ ತಜ್ಞರು ಕೊರೊನಾವೈರಸ್‌ ಆತಂಕ ಅಷ್ಟು ಸುಲಭವಾಗಿ ಹೋಗಲ್ಲ ಎಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಕೊರೊನಾವೈರಸ್‌ನ ರೂಪಾಂತಾರ ಲಸಿಕೆ ಲಭ್ಯವಾದ ಬಳಿಕವೂ ಮುಂದೆ ಕಾಣಲಿದೆ ಎಂದಿದೆ.

ಹೆಲ್ತ್‌ ಎಮೆರ್ಜೆನ್ಸಿ ಪ್ರೋಗ್ರಾಂನಲ್ಲಿ ವರ್ಚ್ಯೂಯಲ್ ಪ್ರೆಸ್‌ ಕಾನ್ಫೆರೆನ್ಸ್ ಮಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ರಯಾನ್ ವಿಶ್ವವೂ ಕೊರೊನಾವೈರಸ್‌ ಅನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ತೊಡಗಿದೆ ಎಂಬುವುದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.

ಕೋವಿಡ್ 19 ಅಂತ್ಯವಾಗುತ್ತಿದೆಯೇ?

ಕೋವಿಡ್ 19 ಅಂತ್ಯವಾಗುತ್ತಿದೆಯೇ?

ನಾವು ಕೊರೊನಾ ವೈರಸ್‌ ಹೆಚ್ಚಿನ ಜನರಿಗೆ ತಗುಲಿ ಸಾಯುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಭವಿಷ್ಯ ರೂಪಾಂತಾರ ಕೊರೊನಾವೈರಸ್ ಕಾಣಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಈಗ ಲಸಿಕೆ ಇರುವುದರಿಂದ ಇದು ಹೆಚ್ಚೆಚ್ಚು ಹರಡುವುದನ್ನು ತಡೆಗಟ್ಟಬಹುದಾಗಿದೆ, ಆದರೆ ಕೊರೊನಾವೈರಸ್‌ ಅನ್ನು ಸಂಪೂರ್ಣ ಇಲ್ಲವಾಗಿಸಲು ಲಸಿಕೆಗೆ ಸಾಧ್ಯವಿಲ್ಲ. ಈ ವೈರಸ್‌ ಆತಂಕ ಇದ್ದೇ ಇದೆ.

2021ರಲ್ಲಿ ಕೊರೊನಾವೈರಸ್‌ನಿಂದ ಮುಕ್ತಿ ಸಿಗಬಹುದೇ?

2021ರಲ್ಲಿ ಕೊರೊನಾವೈರಸ್‌ನಿಂದ ಮುಕ್ತಿ ಸಿಗಬಹುದೇ?

ಈ ಕುರಿತು ನಿರೀಕ್ಷೆ ಮಾಡಬೇಡಿ ಎಂದಿದ್ದಾರೆ ರಯಾನ್. ಅವರ ಕಾಯಿಲೆಗಳ ಇತಿಹಾಸದ ಬಗ್ಗೆ ಹೇಳುತ್ತಾ ಚಿಕನ್‌ ಪಾಕ್ಸ್ ಇದನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿದೆಯೇ, ಆದರೆ ನಾವು ಅದನ್ನು ನಿಯಂತ್ರಿಸುವ ಶಕ್ತಿ ಹೊಂದಿದ್ದೇವೆ. ಅದೇ ರೀತಿ ಕೊರೊನಾವೈರಸ್‌ ನಿಯಂತ್ರಿಸಬಹುದೇ ಹೊರತು ವಿಶ್ವದಿಂದ ಸಂಪೂರ್ಣವಾಗಿ ಇಲ್ಲವಾಗಿಸುವುದು 2021ರಲ್ಲಿ ಸಾಧ್ಯವಿಲ್ಲ ಎಂದಿದ್ದಾರೆ.

100 ಮಿಲಿಯನ್‌ ಜನರಿಗೆ ತಗುಲಿದ ಕೊರೊನಾ ಸೋಂಕು

100 ಮಿಲಿಯನ್‌ ಜನರಿಗೆ ತಗುಲಿದ ಕೊರೊನಾ ಸೋಂಕು

ಜಗತ್ತಿನಲ್ಲಿ ಕೊರೊನಾ ಸೋಂಕು ತಗುಲಿದವರ ಸಂಖ್ಯೆ 100 ಮಿಲಿಯನ್ ತಲುಪಿದೆ. ಇದೀಗ ಸಕ್ರಿಯ ಕೇಸ್‌ಗಳ ಸಂಖ್ಯೆ 99,660,483 ಇದೆ, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 2,138,299 ತಲುಪಿದೆ.

ಕೊರೊನಾವೈರಸ್‌ ವಿರುದ್ಧ ಭಾರತದ ಹೋರಾಟ

ಕೊರೊನಾವೈರಸ್‌ ವಿರುದ್ಧ ಭಾರತದ ಹೋರಾಟ

ಭಾರತದಲ್ಲಿ ಕೊರೊನಾವೈರಸ್‌ ಸಂಖ್ಯೆ ತುಂಬಾ ಇಳಿಮುಖವಾಗಿದ್ದು ಇದೀಗ 9,102 ಕೇಸ್‌ಗಳು ಸಕ್ರಿಯವಾಗಿದೆ. ಭಾರತದಲ್ಲಿ ಇದುವರೆಗೆ 1,06,76,838 ಜನರಿಗೆ ಕೊರೊನಾ ಸೋಂಕು ತಗುಲಿದೆ. 1,53,587 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಕೇಂದ್ರ ಆರೋಗ್ಯ ಇಲಾಖೆಯ ಮಂಗಳವಾರದ ಅಂಕಿಅಂಶ ತಿಳಿಸಿದೆ.

ಕೊರೊನಾ ಸೋಂಕಿನಿಂದ ಬಲಿಯಾದವರಲ್ಲಿ ಶೇ.70ರಷ್ಟು ಜನರು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂಬುವುದು ತಿಳಿದು ಬಂದಿದೆ.

ಭಾರತದಲ್ಲಿ ನೀಡಲಾಗುತ್ತಿರುವ ಕೊರೊನಾ ಲಸಿಕೆಗಳು

ಭಾರತದಲ್ಲಿ ನೀಡಲಾಗುತ್ತಿರುವ ಕೊರೊನಾ ಲಸಿಕೆಗಳು

ಭಾರತದಲ್ಲಿ ಇದೀಗ ಕೊವಾಕ್ಸಿನ್ ಹಾಗೂ ಕೋವಿಡ್‌ ಶೀಲ್ಡ್ ಎಂಬ ಕೊರೊನಾ ಲಸಿಕೆ ನೀಡುತ್ತಿದ್ದು, ಈ ಲಸಿಕೆಗಳು ಪರಿಣಾಮಕಾರಿಯಾಗಿರುವುದರಿಂದ ವಿಶ್ವದ ಇತರ ಭಾಗದಿಂದಲೂ ಈ ಲಸಿಕೆಗೆ ಬೇಡಿಕೆಯಿದೆ. ಕೆಲವರಲ್ಲಿ ಈ ಲಸಿಕೆ ಅಡ್ಡಪರಿಣಾಮ ಬೀರಿದರೂ ಇದರಿಂದ ಸಾವು ಸಂಭವಿಸುವ ಸಾಧ್ಯತೆ ಬಲು ಅಪರೂಪ ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ. ಅವರು ಲಸಿಕೆ ಪಡೆಯುವುದನ್ನು ಟಿವಿಯಲ್ಲಿ ಲೈವ್ ತೋರಿಸಲಾಗಿತ್ತು. ಲಸಿಕೆ ಪಡೆದ ಬಳಿಕ ಮಾರನೇಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನಗೆ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ತಿಳಿಸಿದರು.

ಕೆಲವರಲ್ಲಿ ಕೊರೊನಾ ಲಸಿಕೆ ಬಗ್ಗೆ ಆತಂಕವಿದೆ, ಆದರೆ ಈ ಲಸಿಕೆ ಬಗ್ಗೆ ಆತಂಕ ಬೇಡ, ಇದನ್ನು ಪಡೆಯುವುದರಿಂದ ನಿಮ್ಮ ರಕ್ಷಣೆ ಮಾಡುವುದರ ಜೊತೆಗೆ ನಿಮ್ಮ ಆಪ್ತರನ್ನೂ ಕೊರೊನಾದಿಂದ ಪಾರು ಮಾಡಬಹುದು.

ಭಾರತದಲ್ಲಿ ಸದ್ಯಕ್ಕೆ ಈ ಲಸಿಕೆ ಆರೋಗ್ಯ ಕಾರ್ಯಕರ್ತರಿಗೆ ಹಾಗೂ 50 ವರ್ಷ ಮೇಲ್ಪಟ್ಟವರಿಗಷ್ಟೇ ಲಭ್ಯವಿದೆ.

English summary

Don’t Expect To Get Rid Of Covid-19 by 2021: WHO Warns Of Continued Transmission

Don’t expect to get rid of covid-19 by 2021: WHO warns of continued transmission,read on.
Story first published: Wednesday, January 27, 2021, 17:29 [IST]
X
Desktop Bottom Promotion