For Quick Alerts
ALLOW NOTIFICATIONS  
For Daily Alerts

3ನೇ ಅಲೆಯ ಆತಂಕಕ್ಕೆ ಕಾರಣವಾದ ಡೆಲ್ಟಾ ಪ್ಲಸ್‌: ಲಕ್ಷಣಗಳೇನು? ಲಸಿಕೆಯಿಂದ ಇದನ್ನು ತಡೆಗಟ್ಟಬಹುದೇ?

|

ಕೊರೊನಾ 2ನೇ ಅಲೆ ಮುಗೀತಾ ಬಂದಿದೆ, ಇನ್ನೇನು ನೆಮ್ಮದಿಯಾಗಿ ಓಡಾಡಬಹುದು, ನಮ್ಮ ಕೆಲಸ, ಕಾರ್ಯಗಳಲ್ಲಿ ತೊಡಗಬಹುದು ಎಂದು ಜನ ಅಂದುಕೊಳ್ಳುವಷ್ಟರಲ್ಲಿ ಡೆಲ್ಟಾ ಪ್ಲಸ್‌ ರೂಪಾಂತರ ವೈರಸ್‌ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.

ಅತ್ಯಂತ ಸೋಂಕಿನ ಲಕ್ಷಣ ಹೊಂದಿರುವ ಡೆಲ್ಟಾ ಪ್ಲಸ್‌ ವೈರಸ್‌ 21 ಕೇಸ್‌ಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದು ಕೇರಳ, ಕರ್ನಾಟಕ, ಮಧ್ಯಪ್ರದೇಶದಲ್ಲಿ ಈ ಡೆಡ್ಲಿ ವೈರಸ್ ಪತ್ತೆಯಾಗಿದೆ. ವಿಶ್ವದಲ್ಲಿ ಇದುವರೆಗೆ 200 ಕೇಸ್‌ಗಳು ಪತ್ತೆಯಾಗಿದ್ದು ಅದರಲ್ಲಿ 30 ಕೇಸ್‌ಗಳಷ್ಟು ಭಾರತದಲ್ಲಿ ಪತ್ತೆಯಾಗಿರುವುದರಿಂದ ತುಂಬಾ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕಾಗಿದೆ.

ಡೆಲ್ಟಾ ಪ್ಲಸ್‌ ವೈರಸ್‌ ಕುರಿತು ಹೇಳುವುದಾದರೆ:

ಡೆಲ್ಟಾ ಪ್ಲಸ್‌ ವೈರಸ್‌ ಕುರಿತು ಹೇಳುವುದಾದರೆ:

* ಹೊಸ ಕೊರೊನಾವೈರಸ್ ತಳಿ ಡೆಲ್ಟಾ ಪ್ಲಸ್‌ ಡೆಲ್ಟಾ ಅಥವಾ B.1.617.2 ರೂಪಾಂತರವಾಗಿದೆ. ಇದು ಮೊದಲಿಗೆ ಭಾರತದಲ್ಲಿ ಪತ್ತೆಯಾಯಿತು. ಭಾರತದಲ್ಲಿ 2ನೇ ಅಲೆಗೆ ಕಾರಣವಾದ ರೂಪಾಂತರ ವೈರಸ್‌ ಡೆಲ್ಟಾ ಪ್ಲಸ್‌ ಆಗಿದೆ.

* ಇದು ಈಗಾಗಲೇ 9 ದೇಶಗಳಲ್ಲಿ ಪತ್ತೆಯಾಗಿದ್ದು ಅವುಗಳೆಂದರೆ: ಭಾರತ, ಯುಕೆ, ಪೋರ್ಚುಗಲ್, ಜಪಾನ್, ನೇಪಾಲ್, ಚೀನಾ, ರಷ್ಯಾ, ಸ್ವಿಜರ್ಲ್ಯಾಂಡ್, ಪೋಲಾಂಡ್ ದೇಶಗಳಲ್ಲಿ ಈ ವೈರಸ್ ಪತ್ತೆಯಾಗಿದೆ.

* ಭಾರತದಲ್ಲಿ ಮಹಾರಾಷ್ಟ್ರದ ರತನ್‌ಗಿರಿಯಲ್ಲಿ9 ಕೇಸ್ ಪತ್ತೆಯಾದರೆ, ಜಲ್ಗಾಂವ್‌ನಲ್ಲಿ 7, ಮುಂಬಯಿಯಲ್ಲಿ 2, 1 ಪಾಲ್ಘರ್ ನಲ್ಲಿ, ಥಾಣೆ, ಸಿಂಧುದುರ್ಗಾ ಜಿಲ್ಲೆಗಳಲ್ಲಿ ಪತ್ತೆಯಾಗಿದೆ.

* ಕೇರಳ ಜಿಲ್ಲೆಯ ಪಾಲ್ಕಾಡ್ ಹಾಗೂ ಪಥನಮತ್ತಟ್ಟ ಹಾಗೂ ಕಡ್ಪರದ ನಾಲ್ಕು ವರ್ಷದ ಹುಡುಗನ ಸ್ಯಾಂಪಲ್‌ ಸಂಗ್ರಹಿಸಿಲಾಗಿದೆ.

* ಮಧ್ಯಪ್ರದೇಶದಲ್ಲಿ 2 ಡೋಸ್‌ ಲಸಿಕೆ ಪಡೆದ 65 ವರ್ಷದ ಮಹಿಳೆಯಲ್ಲಿ ಈ ವೈರಸ್‌ ಪತ್ತೆಯಾಗಿದ್ದು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ 5 ಜನರಲ್ಲಿ ಈ ರೂಪಾಂತರ ವೈರಸ್ ಪತ್ತೆಯಾಗಿದ್ದು ಅದರಲ್ಲಿ ನಾಲ್ಕು ಜನರು ಲಸಿಕೆ ಪಡೆದವರು ಚೇತರಿಸಿಕೊಂಡರೆ ಲಸಿಕೆ ಪಡೆಯದೇ ಇರುವವರು ಸಾವನ್ನಪ್ಪಿದ್ದಾರೆ.

* ಕರ್ನಾಟಕದ ಮೈಸೂರಿನಲ್ಲಿ ಒಂದು ಕೇಸ್ ಪತ್ತೆಯಾಗಿದೆ.

ಡೆಲ್ಟಾ ಪ್ಲಸ್‌ ಎಂದರೇನು?

ಡೆಲ್ಟಾ ಪ್ಲಸ್‌ ಎಂದರೇನು?

ಭಾರತದಲ್ಲಿ 2ನೇ ಅಲೇ ತುಂಬಾ ಭೀಕರ ಸ್ವರೂಪದಲ್ಲಿ ಕಾಡಿತ್ತು, ತಜ್ಞರು 2ನೇ ಅಲೆಯ ಬಳಿಕ 3ನೇ ಅಲೆ ಕೂಡ ಬರಲಿದೆ ಎಂದು ಈಗಾಗಲೇ ಎಚ್ಚರಿಸಿದ್ದಾರೆ. ಭಾರತದಲ್ಲಿ 2ನೇ ಅಲೆಗೆ ಡೆಲ್ಟಾ ವೈರಸ್‌ ಕಾರಣವಾಗಿತ್ತು, ಈಗ ಇದರ ರೂಪಾಂತರ ತಳಿಯೇ ಡೆಲ್ಟಾ ಪ್ಲಸ್. ಇದು ನಿಧಾನಕ್ಕೆ ಹರಡುವ ಗುಣವನ್ನು ಹೊಂದಿರುವ ವೈರಸ್ ಆಗಿದೆ. ಭಾರತದಲ್ಲಿ ಡೆಲ್ಟಾ ಪ್ಲಸ್ ಕೇಸ್‌ ರತನ್‌ಗಿರಿ ಹಾಗೂ ಸಿಂಧುದುರ್ಗದಲ್ಲಿ ಹೆಚ್ಚಾಗಿ ಕಂಡು ಬಂದಿದ್ದು ಈ ಪ್ರದೇಶದಲ್ಲಿ ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ.

ಡೆಲ್ಟಾ ಪ್ಲಸ್‌ ಲಕ್ಷಣಗಳು

ಡೆಲ್ಟಾ ಪ್ಲಸ್‌ ಲಕ್ಷಣಗಳು

ಸಾಮಾನ್ಯವಾಗಿ ಕಂಡು ಬರುತ್ತಿರುವ ಕೋವಿಡ್‌ 19 ಲಕ್ಷಣಗಳಲ್ಲದೆ ಇನ್ಯಾವ ಹೊಸ ಲಕ್ಷಣಗಳು ಈ ವೈರಸ್‌ ತಗುಲಿದವರಲ್ಲಿ ಕಂಡ ಬರುತ್ತಿದೆ ಎಂದು ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದು ಅಂಶವೆಂದರೆ ಕೋವಿಡ್‌ 19 ಡೆಲ್ಟಾ ಪ್ಲಸ್‌ ತಗುಲಿದವರಲ್ಲಿ ಒಣ ಕೆಮ್ಮು, ಜ್ವರ, ಸುಸ್ತು, ಮೈಕೈ ನೋವು, ಚರ್ಮದಲ್ಲಿ ಗುಳ್ಳೆಗಳು, ಉಗುರುಗಳಲ್ಲಿ ಬಣ್ಣ ಬದಲಾವಣೆ, ಶಬ್ದದಲ್ಲಿ ಬದಲಾವಣೆ, ರುಚಿ, ವಾಸನೆ ಇಲ್ಲವಾಗುವುದು, ಉಸಿರಾಟದಲ್ಲಿ ತೊಂದರೆ, ಮಾತನಾಡಲು ತೊಂದರೆ ಇವುಗಳ ಜೊತೆಗೆ ಇದೀಗ ಹೊಟ್ಟೆ ನೋವು, ವಾತಿ, ಬೇಧಿ, ಸಂಧುಗಳಲ್ಲಿ ನೋವು, ಕೇಳುವಿಕೆಯಲ್ಲಿ ತೊಂದರೆ ಈ ರೀತಿಯ ಲಕ್ಷಣಗಳೂ ಕಂಡು ಬರುತ್ತಿವೆ.

ಮೋನೋಕ್ಲೋನಲ್ ಆ್ಯಂಟಿಬಾಡಿ ಕಾಕ್‌ಟೇಲ್‌ ಚಿಕಿತ್ಸೆ ಪರಿಣಾಮಕಾರಿಯೇ?

ಮೋನೋಕ್ಲೋನಲ್ ಆ್ಯಂಟಿಬಾಡಿ ಕಾಕ್‌ಟೇಲ್‌ ಚಿಕಿತ್ಸೆ ಪರಿಣಾಮಕಾರಿಯೇ?

ಡೆಲ್ಟಾಪ್ಲಸ್‌ ತುಂಬಾ ಗಂಭೀರ ಸ್ವರೂಪದ ಲಕ್ಷಣಗಳನ್ನು ಹೊಂದಿದ್ದು ಇದನ್ನು ತಡೆಗಟ್ಟಲು ಮೋನೋಕ್ಲೋನಲ್ ಆ್ಯಂಟಿಬಾಡಿ ಕಾಕ್‌ಟೇಲ್‌ ಚಿಕಿತ್ಸೆ ಪರಿಣಾಮಕಾರಿಯೇ ಎಂಬುವುದರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಈ ಚಿಕಿತ್ಸಾ ವಿಧಾನಕ್ಕೆ ಭಾರತವು ಇತ್ತೀಚೆಗಷ್ಟೇ ಅನುಮತಿ ನೀಡಿದ್ದು casirivimab ಹಾಗೂ imdevimab ಬಳಸಿ ನೀಡುವ ಚಿಕಿತ್ಸೆ ವಿಧಾನವಾಗಿದೆ.

ಲಸಿಕೆ ಪರಿಣಾಮ ಬೀರುವುದೇ?

ಲಸಿಕೆ ಪರಿಣಾಮ ಬೀರುವುದೇ?

ಇದರ ಬಗ್ಗೆ ಇನ್ನಷ್ಟೇ ಹೆಚ್ಚಿನ ಅಧ್ಯಯನಗಳು ನಡೆಯಬೇಕಾಗಿದ್ದು cnbc.com ಪ್ರಕಾರ ಲಸಿಕೆ ಪರಿಣಾಮಕಾರಿಯಾಗಿರುವುದಾಗಿ ಎಫ್‌ಡಿಎ ಮಾಜಿ ಆಯುಕ್ತ ಡಾ. ಸ್ಕಾಟ್ ಗೊಟ್ಟಿಲೈಬ್ ಹೇಳಿದ್ದಾರೆ.

ಲಸಿಕೆಯು ಡೆಲ್ಟಾ ಪ್ಲಸ್‌ ವೈರಸ್‌ನಿಂದ ಶೇ.88ರಷ್ಟು ರಕ್ಷಣೆ ನೀಡುವುದಾಗಿ ಹೇಳಿದೆ.

ಭಾರತದಕ್ಕೆ ಅಪಾಯ ಕಾದಿದೆಯೇ?

ಭಾರತದಕ್ಕೆ ಅಪಾಯ ಕಾದಿದೆಯೇ?

ಆರೋಗ್ಯ ತಜ್ಞ ಪ್ರಕಾರ ಭಾರತದಲ್ಲಿ 3ನೇ ಬರಲಿದ್ದು ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿಸಲಿದೆ. ಭಾರತದಲ್ಲಿ ಇದು ಹರಡುವ ಪ್ರಮಾಣ ತುಂಬಾ ನಿಧಾನವಾಗಿದೆ ಆದರೆ ಕೆಲವೊಂದು ದೇಶಗಳಿಗೆ ಈ ವೈರಸ್‌ ಆತಂಕ ತಂದೊಡ್ಡಿದೆ.

ಈ ವೈರಸ್‌ ಹರಡದಂತೆ ಮುನ್ನೆಚ್ಚರಿಕೆವಹಿಸಬೇಕಾಗಿದೆ, ಅಲ್ಲದೆ ಪ್ರತಿಯೊಬ್ಬರೂ ಲಸಿಕೆ ಪಡೆದರೆ ಈ ವೈರಸ್‌ ಅನ್ನು ಸಮರ್ಥವಾಗಿ ತಡೆಗಟ್ಟಲು ಸಾಧ್ಯವಾದೀತು.

English summary

Delta Plus Variant: Symptoms and all you need to know about new COVID-19 variant in India in Kannada

Symptoms, Know and all you need to know about new COVID-19 variant in India in Kannada, read on,
X
Desktop Bottom Promotion