For Quick Alerts
ALLOW NOTIFICATIONS  
For Daily Alerts

ಡ್ಯಾಶ್‌ ಡಯಟ್‌: ಅಧಿಕ ರಕ್ತದೊತ್ತಡ (ಬಿಪಿ ಸಮಸ್ಯೆ) ಇರುವವರಿಗೆ ಈ ಆಹಾರಕ್ರಮ ಬೆಸ್ಟ್

|

ವಯಸ್ಸು ಹೆಚ್ಚಾಗುತ್ತಿದ್ದಂತೆ ಮನುಷ್ಯನಿಗೆ ಸಾಮಾನ್ಯವಾಗಿ ಖಾಯಿಲೆ ಅಂಟುಕೊಳ್ಳುತ್ತದೆ. ಈ ಪೈಕಿ ಅಧಿಕ ರಕ್ತದೊತ್ತಡ ಅನ್ನುವ ಖಾಯಿಲೆ ಕೂಡ ಒಂದು. ಹೌದು, ಹೈ ಬಿಪಿ ಅಥವಾ ಅಧಿಕ ರಕ್ತದೊತ್ತಡ ಅಥವಾ ಹೈಪರ್ ಟೆನ್ಷನ್ ಡೇಂಜರಸ್ ರೋಗ ಎನ್ನುತ್ತಾರೆ. ವಯಸ್ಸಾದವರಿಗೆ ಈ ಖಾಯಿಲೆ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇದನ್ನು ನೀವು ನೆಗ್ಲೆಟ್ ಮಾಡಿದರೆ ಈ ಸಮಸ್ಯೆಯಿಂದ ಭಾರೀ ದೊಡ್ಡ ಅನಾಹುತವೇ ಸಂಭವಿಸಬಹುದು. ರಕ್ತದ ಒತ್ತಡದ ಸಮಸ್ಯೆಗೂ ಮನುಷ್ಯನ ದೇಹದ ಒಳಗಿನ ಮುಖ್ಯವಾದ ಅಂಗಗಳ ಕಾರ್ಯ ವೈಖರಿಗೂ ನೇರವಾದ ಸಂಬಂಧವಿದೆ. ಅಂದರೆ ಅಧಿಕ ರಕ್ತದೊತ್ತಡದಿಂದ ಮುಂದಿನ ದಿನಗಳಲ್ಲಿ ಆತನ ಜೀವಕ್ಕೆ ಸಂಚಕಾರ ಬರಬಹುದು. ಅಧಿಕ ರಕ್ತದೊತ್ತಡ ಹೃದ್ರೋಗಕ್ಕೆ ಮೂಲ ಕಾರಣ. ಹೌದು, ಅಧಿಕ ರಕ್ತದೊತ್ತಡ ಇರುವವರು ನಿಮ್ಮ ಹೃದಯದ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಲೇಬೇಕು. ಇಲ್ಲವಾದರೆ, ಹೃದಯಾಘಾತ ಅಥವಾ ಇತರೆ ಹೃದಯ ಸಮಸ್ಯೆ ಕಾಯಿಲೆಗಳಿಗೆ ಒಳಗಾಗುವುದು ನಿಶ್ಚಿತ. ಹಾಗಾದರೆ ಅಧಿಕ ರಕ್ತದೊತ್ತಡವನ್ನು ಸಮತೋಲನವಾಗಿ ಇಡುವುದು ಹೇಗೆ? ಇದಕ್ಕಿರುವ ಆಹಾರ ಪದ್ದತಿ ಏನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಅಧಿಕ ರಕ್ತದೊತ್ತಡ ಸಮಸ್ಯೆ ಎಂದರೇನು?

ಅಧಿಕ ರಕ್ತದೊತ್ತಡ ಸಮಸ್ಯೆ ಎಂದರೇನು?

ರಕ್ತವು ರಕ್ತನಾಳದ ಗೋಡೆಗಳಿಗೆ ಅತಿಯಾದ ಒತ್ತಡದಿಂದ ಬಡಿಯುವುದನ್ನು ರಕ್ತದೊತ್ತಡ ಎಂದು ಕರೆಯುವರು. ತುಂಬಾ ಅಪಾಯಕಾರಿ ಮಟ್ಟಕ್ಕೆ ತಲುಪಿದರೆ ಇದರಿಂದ ಪಾರ್ಶ್ವವಾಯುವಿನ ಸಮಸ್ಯೆಯು ಕಾಡಬಹುದು. ಅಲ್ಲದೇ, ಪ್ರಜ್ಞೆ ಕಳೆದುಕೊಳ್ಳುವುದು, ನೆನಪಿನ ಶಕ್ತಿ ಕುಂದುವುದು, ಹೃದಯಾಘಾತ, ಕಣ್ಣು ಹಾಗೂ ಕಿಡ್ನಿಗಳಿಗೆ ಹಾನಿ, ಅನ್ಗಿನಾ(ಅಸಾಮಾನ್ಯ ಎದೆ ನೋವು), ಶ್ವಾಸಕೋಶದಲ್ಲಿ ದ್ರವ ತುಂಬಿಕೊಳ್ಳುವುದು. ಹೀಗೆ ನಾನಾ ರೋಗಗಳಿಗೆ ಅಧಿಕ ರಕ್ತದೊತ್ತಡ ಸಾಕ್ಷಿಯಾಗಬಹುದು.

ಅಧಿಕ ರಕ್ತದೊತ್ತಡಕ್ಕೆ ಆಹಾರ ಪದ್ದತಿ ಏನು?

ಅಧಿಕ ರಕ್ತದೊತ್ತಡಕ್ಕೆ ಆಹಾರ ಪದ್ದತಿ ಏನು?

ಅಧಿಕ ರಕ್ತದೊತ್ತಡವನ್ನು ನಿಯಂತ್ರಣ ಮಾಡುವುದು ನಮ್ಮ ಕೈಯಲ್ಲೇ ಇದೆ. ಆದರೆ, ಇದು ಕೈಮೀರಿ ಹೋದಾಗ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ರಕ್ತದೊತ್ತಡದ ಲಕ್ಷಣಗಳು ಕಂಡು ಬಂದ ಕೂಡಲೇ ನಿಮ್ಮ ಪ್ರತಿದಿನದ ಚಟುವಟಿಕೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕು. ವ್ಯಾಯಾಮ, ಯೋಗದಂತಹ ಚಟುವಟಿಕೆಯಲ್ಲಿ ಭಾಗಿಯಾಗಬೇಕು. ಇದಲ್ಲದೇ, ಮುಖ್ಯವಾಗಿ ಆಹಾರ ಪದ್ದತಿಯಲ್ಲಿ ಬದಲಾವಣೆ ತರಬೇಕು. ರಕ್ತದೊತ್ತಡವನ್ನು ಸಮತೋಲನ ಮಾಡುವ ಆಹಾರವನ್ನು ಸೇವಿಸಬೇಕು. ನಮ್ಮ ಆಹಾರದಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಯಂ ಸಮೃದ್ಧವಾಗಿದ್ದರೆ, ಈ ಪೋಷಕಾಂಶಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾದರೆ ಯಾವ ಆಹಾರ ಉತ್ತಮ? ಇಲ್ಲಿದೆ ಮಾಹಿತಿ.

ನಾವು ಇಲ್ಲಿ ನೀಡುತ್ತಿರುವ ಆಹಾರ ಪದ್ದತಿ ಮನುಷ್ಯನಿಗೆ ಪೌಷ್ಟಿಕಾಂಶ ನೀಡಿ ಆತನ ರಕ್ತದೊತ್ತಡ ಕಡಿಮೆ ಮಾಡುತ್ತದೆ. ವೈದ್ಯರ ಪ್ರಕಾರ ಈ ಆಹಾರ ಪದ್ದತಿ ಬಳಸಿದರೆ ಎರಡು ವಾರದಲ್ಲಿ ನಿಮ್ಮ ಅಧಿಕ ರಕ್ತದೊತ್ತಡ ಕಡಿಮೆ ಆಗುತ್ತದೆ. ಇದು ನಿತ್ಯ ಹಾಗೂ ವಾರಕ್ಕೆ ತಕ್ಕಂತೆ ಇರುವ ಆಹಾರ ಪದ್ದತಿಯಾಗಿದೆ.

ಧಾನ್ಯಗಳು: ಧಾನ್ಯಗಳ ಸೇವನೆ ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಬಾರಿ ಪರೋಪಕಾರಿ. ದಿನಕ್ಕೆ 6 ರಿಂದ 8 ಬಾರಿ ಧಾನ್ಯಯುಕ್ತ ಆಹಾರವನ್ನು ಸೇವಿಸಬೇಕು. ಧಾನ್ಯಯುಕ್ತ ಬ್ರೆಡ್ ಸ್ಲೈಸ್, ಕೊಂಚ ಒಣ ಏಕದಳ ಅಥವಾ 1/2 ಕಪ್ ಬೇಯಿಸಿದ ಏಕದಳ, ಅಕ್ಕಿ ಅಥವಾ ಪಾಸ್ತಾ ಸೇವಿಸಿಸಬೇಕು.

ತರಕಾರಿಗಳು: ತರಕಾರಿಗಳು ಮಿತವಾಗಿ ದಿನಕ್ಕೆ 4 ರಿಂದ 5 ಬಾರಿ ಸೇವಿಸಿದರೆ ಉತ್ತಮ. ಇದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ. ದಿನದಲ್ಲಿ ಕೊಂಚ ಹಸಿ ತರಕಾರಿ, 1/2 ಕಪ್ ಕತ್ತರಿಸಿದ ಕಚ್ಚಾ ಅಥವಾ ಬೇಯಿಸಿದ ತರಕಾರಿಗಳು ಅಥವಾ 1/2 ಕಪ್ ತರಕಾರಿ ಜೂಸ್ ಕುಡಿದರೆ ಒಳ್ಳೆಯದು.

ಹಣ್ಣುಗಳು : ದಿನಕ್ಕೆ 4 ರಿಂದ 5 ಬಾರಿ ಹಣ್ಣುಗಳನ್ನು ಸೇವಿಸಬೇಕು. ಅರ್ಧ ಕಪ್ ತಾಜಾ ಹಣ್ಣುಗಳನ್ನು ಸೇವಿಸಬೇಕು ಅಥವಾ ಹಣ್ಣಿನ ಜ್ಯೂಸ್ ಸೇವಿಸಿದರೂ ಕೂಡ ಉತ್ತಮ

ಹಾಲಿನ ಉತ್ಪನ್ನಗಳು : ಕೊಬ್ಬು-ಮುಕ್ತ ಅಥವಾ ಕಡಿಮೆ-ಕೊಬ್ಬಿನಾಂಶ ಇರುವ ಡೈರಿ ಉತ್ಪನ್ನಗಳನ್ನು ದಿನಕ್ಕೆ 2 ರಿಂದ 3 ಬಾರಿ ಸೇವಿಸಿದರೆ ಅಧಿಕ ರಕ್ತದೊತ್ತಡಕ್ಕೆ ಒಳ್ಳೆಯದು. ಒಂದು ಕಪ್ ಹಾಲು ಅಥವಾ ಮೊಸರು ಅಥವಾ ಅರ್ಧ ಕಪ್ ಚೀಸ್ ಸೇವಿಸಬಹುದು.

ಮಾಂಸ ಸೇವನೆ : ನಿಮ್ಮ ಆಹಾರದಲ್ಲಿ ಮಾಂಸ, ಮೀನು, ಮೊಟ್ಟೆ ಇದ್ದರೆ ಇದು ನಿಮಗೆ ಅಧಿಕ ರಕ್ತದೊತ್ತಡಕ್ಕೆ ರಕ್ಷಾ ಕವಚವಾಗಿರುತ್ತದೆ. ವಾರಕ್ಕೆ ಮೂರರಿಂದ ನಾಲ್ಕು ಬಾರಿ ಮೊಟ್ಟೆ, ಕೊಬ್ಬಿನಾಂಶ ಕಡಿಮೆ ಇರುವ ಮಾಂಸ, ಮೀನು ತಿನ್ನಬಹುದಾಗಿದೆ.

ಬೀಜಗಳು, ದ್ವಿದಳ ಧಾನ್ಯಗಳು : ನಿಮ್ಮ ನಿತ್ಯದ ಆಹಾರದಲ್ಲಿ 1/3 ಕಪ್ ನಟ್ಸ್ , 2 ಟೇಬಲ್ ಸ್ಪೂನ್ ಪೀನಟ್ ಬಟರ್, 2 ಟೇಬಲ್ ಸ್ಪೂನ್ ಬೀಜಗಳು ಸೇವಿಸಬೇಕು.

ಸಿಹಿ ತಿನಿಸು : ವಾರಕ್ಕೆ 5 ಬಾರಿ ಅಥವಾ ಅದಕ್ಕಿಂತ ಕಡಿಮೆ ಬಾರಿ ಸಿಹಿ ತಿನ್ನಬಹುದು. 1 ಚಮಚ ಸಕ್ಕರೆ, ಜೆಲ್ಲಿ ಅಥವಾ ಜಾಮ್, 1/2 ಕಪ್ ಪಾನಕ, ಅಥವಾ 1 ಕಪ್ ನಿಂಬೆ ಪಾನಕ ಸೇವಿಸಬಹುದು.

ಸೋಡಿಯಂ ಆಹಾರ ಕಡಿಮೆ ಸೇವಿಸಿ!

ಸೋಡಿಯಂ ಆಹಾರ ಕಡಿಮೆ ಸೇವಿಸಿ!

ನಿಮ್ಮ ದೈನಂದಿನ ಆಹಾರದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಸೇವನೆ ಮಾಡಬೇಡಿ. ಸೋಡಿಯಂನ ಒಂದು ಸಣ್ಣ ಕಡಿತವು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಸಹ ಕಡಿಮೆ ಮಾಡುತ್ತದೆ ಎಂಬುದು ಸಾಬೀತಾಗಿದೆ. ತಜ್ಞರ ಪ್ರಕಾರ, ವಯಸ್ಕರಿಗೆ ದಿನಕ್ಕೆ 1500 ಮೀ ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಸೋಡಿಯಂ ಸೇವನೆಯನ್ನು ಸೂಚಿಸಲಾಗುತ್ತದೆ.

ಇವಿಷ್ಟು ನೀವು ಅಳವಡಿಸಿಕೊಳ್ಳಬೇಕಾದರ ಡಯಟ್ ಪ್ಲ್ಯಾನ್ ಆಗಿದೆ. ಇದೀಗ ನಿಮಗೆ ತರಕಾರಿ, ಹಣ್ಣು ಸೇರಿ ಇನ್ನಿತರ ಯಾವ ಆಹಾರ ಸೇವಿಸಿದರೆ ಅಧಿಕ ರಕ್ತದೊತ್ತಡದ ಸಮಸ್ಯೆ ನಿವಾರಿಸಬಹುದು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಸಿಟ್ರಸ್ ಹಣ್ಣುಗಳು!

ಸಿಟ್ರಸ್ ಹಣ್ಣುಗಳು!

ಸಿಟ್ರಸ್ ಹಣ್ಣುಗಳು ಮತ್ತು ಬಾಳೆಹಣ್ಣುಗಳು- ಅಧಿಕ ರಕ್ತದೊತ್ತಡ ರೋಗಿಗಳ ಆಹಾರದಲ್ಲಿ ಸಿಟ್ರಸ್ ಹಣ್ಣುಗಳನ್ನು ಕಡ್ಡಾಯವಾಗಿ ಇರಬೇಕು. ಸಿಟ್ರಸ್ ಹಣ್ಣುಗಳು ಸಹ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಸಿಟ್ರಸ್ ಹಣ್ಣುಗಳು ಜೀವಸತ್ವಗಳು, ಖನಿಜಗಳು ಮತ್ತು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿ ನಿಮ್ಮ ಹೃದಯವು ಆರೋಗ್ಯಕರವಾಗಿ ಉಳಿಯುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ಸಹ ನಿಯಂತ್ರಿಸಲಾಗುತ್ತದೆ. ದ್ರಾಕ್ಷಿ, ಕಿತ್ತಳೆ, ನಿಂಬೆಹಣ್ಣನ್ನು ಹೊರತುಪಡಿಸಿ, ನೀವು ಬಾಳೆಹಣ್ಣನ್ನು ಆಹಾರದಲ್ಲಿಯೂ ಸೇವಿಸಬಹುದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ಸೋಡಿಯಂ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಕುಂಬಳಕಾಯಿ ಬೀಜಗಳು!

ಕುಂಬಳಕಾಯಿ ಬೀಜಗಳು!

ಕುಂಬಳಕಾಯಿ ಬೀಜಗಳಲ್ಲಿ ಅನೇಕ ಪೋಷಕಾಂಶಗಳಿವೆ. ಅವುಗಳನ್ನು ತಿನ್ನುವುದರಿಂದ ರಕ್ತದೊತ್ತಡವನ್ನು ಸಹ ನಿಯಂತ್ರನದಲ್ಲಿರುತ್ತದೆ. ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಅರ್ಜಿನೈನ್ ಇದರಲ್ಲಿ ಕಂಡುಬರುತ್ತವೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನೀವು ಕುಂಬಳಕಾಯಿ ಬೀಜಗಳನ್ನು ಅಥವಾ ಕುಂಬಳಕಾಯಿ ಎಣ್ಣೆಯನ್ನು ಆಹಾರದಲ್ಲಿ ಬಳಸಬಹುದು.

ಬೀನ್ಸ್ ಮತ್ತು ಬೇಳೆ!

ಬೀನ್ಸ್ ಮತ್ತು ಬೇಳೆ!

ದ್ವಿದಳ ಧಾನ್ಯಗಳು ಫೈಬರ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನ ಉಗ್ರಾಣವಾಗಿದೆ. ಹಲವಾರು ಸಂಶೋಧನಾ ಅಧ್ಯಯನಗಳು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಬೀನ್ಸ್ ಮತ್ತು ಬೆಳೆಯನ್ನು ಸೇವಿಸುವುದರಿಂದ ಧನಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ನೀವು ದ್ವಿದಳ ಧಾನ್ಯಗಳನ್ನು ಸೇವಿಸಿ.

English summary

DASH diet: Healthy eating to lower your blood pressure in kannada

DASH diet: How dash diet helps to lower blood pressure in kannada, Read on,
X
Desktop Bottom Promotion