For Quick Alerts
ALLOW NOTIFICATIONS  
For Daily Alerts

ಬೂಸ್ಟರ್ ಡೋಸ್‌ ಪಡೆಯಲು ಏನು ಮಾಡಬೇಕು?

|

ಕೋವಿಡ್‌ 19 ಲಸಿಕೆ 2 ಡೋಸ್‌ ಪಡೆದು 9 ತಿಂಗಳು ಕಳೆದಿದ್ದರೆ ಅಂಥವರು ಪ್ರಿಕಾಷನ್ ಡೋಸ್‌ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಅದಕ್ಕಾಗಿ ನೋಂದಣಿ ಮಾಡುವಂತೆ ಸೂಚಿಸಿತ್ತು. ಆದರೆ ಶುಕ್ರವಾರ(ಜನವರಿ7, 2022) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಿಕಾಷನ್ ಡೋಸ್‌ ತೆಗೆದುಕೊಳ್ಳಲು ನೋಂದಣಿ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ಹೇಳಿದೆ.

ಪ್ರಿಕಾಷನ್‌ ಡೋಸ್‌ನ ಈಗ ಯಾರಿಗೆ ನೀಡಲಾಗುತ್ತಿದೆ, ಯಾವಾಗ ನೀಡಲು ಪ್ರಾರಂಭಿಸಲಾಗುವುದು? ಇದನ್ನು ಯಾಕೆ ತೆಗೆದುಕೊಳ್ಳಬೇಕು ಎಂದು ನೋಡೋಣ ಬನ್ನಿ:

ಪ್ರಿಕಾಷನ್‌ ಡೋಸ್‌ ಯಾರಿಗೆ ನೀಡಲಾಗುತ್ತಿದೆ?

ಪ್ರಿಕಾಷನ್‌ ಡೋಸ್‌ ಯಾರಿಗೆ ನೀಡಲಾಗುತ್ತಿದೆ?

ಕೋವಿಡ್ 19 ಪ್ರಿಕಾಷನ್ ಡೋಸ್‌ ಅನ್ನು ಆರೋಗ್ಯ ಕಾರ್ಯಕರ್ತರಿಗೆ, ಫ್ರಂಟ್‌ಲೈನ್‌ ವರ್ಕರ್ಸ್‌ ಹಾಗೂ 60 ವರ್ಷ ಮೇಲ್ಪಟ್ಟವರು ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮೊದಲಿಗೆ ನೀಡಲಾಗುವುದು.

ಪ್ರಿಕಾಷನ್‌ ಡೋಸ್‌ ತೆಗೆದುಕೊಳ್ಳಲು ಅರ್ಹರಾಗಿದ್ದವರು ಮೊದಲಿಗೆ ನೋಂದಣಿ ಮಾಡಿಕೊಳ್ಳುವ ಅಗ್ಯತವಿಲ್ಲ, ನೇರವಾಗಿ ಕೋವಿಡ್ 19 ಲಸಿಕೆ ಕೇಂದ್ರಕ್ಕೆ ಹೋಗಿ ಹಾಕಿಸಿಕೊಳ್ಳಬಹುದಾಗಿದೆ.

ಪ್ರಿಕಾಷನ್ ಡೋಸ್‌ ಯಾವಾಗಿನಿಂದ ನೀಡಲಾಗುವುದು?

ಪ್ರಿಕಾಷನ್ ಡೋಸ್‌ ಯಾವಾಗಿನಿಂದ ನೀಡಲಾಗುವುದು?

ಶೆಡ್ಯೂಲ್ಸ್ ಜನವರಿ 8ಕ್ಕೆ ಪ್ರಕಟಿಸಲಾಗುವುದು. ಅಪಾಯಿಂಟ್‌ಮೆಂಟ್‌ ಸೌಲಭ್ಯ ಶುಕ್ರವಾರ ಸಂಜೆಯಿಂದಲೇ ಪ್ರಾರಂಭವಾಗಿದೆ. ಪ್ರಿಕಾಷನ್ ಡೋಸ್‌ ಅನ್ನು ಜನವರಿ 10ರಿಂದ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಪ್ರಿಕಾಷನ್‌ ಡೋಸ್ ಆಗಿ ಯಾವುದನ್ನು ನೀಡಲಾಗುವುದು?

ಪ್ರಿಕಾಷನ್‌ ಡೋಸ್ ಆಗಿ ಯಾವುದನ್ನು ನೀಡಲಾಗುವುದು?

ಪ್ರಿಕಾಷನ್ ಡೋಸ್‌ ಆಗಿ ಮೊದಲ ಎರಡು ಡೋಸ್‌ ತೆಗೆದ ಲಸಿಕೆಯನ್ನೇ ನೀಡಲಾಗುವುದು. ಅಂದ್ರೆ ನೀವು ಕೊವಾಕ್ಸಿನ್ ಲಸಿಕೆ ಪಡೆದುಕೊಂಡಿದ್ದರೆ ಪ್ರಿಕಾಷನ್‌ ಡೋಸ್ ಆಗಿ ಕೊವಾಕ್ಸಿನ್‌ ಲಸಿಕೆ ನೀಡಲಾಗುವುದು. ಕೋವಿಶೀಲ್ಡ್ ಲಸಿಕೆ ಪಡೆದವರು ಪ್ರಿಕಾಷನ್ ಡೋಸ್ ಆಗಿ ಕೋವಿಶೀಲ್ಡ್ ಅನ್ನು ತೆಗೆದುಕೊಳ್ಳಬೇಕು.

ಪ್ರಿಕಾಷನ್ ಡೋಸ್‌ ಅವಶ್ಯಕ, ಏಕೆ?

ಪ್ರಿಕಾಷನ್ ಡೋಸ್‌ ಅವಶ್ಯಕ, ಏಕೆ?

ಕೋವಿಡ್‌ 19 ಲಸಿಕೆ ಪಡೆದ ಬಳಿಕ ಎಷ್ಟು ಸಮಯ ರೋಗ ನಿರೋಧಕ ಶಕ್ತಿ ಇರುತ್ತದೆ ಎಂಬುವುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ, ಈ ಕುರಿತು ಅನೇಕ ಅಧ್ಯಯನಗಳು ನಡೆಯುತ್ತಿವೆ. ಕೆಲವರಲ್ಲಿ 2 ಡೋಸ್‌ ಪಡೆದ ಬಳಿಕ 6 ತಿಂಗಳು ಕಳೆಯುವಷ್ಟರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ಕೋವಿಡ್ 19 ವಿರುದ್ಧ ರೋಗ ನಿರೋಧಕ ಶಕ್ತಿ ಮರಳಿ ಪಡೆಯಲು ಪ್ರಿಕಾಷನ್‌ ಡೋಸ್ ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಇದೀಗ ಕೊರೊನಾ 19 ಹೆಚ್ಚಾಗಿ ಹರಡುತ್ತಿದ್ದು, ಕೊರೊನಾ 3ನೇ ಅಲೆಯ ಆತಂಕ ಇರುವುದರಿಂದ ಪ್ರಕಾಷನ್‌ ಡೋಸ್‌ ಕೋವಿಡ್‌ 19 ತಡೆಗಟ್ಟಲು ಸಹಕಾರಿಯಾಗಿದೆ.

English summary

Covid Vaccine Booster Dose : How to Register, Eligibility, What Experts Says in Kannada

Covid vaccine booster dose : How to register, eligibility, what experts says in Kannada, read on...
X
Desktop Bottom Promotion