For Quick Alerts
ALLOW NOTIFICATIONS  
For Daily Alerts

ಭಾರತಕ್ಕೂ ಕಾಲಿಟ್ಟಿದೆ ಅಪಾಯಕಾರಿ ರೂಪಾಂತರ XE, ನಿರ್ಲಕ್ಷ್ಯ ಮಾಡಿದರೆ ಅಪಾಯ ತಪ್ಪಿದ್ದಲ್ಲ

|

ಈ ಕೊರೊನಾ ಕತೆ 'ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯೊಳಗೆ...' ಎಂಬಂತಿದೆ. ಈಗಷ್ಟೇ ಕೊರೊನಾ ಆತಂಕ ದೂರಾಗಿತ್ತು, ದೇಶದ ರಾಜ್ಯಗಳಲ್ಲಿ ಮಾಸ್ಕ್‌ ನಿಯಮವನ್ನು ಸಡಿಲಗೊಳಿಸಿತ್ತು. ಎಲ್ಲಾ ಕಡೆ ಊರ ಹಬ್ಬಗಳು, ಜಾತ್ರೆಗಳು, ಹೆಚ್ಚು ಜನ ಸೇರಿದ ಮದುವೆಗಳು ನಡೆಯುತ್ತಿವೆ. ಎಷ್ಟೋ ಕಂಪನಿಗಳು ವರ್ಕ್‌ ಫ್ರಂ ಹೋಂ ಇನ್ನಿಲ್ಲ, ಆಫೀಸ್‌ಗೆ ಬನ್ನಿ ಎಂದು ಕರೆದಿದೆ, ಹೀಗೆ ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿರುವಾಗ ಮತ್ತೆ ಆತಂಕ ಪಡುವ ಸುದ್ದಿ ಕೇಳಿ ಬಂದಿದೆ. ಹೌದು ಯುಕೆಯಲ್ಲಿ ಪತ್ತೆಯಾಗಿದ್ದ ಅಪಾಯಕಾರಿ ಹೊಸ ಕೊರೊನಾ ರೂಪಾಂತರ XE ಇದೀಗ ಮುಂಬೈಯಲ್ಲಿ ಪತ್ತೆಯಾಗಿದೆ.

XE ಕೊರೊನಾ ರೂಪಾಂತರ

XE ಕೊರೊನಾ ರೂಪಾಂತರ

ಇದು ಹೈಬ್ರಿಡ್ ರೂಪಾಂತರ ತಳಿಯಾಗಿದ್ದು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕೊರೊನಾ ವೈರಸ್‌ ಉಂಟಾಗಿರುವ ಹೊಸ ಕೊರೊನಾ ರೂಪಾಂತರ ತಳಿ ಇದಾಗಿದೆ.

ಈ ವೈರಸ್‌ ತಗುಲಿರುವ ವ್ಯಕ್ತಿಯ ದೇಹದಲ್ಲಿ ಒಂದಕ್ಕಿಂತ ಹೆಚ್ಚಿನ ಕೊರೊನಾ ವೈರಸ್ ಪತ್ತೆಯಾಗಿದೆ.

ಇದರಿಂದಾಗಿ ಈ ಹೊಸ ರೂಪಾಂತರ ಮತ್ತೊಂದು ಸಾಂಕ್ರಾಮಿಕವಾಗುವ ಲಕ್ಷಣಗಳನ್ನು ಹೊಂದಿದೆ.

XE ರೂಪಾಂತರ ಇತರ ರೂಪಾಂತರಕ್ಕಿಂತ ಶೇ.10ರಷ್ಟು ವೇಗವಾಗಿ ಹರಡುವುದು

XE ರೂಪಾಂತರ ಇತರ ರೂಪಾಂತರಕ್ಕಿಂತ ಶೇ.10ರಷ್ಟು ವೇಗವಾಗಿ ಹರಡುವುದು

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ XE ರೂಪಾಂತರ ಒಮಿಕ್ರಾನ್ ರೂಪಾಂತರಗಳಾದ BA.1 ಮತ್ತು BA.2 ತಳಿಗಳು ಸೇರಿ ಉಂಟಾಗಿದೆ.

ಈ ಹೊಸ ರೂಪಾಂತರ ತುಂಬಾ ವೇಗವಾಗಿ ಅಂದರೆ ಈ ಹಿಂದೆ ಕಂಡು ಬಂದ ಎಲ್ಲಾ ಕೊರೊನಾ ವೈರಸ್‌ ತಳಿಗಳಿಗಿಂತ ಶೇ.10ರಷ್ಟು ವೇಗವಾಗಿ ಹರಡುವುದು.

ಇದುವರೆಗೆ ಎಷ್ಟು ಕೇಸ್‌ಗಳು ಪತ್ತೆಯಾಗಿದೆ?

ಇದುವರೆಗೆ ಎಷ್ಟು ಕೇಸ್‌ಗಳು ಪತ್ತೆಯಾಗಿದೆ?

ಯುಕೆಯಲ್ಲಿ 2022 ಜನವರಿ 19ಕ್ಕೆ ಮೊದಲ ಕೇಸ್‌ ಪತ್ತೆಯಾಗಿತ್ತು. ಮಾರ್ಚ್ 25ಕ್ಕೆ 637 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

ಕಳೆದ ವಾರ ನ್ಯಾಷನಲ್‌ ಸ್ಟ್ಯಾಟಿಸ್ಟಿಕ್ಸ್ ಆಫೀಸ್‌ ಮಾರ್ಚ್ ಕೊನೆಯ ವಾರ ಹಾಗೂ ಏಪ್ರಿಲ್ ಮೊದಲ ವಾರ ತಲುಪುವಷ್ಟರಲ್ಲಿ4.9 ಮಿಲಿಯನ್‌ ಜನರಲ್ಲಿ ಈ ಸೋಂಕು ಹರಡಬಹುದು ಎಂದು ಅಂದಾಜು ಮಾಡಲಾಗಿದೆ.

XE ರೂಪಾಂತರ ಏನಾದರೂ ಹೊಸ ಲಕ್ಷಣಗಳನ್ನು ಹೊಂದಿದೆಯೇ?

XE ರೂಪಾಂತರ ಏನಾದರೂ ಹೊಸ ಲಕ್ಷಣಗಳನ್ನು ಹೊಂದಿದೆಯೇ?

ಇದುವರೆಗೆ ಈ ಹೊಸ ರೂಪಾಂತರ ಯಾವುದೇ ಹೊಸ ಲಕ್ಷಣಗಳನ್ನು ಹೊಂದಿಲ್ಲ, ಇದರ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ.

ಲಸಿಕೆ ಪಡೆದವರಲ್ಲಿ ಶೀತವಷ್ಟೇ ಕಾಣಿಸಿಕೊಂಡಿದೆ. ಕೆಲವರಲ್ಲಿ ಮೈಕೈ ನೋವು, ಉಸಿರಾಟದ ತೊಂದರೆ, ಮೈ ಬಿಸಿಯಾಗುವುದು, ರುಚಿ, ವಾಸನೆ ತಿಳಿಯದಿರುವುದು ಈ ಲಕ್ಷಣಗಳು ಕಂಡು ಬಂದಿದೆ.

ಹೊಸ ರೂಪಾಂತರ ತಡೆಗಟ್ಟುವುದು ಹೇಗೆ?

ಹೊಸ ರೂಪಾಂತರ ತಡೆಗಟ್ಟುವುದು ಹೇಗೆ?

ನಿರ್ಲಕ್ಷ್ಯ ಮಾಡಬೇಡಿ, ಈ ಹಿಂದೆ ಪಾಲಿಸಿದ ಕೊರೊನಾ ನಿಯಮಗಳನ್ನು ಮುಂದುವರೆಸಿ, 2 ಡೋಸ್ ಲಸಿಕೆ ಪಡೆಯಿರಿ, ಬೂಸ್ಟರ್ ಕೂಡ ಪಡೆಯಿರಿ.

English summary

Covid Omicron XE: Symptoms and everything you need to know about the combined variant in Kannada

XE is a mixture of the two Omicron variant sub-types BA.1 and BA.2. Know symptoms, transmission and everything you need to know about the combined variant in Kannada
Story first published: Thursday, April 7, 2022, 10:32 [IST]
X
Desktop Bottom Promotion