Just In
- 1 hr ago
ಮಳೆಗಾಲದಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ: ಈ ಅಪಾಯಕಾರಿ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ
- 3 hrs ago
ಒಟ್ಟಿಗೆ ಯುದ್ಧ ವಿಮಾನವನ್ನು ಹಾರಿಸುವ ಮೂಲಕ ಇತಿಹಾಸ ಬರೆದ ಅಪ್ಪ-ಮಗಳು
- 3 hrs ago
ಮಾನ್ಸೂನ್ನಲ್ಲಿ ಕಾಡುವ ಈ ತ್ವಚೆಯ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ
- 6 hrs ago
ಕಾಂಟಾಕ್ಟ್ ಲೆನ್ಸ್ ಹಾಕಿಯೇ ಮಲಗೋದ್ರಿಂದ ಏನಾಗುತ್ತೆ ಗೊತ್ತಾ..? ಈ ತಪ್ಪು ಮಾಡಲೇಬೇಡಿ..!
Don't Miss
- Movies
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಶರ್ಟ್ ಬಿಚ್ಚಿಸಿದ ಕಮೀಷನರ್
- News
ಏಕ ಬಳಕೆ ಪ್ಲಾಸ್ಟಿಕ್ ನಿಷೇಧ: ಮೂರೇ ದಿನದಲ್ಲಿ 2 ಲಕ್ಷ ರುಪಾಯಿ ದಂಡ ಸಂಗ್ರಹಿಸಿದ ಬಿಬಿಎಂಪಿ
- Sports
IND vs ENG: 1ನೇ ಟಿ20 ಪಂದ್ಯಕ್ಕೆ ಈ ಆಟಗಾರನಿಗೆ ಅವಕಾಶ ಇಲ್ಲವೆಂದ ಆಕಾಶ್ ಚೋಪ್ರಾ
- Finance
ಕೇರಳ ಲಾಟರಿ: 'ಅಕ್ಷಯ AK 556' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Automobiles
ಬೆಲೆ ಹೆಚ್ಚಳ: ಟೊಯೊಟಾ ಪ್ರಮುಖ ಕಾರುಗಳ ಬೆಲೆ ಭಾರೀ ಹೆಚ್ಚಳ
- Education
DC Office Tumakuru Recruitment 2022 : 7 ಲೋಡರ್ಸ್ ಮತ್ತು ಕ್ಲೀನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಅಮೆಜಾನ್ ಪ್ರೈಮ್ ಡೇ ಸೇಲ್ 2022 ಡೇಟ್ ಫಿಕ್ಸ್! ಡಿಸ್ಕೌಂಟ್ ಏನಿದೆ?
- Travel
ಪರಿಪೂರ್ಣದೃಶ್ಯಗಳನ್ನು ಹೊಂದಿರುವ ತಾಣ - ಶಿರ್ಸಿ
ಈ ಜೂನ್ನಲ್ಲಿ ಹೆಚ್ಚಾಗಲಿದೆ ಕೊರೊನಾ: ಕರ್ನಾಟಕ ಆರೋಗ್ಯ ಮಂತ್ರಿ ಡಾ. ಕೆ ಸುಧಾಕರ್
ಭಾರತದಲ್ಲೀಗ ಕೊರೊನಾ ನಾಲ್ಕನೇ ಅಲೆಯ ಆತಂಕ ಶುರುವಾಗಿದೆ. ದಿನೇ ದಿನೇ ಕೇಸ್ಗಳು ಶೇ.90ರಷ್ಟು ವೇಗದಲ್ಲಿ ಹರಡುತ್ತಿದೆ, ಈಗ ಕೊರೊನಾ ಹರಡುವುದನ್ನು ತಡೆಗಟ್ಟಗಳು ಆಯಾ ರಾಜ್ಯ ಸರ್ಕಾರಗಳು ಮುಂದಾಗಿವೆ. ಕರ್ನಾಟಕ ಕೂಡ ಈ ಕುರಿತು ಕಟ್ಟುನಿಟ್ಟಿನ ಎಚ್ಚರವಹಿಸಲು ಮುಂದಾಗಿದೆ. ಅದರಲ್ಲೂ ಹೊರ ದೇಶದಿಂದ ಬರುವವರ ಮೇಲೆ ನಿಗಾ ಇಡಲು ಮುಂದಾಗಿದೆ. ಅವರ ಕಾಂಟ್ಯಾಕ್ಟ್ ನಂಬರ್ ಹಾಗೂ ವಿಳಾಸ ತೆಗೆದುಕೊಂಡು ಅವರ ಆರೋಗ್ಯದ ಮೇಲೆ ನಿಗಾ ಇಡುತ್ತಿದೆ.
ಕರ್ನಾಟಕದಲ್ಲಿ ಜನರ ಸುರಕ್ಷತೆಗೆ ಏನೆಲ್ಲಾ ಕ್ರಮ ಕೈಗೊಂಡಿದೆ, ಆರೋಗ್ಯ ಮಂತ್ರಿ ಡಾ. ಕೆ ಸುಧಾಕರ್ ಹೇಳಿರುವುದೇನು ಎಂದು ನೋಡೋಣ ಬನ್ನಿ:

ಜೂನ್ನಲ್ಲಿ ಹೆಚ್ಚಾಗಲಿದೆ ಕೊರೊನಾ
ಆರೋಗ್ಯ ಮಂತ್ರಿ ಡಾ. ಕೆ ಸುಧಾಕರ್ ತಜ್ಞರ ಸಮಿತಿಯ ಸಲಹೆಯ ಬಳಿಕ ಕೊರೊನಾ ಬಗ್ಗೆ ಮಾತನಾಡಿದ್ದಾರೆ. ಕೊರೊನಾ ನಾಲ್ಕನೇ ಅಲೆ ಭಾರತದಲ್ಲಿ ಜೂನ್ನಲ್ಲಿ ಹೆಚ್ಚಾಗಲಿದೆ ಇದರ ಪ್ರಬಾವ ಅಕ್ಟೋಬರ್ವರೆಗೆ ಇರಲಿದೆ. ಆದ್ದರಿಂದ ಜನರು ಮುನ್ನೆಚ್ಚರಿಕೆವಹಿಸಬೇಕೆಂದು ಹೇಳಿದ್ದಾರೆ.

IIT ಕಾನ್ಪುರ್ ಅಧ್ಯಯನ ಈ ಮೊದಲೇ ಎಚ್ಚರಿಸಿತ್ತು
IIT ಕಾನ್ಪುರ್ ಅಧ್ಯಯನ ವರದಿಯೂ ಈ ಹಿಂದೆಯೇ ಜೂನ್ ಕೊನೆಯ ವಾರದಲ್ಲಿ ಭಾರತದಲ್ಲಿ ಕೊರೊನಾ ನಾಲ್ಕನೇ ಅಲೆ ಬರಲಿದೆ ಎಂದು ಹೇಳಿತ್ತು. ಆದರೆ ಈಗ ತಿಂಗಳ ಮುಂಚೆಯೇ ಬಂದಿದೆ. ಇದರ ಪ್ರಭಾವ ಅಕ್ಟೋಬರ್ವರೆಗೆ ಇರಲಿದೆ.

ಕೋವಿಡ್ 19 ಜೊತೆ ಬದುಕಲು ಕಲಿಯಬೇಕಾಗಿದೆ
ಕೊರೊನಾ ಈಗ ಹೊಸತಲ್ಲ. ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕು ಬಂದು ಹೋಗುತ್ತಿರುವುದನ್ನು ನೋಡಿದ್ದೇವೆ ಹಾಗೂ ಅದು ಬೀರಿರುವ ದುಷ್ಪಾರಿಣಾಮ ನೋಡಿದ್ದೇವೆ. ಕೊರೊನಾ ತಡೆಗಟ್ಟಲು ಜನರು ಮುಖ್ಯವಾಗಿ ಮಾಡಬೇಕಾಗಿರುವುದು ಮುನ್ನೆಚ್ಚರಿಕೆವಹಿಸುವುದು. ಹೌದು ಜಾಗ್ರತೆಯಿಂದ ಕೊರೊನಾವನ್ನು ತಡೆಟ್ಟಬಹುದಾಗಿದೆ. ಆದ್ದರಿಂದ ಮತ್ತೆ ಕೊರೊನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ಹಾಗೇ ಮಾಡಿದರೆ ಲಾಕ್ಡೌನ್, ಆರ್ಥಿಕ ನಷ್ಟಗಳನ್ನು ತಡೆಗಟ್ಟಬಹುದು.

ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿದೆ
ರಾಜ್ಯ ಸರ್ಕಾರವು ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿದೆ. ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅದರಲ್ಲೂ ಡಬಲ್ ಮಾಸ್ಕ್ ಧರಿಸುವುದು ಒಳ್ಳೆಯದು. ಜೊತೆಗೆ ಕೈಗಳಿಗೆ ಸ್ಯಾನಿಟೈಸರ್ ಬಳಸಿ.

ಕೊರೊನಾ ಲಕ್ಷಣಗಳು ಕಂಡು ಬಂದರೆ ಐಸೋಲೇಟ್ ಆಗಿ
ಕೊರೊನಾ ಲಕ್ಷಣಗಳು ಕಂಡು ಬಂದ ತಕ್ಷಣ ಸುಮ್ಮನೆ ತಿರುಗಾಡಬೇಡಿ, ನಿಮ್ಮ ಆರೋಗ್ಯ ಜೊತೆಗೆ ಇತರರ ಆರೋಗ್ಯ ಅಪಾಯಕ್ಕೆ ದೂಡಬೇಡಿ. ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಪ್ರತ್ಯೇಕವಾಗಿ ಹಾಗೂ ಚಿಕಿತ್ಸೆ ಮಾಡಿಸಿ. ರೋಗ ಲಕ್ಷಣಗಳು ಗಂಭೀರವಾಗುವ ಮೊದಲೇ ಚಿಕಿತ್ಸೆ ಪಡೆಯಿರಿ.