For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ರೋಗಿಗಳಿಗೆ ಯಾವಾಗ ಆಕ್ಸಿಜನ್ ವ್ಯವಸ್ಥೆ ಬೇಕಾಗುವುದು?

|

ಕೊರೊನಾ ವೈರಸ್ 2ನೇ ಅಲೆ ಭಾರತಕ್ಕೆ ದೊಡ್ಡ ಸಂಕಷ್ಟವನ್ನೇ ತಂದೊಡ್ಡಿದೆ. ಒಂದು ಕಡೆ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದರೆ ಮತ್ತೊಂದೆಡೆ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ.

ಈಗ ಎಲ್ಲಾ ಕಡೆ ಕೇಳಿ ಬರುತ್ತಿರುವುದು ಒಂದೇ ಕಂಪ್ಲೇಂಟ್‌, ಅದು ಆಮ್ಲಜನಕದ ಕೊರತೆ. ಕೆಲವು ಆಸ್ಪತ್ರೆಗಳಲ್ಲಿ ಆಮ್ಲಜನಕದ ವ್ಯವಸ್ಥೆಯ ಕೊರತೆ ಉಂಟಾಗಿರುವುದರಿಂದ ತೀವ್ರ ಉಸಿರಾಟದ ಸಮಸ್ಯೆ ಇರುವವರು ಸಾವನ್ನಪ್ಪುತ್ತಿದ್ದಾರೆ.

ಪ್ರಧಾನಿ ಮಂತ್ರಿ ಉನ್ನತ ಅಧಿಕಾರಿಗಳಿಗೆ ಆಮ್ಲಜನಕ ಪೂರೈಕೆ ಹೆಚ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಸೂಚನೆ ನೀಡಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರಗಳು ಕೂಡ ಆಮ್ಲಜನಕ ಪೂರೈಸುವ ಏಜೆನ್ಸಿಗಳ ಜೊತೆ ಚರ್ಚೆ ನಡೆಸಿ, ಅಗ್ಯತ ವ್ಯವಸ್ಥೆ ಮಾಡುವತೆ ಸೂಚಿಸಲಾಗಿದೆ.

ಕೋವಿಡ್‌ 19 ಕಾಯಿಲೆ ಬಂದ ಎಲ್ಲರಿಗೂ ಆಮ್ಲಜನಕದ ಅವಶ್ಯಕತೆ ಇದೆಯೇ?

ಕೋವಿಡ್‌ 19 ಕಾಯಿಲೆ ಬಂದ ಎಲ್ಲರಿಗೂ ಆಮ್ಲಜನಕದ ಅವಶ್ಯಕತೆ ಇದೆಯೇ?

ಕೋವಿಡ್‌ 19 ಲಕ್ಷಣಗಳು ಗಂಭೀರವಾಗಿಲ್ಲದಿದ್ದರೆ ಯಾವುದೇ ತೊಂದರೆಯಿಲ್ಲ. ಮನೆಯಲ್ಲಿಯೇ ಕ್ವಾರೆಂಟೈನ್‌ನಲ್ಲಿದ್ದು, ತಮ್ಮ ದೇಹದ ರೋಗ ಲಕ್ಷಣಗಳ ಕಡೆ ಗಮನ ನೀಡುತ್ತಾ ವೈದ್ಯರು ಸೂಚಿಸಿದ ಔಷಧಿ ಜೊತೆಗೆ ವಿಶ್ರಾಂತಿ ತೆಗೆದುಕೊಂಡರೆ ಕೆಲವೇ ದಿನಗಳಲ್ಲಿ ಕಾಯಿಲೆ ಗುಣಮುಖವಾಗುವುದು.

ಆದರೆ ಈ ರೀತಿ ಕೆಲವರಿಗಷ್ಟೇ ಆಗುತ್ತದೆ, ಇನ್ನು ಕೆಲವರಿಗೆ ಮೊದಲಿಗೆ ಅಷ್ಟೇನು ರೋಗ ಲಕ್ಷಣಗಳು ಕಂಡು ಬಂದಿಲ್ಲವಾದರೂ ನಂತರ ಉಲ್ಬಣವಾಗಬಹುದು. ಅದರಲ್ಲೂ ಸಕ್ಕರೆ ಕಾಯಿಲೆಯಂಥ ಸಮಸ್ಯೆ ಇರುವವರು ತುಂಬಾನೇ ಹುಷಾರಾಗಿರಬೇಕು. ಏಕೆಂದರೆ ಯಾವಾಗ ಆಮ್ಲಜನಕದ ಕೊರತೆ ಉಂಟಾಗಿ ಉಸಿರಾಟದ ತೊಂದರೆಯಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಯಾವಾಗ ಉಸಿರಾಟದ ತೊಂದರೆ ಉಂಟಾಗುತ್ತೋ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಆಮ್ಲಜನಕ ಸಿಲಿಂಡರ್‌ ನೀಡಬೇಕಾಗುತ್ತದೆ. ಆದರೆ ಈಗ ಇದಕ್ಕೆ ಕೊರತೆಯಾಗುತ್ತಿರುವುದರಿಂದಲೇ ಕೋವಿಡ್ 19ನಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ.

ಆಮ್ಲಜನಕದ ಕೊರತೆ ಉಂಟಾಗುತ್ತಿದೆ ಎಂದು ತಿಳಿಯುವುದು ಹೇಗೆ?

ಆಮ್ಲಜನಕದ ಕೊರತೆ ಉಂಟಾಗುತ್ತಿದೆ ಎಂದು ತಿಳಿಯುವುದು ಹೇಗೆ?

ಕೊರೊನಾ ಸೋಂಕು ದೃಢಪಟ್ಟು ಮನೆಯಲ್ಲಿಯೇ ಕ್ವಾರಂಟೈನ್ ಆದವರು ತಮ್ಮ ದೇಹದಲ್ಲಿ ಆಮ್ಲಜನಕದ ಪ್ರಮಾಣ ಎಷ್ಟಿದೆ ಎಂದು ಪರೀಕ್ಷೆ ಮಾಡುತ್ತಾ ಇರಬೇಕು. ಆಮ್ಲಜನಕದ ಪ್ರಮಾಣದ ಎಷ್ಟಿದೆ ಎಂದು ತಿಳಿಯಲು ಆಕ್ಸಿ ಮೀಟರ್ ಬಳಸಿ. ಇದು ನಿಮ್ಮ ದೇಹದಲ್ಲಿ ಎಷ್ಟು ಆಮ್ಲಜನಕ ಎಂದು ತಿಳಿಸುತ್ತದೆ. ಅದರಲ್ಲಿ 95ಕ್ಕೆ ಕಡಿಮೆ ಸಂಖ್ಯೆ ತೋರಿಸಿದ್ದೇ ಆದರೆ ತಡಮಾಡದೆ ಆಕ್ಸಿಜನ್ ಹಾಗೂ ವೆಂಟಿಲೇಟರ್ ವ್ಯವಸ್ಥೆ ಇರುವ ಆಸ್ಪತ್ರೆಗೆ ದಾಖಲಾಗಿ.

ಕೋವಿಡ್ 19 ಸೋಂಕು ದೃಢಪಟ್ಟು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರೆ ಏನು ಮಾಡಬೇಕು?

ಕೋವಿಡ್ 19 ಸೋಂಕು ದೃಢಪಟ್ಟು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರೆ ಏನು ಮಾಡಬೇಕು?

* ನೀವು ಗುಣಮುಖರಾಗುವವರೆಗೆ ಪ್ರತೀ ಆರು ತಾಸಿಗೊಮ್ಮೆ ಆಮ್ಲಜನಕದ ಪ್ರಮಾಣ ಪರೀಕ್ಷೆ ಮಾಡಿ.

* ಕೋನೆಯ ಒಳಗಡೆಯೇ 6 ನಿಮಿಷ ನಡೆದಾಡಿ ನಂತರ ನಿಮ್ಮ ಆಮ್ಲಜನಕ ಎಷ್ಟಿದೆ ಎಂದು ಪರೀಕ್ಷೆ ಮಾಡಿ.

* ನಡೆದಾಡಲು ತುಂಬಾ ಕಷ್ಟವಾಗುವುದು, ಉಸಿರಾಟದ ತೊಂದರೆ ಉಂಟಾಗುತ್ತಿದ್ದರೆ ಅಂಥವರಿಗೆ ಆಮ್ಲಜನಕದ ಅವಶ್ಯಕತೆ.

ಆಮ್ಲಜನಕದ ಪ್ರಮಾಣದ ಎಷ್ಟಿದ್ದರೆ ಭಯ ಪಡುವ ಅಗ್ಯತವಿಲ್ಲ

ಆಮ್ಲಜನಕದ ಪ್ರಮಾಣದ ಎಷ್ಟಿದ್ದರೆ ಭಯ ಪಡುವ ಅಗ್ಯತವಿಲ್ಲ

ನೀವು ಆಕ್ಸಿಮೀಟರ್‌ನಲ್ಲಿ ಪರೀಕ್ಷೆ ಮಾಡಿದಾಗ ಶೇ.95ರಷ್ಟು ಕಾಣಿಸಿದರೆ ನಿರಾಳವಾಗಿರಿ. ಕೆಲವೊಮ್ಮೆ ಶೇ.94 ಕಂಡು ಬಂದರೂ ತೊಂದರೆಯಿಲ್ಲ.

ಆಮ್ಲಜನಕ ಪ್ರಮಾಣ 90-92 ಕಂಡು ಬಂದರೆ ಭಯಪಡುವ ಅಗ್ಯತವಿಲ್ಲ, ಆದರೆ ಈ ಕುರಿತು ನಿಮ್ಮ ವೈದ್ಯರೊಂದಿಗೆ ಮಾತನಾಡಿ, ಅದಕ್ಕಿಂತ ಕಡಿಮೆ ಮಟ್ಟಕ್ಕೆ ಹೋಗುತ್ತಿದ್ದರೆ ಅಪಾಯವಿರುವುದರಿಂದ ನಿರ್ಲಕ್ಷ್ಯ ಮಾಡಬಾರದು.

English summary

Covid-19: When do you need oxygen support? Explained in Kannada

Here we explained when oxygen support needed for Covid-19 patients. Read on,
X
Desktop Bottom Promotion