For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಪತ್ತೆಯಾಗಿದೆ ಹೊಸ ಕೊರೊನಾ ವೈರಸ್‌: ವಿಶ್ವ ಆರೋಗ್ಯ ಸಂಸ್ಥೆ

|

ಕೊರೊನಾವೈರಸ್‌ ಎರಡವರೆ ವರ್ಷದಿಂದ ಈ ಜಗತ್ತನ್ನು ಕಾಡುತ್ತಿದೆ, ಲಸಿಕೆ ಬಂದ ಮೇಲೆ ಇದರ ಆರ್ಭಟ ಕಡಿಮೆಯಾದರೂ ಆತಂಕ ಮಾತ್ರ ಕಡಿಮೆಯಾಗಿಲ್ಲ. ಕೊರೊನಾ ಹೆಚ್ಚಾಗುವುದು, ಕಡಿಮೆಯಾಗುವುದು, ಮತ್ತೆ ಹೆಚ್ಚಾಗುವುದು ಈ ರೀತಿ ಆಗುತ್ತಲೇ ಇದೆ.

ಇದೀಗ ಕೊರೊನಾ ಆತಂಕ ಮತ್ತೆ ಹೆಚ್ಚಾಗಿದೆ, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ಕಡೆ ಮಳೆ ಆರ್ಭಟ, ಇದರ ಜೊತೆಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ದೇಶದಲ್ಲಿ ಹೊಸದಾಗಿ ಒಮಿಕ್ರಾನ್‌ನ ಉಪ ತಳಿ ವೈರಸ್‌ ಪತ್ತೆಯಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಹೊಸ ತಳಿ ವೈರಸ್‌ ಕಂಡು ಬಂದರೆ ಏಕೆ ಅಪಾಯಕಾರಿ, ಭಾರತದಲ್ಲಿ ಕಂಡು ಬಂದಿರುವ ಆ ಹೊಸ ತಳಿಯ ವೈರಸ್‌ ಯಾವುದು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ:

ಹೊಸ ವೈರಸ್‌ ಅಪಾಯಕಾರಿಯೇ?

ಹೊಸ ವೈರಸ್‌ ಅಪಾಯಕಾರಿಯೇ?

ಈಗ ಪತ್ತೆಯಾಗಿರುವ ಹೊಸ ಕೊರೊನಾ ರೂಪಾಂತರ BA.2.75 ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುವುದರ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ. ಇದರ ಬಗ್ಗೆ ಅನೇಕ ಅಧ್ಯಯನಗಳು ನಡೆಯುತ್ತಿವೆ.

ಹೊಸ ಕೊರೊನಾ ವೈರಸ್‌ ಬಗ್ಗೆ ಹೇಳುವುದಕ್ಕೆ ಈಗ ಸಾಧ್ಯವಿಲ್ಲ, ಏಕೆಂದರೆ ಈ ವೈರಸ್‌ ಹೀಗಷ್ಟೇ ಪತ್ತೆಯಾಗಿರುವುದರಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ಟೆಕ್ನಿಕಲ್ ಅಡ್ವೈಸರಿ ಗ್ರೂಪ್‌ ಈ ಹೊಸ ತಳಿಯ ಬಗ್ಗೆ ನಿಗಾ ಇಟ್ಟಿದೆ ಎಂದು ಅವರು ಹೇಳಿದ್ದಾರೆ.

 ಭಾರತದಲ್ಲಿ ನಾಲ್ಕನೇ ಅಲೆ ಶುರುವಾಗಿದೆಯೇ?

ಭಾರತದಲ್ಲಿ ನಾಲ್ಕನೇ ಅಲೆ ಶುರುವಾಗಿದೆಯೇ?

ಭಾರತದಲ್ಲಿ ಇದುವರೆಗೆ ಹೊಸ ತಳಿಯ ವೈರಸ್‌ ಪತ್ತೆಯಾಗಿರಲಿಲ್ಲ, ಒಮಿಕ್ರಾನ್‌ ರೂಪಾಂತರ ಕೇಸ್‌ಗಳಷ್ಟೇ ಕಂಡು ಬರುತ್ತಿತ್ತು, ಈ ಕಾರಣದಿಂದಾಗಿ ಭಾರತದಲ್ಲಿ ಕೊರೊನಾ ನಾಲ್ಕನೇ ಅಲೆ ಇಲ್ಲ ಎಂದು ವಿಜ್ಞಾನಿಗಳು ಹೇಳುತ್ತಿದ್ದರು.

ಆದರೆ ಈಗ ಹೊಸ ತಳಿ ಪತ್ತೆಯಾಗಿರುವುದರಿಂದ ಇದು ಅಪಾಯಕಾರಿಯೇ , ಇಲ್ಲವೇ ಎಂಬುವುದು ಇನ್ನಷ್ಟೇ ತಿಳಿಯಬೇಕಾಗಿದೆ.

ವಿಶ್ವದಲ್ಲಿ ಕೊರೊನಾ ಸಂಖ್ಯೆ

ವಿಶ್ವದಲ್ಲಿ ಕೊರೊನಾ ಸಂಖ್ಯೆ

ಜುಲೈ 3, 2022ರವರೆಗಿನ ಅಂಕಿ ಅಂಶಗಳನ್ನು ನೋಡಿದರೆ 546 ಮಿಲಿಯನ್ ಜನರಿಗೆ ಕೋವಿಡ್ 19 ಬಾಧಿಸಿದೆ, 6.3 ಮಿಲಿಯನ್ ಜನರು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.

ಬೂಸ್ಟರ್‌ನ ಅಗ್ಯತತೆ

ಬೂಸ್ಟರ್‌ನ ಅಗ್ಯತತೆ

ಭಾರತದಲ್ಲಿ ಕೋವಿಡ್‌ 19 ಲಸಿಕೆಯ 2 ಡೋಸ್‌ ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬೂಸ್ಟರ್ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಕೆಲವರು ಬೂಸ್ಟರ್‌ ಲಸಿಕೆ ಪಡೆದಿದ್ದಾರೆ. ಇನ್ನು ಕೆಲವರು ಪಡೆಯಬೇಕಾಗಿದೆ.

ಇದೀಗ ಕೊರೊನಾ ಆತಂಕ ಮತ್ತೆ ಹೆಚ್ಚಾಗಿರುವುದರಿಂದ ವಯಸ್ಸಾದವರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಬೂಸ್ಟರ್‌ ಪಡೆದುಕೊಳ್ಳುವುದರಿಂದ ಕೊರೊನಾದಿಂದ ರಕ್ಷಣೆ ಪಡೆಯಬಹುದು.

English summary

Covid-19 : New Omicron Sub Variant BA.2.75 Detected in India Says WHO

WHO says new omicron sub-variant BA.2.75 detected in India , Read on....
Story first published: Thursday, July 7, 2022, 21:17 [IST]
X
Desktop Bottom Promotion