For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಮಕ್ಕಳು ಚೇತರಿಸಿಕೊಳ್ಳಲು ಆರು ದಿನಗಳಷ್ಟೇ ಸಾಕು: ಹೊಸ ಅಧ್ಯಯನ

|

ಕೊರೊನಾದ ಮೂರನೇ ಅಲೆ ಕಾಣಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈ ಹಿಂದಿನಿಂದಲೂ ಮಕ್ಕಳು ಈ ಮೂರನೇ ಅಲೆಗೆ ಹೆಚ್ಚು ತುತ್ತಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ದರಿಂದ ಮಕ್ಕಳಿಗೆ ಕೊರೊನಾದ ಬಾಯಿಗೆ ಬೀಳದಂತೆ ರಕ್ಷಿಸುವ ಅವಶ್ಯಕತೆಯಿದೆ.

ಇತ್ತೀಚೆಗೆ ಪ್ರಕಟವಾದ ಅಧ್ಯಯನವು, ಒಂದು ವೇಳೆ ಮಕ್ಕಳ ಕೊರೊನಾಗೆ ತುತ್ತಾದರೂ, ಅದು ಆರು ದಿನಗಳಲ್ಲಿ ಕಡಿಮೆಯಾಗುತ್ತದೆ. ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ, ದೀರ್ಘ ಕೊರೊನಾ ಮಕ್ಕಳಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆ ಎಂದಿದೆ. ಹಾಗಾದರೆ ಆ ವರದಿಯ ಏನು ಹೇಳುತ್ತದೆ? ಇನ್ನೂ ಏನೇನು ಇದೆ ಅದರಲ್ಲಿ ನೋಡಿಕೊಂಡು ಬರೋಣ.

ಕೊರೊನಾ ಚೇತರಿಕೆಗೆ ಮಕ್ಕಳಿಗೆ 6 ದಿನಗಳು ಸಾಕು:

ಕೊರೊನಾ ಚೇತರಿಕೆಗೆ ಮಕ್ಕಳಿಗೆ 6 ದಿನಗಳು ಸಾಕು:

ದಿ ಲ್ಯಾನ್ಸೆಟ್ ಚೈಲ್ಡ್ ಮತ್ತು ಟೀನೇಜ್ ಹೆಲ್ತ್ ಮ್ಯಾಗಜಿನ್ ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಮಕ್ಕಳು ಕೋವಿಡ್ -19 ನಿಂದ ಚೇತರಿಸಿಕೊಳ್ಳಲು ಆರು ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಆ ಸಮಯದೊಳಗೆ ಗುಣಮುಖರಾಗುತ್ತಾರೆ. ಕೇವಲ 4.4 ಶೇಕಡಾ ಮಕ್ಕಳು ಮಾತ್ರ ನಾಲ್ಕು ವಾರಗಳಿಗಿಂತ ಹೆಚ್ಚಿನ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ ಎಂದು ಹೇಳಿದೆ.

ಮಕ್ಕಳಲ್ಲಿ ದೀರ್ಘಕಾಲದ ಕೋವಿಡ್ ತೀರಾ ಕಡಿಮೆ:

ಮಕ್ಕಳಲ್ಲಿ ದೀರ್ಘಕಾಲದ ಕೋವಿಡ್ ತೀರಾ ಕಡಿಮೆ:

ಕೋವಿಡ್ ನಿಂದ ಚೇತರಿಸಿಕೊಂಡರೂ, ದೀರ್ಘಕಾಲದ ಅನಾರೋಗ್ಯ ರೋಗಿಗಳನ್ನು ಕಾಡುತ್ತಿದ್ದು, ಇದನ್ನು ದೀರ್ಘಕಾಲದ ಕೊರೊನಾ ಎಂದು ಕರೆಯಲಾಗುತ್ತದೆ. ‌ಇದರಲ್ಲಿ ರೋಗಲಕ್ಷಣಗಳು ನಾಲ್ಕು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಮುಂದುವರಿಯುತ್ತದೆ. ಆದರೆ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರುವುದು ತೀರಾ ಕಡಿಮೆ ಎಂದು ವರದಿ ಹೇಳುತ್ತಿದೆ.

ಅಷ್ಟೇ ಅಲ್ಲ, ಮೂರನೆಯ ಅಲೆ ಮಕ್ಕಳಿಗೆ ಅಪಾಯಕಾರಿ ಎಂದು ಈ ಹಿಂದೆ ಊಹೆಗಳನ್ನು ಮಾಡಲಾಗಿತ್ತು. ಆದರೆ ಕೊರೊನಾಗೆ ತುತ್ತಾದ ಅನೇಕ ಮಕ್ಕಳಲ್ಲಿ ರೋಗಲಕ್ಷಣಗಳು ಸಹ ಕಂಡುಬಂದಿಲ್ಲ, ಕಂಡುಬಂದರೂ ಸಣ್ಣ ಮಟ್ಟದ್ದಾಗಿತ್ತು ಎಂಬ ವಿಚಾರ ಪೋಷಕರನ್ನು ನಿರಾಳ ಮಾಡಿದೆ.

ಅಧ್ಯಯನ ಹೇಗಿದೆ?:

ಅಧ್ಯಯನ ಹೇಗಿದೆ?:

ಅಧ್ಯಯನಕ್ಕಾಗಿ, ಲಂಡನ್‌ನ ಕಿಂಗ್ಸ್ ಕಾಲೇಜಿನ ಸಂಶೋಧಕರು ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ನಿಂದ ಡೇಟಾವನ್ನು ಸಂಗ್ರಹಿಸಿದ್ದು, ಡೇಟಾವು 2,50,00 ಕ್ಕಿಂತ ಹೆಚ್ಚು ಅಮೆರಿಕಾದ ಮಕ್ಕಳನ್ನು ಒಳಗೊಂಡಿದೆ. 1 ಸೆಪ್ಟೆಂಬರ್ 2020 ಮತ್ತು 22 ಫೆಬ್ರವರಿ 2021 ರ ನಡುವೆ ಸಂಗ್ರಹಿಸಿದ 1,734 ಮಕ್ಕಳ ಮಾಹಿತಿಯನ್ನು ಸಂಗ್ರಹಿಸಿದ್ದು, ಎಲ್ಲರೂ ಕೊರೊನಾಗೆ ತುತ್ತಾದವರಾಗಿದ್ದಾರೆ. ಇದರ ಫಲಿತಾಂಶ ಏನು ಹೇಳುತ್ತದೆ ಎಂಬುದು ಕೆಳಗೆ ನೀಡಲಾಗಿದೆ.

ಅಧ್ಯಯನ ಫಲಿತಾಂಶ:

ಅಧ್ಯಯನ ಫಲಿತಾಂಶ:

ಮೇಲೆ ತಿಳಿಸಿರುವ ಅಧ್ಯಯನದಲ್ಲಿ, ಮಕ್ಕಳು ಸರಾಸರಿ ಆರು ದಿನಗಳ ಕಾಲ ಕೋವಿಡ್‌ನಿಂದ ಬಳಲುತ್ತಿದ್ದು, ಸರಾಸರಿ ಮೂರು ರೋಗಲಕ್ಷಣಗಳನ್ನು ಅನುಭವಿಸಿದ್ದಾರೆ ಎಂದು ಕಂಡುಬಂದಿದೆ. ಅದಕ್ಕಿಂತ ಹೆಚ್ಚು ದಿನಗಳ ಕಾಲ ಮಕ್ಕಳು ಕೊರೊನಾ ಅನುಭವಿಸಿಲ್ಲ.

ದೀರ್ಘಕಾಲದ ಕೋವಿಡ್ ಹೊಂದಿದ್ದವರು ಕೆಲವರಷ್ಟೇ:

ದೀರ್ಘಕಾಲದ ಕೋವಿಡ್ ಹೊಂದಿದ್ದವರು ಕೆಲವರಷ್ಟೇ:

ಅಧ್ಯಯನದ ಪ್ರಕಾರ, ಹೆಚ್ಚಿನ ಮಕ್ಕಳು ಒಂದು ತಿಂಗಳೊಳಗೆ ಚೇತರಿಸಿಕೊಂಡರು. ಅವರಲ್ಲಿ ಸುಮಾರು 4.4 ಪ್ರತಿಶತದಷ್ಟು ಮಕ್ಕಳು ಒಂದು ತಿಂಗಳ ನಂತರವೂ ರೋಗಲಕ್ಷಣಗಳನ್ನು ಅನುಭವಿಸಿದ್ದರು. ಈ ನಾಲ್ಕು ವಾರಗಳ ನಂತರ ಅವರಲ್ಲಿ ಉಳಿದಿರುವ ಸಾಮಾನ್ಯ ಲಕ್ಷಣವೆಂದರೆ ಆಯಾಸ. ಇದರ ಜೊತೆಗೆ ವಾಸನೆ ಕಳೆದುಕೊಳ್ಳುವುದು ಮತ್ತು ತಲೆನೋವು ಕೂಡ ಸಾಮಾನ್ಯವಾಗಿತ್ತು. ಸೋಂಕಿನ ಆರಂಭದ ಸಮಯದಲ್ಲಿ ತಲೆನೋವು ಸಾಮಾನ್ಯವಾಗಿತ್ತು, ಆದರೆ ವಾಸನೆಯ ನಷ್ಟವು ನಂತರ ಸಂಭವಿಸಿದ್ದು, ದೀರ್ಘಕಾಲದವರೆಗೂ ಮುಂದುವರೆದಿತ್ತು ಎಂದು ವರದಿ ಹೇಳಿದೆ.

ಅದೇನೇ ಆಗಲಿ, ಮಕ್ಕಳು ಕೊರೊನಾದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುವುದು ಉತ್ತಮ. ಮೂರನೇಯ ಅಲೆ ಭೀತಿಯಲ್ಲಿರುವ ನಾವು ಮಕ್ಕಳ ಬಗ್ಗೆ ತುಸು ಹೆಚ್ಚೇ ಕಾಳಜಿ ಮಾಡಬೇಕಾಗುತ್ತದೆ.

English summary

COVID-19 in Children Not Need More Than 6 Days To Recover, New Study Finds

Here we talking about COVID-19 in children Not Need More Than 6 Days To Recover, new study finds, read on
Story first published: Thursday, August 5, 2021, 10:44 [IST]
X
Desktop Bottom Promotion