For Quick Alerts
ALLOW NOTIFICATIONS  
For Daily Alerts

ಡೆಲ್ಟಾ ರೂಪಾಂತರ ಚಿಕನ್‌ಪಾಕ್ಸ್‌ನಷ್ಟೇ ವೇಗವಾಗಿ ಹರಡುವುದು: ವರದಿ

|

2020ರಿಂದ ಕೊರೊನಾ...ಕೊರೊನಾ ಎಂಬ ಹೆಸರೇ ಕೇಳಿ ಜನರಿಗೆ ರೋಸಿ ಹೋಗಿದೆ. ಇತರ ಕಾಯಿಲೆಗಳಂತೆ ಇಡೀ ಜಗತ್ತನ್ನೇ ಭೀಕರವಾಗಿ ಕಾಡಿರುವ ಕಾಯಿಲೆ ಕೋವಿಡ್ 19. 2019 ಡಿಸೆಂಬರ್‌ನಲ್ಲಿ ವುಹಾನ್‌ನಲ್ಲಿ ಕಂಡ ಬಂದು ಕೊರೊನಾ ಕಾಯಿಲೆ 2020ರಲ್ಲಿ ಇಡೀ ಜಗತ್ತಿಗೆ ಹೆಮ್ಮಾರಿಯಂತೆ ಕಾಡಿತು. ಭಾರತದಲ್ಲಿ ಮೊದಲನೇ ಅಲೆ ದೊಡ್ಡ ಪರಿಣಾಮ ಬೀರಿರುವುದಿಲ್ಲ, ಅದೇ 2ನೇ ಅಲೆ ಭೀಕರವಾದ ಪರಿಣಾಮ ಬೀರಿತ್ತು..

ಇದೀಗ ಕೊರೊನಾ 2ನೇ ಅಲೆಯ ಆರ್ಭಟ ಸ್ವಲ್ಪ ತಗ್ಗಿದೆ, ಜೊತೆಗೆ ಹೆಚ್ಚಿನವರು ಲಸಿಕೆ ಪಡೆದಿರುವುದರಿಂದ ಕೊರೊನಾದಿಂದ ಸುರಕ್ಷಿತರಾಗುತ್ತಿದ್ದೇವೆ ಎಂಬ ಭಾವನೆ ಮೂಡಲಾರಂಭಿಸಿದೆ. ಆದರೆ ಕೊರೊನಾ ಬಗ್ಗೆ ಮಾತ್ರ ನಿರ್ಲಕ್ಷ್ಯ ತೋರುವಂತಿಯೇ ಇಲ್ಲ.. ಏಕೆಂದರೆ ಈಗ ರೂಪಾಂತರ ವೈರಸ್‌ ಆತಂಕ ಎದುರಾಗಿದೆ.

ಡೆಲ್ಟಾ ರೂಪಾಂತರ ವೈರಸ್‌ ಪ್ರಕರಣ ಕೇರಳದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ, ಡೆಲ್ಟಾ ರೂಪಾಂತರ ಇತರ ವೈರಸ್‌ಗಿಂತ ಹೆಚ್ಚು ಗಂಭೀರ ಸ್ವರೂಪದ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಅಲ್ಲದೆ ಇದು ಚಿಕನ್‌ಪಾಕ್ಸ್‌ನಂತೆ ವೇಗವಾಗಿ ಹರಡುವುದಾಗಿ ಯುಎಸ್‌ ಅಧ್ಯಯನ ವರದಿ ಹೇಳಿದೆ.

ಲಸಿಕೆ ಪಡೆದುಕೊಂಡವರಿಂದಲೂ ಡೆಲ್ಟಾ ರೂಪಾಂತರ ಹರಡುವುದು

ಲಸಿಕೆ ಪಡೆದುಕೊಂಡವರಿಂದಲೂ ಡೆಲ್ಟಾ ರೂಪಾಂತರ ಹರಡುವುದು

ಸಿಡಿಸಿ (Centers for Disease Control and Prevention)ಪ್ರಕಾರ ಇನ್ನೂ ಪ್ರಕಟವಾಗದ ಅಧ್ಯಯನ ವರದಿಯ ಪ್ರಕಾರ ಭಾರತದಲ್ಲಿ ಎರಡೂ ಡೋಸ್‌ ಲಸಿಕೆ ಪಡೆದವರಿಂದಲೂ ರೂಪಾಂತ ವೈರಸ್‌ ಹರಡಿದೆ. ಲಸಿಕೆ ಪಡೆಯದವರು ಎಷ್ಟರ ಪ್ರಮಾಣದಲ್ಲಿ ಸೋಂಕು ಹರಡಬಲ್ಲರೋ ಅಷ್ಟೇ ಪ್ರಮಾಣದಲ್ಲಿ ಲಸಿಕೆ ಪಡೆದವರೂ ಲಸಿಕೆ ಹರಡಬಲ್ಲರೂ ಎಂದು ವರದಿ ಹೇಳಿದೆ. ಈ ಕುರಿತ ಸ್ಲೈಡ್‌ ಪ್ರೆಸೆಂಟೇಷನ್ ಮೊದಲಿಗೆ ವಾಶಿಂಗ್‌ಟನ್‌ಪೋಸ್ಟ್‌ ಗುರುವಾರ ನೀಡಿದೆ.

ರೂಪಾಂತರ ವೈರಸ್‌ ಲಸಿಕೆ ಪಡೆಯದವರಷ್ಟೇ ಲಸಿಕೆ ಪಡೆದವರಿಂದಲೂ ಹರಡುವುದು

ರೂಪಾಂತರ ವೈರಸ್‌ ಲಸಿಕೆ ಪಡೆಯದವರಷ್ಟೇ ಲಸಿಕೆ ಪಡೆದವರಿಂದಲೂ ಹರಡುವುದು

ಕೊರೊನಾ ಲಸಿಕೆ ಪಡೆದವರಿಗೂ ಕೋವಿಡ್ 19 ಸೋಂಕು ತಗುಲಿರುವ ಎಷ್ಟೋ ಪ್ರಕರಣಗಳಿವೆ. ಕೆಲವರಿಗೆ ಎರಡು ಡೋಸ್‌ ಪಡೆದ ಬಳಿಕವೂ ಕೋವಿಡ್ 19 ಸೋಂಕು ತಗುಲಿದೆ. ಕೋವಿಡ್ 19 ಸೋಂಕು ತಗುಲಿದವರಲ್ಲಿ ಲಸಿಕೆ ಪಡೆದವರಲ್ಲಿ ಹಾಗೂ ಲಸಿಕೆ ಪಡೆಯದವರಲ್ಲಿ ಕಂಡು ಬಂದಿರುವ ವ್ಯತ್ಯಾಸ ಏನೆಂದರೆ ಲಸಿಕೆ ಪಡೆದವರಲ್ಲಿ ಸೋಂಕು ತಗುಲಿದರೂ ರೋಗ ಸ್ಥಿತಿ ಗಂಭೀರವಾಗುತ್ತಿಲ್ಲ, ಅದೇ ಲಸಿಕೆ ಪಡೆಯದವರಿಗೆ ಸೋಂಕು ತಗುಲಿದಾಗ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗುತ್ತಿವೆ.

ಇನ್ನು ಸೋಂಕು ಹರಡುವಲ್ಲಿ ಲಸಿಕೆ ಪಡೆದವರು ಹಾಗೂ ಪಡೆಯದವರು ಎಂಬ ವ್ಯತ್ಯಾಸವಿಲ್ಲ.

ಇನ್ನು ಸೋಂಕು ಹರಡುವಲ್ಲಿ ಲಸಿಕೆ ಪಡೆದವರು ಹಾಗೂ ಪಡೆಯದವರು ಎಂಬ ವ್ಯತ್ಯಾಸವಿಲ್ಲ.

ಡೆಲ್ಟಾ ರೂಪಾಂತರ ವೈರಸ್‌ ತುಂಬಾ ಅಪಾಯಕಾರಿ

ಡೆಲ್ಟಾ ರೂಪಾಂತರ B.1.617.2 ತುಂಬಾ ಅಪಾಯಕಾರಿಯಾದ ರೂಪಾಂತರ ತಳಿಯಾಗಿದೆ. ಆದ್ದರಿಂದ ಲಸಿಕೆ ಪಡೆದಿದ್ದೇವೆ ಎಂದು ನಿರ್ಲಕ್ಷ್ಯ ತೋರಿದರೆ ಮೂರನೇ ಅಲೆ ಅಪ್ಪಳಿಸಬಹುದು ಹುಷಾರ್!

ಕೋವಿಡ್‌ 19 ನಿಯಮಗಳನ್ನು ಪಾಲಿಸಲು ಮರೆಯದಿರಿ

ಕೋವಿಡ್‌ 19 ನಿಯಮಗಳನ್ನು ಪಾಲಿಸಲು ಮರೆಯದಿರಿ

ಲಾಕ್‌ಡೌನ್‌ ಅಷ್ಟೇ ತೆರವಾಗಿದೆ, ಆದರೆ ಕೊರೊನಾ ಪ್ರಕರಣಗಳು ಇನ್ನೂ ದಾಖಲಾಗುತ್ತಿವೆ, ಆದ್ದರಿಂದ ಕೊರೊನಾ ನಿಯಮಗಳನ್ನು ಪಾಲಿಸಲು ನಿರ್ಲಕ್ಷ್ಯ ತೋರದಿರಿ

* ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಡಬಲ್ ಮಾಸ್ಕ್‌ ಧರಿಸಿ, ಸ್ಯಾನಿಟೈಸರ್ ಬಳಸಿ.

* ಸಾಮಾಜಿಕ ಅಂತರ ಕಾಯ್ದುಕೊಳ್ಳಿ

* ಪ್ರತಿಯೊಬ್ಬರು ಲಸಿಕೆ ಹಾಕಿಸಿ

* ರೋಗ ಲಕ್ಷಣಗಳು ಕಂಡು ಬಂದಾಗ ಹೊರಗಡೆ ಸುತ್ತಾಡದೆ ನಮ್ಮಿಂದ ಇನ್ನೊಬ್ಬರಿಗೆ ಹರಡದಂತೆ ಎಚ್ಚರಿಕೆ ವಹಿಸಿ ಹಾಗೂ ಕೋವಿಡ್ 19 ಪರೀಕ್ಷೆ ಮಾಡಿಸಿ.

ಕೊರೊನಾ 3ನೇ ಅಲೆ ಬರುವುದಕ್ಕಿಂತ ಮುನ್ನವೇ ಎಚ್ಚರಿಕೆವಹಿಸಿದರೆ 3ನೇ ಅಲೆಯನ್ನು ತಡೆಗಟ್ಟಬೇಕಾಗಿದೆ.

English summary

Covid-19 Delta Variant May Spread As Easily As Chickenpox: Reports

Covid-19 Delta variant may spread as easily as chickenpox: Reports ...
Story first published: Friday, July 30, 2021, 18:00 [IST]
X
Desktop Bottom Promotion